Welcome to Hai Sandur   Click to listen highlighted text! Welcome to Hai Sandur
Friday, November 8, 2024
HomeEntertainmentಜೂನಿಯರ್ ಎನ್​ಟಿಆರ್ ಮಕ್ಕಳು ಏನಾಗ್ತಾರೆ? ಉತ್ತರಿಸಿದ ನಟ

ಜೂನಿಯರ್ ಎನ್​ಟಿಆರ್ ಮಕ್ಕಳು ಏನಾಗ್ತಾರೆ? ಉತ್ತರಿಸಿದ ನಟ

ಜೂನಿಯರ್​ ಎನ್​ಟಿಆರ್ ಅವರಿಗೆ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗಕ್ಕೆ ಬರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಆದರೆ, ಈ ರೀತಿ ಆಗಬಾರದು ಎಂಬುದು ಜೂನಿಯರ್ ಎನ್​ಟಿಆರ್ ಅವರ ಅಭಿಪ್ರಾಯ.

ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬದ ಲೆಗಸಿ ತುಂಬಾನೇ ದೊಡ್ಡದು. ಈ ಕುಟುಂಬದಿಂದ ಅನೇಕರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲಿ ಜೂನಿಯರ್ ಎನ್​ಟಿಆರ್ ಕೂಡ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನಂದಮೂರಿ ಫ್ಯಾಮಿಲಿ ಲೆಗಸಿಯನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಈ ಒತ್ತಡ ಮಕ್ಕಳ ಮೇಲೆ ಬರಬಾರದು ಎನ್ನುವ ಆಶಯ ಅವರದ್ದು.

ಜೂನಿಯರ್​ ಎನ್​ಟಿಆರ್ ಅವರಿಗೆ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗಕ್ಕೆ ಬರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಆದರೆ, ಈ ರೀತಿ ಆಗಬಾರದು ಎಂಬುದು ಜೂನಿಯರ್ ಎನ್​ಟಿಆರ್ ಅವರ ಅಭಿಪ್ರಾಯ. ಅವರು ಸಿನಿಮಾ ಬಿಟ್ಟು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದಕ್ಕೆ ಜೂನಿಯರ್​ ಎನ್​ಟಿಆರ್ ವಿರೋಧಿಸುವ ಉದ್ದೇಶ ಹೊಂದಿಲ್ಲ.

‘ಅವರಿಗೆ ಒತ್ತಡ ಆಗಬಾರದು. ಅವರು ಎಲ್ಲವೂ ಅನ್ವೇಷಣೆ ಮಾಡಬೇಕು’ ಎಂದು ಜೂನಿಯರ್​ ಎನ್​ಟಿಆರ್ ಅವರು ಹೇಳಿಕೊಂಡಿದ್ದಾರೆ. ಅವರು ನ್ಯಾಷನಲ್​ ಲೆವೆಲ್ ಬ್ಯಾಡ್ಮಿಂಟನ್ ಪ್ಲೇಯರ್ ಹಾಗೂ ಕ್ಲಾಸಿಕಲ್ ಡ್ಯಾನ್ಸರ್. ‘ನನ್ನ ತಂದೆ ನಟನೆ ಮಾಡಬೇಕು ಎಂದು ನನಗೆ ಒತ್ತಡ ಹೇರಿಲ್ಲ. ಆದರೆ, ನಟನಾ ಕ್ಷೇತ್ರದ ಹಿನ್ನೆಲೆ ಇರೋದ್ರಿಂದ ಅದು ನನ್ನ ಸೆಳೆಯಿತು’ ಎಂದಿದ್ದಾರೆ ಅವರು.

90ರ ದಶಕದಲ್ಲಿ ಬಾಲ ಕಲಾವಿದನಾಗಿ ಜೂನಿಯರ್​ ಎನ್​ಟಿಆರ್ ಅವರು ನಟಿಸಿದ್ದರು. ಅವರು 2001ರಲ್ಲಿ ‘ನಿನ್ನು ಚೂಡಲಾನಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಕಾಲಿಟ್ಟರು. ‘ನಾನು ನ್ಯಾಷನಲ್ ಲೆವೆಲ್ ಬ್ಯಾಡ್ಮಿಂಟ್​ ಆಟಗಾರ. ಪ್ರೊಫೆಷನಲ್ ಕ್ಲಾಸಿಕ್ ಡ್ಯಾನ್ಸರ್. ನನಗೆ ತಪ್ಪುಗಳನ್ನು ಮಾಡಲು ಸಾಕಷ್ಟು ಅವಕಾಶ ಇತ್ತು’ ಎಂದು ಅವರು ಹೇಳಿದ್ದಾರೆ.

ಜೂನಿಯರ್​ ಎನ್​ಟಿಆರ್ ಅವರ ತಾತ ನಂದಮೂರು ತಾರಕ್ ರಾಮ್ ರಾವ್, ಜೂನಿಯರ್ ಎನ್​ಟಿಆರ್ ಅವರ ತಂದೆ ಹರಿಕೃಷ್ಣ, ಅಂಕಲ್ ಬಾಲಕೃಷ್ಣ, ಸಹೋದರ ಕಲ್ಯಾಣ್ ರಾಮ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ‘ದೇವರ’ ಸೆಲೆಬ್ರೇಷನ್ ವೇಳೆ ಸಿಡಿದ ಪಟಾಕಿ; ಜೂನಿಯರ್ ಎನ್​ಟಿಆರ್​ ಕಟೌಟ್​ಗೆ ಬೆಂಕಿ

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರವು ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಗಳಿಕೆ ಮಾಡುತ್ತಿದೆ. ಈ ಚಿತ್ರಕ್ಕೆ ಎರಡನೇ ಭಾಗವು ಶೀಘ್ರವೇ ಬರಲಿದೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಜೂನಿಯರ್​ ಎನ್​ಟಿಆರ್ ಅವರು ಪ್ರಸ್ತುತ ಪ್ರಶಾಂತ್ ನೀಲ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!