Saturday, April 11, 2026
HomeKotturuಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಫೆಡರೇಶನ್ ಎ.ಐ.ಟಿ.ಯು.ಸಿ. ಸೇರ್ಪಡೆ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಫೆಡರೇಶನ್ ಎ.ಐ.ಟಿ.ಯು.ಸಿ. ಸೇರ್ಪಡೆ

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಾಮ್ರೇಡ್ ರತ್ನಮ್ಮನವರ ಅಧ್ಯಕ್ಷತೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಎ.ಐ.ಟಿ.ಯು.ಸಿ. ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಕಾಮ್ರೇಡ್ ಎಂ. ಜಯಮ್ಮ ರಾಜ್ಯ ಪ್ರಧಾನಕಾರ್ಯದರ್ಶಿ ಮತ್ತು ಅತಿಥಿಗಳಾಗಿ ಸಿ.ಪಿ.ಐ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಲೇಶ್ ಭಾಗವಹಿಸಿದ್ದರು. ಸಭೆಯಲ್ಲಿ ತಾಲ್ಲೂಕು ಸಮ್ಮೇಳನದ ಪದಾಧಿಕಾರಿಗಳ ಆಯ್ಕೆ, ರಾಜ್ಯ ಸಮ್ಮೇಳನ ಜೂನ್ ತಿಂಗಳಲ್ಲಿ ಆಯೋಜಿಸಿದ್ದು, ಎಲ್ಲರೂ ಕಡ್ಡಾಯವಾಗಿ ಭಾಗವಹಿಸುವುದು, ೪೩ನೇ ಎ.ಐ.ಟಿ.ಯು.ಸಿ. ರಾಷ್ಟ್ರೀಯ ಸಮ್ಮೇಳನಕ್ಕೆ ಭಾಗವಹಿಸುವುದು,

ದೆಹಲಿಯಲ್ಲಿ ನಡೆಯುವ ಅಂಗನವಾಡಿ ಹೋರಾಟ ಏಪ್ರಿಲ್ ೨೨ ರಂದು ನಡೆಯುತ್ತಿದ್ದು, ಅದರಲ್ಲಿಯೂ ಸಹ ಭಾಗವಹಿಸುವುದು ಮತ್ತು ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಹಾಗೂ ಇತರೆ ಪದಾಧಿಕಾರಿಗಳ ಆಯ್ಕೆಯೂ ಸಹ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments