Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಬಳ್ಳಾರಿ Archives - Hai Sandur kannada fortnightly news paper https://haisandur.com/category/ಬಳ್ಳಾರಿ/ Hai Sandur News.Karnataka India Sun, 05 May 2024 09:12:41 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಬಳ್ಳಾರಿ Archives - Hai Sandur kannada fortnightly news paper https://haisandur.com/category/ಬಳ್ಳಾರಿ/ 32 32 “ಸಂತೋಷ್ ಲಾಡ್ ಭಾಷಣಕ್ಕೆ ಕೊಟ್ಟೂರಿನ ಜನರು ಫುಲ್ ಖುಷ್ “ https://haisandur.com/2024/05/05/%e0%b2%b8%e0%b2%82%e0%b2%a4%e0%b3%8b%e0%b2%b7%e0%b3%8d-%e0%b2%b2%e0%b2%be%e0%b2%a1%e0%b3%8d-%e0%b2%ad%e0%b2%be%e0%b2%b7%e0%b2%a3%e0%b2%95%e0%b3%8d%e0%b2%95%e0%b3%86-%e0%b2%95%e0%b3%8a%e0%b2%9f/ https://haisandur.com/2024/05/05/%e0%b2%b8%e0%b2%82%e0%b2%a4%e0%b3%8b%e0%b2%b7%e0%b3%8d-%e0%b2%b2%e0%b2%be%e0%b2%a1%e0%b3%8d-%e0%b2%ad%e0%b2%be%e0%b2%b7%e0%b2%a3%e0%b2%95%e0%b3%8d%e0%b2%95%e0%b3%86-%e0%b2%95%e0%b3%8a%e0%b2%9f/#respond Sun, 05 May 2024 07:46:10 +0000 https://haisandur.com/?p=35044 ಕೊಟ್ಟೂರು ಪಟ್ಟಣದ ತೆರು ಬಯಲು ನಲ್ಲಿ ಬಳ್ಳಾರಿ ವಿಜಯನಗರ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಅವರು ಕಾಂಗ್ರೆಸ್ ಬೃಹತ್ ಸಮಾವೇಶ ಶನಿವಾರದಂದು ಏರ್ಪಡಿಸಲಾಗಿತ್ತು. ನಂತರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ್ ಲಾಡ್ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಹೇಳಲಿ ಏನೆಂಬುದನ್ನು ಜನರ ಮುಂದಿಡಲಿ. ಬಾಂಗ್ಲಾದೇಶದ ಜಿಡಿಪಿ, ತಲಾ ಆದಾಯ ನಮಗಿಂತ ಹೆಚ್ಚಿಗೆಯಿದೆ ಇದರ ಬಗ್ಗೆ ಪ್ರಧಾನಿ ಮಾತನಾಡಲಿ. ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗೆ ಬರಲಿ. ಸುದ್ದಿಗೋಷ್ಠಿ […]

The post “ಸಂತೋಷ್ ಲಾಡ್ ಭಾಷಣಕ್ಕೆ ಕೊಟ್ಟೂರಿನ ಜನರು ಫುಲ್ ಖುಷ್ “ appeared first on Hai Sandur kannada fortnightly news paper.

]]>
ಕೊಟ್ಟೂರು ಪಟ್ಟಣದ ತೆರು ಬಯಲು ನಲ್ಲಿ ಬಳ್ಳಾರಿ ವಿಜಯನಗರ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಅವರು ಕಾಂಗ್ರೆಸ್ ಬೃಹತ್ ಸಮಾವೇಶ ಶನಿವಾರದಂದು ಏರ್ಪಡಿಸಲಾಗಿತ್ತು.

ನಂತರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ್ ಲಾಡ್ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಹೇಳಲಿ ಏನೆಂಬುದನ್ನು ಜನರ ಮುಂದಿಡಲಿ. ಬಾಂಗ್ಲಾದೇಶದ ಜಿಡಿಪಿ, ತಲಾ ಆದಾಯ ನಮಗಿಂತ ಹೆಚ್ಚಿಗೆಯಿದೆ ಇದರ ಬಗ್ಗೆ ಪ್ರಧಾನಿ ಮಾತನಾಡಲಿ.

ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗೆ ಬರಲಿ. ಸುದ್ದಿಗೋಷ್ಠಿ ನಡೆಸಲು ಪ್ರಧಾನಿ ಹಿಂದೇಟು ಹಾಕುವುದು ಯಾಕೆ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. ಕಾಂಗ್ರೆಸ್ ಏನೂ ಮಾಡಿಲ್ಲ ಅಂತ ಅಧಿಕಾರಕ್ಕೆ ಬಂದು 10 ವರ್ಷ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಅಂಬಾನಿ, ಅದಾನಿಗೆ ಹಣ ಮಾಡಿಕೊಡಲು ಜನರಿಗೆ ಬರೆ ಹಾಕಿದ್ದಾರೆ.

ಪ್ರತಿ ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ದೇಶದಲ್ಲಿ ಸುಳ್ಳು ಭಾಷಣ ಬಿಟ್ಟರೆ ಬೇರೇನೂ ಮಾಡಿಲ್ಲ.

ಬಿಜೆಪಿಯವರಿಗೆ ರಾಮ ಮಂದಿರ, ಹಿಂದುತ್ವ, ಪಾಕಿಸ್ತಾನ, ಮುಸ್ಲಿಂ ಮಾತ್ರ, ಇವುಗಳನ್ನ ಬಿಟ್ಟರೆ ಯಾವುದರ ಬಗ್ಗೆಯೂ ಅವರು ಮಾತನಾಡಲ್ಲ. ಪ್ರಧಾನಿ ಬರೀ ಭಾಷಣ ಮಾಡುತ್ತಾರೆ. ಆದ್ರೆ ಯಾವುದಕ್ಕು ಉತ್ತರ ಕೊಡಲ್ಲ. ಈ ದೇಶ ಯಾರನ್ನ ಪ್ರಶ್ನೆ ಕೇಳಬೇಕು. ಚುನಾವಣೆಯಲ್ಲಿ ಅದು ಒಂದು‌ ಅಜಂಡಾ ಆಗಬೇಕು

ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅವ್ಯವ್ಯಹಾರ ಆಗಿದೆ. ಅಯೋಧ್ಯ ರಾಮ ಮಂದಿರ ನಿರ್ಮಾಣದಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ

ಕಪ್ಪು ಹಣ ತರ್ತಿವಿ ಅಂತ ಹೇಳಿದ್ದರು ಅದು ಕೂಡ ಆಗಿಲ್ಲ. ಪ್ರಧಾನಿಯವರ ಹೇಳಿಕೆಗಳನ್ನ ಪಟ್ಟಿ ಮಾಡಿಕೊಂಡು ಪ್ರಶ್ನೆ ಕೇಳಬೇಕು. ಮೊದಲು ಕೇಂದ್ರದಲ್ಲಿ ಆದ ಅವ್ಯವ್ಯಹಾರದ ಬಗ್ಗೆ ಚರ್ಚೆ ಆಗಲಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಮಾಜಿ ಶಾಸಕರು ಭೀಮ ನಾಯಕ್ ಅವರು ಮಾತನಾಡಿ ಕೆಂದ್ರ ಸರ್ಕಾರ ಸಾಮಾನ್ಯ ಜನಗಳ ಮೇಲೆ ಪೆಟ್ರೋಲ್ ಬೆಲೆ ಮತ್ತು ನಿರೊದ್ಯಗ, ಗ್ಯಾಸ್ ಸಿಲಿಂಡರ್ ದರ ಏರಿಕೆ, ಜನಸಾಮಾನ್ಯರು ಬಿಜೆಪಿ ಯನ್ನು ತಿರುಗಿಸುತ್ತಾರೆ.

ಕಾಂಗ್ರೆಸ್ ಸರ್ಕಾರ ರೈತರ 72 ಸಾವಿರ ಸಾಲ ಮನ್ನಾ ಮಾಡಿದರು ಅಂದ್ರೆ  ಪ್ರಧಾನಿ ನರೇಂದ್ರ ಮೋದಿ ಅವರು ಎಂದೂ ರೈತರ ಸಾಲ ಮನ್ನಾ ಮಾಡಿಲ್ಲ 16 ಲಕ್ಷ ಸಾವಿರ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಪ್ರತಿಯೊಬ್ಬ ಪ್ರಜಾ ಗಳಿಗೆ ಚಂಬು ಕೊಟ್ಟಿದ್ದಾರೆ.ಅದರೆ  ನುಡಿದಂತೆ ನಡೆದಿರುವ ನಮ್ಮ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪಾಸ್,ನಿರೂದ್ಯಗವರಿಗೆ 3000,10 ಕೆಜಿ ಅಕ್ಕಿ ಅಕೌಂಟ್ ನಲ್ಲಿ ಜಮ ಮಾಡುತ್ತವೆ, ಉಚಿತ 200 ವಿನಿಟ್ ಪ್ರೀ, ಮಹಿಳಾ ಅಕೌಂಟ್ ಗೆ 2000 ಫ್ರೀ, ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರ ಎಂದರು.

ಬಳ್ಳಾರಿ -ವಿಜಯನಗರ ಲೋಕಸಭಾ ಅಭ್ಯರ್ಥಿ ಈ ತುಕಾರಾಂ ಮಾತನಾಡಿ ಈ ಹಿಂದೆ ಇರುವ ಬಿಜೆಪಿ ಯ ಎಂಪಿ ಸಾಹೇಬರು ಒಂದು ಅಭಿವೃದ್ಧಿ ಕೆಲಸ ಇಲ್ಲ.
ಈ ಬಾರಿ ಚುನಾವಣೆಯಲ್ಲಿ ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯುತ್ತವೆ ಅದಕ್ಕಾಗಿ ದೇಶದ ರಕ್ಷಣೆ ಪ್ರತಿಯೊಬ್ಬರ ಘೋಷಣೆ ಆಗಬೇಕು . ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು

ಈ ಸಂದರ್ಭದಲ್ಲಿ ಜೆಡಿಎಸ್ ತೊರೆದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯಕ್ ಅವರು ಕಾಂಗ್ರೆಸ್  ಸೇರ್ಪಡೆಗೊಂಡರು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಡಿಕಿ ಮಂಜುನಾಥ್ , ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ ದ್ವಾರಕೇಶ್ ,ಎಂ ಎಂ ಜೆ ಸತ್ಯ ಪ್ರಕಾಶ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ದೊಡ್ಡ ರಾಮಣ್ಣ, ಮಾಜಿ ಶಾಸಕರು ನಬಿಸಾಬ್ ,ವಿಟಿಎಸ್ ತಿಪ್ಪೇಸ್ವಾಮಿ, ತೋಟದ ರಾಮಣ್ಣ, ಶಿರಿಬಿ ಕೊಟ್ರೇಶ್,ಎಂ ಶ್ರೀನಿವಾಸ್, ಶಿವುಕುಮಾರ ಗೌಡ,ಪಟ್ಟಣ ಪಂಚಾಯಿತಿ ಮಹಿಳಾ ಸದಸ್ಯರು, ಕೆ ಶಫಿ,ತಗ್ಗಿನಕೇರಿ ಜಗದೀಶ್,ಬದ್ದಿ ಮರಿಸ್ವಾಮಿ, ತೆಗ್ಗಿನಕೇರಿ ಹನುಮಂತಪ್ಪ ವಕೀಲರು ಇನ್ನೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

The post “ಸಂತೋಷ್ ಲಾಡ್ ಭಾಷಣಕ್ಕೆ ಕೊಟ್ಟೂರಿನ ಜನರು ಫುಲ್ ಖುಷ್ “ appeared first on Hai Sandur kannada fortnightly news paper.

]]>
https://haisandur.com/2024/05/05/%e0%b2%b8%e0%b2%82%e0%b2%a4%e0%b3%8b%e0%b2%b7%e0%b3%8d-%e0%b2%b2%e0%b2%be%e0%b2%a1%e0%b3%8d-%e0%b2%ad%e0%b2%be%e0%b2%b7%e0%b2%a3%e0%b2%95%e0%b3%8d%e0%b2%95%e0%b3%86-%e0%b2%95%e0%b3%8a%e0%b2%9f/feed/ 0
ನೀಟ್ ಪರೀಕ್ಷೆ ಮೇ 05 ರಂದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ https://haisandur.com/2024/05/04/%e0%b2%a8%e0%b3%80%e0%b2%9f%e0%b3%8d-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%ae%e0%b3%87-05-%e0%b2%b0%e0%b2%82%e0%b2%a6%e0%b3%81-%e0%b2%aa%e0%b2%b0%e0%b3%80%e0%b2%95/ https://haisandur.com/2024/05/04/%e0%b2%a8%e0%b3%80%e0%b2%9f%e0%b3%8d-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%ae%e0%b3%87-05-%e0%b2%b0%e0%b2%82%e0%b2%a6%e0%b3%81-%e0%b2%aa%e0%b2%b0%e0%b3%80%e0%b2%95/#respond Sat, 04 May 2024 15:48:51 +0000 https://haisandur.com/?p=35041 ಬಳ್ಳಾರಿ,ಮೇ 04:ಜಿಲ್ಲೆಯಲ್ಲಿ ಮೇ 05 ರಂದು ಮಧ್ಯಾಹ್ನ 02 ರಿಂದ ಸಂಜೆ 05.20 ರವರೆಗೆ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144 ರ ಅಡಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.ನಗರದ ಒಟ್ಟು 05 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಒಳಗಿನ ಆವರಣವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದಾರೆ.ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ […]

The post ನೀಟ್ ಪರೀಕ್ಷೆ ಮೇ 05 ರಂದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ appeared first on Hai Sandur kannada fortnightly news paper.

]]>
ಬಳ್ಳಾರಿ,ಮೇ 04:ಜಿಲ್ಲೆಯಲ್ಲಿ ಮೇ 05 ರಂದು ಮಧ್ಯಾಹ್ನ 02 ರಿಂದ ಸಂಜೆ 05.20 ರವರೆಗೆ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144 ರ ಅಡಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ನಗರದ ಒಟ್ಟು 05 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಒಳಗಿನ ಆವರಣವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದಾರೆ.
ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶವನ್ನು ನಿಷೇಧಿಸಿದೆ ಹಾಗೂ ಆ ದಿನದಂದು ಮಧ್ಯಾಹ್ನ 01 ರಿಂದ ಸಂಜೆ 05.30 ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಝೆರಾಕ್ಸ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಲಾಗಿದೆ.
ಈ ಆದೇಶವು ಪರೀಕ್ಷಾ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

The post ನೀಟ್ ಪರೀಕ್ಷೆ ಮೇ 05 ರಂದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ appeared first on Hai Sandur kannada fortnightly news paper.

]]>
https://haisandur.com/2024/05/04/%e0%b2%a8%e0%b3%80%e0%b2%9f%e0%b3%8d-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%ae%e0%b3%87-05-%e0%b2%b0%e0%b2%82%e0%b2%a6%e0%b3%81-%e0%b2%aa%e0%b2%b0%e0%b3%80%e0%b2%95/feed/ 0
ಸಿಟಿ ಸೆಂಟರ್ ಮಾಲ್ ನಲ್ಲಿ ಗಮನ ಸೆಳೆಯುತ್ತಿರುವ ಚುನಾವಣೆ ಮಾಡೆಲ್ಶೇ.100 ಮತದಾನ ಮಾಡಲು ಸಿಇಓ ಮನವಿ https://haisandur.com/2024/04/29/%e0%b2%b8%e0%b2%bf%e0%b2%9f%e0%b2%bf-%e0%b2%b8%e0%b3%86%e0%b2%82%e0%b2%9f%e0%b2%b0%e0%b3%8d-%e0%b2%ae%e0%b2%be%e0%b2%b2%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%97%e0%b2%ae/ https://haisandur.com/2024/04/29/%e0%b2%b8%e0%b2%bf%e0%b2%9f%e0%b2%bf-%e0%b2%b8%e0%b3%86%e0%b2%82%e0%b2%9f%e0%b2%b0%e0%b3%8d-%e0%b2%ae%e0%b2%be%e0%b2%b2%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%97%e0%b2%ae/#respond Mon, 29 Apr 2024 09:19:36 +0000 https://haisandur.com/?p=35007 ಶಿವಮೊಗ್ಗ ಏಪ್ರಿಲ್ 29:ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾವಣೆ ಮಾಡುವ ಮೂಲಕ ಶೇ.100 ರಷ್ಟು ಮತದಾನ ಆಗುವಂತೆ ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮನವಿ ಮಾಡಿದರು. ಶಿವಮೊಗ್ಗ ನಗರದ ಶಿವಪ್ಪನಾಯಕ ಮಾರುಕಟ್ಟೆಯ ಸಿಟಿ ಸೆಂಟರ್ ಮಾಲ್‍ನಲ್ಲಿ ಏ.28 ರ ಸಂಜೆ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಶಿವಮೊಗ್ಗ ಮತದಾನ ಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಮಾಲ್‍ನಲ್ಲಿ ಸ್ಥಾಪಿಸಲಾಗಿರುವ ಚುನಾವಣಾ […]

The post ಸಿಟಿ ಸೆಂಟರ್ ಮಾಲ್ ನಲ್ಲಿ ಗಮನ ಸೆಳೆಯುತ್ತಿರುವ ಚುನಾವಣೆ ಮಾಡೆಲ್ಶೇ.100 ಮತದಾನ ಮಾಡಲು ಸಿಇಓ ಮನವಿ appeared first on Hai Sandur kannada fortnightly news paper.

]]>
ಶಿವಮೊಗ್ಗ ಏಪ್ರಿಲ್ 29:ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾವಣೆ ಮಾಡುವ ಮೂಲಕ ಶೇ.100 ರಷ್ಟು ಮತದಾನ ಆಗುವಂತೆ ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮನವಿ ಮಾಡಿದರು.

ಶಿವಮೊಗ್ಗ ನಗರದ ಶಿವಪ್ಪನಾಯಕ ಮಾರುಕಟ್ಟೆಯ ಸಿಟಿ ಸೆಂಟರ್ ಮಾಲ್‍ನಲ್ಲಿ ಏ.28 ರ ಸಂಜೆ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಶಿವಮೊಗ್ಗ ಮತದಾನ ಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಮಾಲ್‍ನಲ್ಲಿ ಸ್ಥಾಪಿಸಲಾಗಿರುವ ಚುನಾವಣಾ ಮಾಡೆಲ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇದೆ. ಮತದಾನ ಪ್ರಮಾಣ ಹೆಚ್ಚಬೇಕು. ಬೆಂಗಳೂರಿನಲ್ಲಿ ಶೇಕಡ 50 ಕ್ಕಿಂತ ಕಡಿಮೆ ಮತದಾನ ನಡೆದಿದ್ದು ಆ ರೀತಿ ನಮ್ಮ ಶಿವಮೊಗ್ಗದಲ್ಲಿ ಆಗಬಾರದು. ಮತ ಚಲಾಯಿಸುವ ಮುಖಾಂತರ ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇಕಡ 76 ರಷ್ಟು ಮತದಾನ ನಡೆಡಿದ್ದು, ನಗರ ಪ್ರದೇಶದಲ್ಲಿ ಶೇಕಡಾ 60 ರಷ್ಟು ಮಾತ್ರ ಮತದಾನ ನಡೆದಿದೆ. ನಗರ ಪ್ರದೇಶದ ಜನರು ಮತದಾನ ಮಾಡುವಲ್ಲಿ ಆಸಕ್ತಿ ಕಡಿಮೆ ತೋರುತ್ತಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಜನರ ಜೀವನ ರೂಪಿಸುವುದಕ್ಕೆ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತನ ಕರ್ತವ್ಯವಾಗಿದ್ದು ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.

ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೀಜ್ ಮಾತನಾಡಿ ಮೇ 7 ಕ್ಕೆ ಬೆಳಗ್ಗೆ 7 ಗಂಟೆ ಯಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಬಹುದು. ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಮತ ಹಾಕುವ ಅವಕಾಶ ಈ ಬಾರಿ ನೀಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ತಮ್ಮ ಮೊಬೈಲ್‍ನಲ್ಲಿ ಸಿವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆ ಮೂಲಕ ದೂರು ಸಲ್ಲಿಸಬಹುದು ಮತ್ತು 1950 ಗೆ ಕರೆ ಮಾಡಿ ಸಹ ದೂರು ನೀಡಬಹುದು ಎಂದರು.

ಸ್ವೀಪ್ ಐಕಾನ್ ನಿವೇದನ್ ನೆಂಪೆ ಮಾತನಾಡಿ, ಶಿವಮೊಗ್ಗದ ಜನರು ಪ್ರಜ್ಞಾವಂತರೆಂದು ತೋರಿಸಿಕೊಳ್ಳಲು ಒಳ್ಳೆಯ ಅವಕಾಶ ದೊರಕಿದೆ. ಬುದ್ಧಿವಂತರು ಮತದಾನ ಮಾಡುವ ಮೂಲಕ ಪ್ರಜ್ಞಾವಂತರಾಗುತ್ತಾರೆ ಎಂದ ಅವರು ಮೇ 7ಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಕೋರಿದರು.

ಕಲಾವಿದರಾದ ಸತೀಶ ಪುರಪ್ಪೆಮನೆ ಹಾಗೂ ತಂಡದವರು ಚುನಾವಣಾ ಮಾಡೆಲ್ ನ್ನು ಸಿದ್ದಪಡಿಸಿದ್ದು ಸಿಟಿ ಸೆಂಟರ್ ಮಾಲ್‍ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆಯ ಅಧಿಕಾರಿ ಸುಪ್ರಿಯ, ಸಿಟಿ ಸೆಂಟರ್ ಮಾಲ್ ನ ದರ್ಶನ್, ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಹಾಜರಿದ್ದರು.

The post ಸಿಟಿ ಸೆಂಟರ್ ಮಾಲ್ ನಲ್ಲಿ ಗಮನ ಸೆಳೆಯುತ್ತಿರುವ ಚುನಾವಣೆ ಮಾಡೆಲ್ಶೇ.100 ಮತದಾನ ಮಾಡಲು ಸಿಇಓ ಮನವಿ appeared first on Hai Sandur kannada fortnightly news paper.

]]>
https://haisandur.com/2024/04/29/%e0%b2%b8%e0%b2%bf%e0%b2%9f%e0%b2%bf-%e0%b2%b8%e0%b3%86%e0%b2%82%e0%b2%9f%e0%b2%b0%e0%b3%8d-%e0%b2%ae%e0%b2%be%e0%b2%b2%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%97%e0%b2%ae/feed/ 0
ಎಪಿಎಂಸಿ ಪ್ರದೇಶದಲ್ಲಿ ಮತದಾನ ಜಾಗೃತಿ:ಮತದಾನ ನಿಮ್ಮ ಹಕ್ಕು, ತಪ್ಪದೇ ಚಲಾಯಿಸಿ: ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ https://haisandur.com/2024/04/29/%e0%b2%8e%e0%b2%aa%e0%b2%bf%e0%b2%8e%e0%b2%82%e0%b2%b8%e0%b2%bf-%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%a4%e0%b2%a6%e0%b2%be/ https://haisandur.com/2024/04/29/%e0%b2%8e%e0%b2%aa%e0%b2%bf%e0%b2%8e%e0%b2%82%e0%b2%b8%e0%b2%bf-%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%a4%e0%b2%a6%e0%b2%be/#respond Mon, 29 Apr 2024 09:15:28 +0000 https://haisandur.com/?p=35003 ಬಳ್ಳಾರಿ,ಏ.29:ಮತದಾನ ಆದ್ಯ ನಾಗರಿಕರ ಕರ್ತವ್ಯವಾಗಿದ್ದು, ಅರ್ಹ ಮತದಾರರು ತಪ್ಪದೇ ಮತ ಚಲಾವಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಇವರ ಆಶ್ರಯದಲ್ಲಿ ನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. ಮೇ 07 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ನಾಗರಿಕರು ಮತ ಚಲಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಬಳ್ಳಾರಿ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ […]

The post ಎಪಿಎಂಸಿ ಪ್ರದೇಶದಲ್ಲಿ ಮತದಾನ ಜಾಗೃತಿ:ಮತದಾನ ನಿಮ್ಮ ಹಕ್ಕು, ತಪ್ಪದೇ ಚಲಾಯಿಸಿ: ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ appeared first on Hai Sandur kannada fortnightly news paper.

]]>
ಬಳ್ಳಾರಿ,ಏ.29:ಮತದಾನ ಆದ್ಯ ನಾಗರಿಕರ ಕರ್ತವ್ಯವಾಗಿದ್ದು, ಅರ್ಹ ಮತದಾರರು ತಪ್ಪದೇ ಮತ ಚಲಾವಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಇವರ ಆಶ್ರಯದಲ್ಲಿ ನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಮೇ 07 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ನಾಗರಿಕರು ಮತ ಚಲಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಬಳ್ಳಾರಿ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಚನ್ನಬಸಪ್ಪ ಮಾತನಾಡಿ, ಯಾವುದೇ ಆಸೆ-ಅಮೀಷಗಳಿಗೆ ಒಳಗಾಗದೇ ಮೇ 07 ರಂದು ಪ್ರತಿಯೊಬ್ಬರು ಮತ ಚಲಾಯಿಸಬೇಕು. ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಎಂಪಿಎಂಸಿ ಮಾರುಕಟ್ಟೆಯ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

The post ಎಪಿಎಂಸಿ ಪ್ರದೇಶದಲ್ಲಿ ಮತದಾನ ಜಾಗೃತಿ:ಮತದಾನ ನಿಮ್ಮ ಹಕ್ಕು, ತಪ್ಪದೇ ಚಲಾಯಿಸಿ: ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ appeared first on Hai Sandur kannada fortnightly news paper.

]]>
https://haisandur.com/2024/04/29/%e0%b2%8e%e0%b2%aa%e0%b2%bf%e0%b2%8e%e0%b2%82%e0%b2%b8%e0%b2%bf-%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%a4%e0%b2%a6%e0%b2%be/feed/ 0
ಬಳ್ಳಾರಿ ಲೋಕಸಭೆ ಚುನಾವಣೆ;ಮತದಾನ ಮುಕ್ತಾಯವಾಗುವವರೆಗೆ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ https://haisandur.com/2024/04/29/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%b2%e0%b3%8b%e0%b2%95%e0%b2%b8%e0%b2%ad%e0%b3%86-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%ae/ https://haisandur.com/2024/04/29/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%b2%e0%b3%8b%e0%b2%95%e0%b2%b8%e0%b2%ad%e0%b3%86-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%ae/#respond Mon, 29 Apr 2024 09:12:43 +0000 https://haisandur.com/?p=35000 ಬಳ್ಳಾರಿ,ಏ.29:09-ಬಳ್ಳಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ 07 ರಂದು ನಡೆಯುವ ಮತದಾನ ದಿನದಂದು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮೇ 05 ರ ಸಂಜೆ 06 ಗಂಟೆಯಿಂದ ಮೇ 08 ರ ಸಂಜೆ 06 ಗಂಟೆಯವರೆಗೆ ಸಿಆರ್‍ಪಿಸಿ 1973 ರ ಕಲಂ 144 ರಡಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ. ಮತದಾರರಿಗೆ ವಿವಿಧ ಆಸೆ-ಆಮಿಷಗಳಿಗೆ ಒಳಪಡಿಸುವುದು, ಬೆದರಿಸಲು ಯತ್ನಿಸುವುದು, ತಮ್ಮ ಪರವಾಗಿ ವರ್ತಿಸಲು ಪ್ರೇರೆಪಿಸುವುದು, […]

The post ಬಳ್ಳಾರಿ ಲೋಕಸಭೆ ಚುನಾವಣೆ;ಮತದಾನ ಮುಕ್ತಾಯವಾಗುವವರೆಗೆ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ appeared first on Hai Sandur kannada fortnightly news paper.

]]>
ಬಳ್ಳಾರಿ,ಏ.29:09-ಬಳ್ಳಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ 07 ರಂದು ನಡೆಯುವ ಮತದಾನ ದಿನದಂದು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮೇ 05 ರ ಸಂಜೆ 06 ಗಂಟೆಯಿಂದ ಮೇ 08 ರ ಸಂಜೆ 06 ಗಂಟೆಯವರೆಗೆ ಸಿಆರ್‍ಪಿಸಿ 1973 ರ ಕಲಂ 144 ರಡಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.

ಮತದಾರರಿಗೆ ವಿವಿಧ ಆಸೆ-ಆಮಿಷಗಳಿಗೆ ಒಳಪಡಿಸುವುದು, ಬೆದರಿಸಲು ಯತ್ನಿಸುವುದು, ತಮ್ಮ ಪರವಾಗಿ ವರ್ತಿಸಲು ಪ್ರೇರೆಪಿಸುವುದು, ಮತಗಟ್ಟೆ ಕೇಂದ್ರಗಳ ಹತ್ತಿರದಲ್ಲಿ ಪ್ರಚಾರ ಮಾಡುವುದು, ಸಾರ್ವಜನಿಕ ಸಭೆ ನಡೆಸುವುದು, ಮತದಾರರನ್ನು ವಿವಿಧ ಸಾರಿಗೆ ವ್ಯವಸ್ಥೆಗಳ ಮೂಲಕ ಮತಗಟ್ಟೆಗಳಿಗೆ ಕರೆ ತರುವುದು, ಶಾಂತತೆಗೆ ಭಂಗ ಉಂಟು ಮಾಡುವುದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದು ಹಾಗೂ ಇತರೆ ಅಹಿತಕರ ಘಟನೆಗಳು ನಡೆಯುವಂತೆ ಮಾಡುವ ಸಂಭವನೀಯತೆಗಳಿದ್ದು, ಇದನ್ನು ತಡೆಗಟ್ಟುವುದು ಹಾಗೂ ಮತದಾನ ಪಾವಿತ್ರ್ಯತೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ವಿಧಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.

ಷರತ್ತುಗಳು:
ಜಿಲ್ಲೆಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿ ಅಥವಾ ಬೆಂಬಲಿಗರು ಸೇರಿ ಐದು ಜನರಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವಂತಿಲ್ಲ. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
ಮತಗಟ್ಟೆ ಕೇಂದ್ರಗಳ 100 ಮೀಟರ್ ವ್ಯಾಪ್ತಿಯ ಒಳಗೆ ಚುನಾವಣೆ ಪ್ರಚಾರ ನಿಷೇಧಿಸಿದೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿ, ಬುಕ್‍ಸ್ಟಾಲ್, ಸೈಬರ್ ಕೆಫೆಗಳನ್ನು ನಿಭರ್ಂದಿಸಿದೆ. ಕಲ್ಲುಗಳನ್ನು, ಕ್ಷಾರಪಧಾರ್ಥ ಇಲ್ಲವೆ ಸ್ಪೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು ಮತ್ತು ಎಸೆಯುವಂಥಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮನುಷ್ಯ ರೂಪದ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ ಮತ್ತು ದಹನ ಮಾಡುವುದನ್ನು ಪ್ರತಿಬಂಧಿಸಲಾಗಿದೆ.
ಎಲ್ಲಾ ಮತಗಟ್ಟೆ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿಬರ್ಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ. ಹಾಗೂ ಮತಗಟ್ಟೆ ಕೇಂದ್ರಗಳ 100 ಮೀಟರ್ ವ್ಯಾಪ್ತಿಯಲ್ಲಿ ಪಕ್ಷದ ಪ್ರಚಾರ, ಮತದ ಓಲೈಕೆ ಮುಂತಾದವುಗಳನ್ನು ಮಾಡುವಂತಿಲ್ಲ ಹಾಗೂ ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲೀ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ಬಹಿರಂಗವಾಗಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡು ಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಪೋಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂಥಹ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.
ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್-19 ಕಾರ್ಯಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ನಿಯಮಗಳನ್ನು ಪಾಲಿಸುವುದು.

ಮತಗಟ್ಟೆ ಕೇಂದ್ರಗಳ ಸುತ್ತಲೂ 100 ಮೀಟರ್ ಅಂತರದಲ್ಲಿ ಮೊಬೈಲ್ ಫೋನ್, ಕಾರ್ಡ್‍ಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. (ಚುನಾವಣಾ ಕಾರ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿ/ಚುನಾವಣಾಧಿಕಾರಿ ಅವರಿಂದ ಅನುಮತಿ ಪಡೆದ ಅಧಿಕಾರಿಗಳು/ ಸಿಬ್ಬಂದಿಗಳು ಹೊರತುಪಡಿಸಿ). ಮತಗಟ್ಟೆಗಳ ಸುತ್ತಲೂ 100 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್, ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ. ಈ ಅವದಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಮತದಾರರಲ್ಲದವರು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಹೋಗಬೇಕು:
ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಹೋಟೆಲ್‍ಗಳು ಮತ್ತು ಅತಿಥಿಗೃಹಗಳನ್ನು ವಾಸ್ತವ್ಯ ಹೂಡಿದವರ ಪಟ್ಟಿಗಳ ಪರಿಶೀಲನೆ ಮಾಡಿ ಮತದಾರರಲ್ಲದವರನ್ನು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಕಳುಹಿಸಲು ಕ್ರಮ ವಹಿಸಬೇಕು. ಸದರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ 188 ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು.
ಈ ಆದೇಶವು ಮತದಾನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ, ಪೋಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣಾ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

The post ಬಳ್ಳಾರಿ ಲೋಕಸಭೆ ಚುನಾವಣೆ;ಮತದಾನ ಮುಕ್ತಾಯವಾಗುವವರೆಗೆ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ appeared first on Hai Sandur kannada fortnightly news paper.

]]>
https://haisandur.com/2024/04/29/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%b2%e0%b3%8b%e0%b2%95%e0%b2%b8%e0%b2%ad%e0%b3%86-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%ae/feed/ 0
ಬಳ್ಳಾರಿ: ಕೈಗಾರಿಕಾ ಪ್ರದೇಶಗಳಲ್ಲಿ ಮತದಾನ ಜಾಗೃತಿ ಜಾಥಾ https://haisandur.com/2024/04/19/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%95%e0%b3%88%e0%b2%97%e0%b2%be%e0%b2%b0%e0%b2%bf%e0%b2%95%e0%b2%be-%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6/ https://haisandur.com/2024/04/19/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%95%e0%b3%88%e0%b2%97%e0%b2%be%e0%b2%b0%e0%b2%bf%e0%b2%95%e0%b2%be-%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6/#respond Fri, 19 Apr 2024 13:26:38 +0000 https://haisandur.com/?p=34943 ಬಳ್ಳಾರಿ,ಏ.19:ಜಿಲ್ಲಾಡಳಿಯ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಮತದಾನ ಜಾಗೃತಿ ಜಾಥಾ’ ಮೂಲಕ ನಗರದ ಹೊರವಲಯದ ಕೈಗಾರಿಕಾ ಪ್ರದೇಶಗಳಲ್ಲಿ ವಿವಿಧ ಕೈಗಾರಿಕಾ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಸಿಬ್ಬಂದಿಗಳಿಗೆ ಮೇ 07 ರಂದು ತಪ್ಪದೇ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸೋಮಶೇಖರ್ ಅವರು ಮಾತನಾಡಿ, ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ […]

The post ಬಳ್ಳಾರಿ: ಕೈಗಾರಿಕಾ ಪ್ರದೇಶಗಳಲ್ಲಿ ಮತದಾನ ಜಾಗೃತಿ ಜಾಥಾ appeared first on Hai Sandur kannada fortnightly news paper.

]]>
ಬಳ್ಳಾರಿ,ಏ.19:ಜಿಲ್ಲಾಡಳಿಯ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಮತದಾನ ಜಾಗೃತಿ ಜಾಥಾ’ ಮೂಲಕ ನಗರದ ಹೊರವಲಯದ ಕೈಗಾರಿಕಾ ಪ್ರದೇಶಗಳಲ್ಲಿ ವಿವಿಧ ಕೈಗಾರಿಕಾ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಸಿಬ್ಬಂದಿಗಳಿಗೆ ಮೇ 07 ರಂದು ತಪ್ಪದೇ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸೋಮಶೇಖರ್ ಅವರು ಮಾತನಾಡಿ, ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಮೇ 07 ರಂದು ಮತದಾನ ನಡೆಯಲಿದ್ದು, ಅಂದು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಮತದಾನ ಜಾಗೃತಿ ಜಾಥಾವು ಇಂಡಸ್ಟ್ರೀಯಲ್ ಏರಿಯಾದ ಮೊದಲನೇ ಸ್ಟೇಜ್ ಸೀಡ್ಸ್ ಕಾರ್ಪೋರೇಷನ್‍ನಿಂದ ಆರಂಭವಾಗಿ ಮೊದಲನೆಯ ಹಂತ, ಎರಡನೆಯ ಹಂತ ಮತ್ತು ಹಲಕುಂದಿ ಪ್ರದೇಶದ ಇಂಡಸ್ಟ್ರೀಯಲ್ ಏರಿಯಾದ ವಿವಿಧ ಕೈಗಾರಿಕೆಗಳಿಗೆ ಭೇಟಿ ನೀಡಿ ಎಪಿಎಂಸಿಯಲ್ಲಿ ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಕೆಐಡಿಬಿ ಅಭಿವೃದ್ಧಿ ಅಧಿಕಾರಿ ಗೋವಿಂದ ನಾಯಕ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು, ಕಾರ್ಮಿಕರು ಹಾಗೂ ಮತ್ತೀತರರು ಹಾಜರಿದ್ದರು.

The post ಬಳ್ಳಾರಿ: ಕೈಗಾರಿಕಾ ಪ್ರದೇಶಗಳಲ್ಲಿ ಮತದಾನ ಜಾಗೃತಿ ಜಾಥಾ appeared first on Hai Sandur kannada fortnightly news paper.

]]>
https://haisandur.com/2024/04/19/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%95%e0%b3%88%e0%b2%97%e0%b2%be%e0%b2%b0%e0%b2%bf%e0%b2%95%e0%b2%be-%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6/feed/ 0
ವಿಶೇಷಚೇತನರಿಂದ ಬೈಕ್ ರ್ಯಾಲಿಯ ಮೂಲಕ ಮತದಾನ ಜಾಗೃತಿಮತ ಚಲಾವಣೆಯು ನಮ್ಮ ಕರ್ತವ್ಯ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ https://haisandur.com/2024/04/19/%e0%b2%b5%e0%b2%bf%e0%b2%b6%e0%b3%87%e0%b2%b7%e0%b2%9a%e0%b3%87%e0%b2%a4%e0%b2%a8%e0%b2%b0%e0%b2%bf%e0%b2%82%e0%b2%a6-%e0%b2%ac%e0%b3%88%e0%b2%95%e0%b3%8d-%e0%b2%b0%e0%b3%8d%e0%b2%af%e0%b2%be%e0%b2%b2/ https://haisandur.com/2024/04/19/%e0%b2%b5%e0%b2%bf%e0%b2%b6%e0%b3%87%e0%b2%b7%e0%b2%9a%e0%b3%87%e0%b2%a4%e0%b2%a8%e0%b2%b0%e0%b2%bf%e0%b2%82%e0%b2%a6-%e0%b2%ac%e0%b3%88%e0%b2%95%e0%b3%8d-%e0%b2%b0%e0%b3%8d%e0%b2%af%e0%b2%be%e0%b2%b2/#respond Fri, 19 Apr 2024 13:23:58 +0000 https://haisandur.com/?p=34940 ಬಳ್ಳಾರಿ,ಏ.19: ಸಂವಿಧಾನವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕನ್ನು ನೀಡಿದೆ. ಪ್ರತಿಯೊಬ್ಬ ಅರ್ಹ ಮತದಾರರು ಮತ ಚಲಾವಣೆ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಆಗಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು. ಬಳ್ಳಾರಿ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ವಿಕಲಚೇತನರ ಇಲಾಖೆ, ಜಿಲ್ಲಾ ಪುನರ್ವಸತಿ ಕೇಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ […]

The post ವಿಶೇಷಚೇತನರಿಂದ ಬೈಕ್ ರ್ಯಾಲಿಯ ಮೂಲಕ ಮತದಾನ ಜಾಗೃತಿಮತ ಚಲಾವಣೆಯು ನಮ್ಮ ಕರ್ತವ್ಯ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ appeared first on Hai Sandur kannada fortnightly news paper.

]]>
ಬಳ್ಳಾರಿ,ಏ.19: ಸಂವಿಧಾನವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕನ್ನು ನೀಡಿದೆ. ಪ್ರತಿಯೊಬ್ಬ ಅರ್ಹ ಮತದಾರರು ಮತ ಚಲಾವಣೆ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಆಗಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.

ಬಳ್ಳಾರಿ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ವಿಕಲಚೇತನರ ಇಲಾಖೆ, ಜಿಲ್ಲಾ ಪುನರ್ವಸತಿ ಕೇಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಎಂಆರ್‍ಡಬ್ಲ್ಯೂ, ವಿಆರ್‍ಡಬ್ಲ್ಯೂ, ಯುಆರ್‍ಡಬ್ಲ್ಯೂ ಕಾರ್ಯಕರ್ತರು ಹಾಗೂ ವಿಶೇಷಚೇತನರಿಂದ ಶುಕ್ರವಾರ ನಗರದ ದುರುಗಮ್ಮ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯ ಮೂಲಕ ಮತದಾನ ಜಾಗೃತಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ವಿಶೇಷ ಚೇತನರು, ಹಿರಿಯ ನಾಗರಿಕರಿಗಾಗಿಯೇ ಮತಗಟ್ಟೆಗಳಲ್ಲಿ ರ್ಯಾಂಪ್, ವೀಲ್‍ಚೇರ್, ನೆರಳು, ನೀರಿನ ವ್ಯವಸ್ಥೆ ಸೇರಿ ಇತರೆ ಅನುಕೂಲಗಳು ಇರಲಿದ್ದು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಕರೆ ನೀಡಿದರು.
ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮತದಾರರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್ ಸಾಬ್, ಮಹಾನಗರ ಪಾಲಿಕೆಯ ಯೋಜನಾ ವ್ಯವಸ್ಥಾಪಕ ದೇವರಾಜ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ, ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರುಗಳು ಹಾಗೂ ವಿಶೇಷಚೇತನರು, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಶೇಷಚೇತನರು ತಮ್ಮ ತಮ್ಮ ಯಂತ್ರಚಾಲಿತ ತ್ರಿಚಕ್ರ ವಾಹನಗಳಲ್ಲಿ ಮತದಾನದ ಅರಿವು ಮೂಡಿಸುವ ಘೋಷಣೆ ಕೂಗುತ್ತಾ ಮತದಾರರಲ್ಲಿ ಅರಿವು ಮೂಡಿಸಿದರು.

ವಿಶೇಷಚೇತನರ ಬೈಕ್ ರ್ಯಾಲಿಯ ಮತದಾನ ಜಾಗೃತಿ ಜಾಥಾವು ಕನಕದುರ್ಗಮ್ಮ ದೇವಸ್ಥಾನ ಆವರಣದಿಂದ ಆರಂಭವಾಗಿ ಎಸ್‍ಪಿ ವೃತ್ತ ಮಾರ್ಗವಾಗಿ ಓಪಿಡಿ ವೃತ್ತ, ಹೆಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಮರಳಿ ದುರ್ಗಮ್ಮ ದೇವಸ್ಥಾನದ ಆವರಣಕ್ಕೆ ತಲುಪಿ ಅಂತ್ಯಗೊಂಡಿತು.

The post ವಿಶೇಷಚೇತನರಿಂದ ಬೈಕ್ ರ್ಯಾಲಿಯ ಮೂಲಕ ಮತದಾನ ಜಾಗೃತಿಮತ ಚಲಾವಣೆಯು ನಮ್ಮ ಕರ್ತವ್ಯ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ appeared first on Hai Sandur kannada fortnightly news paper.

]]>
https://haisandur.com/2024/04/19/%e0%b2%b5%e0%b2%bf%e0%b2%b6%e0%b3%87%e0%b2%b7%e0%b2%9a%e0%b3%87%e0%b2%a4%e0%b2%a8%e0%b2%b0%e0%b2%bf%e0%b2%82%e0%b2%a6-%e0%b2%ac%e0%b3%88%e0%b2%95%e0%b3%8d-%e0%b2%b0%e0%b3%8d%e0%b2%af%e0%b2%be%e0%b2%b2/feed/ 0
ಚುನಾವಣಾ ದೂರು ನಿಯಂತ್ರಣ ಕೊಠಡಿ, ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕ ಚಂದ್ರಶೇಖರ್ ಸಖಮುರಿ ಭೇಟಿ, ವೀಕ್ಷಣೆ https://haisandur.com/2024/04/19/%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be-%e0%b2%a6%e0%b3%82%e0%b2%b0%e0%b3%81-%e0%b2%a8%e0%b2%bf%e0%b2%af%e0%b2%82%e0%b2%a4%e0%b3%8d%e0%b2%b0%e0%b2%a3-%e0%b2%95%e0%b3%8a/ https://haisandur.com/2024/04/19/%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be-%e0%b2%a6%e0%b3%82%e0%b2%b0%e0%b3%81-%e0%b2%a8%e0%b2%bf%e0%b2%af%e0%b2%82%e0%b2%a4%e0%b3%8d%e0%b2%b0%e0%b2%a3-%e0%b2%95%e0%b3%8a/#respond Fri, 19 Apr 2024 13:18:50 +0000 https://haisandur.com/?p=34936 ಬಳ್ಳಾರಿ,ಏ.19: ಬಳ್ಳಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ಮತ್ತು ಅಕ್ರಮ ಚಟುವಟಿಕೆಗಳ ದೂರು ದಾಖಲು ಮಾಡಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಚುನಾವಣಾ ದೂರು ನಿಯಂತ್ರಣ ಕೊಠಡಿ, ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ್ ಸಖಮುರಿ ಅವರು ಶುಕ್ರವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿ-ವಿಜಿಲ್ ಮೂಲಕ ಸಲ್ಲಿಕೆಯಾಗಿರುವ ದೂರುಗಳ ಮಾಹಿತಿ ಪಡೆದುಕೊಂಡರು. ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದರು. […]

The post ಚುನಾವಣಾ ದೂರು ನಿಯಂತ್ರಣ ಕೊಠಡಿ, ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕ ಚಂದ್ರಶೇಖರ್ ಸಖಮುರಿ ಭೇಟಿ, ವೀಕ್ಷಣೆ appeared first on Hai Sandur kannada fortnightly news paper.

]]>
ಬಳ್ಳಾರಿ,ಏ.19: ಬಳ್ಳಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ಮತ್ತು ಅಕ್ರಮ ಚಟುವಟಿಕೆಗಳ ದೂರು ದಾಖಲು ಮಾಡಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಚುನಾವಣಾ ದೂರು ನಿಯಂತ್ರಣ ಕೊಠಡಿ, ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ್ ಸಖಮುರಿ ಅವರು ಶುಕ್ರವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿ-ವಿಜಿಲ್ ಮೂಲಕ ಸಲ್ಲಿಕೆಯಾಗಿರುವ ದೂರುಗಳ ಮಾಹಿತಿ ಪಡೆದುಕೊಂಡರು. ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದರು.

ಬಳಿಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚುನಾವಣೆ ಅಕ್ರಮ, ಕಾಸಿಗಾಗಿ ಸುದ್ದಿ ಹಾಗೂ ಇತರೆ ವಿಷಯಗಳ ಕುರಿತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವುದನ್ನು ಹದ್ದಿನ ಕಣ್ಣಿನಂತೆ ನಿಗಾವಹಿಸಬೇಕು ಎಂದು ಎಂಸಿಎಂಸಿ ಸಮಿತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

The post ಚುನಾವಣಾ ದೂರು ನಿಯಂತ್ರಣ ಕೊಠಡಿ, ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕ ಚಂದ್ರಶೇಖರ್ ಸಖಮುರಿ ಭೇಟಿ, ವೀಕ್ಷಣೆ appeared first on Hai Sandur kannada fortnightly news paper.

]]>
https://haisandur.com/2024/04/19/%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be-%e0%b2%a6%e0%b3%82%e0%b2%b0%e0%b3%81-%e0%b2%a8%e0%b2%bf%e0%b2%af%e0%b2%82%e0%b2%a4%e0%b3%8d%e0%b2%b0%e0%b2%a3-%e0%b2%95%e0%b3%8a/feed/ 0
ಬಿಸಿಲಿನ ಶಾಖಾಘಾತ: ನಿರ್ಜನ ಪ್ರದೇಶದಲ್ಲಿ ಒಬ್ಬರೇ ಓಡಾಡುವುದು ತಪ್ಪಿಸಿ https://haisandur.com/2024/04/10/%e0%b2%ac%e0%b2%bf%e0%b2%b8%e0%b2%bf%e0%b2%b2%e0%b2%bf%e0%b2%a8-%e0%b2%b6%e0%b2%be%e0%b2%96%e0%b2%be%e0%b2%98%e0%b2%be%e0%b2%a4-%e0%b2%a8%e0%b2%bf%e0%b2%b0%e0%b3%8d%e0%b2%9c%e0%b2%a8-%e0%b2%aa/ https://haisandur.com/2024/04/10/%e0%b2%ac%e0%b2%bf%e0%b2%b8%e0%b2%bf%e0%b2%b2%e0%b2%bf%e0%b2%a8-%e0%b2%b6%e0%b2%be%e0%b2%96%e0%b2%be%e0%b2%98%e0%b2%be%e0%b2%a4-%e0%b2%a8%e0%b2%bf%e0%b2%b0%e0%b3%8d%e0%b2%9c%e0%b2%a8-%e0%b2%aa/#respond Wed, 10 Apr 2024 16:08:05 +0000 https://haisandur.com/?p=34902 ಬಳ್ಳಾರಿ,ಏ.10: ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಪ್ರಖರವಾಗಿ ಕಂಡುಬರುತ್ತಿದ್ದು, ಬಿಸಿಲಿನ ಶಾಖಾಘಾತಕ್ಕೆ ಒಳಗಾಗುವ ಸಂಭವ ಹೆಚ್ಚಿದ್ದು, ನಿರ್ಜನ ಪ್ರದೇಶದಲ್ಲಿ ಸಾರ್ವಜನಿಕರು ಒಬ್ಬರೇ ಓಡಾಡುವುದನ್ನು ತಪ್ಪಿಸುವ ಮೂಲಕ ಬಿಸಿಲಿನ ಸೂರ್ಯಘಾತದ ಅನಾಹುತದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ವೈ.ರಮೇಶ ಬಾಬು ಕೋರಿದ್ದಾರೆ. ಮಧ್ಯಾಹ್ನ 01 ರಿಂದ 04 ಗಂಟೆ ಅವಧಿಯಲ್ಲಿ ವಯೋವೃದ್ದರು, ಮಕ್ಕಳು, ಗರ್ಭಿಣಿ ಮತ್ತು ದೀರ್ಘಕಾಲಿನ ಖಾಯಿಲೆಗಳಿಗೆ ಔಷಧಿ ಸೇವಿಸುವ ಪ್ರತಿಯೊಬ್ಬರು ಆದಷ್ಟು ನೆರಳಿನಲ್ಲಿ ಇರುವುದಕ್ಕೆ ಆದ್ಯತೆ ನೀಡಬೇಕು. ಯಾರೂ ನಿರ್ಜನ […]

The post ಬಿಸಿಲಿನ ಶಾಖಾಘಾತ: ನಿರ್ಜನ ಪ್ರದೇಶದಲ್ಲಿ ಒಬ್ಬರೇ ಓಡಾಡುವುದು ತಪ್ಪಿಸಿ appeared first on Hai Sandur kannada fortnightly news paper.

]]>
ಬಳ್ಳಾರಿ,ಏ.10: ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಪ್ರಖರವಾಗಿ ಕಂಡುಬರುತ್ತಿದ್ದು, ಬಿಸಿಲಿನ ಶಾಖಾಘಾತಕ್ಕೆ ಒಳಗಾಗುವ ಸಂಭವ ಹೆಚ್ಚಿದ್ದು, ನಿರ್ಜನ ಪ್ರದೇಶದಲ್ಲಿ ಸಾರ್ವಜನಿಕರು ಒಬ್ಬರೇ ಓಡಾಡುವುದನ್ನು ತಪ್ಪಿಸುವ ಮೂಲಕ ಬಿಸಿಲಿನ ಸೂರ್ಯಘಾತದ ಅನಾಹುತದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ವೈ.ರಮೇಶ ಬಾಬು ಕೋರಿದ್ದಾರೆ.

ಮಧ್ಯಾಹ್ನ 01 ರಿಂದ 04 ಗಂಟೆ ಅವಧಿಯಲ್ಲಿ ವಯೋವೃದ್ದರು, ಮಕ್ಕಳು, ಗರ್ಭಿಣಿ ಮತ್ತು ದೀರ್ಘಕಾಲಿನ ಖಾಯಿಲೆಗಳಿಗೆ ಔಷಧಿ ಸೇವಿಸುವ ಪ್ರತಿಯೊಬ್ಬರು ಆದಷ್ಟು ನೆರಳಿನಲ್ಲಿ ಇರುವುದಕ್ಕೆ ಆದ್ಯತೆ ನೀಡಬೇಕು. ಯಾರೂ ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಗರಾಗಿ ಹೋಗದೇ ಸೂರ್ಯಾಘಾತದ ಅನಾಹುತದಿಂದ ತಪ್ಪಿಸಲು ಪ್ರತಿಯೊಬ್ಬರೂ ಆರೋಗ್ಯ ಇಲಾಖೆಗೆ ಕೈ ಜೋಡಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿರ್ಜಲೀಕರಣ ತಡೆಗಟ್ಟಲು ಓ.ಆರ್.ಎಸ್ ಜೀವಜಲ ಪುಡಿಯನ್ನು ಅಗತ್ಯವುಳ್ಳವರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಆರೈಕೆಗಾಗಿ, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳಲಾಗಿದೆ.
ಓ.ಆರ್.ಎಸ್. ದ್ರಾವಣವನ್ನು 1 ಲೀಟರ್ ನೀರಿಗೆ 1 ಪೊಟ್ಟಣದ ಸಂಪೂರ್ಣ ಪುಡಿಯನ್ನು ಹಾಕಿ 24 ಗಂಟೆಯೊಳಗಡೆ ಕುಡಿಯಲು ಬಳಸುವ ಮೂಲಕ ಬಿಸಿಲಿನ ಪ್ರಖರತೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಜರುಗುತ್ತಿರುವ ಪ್ರಮುಖ ಜಾತ್ರೆಗಳಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆದು ಓಆರ್‍ಎಸ್ ಜೀವಜಲವನ್ನು ಸಿದ್ದಪಡಿಸಿ ಜನತೆಗೆ ಒದಗಿಸುವ ಕಾರ್ಯ ಮಾಡಲಾಗುತ್ತಿದೆ.
ಜಿಲ್ಲಾ ಕಾಲರಾ ತಂಡದಿಂದ ಕುಡಿಯುವ ನೀರಿನ ಮೂಲಗಳನ್ನು ನಿರಂತರವಾಗಿ ಪರೀಕ್ಷಿಸಿ ಕುಡಿಯಲು ಯೋಗ್ಯವೆಂದು ಖಚಿತಪಡಿಸಿದ ನಂತರವೇ ಜಾತ್ರೆಯಲ್ಲಿ ಯಾವುದೇ ವಾಂತಿ, ಬೇಧಿ ಪ್ರಕರಣಗಳು ವರದಿಯಾಗದಂತೆ ಕ್ರಮವಹಿಸಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನಲೆ ಜಿಲ್ಲೆಯ ಗಡಿಭಾಗದಲ್ಲಿ ಹಾಗೂ ಇತರೆಡೆ ತೆರೆದಿರುವ 24 ಚೆಕ್‍ಪೋಸ್ಟ್ ಸಿಬ್ಬಂದಿಯವರಿಗೆ ಓಆರ್‍ಎಸ್ ಪೊಟ್ಟಣಗಳನ್ನು ಹಾಗೂ ತುರ್ತು ಚಿಕಿತ್ಸಾ ಔಷಧಿಗಳನ್ನು ವಿತರಿಸಲಾಗಿದೆ.
ಸಾರ್ವಜನಿಕರು ಮಧ್ಯಾಹ್ನದ ವೇಳೆ ಅಗತ್ಯವೆನಿಸುವ ಸಂದರ್ಭಗಳಲ್ಲಿ ಮನೆಯಿಂದ ಹೊರಗಡೆ ಬರುವಾಗ ಕುಡಿಯುವ ಶುದ್ದವಾದ ನೀರು, ಹಾಗೂ ಛತ್ರಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವಾಗ ಮಕ್ಕಳಿಗೆ ತಲೆಯ ಮೇಲೆ ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಹಾಕಬೇಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗದಂತೆ ಕಾಳಜಿವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ಬಿಸಿಲಿನ ಶಾಖಾಘಾತ: ನಿರ್ಜನ ಪ್ರದೇಶದಲ್ಲಿ ಒಬ್ಬರೇ ಓಡಾಡುವುದು ತಪ್ಪಿಸಿ appeared first on Hai Sandur kannada fortnightly news paper.

]]>
https://haisandur.com/2024/04/10/%e0%b2%ac%e0%b2%bf%e0%b2%b8%e0%b2%bf%e0%b2%b2%e0%b2%bf%e0%b2%a8-%e0%b2%b6%e0%b2%be%e0%b2%96%e0%b2%be%e0%b2%98%e0%b2%be%e0%b2%a4-%e0%b2%a8%e0%b2%bf%e0%b2%b0%e0%b3%8d%e0%b2%9c%e0%b2%a8-%e0%b2%aa/feed/ 0
ಬಳ್ಳಾರಿ: ಏ.12 ರಿಂದ ನಾಮಪತ್ರ ಸಲ್ಲಿಕೆ ಆರಂಭ; ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ 100 ಮೀ ವ್ಯಾಪ್ತಿ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ https://haisandur.com/2024/04/10/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%8f-12-%e0%b2%b0%e0%b2%bf%e0%b2%82%e0%b2%a6-%e0%b2%a8%e0%b2%be%e0%b2%ae%e0%b2%aa%e0%b2%a4%e0%b3%8d%e0%b2%b0-%e0%b2%b8%e0%b2%b2/ https://haisandur.com/2024/04/10/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%8f-12-%e0%b2%b0%e0%b2%bf%e0%b2%82%e0%b2%a6-%e0%b2%a8%e0%b2%be%e0%b2%ae%e0%b2%aa%e0%b2%a4%e0%b3%8d%e0%b2%b0-%e0%b2%b8%e0%b2%b2/#respond Wed, 10 Apr 2024 16:05:25 +0000 https://haisandur.com/?p=34900 ಬಳ್ಳಾರಿ,ಏ.10: ಬಳ್ಳಾರಿ (ಪ.ಪಂ) ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏ.12 ರಿಂದ 19 ರ ವರೆಗೆ ಉಮೇದುವಾರರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ನಡೆಯುವುದರಿಂದ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಿಆರ್ ಪಿಸಿ ಕಾಯ್ದೆ 1973 ಕಲಂ 144 ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತ ಮುತ್ತಲಿನ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ. […]

The post ಬಳ್ಳಾರಿ: ಏ.12 ರಿಂದ ನಾಮಪತ್ರ ಸಲ್ಲಿಕೆ ಆರಂಭ; ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ 100 ಮೀ ವ್ಯಾಪ್ತಿ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ appeared first on Hai Sandur kannada fortnightly news paper.

]]>
ಬಳ್ಳಾರಿ,ಏ.10: ಬಳ್ಳಾರಿ (ಪ.ಪಂ) ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏ.12 ರಿಂದ 19 ರ ವರೆಗೆ ಉಮೇದುವಾರರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ನಡೆಯುವುದರಿಂದ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಿಆರ್ ಪಿಸಿ ಕಾಯ್ದೆ 1973 ಕಲಂ 144 ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತ ಮುತ್ತಲಿನ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.

ಏ.12 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಏ.19 ರ ವರೆಗೆ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಸಂಭವವಿರುವುದರಿಂದ ಸೂಕ್ತ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಿದ್ದಾರೆ.

ನಿಷೇಧಿಸಿರುವ ಚಟುವಟಿಕೆಗಳು:
ಇಂಕ್ (ಮಸಿ), ನೀರು, ಬೆಂಕಿ ಪೊಟ್ಟಣ, ಲೈಟರ್ ಮತ್ತು ಇತರೆ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದು. ಶಸ್ತ್ರ, ಬಡಿಗೆ, ಬರ್ಚಿಗದೆ, ಬಂದೂಕು, ಚಾಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೇ ವಸ್ತು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಯಾವುದೇ ದಾಹಕ (ನಾಶಕಾರಿ) ಇಲ್ಲವೆ ಸ್ಫೋಟಕ ವಸ್ತು ಒಯ್ಯುವುದು, ಪಟಾಕಿ ಅಥವಾ ಸಿಡಿಮದ್ದು ಸಿಡಿಸುವುದು. ಕಲ್ಲು ಎಸೆಯುವ ವಸ್ತು ಅಥವಾ ಅಂತಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಶಸ್ತ್ರಗಳು ಅಥವಾ ಸಾಧನಗಳನ್ನು ತೆಗೆದುಕೊಂಡು ತಿರುಗಾಡುವುದು ನಿಷೇಧಿಸಲಾಗಿದೆ.

ಕಾರು, ಮೋಟರ್ ಬೈಕ್ ಮತ್ತು ಇತರೆ ವಾಹನಗಳಲ್ಲಿ ರ್ಯಾಲಿಯನ್ನು ಆಯೋಜಿಸುವುದು ಹಾಗೂ ಭೋಜನಕೂಟಗಳನ್ನು ಏರ್ಪಡಿಸುವುದು. ಐದಕ್ಕಿಂತ ಹೆಚ್ಚು ಜನರು ಗುಂಪು ಗೂಡಿ ತಿರುಗಾಡುವುದು (ಜಿಲ್ಲಾಧಿಕಾರಿಗಳ ಕಛೇರಿಯ ಸಿಬ್ಬಂದಿ ಹೊರತು ಪಡಿಸಿ) ಕೂಡ ನಿಷೇಧಿಸಲಾಗಿದೆ.

ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಕುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿಯ ಪ್ರದರ್ಶನವನ್ನು ಹಾಗೂ ಆ ಅಫೀಸರ್ ಅಭಿಪ್ರಾಯದಲ್ಲಿ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಯಾವುದೇ ವಸ್ತು ಅಥವಾ ಪದಾರ್ಥದ ತಯಾರಿ ಪ್ರದರ್ಶನ ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.

The post ಬಳ್ಳಾರಿ: ಏ.12 ರಿಂದ ನಾಮಪತ್ರ ಸಲ್ಲಿಕೆ ಆರಂಭ; ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ 100 ಮೀ ವ್ಯಾಪ್ತಿ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ appeared first on Hai Sandur kannada fortnightly news paper.

]]>
https://haisandur.com/2024/04/10/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%8f-12-%e0%b2%b0%e0%b2%bf%e0%b2%82%e0%b2%a6-%e0%b2%a8%e0%b2%be%e0%b2%ae%e0%b2%aa%e0%b2%a4%e0%b3%8d%e0%b2%b0-%e0%b2%b8%e0%b2%b2/feed/ 0