Welcome to Hai Sandur   Click to listen highlighted text! Welcome to Hai Sandur
Thursday, January 2, 2025
HomeLatest News‘ಕಾಂತಾರ’ ಚಿತ್ರದ ಪ್ರತಿ ಹಂತವು ವಿಶೇಷವಾಗಿತ್ತು – ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ

‘ಕಾಂತಾರ’ ಚಿತ್ರದ ಪ್ರತಿ ಹಂತವು ವಿಶೇಷವಾಗಿತ್ತು – ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಇಂದು (ಅ.8) ದೆಹಲಿಯಲ್ಲಿ ‘ಕಾಂತಾರ’ (Kantara) ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದೀಗ ಈ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ನಟ ಶ್ರೀಮುರಳಿ

ಕನ್ನಡದ ಚಿತ್ರರಂಗದ ಕೀರ್ತಿಯ ಕ್ಷಣ. ‘ಕಾಂತಾರ’ ಸಿನಿಮಾಗಾಗಿ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಖುಷಿಯಿದೆ. ‘ಕಾಂತಾರ’ ಚಿತ್ರದ ಈ ಪ್ರಯಾಣದ ಪ್ರತಿಯೊಂದು ಹಂತವು ಸ್ಪೆಷಲ್‌ ಆಗಿತ್ತು. ಇನ್ನೂ ನಮ್ಮ ಕೆಲಸವನ್ನು ಗುರುತಿಸಿದ ತೀರ್ಪುಗಾರರಿಗೆ ಧನ್ಯವಾದಗಳು ಎಂದು ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಇನ್ನೂ ‘ಕಾಂತಾರ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಅವಾರ್ಡ್ ಸ್ವೀಕರಿಸಿದ್ದಾರೆ ರಿಷಬ್. ಈ ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿಯೂ ಪ್ರಶಸ್ತಿ ಸಿಕ್ಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!