Welcome to Hai Sandur   Click to listen highlighted text! Welcome to Hai Sandur
Friday, December 6, 2024
HomeSandurಸಿ ಎಂ ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ; ಬಿ ಎಸ್ ಯಡಿಯೂರಪ್ಪ

ಸಿ ಎಂ ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ; ಬಿ ಎಸ್ ಯಡಿಯೂರಪ್ಪ

ಸಂಡೂರು ಕ್ಷೇತ್ರದ ಜನ ಬಂಗಾರು ಹನುಮಂತು ಅವರ ಗೆಲುವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ, ಸಿದ್ದರಾಮಯ್ಯನವರಿಗೆ ಕೇಳುತ್ತೇನೆ ಜನ ಕೊಟ್ಟ ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ, ಬಡವರ ಅಭಿವೃದ್ದಿ ಕೆಲಸ ನಿಂತುಹೋಯಿತು, ನೀರಾವರಿ ಯೋಜನೆಗಳು ಇಲ್ಲವಾದವು, ನಮ್ಮ ಆಡಳಿತದಲ್ಲಿ ಮಹಿಳೆಯರಿಗೆ ಕೊಟ್ಟ ಭಾಗ್ಯಲಕ್ಷ್ಮೀ ಯೋಜನೆಯನ್ನು ಸಹ ನಿಲ್ಲಿಸಿ ಹೆಣ್ಣು ಮಕ್ಕಳಿಗೆ ದ್ರೋಹಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅರೋಪಿಸಿದರು.

ಅವರು ಇಂದು ತಾಲೂಕಿನ ಚೋರನೂರು, ಬೊಮ್ಮಘಟ್ಟ ಬಂಡ್ರಿ ಗ್ರಾಮಗಳಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಿಸಾನ್ ಸನ್ಮಾನ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ 6 ಸಾವಿರ ಕೊಟ್ಟರೆ ರಾಜ್ಯದಿಂದ 4 ಸಾವಿರ ಕೊಡುತ್ತಿದ್ದೆ, ಅದರೆ ಭ್ರಷ್ಟ ಸರಕಾರ ನಿಲ್ಲಿಸಿದೆ, ಏಕೆ ಬಡವರು, ರೈತರು ಬದುಕುವುದು ಬೇಡವೇ, ವಿದ್ಯುತ್ ದರ ಹೆಚ್ಚಾಗಿದೆ, ದುಡಿಯುವ ಕೈಗಳಿಗೆ ಕೆಲಸವಿಲ್ಲ, ನೀರಾವರಿ ಯೋಜನೆ ನಿಂತಿದೆ, ಬಂಗಾರು ಹನುಮಂತು ಗೆಲ್ಲಿಸುವುದರಿಂದ ಈ ಸರ್ಕಾರವೇನು ಬೀಳುವುದಿಲ್ಲ ಅದರೆ ಈ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಂತಾಗುತ್ತದೆ. 15-20 ದಿನಗಳಲ್ಲಿ ರಾಜಿನಾಮೆ ಸಲ್ಲಿಸುತ್ತಾರೆ, ಜೈಲಿಗೂ ಹೋಗುವುದು ನಿಶ್ಚಿತ ಎಂದು ಬಿ.ಎಸ್. ಯಡಿಯೂರಪ್ಪ ಅವರು ಬೊಮ್ಮಘಟ್ಟದಲ್ಲಿ ತಿಳಿಸಿದರು.

ಸಂಡೂರು: ಜನರನ್ನು ಹಣಕೊಟ್ಟು ಕರೆಸಿಕೊಳ್ಳುವಂತಹ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳಿದ್ದಾರೆ, ಬಂಗಾರು ಹನುಮಂತು ವಿರುದ್ದ ಸೋಲಿನ ಭಯವನ್ನು ಅನುಭವಿಸುತ್ತಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಅರೋಪಿಸಿದರು.

ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಬಂಡ್ರಿ ಗ್ರಾಮದಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿ ಸ್ವಾಮಿ ಸಿದ್ದರಾಮಯ್ಯನವರೇ ಈಗಾಗಲೇ ಖಜಾನೆ ಲೂಟಿ ಮಾಡಿಯಾಗಿದೆ, ಏನು ಉಳಿದಿಲ್ಲ, ಅದರಿಂದ ಚುನಾವಣೆಯನ್ನು ಎದುರಿಸಲು ಇಡೀ ಕ್ಷೇತ್ರದ ತುಂಬಾ ಓಡಾಡುತ್ತಿದ್ದೀರಿ, ಅತಿ ಹೆಚ್ಚು ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅವರ ಪರಿಸ್ಥಿತಿ ಕೇಳಿ ಪರಿಹಾರಕ್ಕೆ ಹಣವಿಲ್ಲ, ಬಡವರ ಹಣ ಚುನಾವಣೆಗೆ ಬಳಕೆಯಾಗುತ್ತಿದೆ ಎಂದು ಅರೋಪಿಸಿದರು.

ಈ ಸಂದರ್ಭದಲ್ಲಿ ಪರಿಷತ್ತಿನ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ ಬಿ.ಎಸ್.ವೈ. ರಾಜಕಾರಣದ ಭೀಷ್ಮ, ಸಂಡೂರು ಶ್ರೀಮಂತ ಜಾಗ ಇಲ್ಲಿರೋದು ಬಡವರೇ, ಧೂಳಿನಲ್ಲಿಯೇ ಇದ್ದಾರೆ ಅದನ್ನೇ ಉಸಿರಾಡುತ್ತಿದ್ದಾರೆ, 70 ವರ್ಷಗಳಿಂದ ಕಾಂಗ್ರೇಸ್ ಪಕ್ಷ ಗೆಲ್ಲಿಸಿದ್ದೆ ಅಪರಾಧ, 25 ಸಾವಿರ ಕೋಟಿ ಲೂಟಿ ಮಾಡಿದ್ದಾರೆ, ಪ.ಜಾತಿ, ಪಂಗಡದ, ವಾಲ್ಮೀಕಿ ನಿಗಮದ 187 ಕೋಟಿ ಹಣ ನುಂಗಿದ್ದಾರೆ, ನಾಗೇಂದ್ರ ತಪ್ಪು ಮಾಡಿ ಜೈಲಿಗೆ ಹೋದರು , ಶಿಗ್ಗಾವಿ, ಚನ್ನಪಟ್ಟಣ ಸೋಲುತ್ತೇವೆ ಎಂದು ಗೊತ್ತಾಗಿ ಸಂಡೂರಿಗೆ ಬಂದಿದ್ದೀರಿ ಇಲ್ಲಿಯೂ ಸೋಲುತ್ತೀರಿ, ಹಗರಣಗಳ ಸರ್ಕಾರ ಕಾಂಗ್ರೇಸ್ ಸರ್ಕಾರ ಎಂದು ಅರೋಪಿಸಿದರು,

ಮೆರವಣಿಗೆಯಲ್ಲಿ ಮಂಜುಳಾ ಅವರು ಮಾತನಾಡಿ ಹೆಣ್ಣು ಮಕ್ಕಳ ವಿದ್ಯಾರ್ಥಿಗಳಿಗಾಗಿ ಸೈಕಲ್ ಕೊಟ್ರು ಅದರೆ ಕಾಂಗ್ರೇಸ್ ನವರು ನಿಲ್ಲಿಸಿದರು, ಬಸ್ ಪ್ರೀ ಮಾಡಿದರು ಅದರೆ ಬಸ್ ಬಿಡಲಿಲ್ಲ, ಮಕ್ಕಳಿಗೆ ಚಿಕಿತ್ಸೆ ಸಿಗುತ್ತಿಲ್ಲ, ಯಡಿಯೂರಪ್ಪನವರು ಹೆಣ್ಣು ಮಗುವಿಗೆ ಭಾಗ್ಯಲಕ್ಷ್ಮೀ ಬಾಂಡ್ ಕೊಟ್ಟರು, ಅದರೆ ಕಾಂಗ್ರೇಸ್‍ನವರು ನಿಲ್ಲಿಸಿದರು, ಈ ನಾಡಿನ ಪ್ರತಿಯೊಂದು ಕುಟುಂಬಕ್ಕೂ ನೀರು ಒದಗಿಸಲು ಜಲ್ ಜೀವನ್ ಮಿಷನ್ ಅಡಿಯಲ್ಲಿ ನೀರು ಒದಗಿಸುತ್ತಿರುವುದು ಮೋದಿ ಸರ್ಕಾರ, 10 ಲಕ್ಷ ರೂಪಾಯಿ ಅಯೂಷ್ಮಾನ್ ಅಡಿಯಲ್ಲಿ ಚಿಕಿತ್ಸೆಗೆ ಅನುಕೂಲ ಮಾಡಿಕೊಟ್ಟರು ಅದರೆ ಕಾಂಗ್ರೇಸ್ ಕೊಡುಗೆ ಏನು? ಬರೀ ಲೂಟಿ ಎಂದು ಅರೋಪಿಸಿದರು,

ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ವಿ.ಸುನೀಲಕುಮಾರ, ಭೈರತಿ ಬಸವರಾಜ, ಸತೀಶ ರೆಡ್ಡಿ, ಆಂಧ್ರ ಪ್ರದೇಶದ ಶಾಸಕರಾದ ಸುಧಾಕರ ರೆಡ್ಡಿ, ಮಾಜಿ ಶಾಸಕರಾದ ರೇಣುಕಾಚಾರ್ಯ, ತಿಪ್ಪೇಸ್ವಾಮಿ, ರಾಮಚಂದ್ರ ರೆಡ್ಡಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ, ತಾರಾ, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಕೆ.ಎಸ್.ದಿವಾಕರ, ಎಸ್.ಸಿ.ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಕೌತಾಳ, ಹಿರಿಯರಾದ ಟಿ.ಕೃಷ್ಣಪ್ಪ ಸೇರಿದಂತೆ ಗ್ರಾಮದ ಗುರು ಹಿರಿಯರು, ಪ್ರಮುಖರು, ಪದಾಧಿಕಾರಿಗಳು, ತಾಯಂದಿರು, ಯುವಕ ಮಿತ್ರರು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!