ಸಂಡೂರು :ಜ:31: ಸಮಾಜದಲ್ಲಿ ಶಾಂತಿ ಬ್ರಾತೃತ್ವ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕಾಗಿದೆ. ಮಸೀದಿಯಲ್ಲಿ ಏನು ಮಾಡುತ್ತಾರೆ ಎನ್ನುವ ತಪ್ಪು ಕಲ್ಪನೆ ನಮ್ಮ ಜನರಲ್ಲಿದೆ. ಬಹು ಧರ್ಮಿಯ ರಾಷ್ಟ್ರ ನಮ್ಮದು. ನಮ್ಮಲ್ಲಿ ಯಾವುದೇ ರೀತಿಯ ತಪ್ಪು ಕಲ್ಪನೆಯ ರಾಷ್ಟ್ರ ನಮ್ಮ ಮನಸ್ಸಿನಲ್ಲಿ ಬಂದರೆ ಸಾಮರಸ್ಯ ಜೀವನ ನಡೆಸಲು ಸಾದ್ಯವಿಲ್ಲ. ಇಂದಿನ ದಿನಮಾನದಲ್ಲಿ ಮಾನವೀಯ ಮೌಲ್ಯಗಳು ಕುಸಿದು ಬಿದ್ದಿವೆ. ಮಾನವಿಯ ಮೌಲ್ಯಗಳನ್ನು ಗಟ್ಟಿಗೊಳಿಸಬೇಕಾದರೆ ಪ್ರಜ್ಞಾವಂತ ಸಮಾಜ ಬೆಳಸಬೇಕಾಗಿದೆ. ಸರ್ವಧರ್ಮಿಯರ ಜೊತೆಗೂಡೆ ಮಸೀದಿಯಿಂದ ಉತ್ತಮ ಬಾಂಧ್ಯವ್ಯ ಬೆಳೆಸಬೇಕಾಗಿದೆ. ದಿನಾಂಕ : 02-02-2025 ರಂದು ಭಾನುವಾರ ನಡೆಯುವ ನಮ್ಮೂರ ಮಸೀದಿ ನೊಡ ಬನ್ನಿ ಕಾರ್ಯಕ್ರಮಕ್ಕೆ ಪ್ರತಿರ್ವೊರ ಸಮಾಜದವರಿಗೆ ಅಧಿಕಾರಿಗಳಿಗೆ ತಾರತಮ್ಯ ಮಾಡದೇ ಎಲ್ಲಾ ಪಕ್ಷದವರಿಗೂ, ಪೊಲೀಸ್ ಸಿಬ್ಬಂದಿಯವರಿಗೂ, ಗಣ್ಯ ಮಾನ್ಯರಿಗೂ ಅಹ್ವಾನ ನೀಡಿದ್ದೇವೆ. ಉತ್ತಮ ಸಮಾಜ ನಿರ್ಮಾಣ ಮಾಡಲು ಬ್ಯಾನರ್ ಹಾಕಿ ಜಾಗೃತಿ ಮೂಡಿಸುತ್ತೇವೆ. ಎಂದು ಖಾಸಗಿ ಶಾಲಾ ಶಿಕ್ಷಕ ಎಂ.ಮೊಹಮ್ಮದ್ ಉಮರ್ ರವರು ತಿಳಿಸಿದರು
ಅವರು ರಾಮಕೃಷ್ಣಾ ವಿದ್ಯಾಮಂದಿರ ಹತ್ತಿರ ಇರುವ ತೊಂಡೆ ಮಸೀದಿಯ ಮಸ್‍ಜಿದ್ ಎ ಹಜರತ್ ಬಿಲಾಲ್ ಅಹಲೇ ಹದೀಸ್ ಹಳೇ ಚಪ್ಪರದಹಳ್ಳಿಯಲ್ಲಿ ಫೆಬ್ರುವರಿ 2 ರಂದು ನಡೆಯುವ “ನಮ್ಮೂರ ಮಸೀದಿ ನೋಡಬನ್ನಿ” ಕಾರ್ಯಕ್ರಮದ ಪ್ರಯುಕ್ತ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಸೈಯದ್ ರೆಹಮತುಲ್ಲಾ ಮಾತನಾಡಿ ನಮ್ಮ ನಾಡು ನಮ್ಮ ಮಕ್ಕಳು ನಮ್ಮ ತಂದೆ ನಮ್ಮ ತಾಯಿ ನಮ್ಮ ಮಕ್ಕಳು ಎನ್ನುವ ಭಾವನೆ ನಮ್ಮಲ್ಲಿ ಬರಬೇಕಾಗಿದೆ. ಎಲ್ಲಾ ದೇಶಗಳಿಗಿಂತ ಭಾರತ ದೇಶವೇ ವಿಶೇಷ ನಮ್ಮ ದೇಶದಲ್ಲಿ ಧರ್ಮಿಯರು ಬೇರೆ ಇದ್ದರೂ ನಾವೆಲ್ಲಾರೂ ಒಂದೇ ಎನ್ನುವ ಭಾವನೆ ಬರಬೇಕಾಗಿದೆ ಎಂದು ತಿಳಿಸಿದರು.
ಕನ್ನಡ ಸಂಘದ ದಾದಾಖಲಂದರ್ ಮಾತನಾಡಿ ಸಂಡೂರಿನಲ್ಲಿ ಹಿಂದು ಮುಸ್ಲಿಮ್ ಬಾಯಿ ಬಾಯಿ ಆಗಿದ್ದು, ಸರ್ವರು ಉತ್ತಮ ಸಂದೇಶ ಸಾರುತ್ತಿದ್ದಾರೆ. ಭಾರತ ಮಾತೆಯ ಮಕ್ಕಳು ನಮ್ಮ ತಾಯಿ ಎನ್ನುವುದು ನಮ್ಮಲ್ಲಿ ಬೇರೂರಿದ ಕಾರಣ ಯಾವ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮೌಲಾಲಿ (ಗುರು) ಡಿ.ಎಂ. ಅಥಾವುಲ್ಲ ರೆಹೆಮಾನ್ ತಾ. ಅಧ್ಯಕ್ಷ ಅಸ್ಲಂ ಬಾಷ ಇರ್ಫಾನುಲ್ಲಾ ಸೈಯದ್ ಅನಿಸುರೆಹೆಮಾನ್ ಕಾರ್ಯದರ್ಶಿ ಉಪಸ್ಥಿತರಿದ್ದರು.