ಸಂಡೂರು : ಕರ್ನಾಟಕ ರಾಜ್ಯ ದೇವದಾಸಿ ಮಹಿಳಯರ ವಿಮೋಚನಾ ಸಂಘ ಸಂಡೂರು ತಾಲೂಕು ಘಟಕದ ವತಿಯಿಂದ ದೇವದಾಸಿಯರನ್ನು ಮರುಗಣತಿ ಮಾಡುವ ಮೂಲಕ ಬೀದಿಗೆ ಬಿದ್ದ ಅವರನ್ನು ಮುಖ್ಯವಾಹಿನಿಗೆ ತರಬೇಕು, ಪ್ರತಿ ಮನೆಗೆ ತೆರಳಿ ಸರ್ವೇಕಾರ್ಯಮಾಡಬೇಕು ಎಂದು ಅಧ್ಯಕ್ಷೆ ಮಾರೆಮ್ಮ ಒತ್ತಾಯಿಸಿದರು.
ಅವರು ಇಂದು ಪಟ್ಟಣದ ತಾಲೂಕು ಕಛೇರಿಯಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್ ಜಿ. ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಕಳೆದ ಎರಡು – ಮೂರು ದಶಕಗಳಿಂದ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಸಮಿತಿಯ ಹಾಗೂ ಮಹಿಳೆಯರ ನಿರಂತರ ಮನವಿ ಹಾಗು ಒತ್ತಾಯದ ಮೇರೆಗೆ ರಾಜ್ಯ ಸರಕಾರ ತಡವಾಗಿಯಾದರೂ, ಸಕಾರಾತ್ಮಕವಾಗಿ ಸ್ಪಂದಿಸಿ ದೇವದಾಸಿ ಮಹಿಳೆಯರ ಕುಟುಂಬದ ಮರುಗಣತಿಗೆ ಕ್ರಮವಹಿಸಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ಅದರೆ ಅವರನ್ನು ಗುರುತಿಸಲು ಪ್ರತಿ ಮನೆಗೆ ತೆರಳುವ ಮೂಲಕ ಸರ್ವೇ ಕಾರ್ಯ ಮಾಡಬೇಕು ನಿಜವಾದವರನ್ನು ಗುರುತಿಸುವ ಕೆಲಸ ನಡೆಯುತ್ತದೆ. ಈ ಹಿಂದೆ ಇಂತಹ ಗಣತಿಗಾಗಿ ತೊಡಗಿಸಿಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ನೌಕರರ ಮೂಲಕ ಗಣತಿಗೆ ಕ್ರಮವಹಿಸುವಂತೆ ಈ ಮೂಲಕ ಮನವಿ ಮಾಡುತ್ತೇವೆ. ಇದನ್ನು ತಾಲೂಕಾ ಮಟ್ಟದಲ್ಲಿಯೋ, ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿಯೋ ನಡೆಸುವುದು ಸಾಧುವಲ್ಲಾ ಹಾಗೆ ಮಾಡುವುದು ತೀವ್ರಭ್ರಷ್ಟಾಚಾರಕ್ಕೆ ಮತ್ತು ದೇವದಾಸಿ ಮಹಿಳೆಯರಲ್ಲದ ಬೇರೆಯ ವ್ಯಕ್ತಿಗಳು ಸೇರಲು ಕಾರಣವಾಗುತ್ತದೆ. ಇಡೀ ದೇವದಾಸಿ ಮಹಿಳೆಯರ ಕುಟುಂಬದ ಎಲ್ಲಾ ಸದಸ್ಯರು ಗಣತಿಗೆ ದೊರೆಯ ಬೇಕಾದುದರಿಂದ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರ ಮೂಲಕವೇ ಮನೆ ಮನೆಗೆ ತೆರಳಿ ಅವರ ಮನೆಯ ಮುಂದುಗಡೆಯೇ ಗಣತಿ ಮಾಡುವುದು ಸೂಕ್ತವಾಗಿದೆ ಅದ್ದರಿಂದ ಸರಿಯಾದ ಸರ್ವೇಕಾರ್ಯ ಮಾಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಾರೆಮ್ಮ, ಜಿಲ್ಲಾ ಕಾರ್ಯದರ್ಶಿ ಎ ಸ್ವಾಮಿ, ತಾಲೂಕು ಕಾರ್ಯದರ್ಶಿ ಹೆಚ್ ದುರುಗಮ್ಮ , ತಾಲೂಕ ಅಧ್ಯಕ್ಷರು ಮಾರಮ್ಮ, ಅಂಜಿನ ಅನ್ನಪೂರ್ಣ ಗಂಗಮ್ಮ, ಭಾಗ್ಯಮ್ಮ,, ಅಂಜಿನಮ್ಮ, ದುರ್ಗಮ್ಮ ಹೊನ್ನೂರಮ್ಮ ,ಲಕ್ಷ್ಮಿ, ಕೆಂಚಮ್ಮ ರೈತ ಸಂಘದ ಮುಖಂಡರು ಕಲಂದರ್ ಬಾಷ ಕಾಲುಬ ಇತರರು ಭಾಗವಹಿಸಿದ್ದರು