ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಿಂದ ಹಮಾಲಿ ಲೈಸೆನ್ಸ್ ಪಡೆದು ಕಾರ್ಯನಿರ್ವಹಿಸುತ್ತಿದ್ದ ಕನ್ನಾಕಟ್ಟಿ ಬಸವರಾಜ್ ಅವರು ಮಾರ್ಚ್ 3ರಂದು ಮಧ್ಯಾಹ್ನ ನಿಧನ ಹೊಂದಿದರು. ಅವರ ನಿಧನದ ಹಿನ್ನೆಲೆ, ಮೃತರ ಕುಟುಂಬಕ್ಕೆ ಸಮಿತಿಯ ವತಿಯಿಂದ ಶವಸಂಸ್ಕಾರ ಭತ್ಯೆಯಾಗಿ 25 ಸಾವಿರ ರೂ.ಗಳ ಚೆಕ್ ಅನ್ನು ವಿತರಿಸಲಾಯಿತು.
ಎಪಿಎಂಸಿ ಸಮಿತಿಯ ಉಪಾಧ್ಯಕ್ಷರಾದ ಎಂ. ಶಿವಣ್ಣ ಅವರು ಮೃತ ಕನ್ನಾಕಟ್ಟಿ ಬಸವರಾಜ್ ಅವರ ಪುತ್ರ ಕೆ. ಅಜ್ಜಪ್ಪ ಅವರಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಭಾರಿ ಕಾರ್ಯದರ್ಶಿ ಬಸವರಾಜ್, ಸಮಿತಿಯ ಸದಸ್ಯರಾದ ಚಿರಿಬಿ ಕೊಟ್ರೇಶ್, ಎಪಿಎಂಸಿ ಹಮಾಲರ ಸಂಘದ ಸದಸ್ಯರಾದ ಬಿ. ಪ್ರಭಾಕರ್, ಎ. ವೀರಣ್ಣ, ಮರಿಯಪ್ಪ, ಸಿ. ಬಸವರಾಜ್, ಕೆ. ಪರಶುರಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
