ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು : ಸುಪ್ರೀಂ ಕೊರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ.ಆರ್.ಗವಾಯಿ ಅವರ ಮೇಲಿನ ಹಲ್ಲೆ ಖಂಡಿಸಿ ಉಪತಹಶೀಲ್ದಾರರಾದ ಅನ್ನದಾನೇಶ್‌ರವರಿಗೆ ಗುರುವಾರ ಮನವಿ ಪತ್ರ ನೀಡಲಾಯಿತು
ಸೋಮವಾರ ಸುಪ್ರೀಂಕೋರ್ಟ್ ಕಲಾಪದ ವೇಳೆಯಲ್ಲಿ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿಯವರನ್ನು ಗುರಿಯಾಗಿಸಿ. ಶೂ ಎಸೆದ ಘಟನೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಅಕ್ಷಮ್ಯ ಅಪರಾಧವಾಗಿದೆ. ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಈ ಘಟನೆ ನಡೆದ ಬಳಿಕ ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದೂಸ್ತಾನವು ಸಹಿಸುವುದಿಲ್ಲ ಎಂದು ಕೂಗಾಡಿದ್ದಾನೆ. ಅವನ ಈ ಕೂಗಾಟಕ್ಕೆ ಸನಾತನ ಧರ್ಮದ ಪ್ರತಿಪಾದಕರಾದ ಆರ್.ಎಸ್.ಎಸ್. ಮತ್ತು ಬಿಜೆಪಿ ಗಳ ಮಾನವ ವಿರೋಧಿ ಸಿದ್ದಾಂತದ ಪ್ರೇರಣೆಯೇ ಇದಕ್ಕೆಲ್ಲ ಕಾರಣವಾಗಿದೆ. ಭಾರತ ಸನಾತನ ಧರ್ಮದ ಮೂಲ ಸಾಮಾಜಿಕ ಸಂರಚನೆಯಾದ ಶೈಕ್ಷಣಿಕ ಸಮಾಜವನ್ನು ನಮ್ಮ ದೇಶದಲ್ಲಿ ಭದ್ರಪಡಿಸಲು ಹೊರಟಿದೆ. ಇದು ಭಾರತದ ಭವಿಷ್ಯಕ್ಕೆ ಅಪಾಯಕಾರಿ ನಡೆಯಾಗಿದೆ.
ನಮ್ಮ ದೇಶದ ಸಂವಿಧಾನವನ್ನು ನಾಶಗೊಳಿಸಿ ಮನುವಾದ ಪ್ರಣಿತ ಶೋಷಕ ಸಮಾಜ ನಿರ್ಮಾಣದ ಮುನ್ಸೂಚನೆಯಾಗಿದೆ. ದಲಿತರಿಗೆ ವಿದ್ಯೆ ನಿರಾಕರಿಸಿದ ಪುರೋಹಿತಶಾಹಿ ವ್ಯವಸ್ಥೆಯನ್ನು ಬದಲು ಮಾಡಿ ನಮ್ಮ ಸಂವಿಧಾನ ನೀಡಿರುವ ಶಿಕ್ಷಣದ ಹಕ್ಕಿನಿಂದ ತಮ್ಮ ಪರಿಶ್ರಮದಿಂದ ದೇಶದ ದಲಿತ ಸಮುದಾಯಕ್ಕೆ ಸೇರಿದ ಅವಕಾಶ ವಂಚಿತ ವ್ಯಕ್ತಿಯೊಬ್ಬರು ಇಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಲು ಸಾಧ್ಯವಾಗಿದೆ. ಇದು ಸನಾತನವಾದಿಗಳಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಸಹಿಸಲಾರದ ಜಾತಿಗ್ರಸ್ತ ಸನಾತನ ಮನಸ್ಸುಗಳು ಇಂತಹ ಕೃತ್ಯವೆಸಗುತ್ತಿವೆ. ಇಂತಹ ನೀಚ ಮನಸ್ಥಿತಿಯ ಸಿದ್ದಾಂತವನ್ನು ದಿನನಿತ್ಯ ಬೋಧಿಸುತ್ತಿರುವ ಸಂಘ ಪರಿವಾರ ಸಿದ್ಧಾಂತಕ್ಕೆ ಪ್ರತ್ಯಕ್ಷ ಬೆಂಬಲ ನೀಡುತ್ತಿರುವುದು ಇವರ ಈ ಇಬ್ಬಗೆ ನೀತಿಯನ್ನು ಬಹಿರಂಗ ಪಡಿಸಿದೆ.
ಸಿ.ಜೆ.ಐ. ವಿರುದ್ದದ ದಾಳಿಕೊರನಿಗೆ ಯಾವುದೇ ರಾಜಕೀಯ ಪಕ್ಷದ ಹಸ್ತಕ್ಷೇಪಕ್ಕೆ ಬಲಿಯಾಗದೆ. ಕಠಿಣ ಶಿಕ್ಷೆ ವಿಧಿಸುವಂತೆ ಹಾಗೂ ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (AIDRM) ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಕೊಟ್ಟೂರು ತಾಲೂಕು ಮಂಡಳಿ ಈ ಮೂಲಕ ಗುರುವಾರ ಒತ್ತಾಯಿಸಿ ಮನವಿ ನೀಡಿದ್ದಾರೆ. ವಿಜಯನಗರ ಜಿಲ್ಲಾಧ್ಯಕ್ಷ ಕೆ. ಕೊಟ್ರೇಶ್, ಕಮ್ಯುನಿಸ್ಟ್ ಪಕ್ಷದ (CPI) ಕಾರ್ಯದರ್ಶಿ ಕೆ.ರೇಣುಕಮ್ಮ, ಕೊಟ್ರಬಸಯ್ಯ ರಾಂಪುರ, ಸಹಕಾರ್ಯದರ್ಶಿ ಬಿ.ರೇಣುಕಾ, ಶಂಕ್ರಪ್ಪ, ಕೊರವರ ನಾಗರಾಜ, ಮಂಜುನಾಥ, ಸುಂಕಪ್ಪ, ಪ್ರಜ್ವಲ್ ಮುಂತಾದವರು ಮನವಿ ಸಲ್ಲಿಸಿದರು.
■ಪ್ರಪಂಚದಲ್ಲಿ ಅತ್ಯುನ್ನತ ಹೊಂದಿರುವ ಸಂವಿಧಾನ ಭಾರತ ಇಂತಹ ಸಂವಿಧಾನಕ್ಕೆ ಒಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಶೂ ಎಸಿದಿರುವ ಘಟನೆ ಇಡೀ ದೇಶವೇ ತಲೆತಗ್ಗಿಸುವ ಕೆಲಸ ಆಗಿದೆ.
ಇಂತಹ ಮನಸ್ಥಿತಿ ಹೊಂದಿರುವ ವ್ಯಕ್ತಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು
——ಕೆ ಕೊಟ್ರೇಶ್
ವಿಜಯನಗರ ಜಿಲ್ಲಾಧ್ಯಕ್ಷರು
ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ
■ಈ ರೀತಿಯ ಮನವಿ ನೀಡುವ ಸಂದರ್ಭದಲ್ಲಿ ಕೊಟ್ಟೂರಿನ ತಹಶೀಲ್ದಾರರಾದ ಅಮರೇಶ್ ಜಿ.ಕೆ. ಅವರ ಅನುಪಸ್ಥಿತಿ ಎದ್ದುಕಾಣುತ್ತಿರುವುದನ್ನು ನೋಡಿದರೆ ಅವರ ಸ್ಪಷ್ಟ ನಿರ್ಲಕ್ಷ್ಯತೆ ಎದ್ದುತೋರುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು
—–ಕೆ ರೇಣುಕಮ್ಮ
ಕಮ್ಯುನಿಸ್ಟ್ ಪಕ್ಷದ (CPI) ಕೊಟ್ಟೂರು
ತಾಲೂಕು ಕಾರ್ಯದರ್ಶಿ
