Welcome to Hai Sandur   Click to listen highlighted text! Welcome to Hai Sandur
Tuesday, January 28, 2025
HomeSandurಬಿಜೆಪಿ ಫಿರಂಗಿಗೆ ಕಾಂಗ್ರೆಸ್ ಭದ್ರಕೋಟೆ ಛಿದ್ರವಾಗುತ್ತ.

ಬಿಜೆಪಿ ಫಿರಂಗಿಗೆ ಕಾಂಗ್ರೆಸ್ ಭದ್ರಕೋಟೆ ಛಿದ್ರವಾಗುತ್ತ.

ಕಾಂಗ್ರೆಸ್ ನ ಭದ್ರಕೋಟೆ, ಛಿದ್ರವಾಗಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಮಲದ ಚಿನ್ಹೆ ಹೊಂದಿರುವ ಬಿಜೆಪಿ ಪಕ್ಷದ ಮೊದಲ ಶಾಸಕನಾಗುವ ಅವಕಾಶ ಬಂಗಾರ ಹನುಮಂತು ಅವರದಾಗುತ್ತಾ ಎಂಬ ಕುತೂಹಲದ ಆಸೆ ಇಮ್ಮಡಿ ಆಗಿದೆ ಎಂದರೆ ತಪ್ಪಾಗಲಾರದು.
ಇದಕ್ಕೆ ಕಾರಣ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಬಿಜೆಪಿ ಪಕ್ಷದ ಹುರಿಯಾಳಾಗಿ ಶುಕ್ರವಾರದಂದು ನಾಮಪತ್ರ ಸಲ್ಲಿಸುವ ವೇಳೆ ಸೇರಿದ್ದ ಜನಸ್ತೋಮವೇ ಸಾಕ್ಷಿಯಾಗಿತ್ತು.

ಎಪಿಎಂಸಿ ಮಾರುಕಟ್ಟೆಯಿಂದ ಮೆರವಣಿಗೆ ಆರಂಭಿಸಿದ ಪಕ್ಷದ ಮುಖಂಡರ ಜೊತೆ ಜೊತೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಬಾವುಟಗಳನ್ನು ಹಿಡಿದುಕೊಂಡು ಹರ್ಷದಿಂದ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.

ಪುರಸಭೆ ಬಸ್ ನಿಲ್ದಾಣದ ಹತ್ತಿರ ಬಂದ ನಂತರ ದೊಡ್ಡ ದೊಡ್ಡ ಪಟಾಕಿಗಳನ್ನು ಸಿಡಿಸಿ ಕ್ರೇನ್ ನ ಮೂಲಕ ಬೃಹತ್ ಗಾತ್ರದ ಹೂವಿನ ಹಾರವನ್ನು ಹಾಕಿ ಗಣ್ಯರನ್ನು ಸ್ವಾಗತಿಸಲಾಯಿತು.

ಸಿದ್ದರಾಮಯ್ಯನವರೇ ಸಂಡೂರಿಗೆ ಬನ್ನಿ ಎಂದಿದ್ದೀರಿ ಬಂದಿದ್ದೇನೆ ಈಗ ಬಿಜೆಪಿ ಪಕ್ಷದಿಂದ ಎಂಎಲ್ಎ ಮಾಡಿಕೊಂಡು ಹೋಗುತ್ತೇನೆ ಎಂದು ಗಂಗಾವತಿ ಶಾಸಕ ಮಾಜಿ ಮಂತ್ರಿ ಗಾಲಿ ಜನಾರ್ಧನ್ ರೆಡ್ಡಿ ಸವಾಲು ಹಾಕಿದರು.
ನಮ್ಮ ಪಕ್ಷದ ಹಿರಿಯ ಮುಖಂಡ ಮಾಜಿ ಮಂತ್ರಿ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರು ಮಂತ್ರಿಯಾಗಿದ್ದಾಗ ವಾಲ್ಮೀಕಿ ಜನಾಂಗದ ಅಭಿವೃದ್ಧಿಗಾಗಿ ವಾಲ್ಮೀಕಿ ನಿಗಮವನ್ನು ಸ್ಥಾಪನೆ ಮಾಡಿದ್ದೆವು ಆ ನಿಗಮದಲ್ಲಿದ್ದ 187 ಕೋಟಿ ರೂಪಾಯಿಗಳನ್ನು ನಾಗೇಂದ್ರ ಅವರು ದುರ್ಬಳಕೆ ಮಾಡಿಕೊಂಡು ಜೊತೆಗೆ 27 ಕೋಟಿ ರೂಪಾಯಿಗಳನ್ನು ತುಕಾರಾಂ ಅವರ ಲೋಕಸಭಾ ಚುನಾವಣೆಗೆ ಬಳಸಿಕೊಂಡು ಅಕ್ರಮ ವೆಸಗಿದ್ದಾರೆ, 20 ವರ್ಷಗಳ ಕಾಲ ಆಡಳಿತ ನಡೆಸಿದ ಈ ತುಕಾರಾಂ ಸಂಡೂರು ಪಟ್ಟಣದಲ್ಲಿ ಸುಸಜ್ಜಿತವಾದ ಒಂದು ಬಸ್ ಸ್ಟ್ಯಾಂಡ್ ನಿರ್ಮಿಸಲು ಕೂಡ ಮನಸ್ಸು ಮಾಡಿಲ್ಲದಿರುವುದು ಅವರ ಯೋಗ್ಯತೆಯನ್ನು ತಿಳಿಸುತ್ತದೆ.

ಈಗಾಗಲೇ ಎಂಪಿ ಆಗಿರುವ ಅವರು ತಮ್ಮ ಹೆಂಡತಿಯನ್ನು ಶಾಸಕಿಯನ್ನಾಗಿ ಮಾಡಲು ಹೊರಟಿದ್ದಾರೆ. ಇದರಿಂದ ಒಂದೇ ಮನೆಯಲ್ಲಿ ಎಂಪಿ, ಎಮ್ಎಲ್ ಆದರೆ ಆ ಜನಾಂಗಕ್ಕೆ ಮತ್ತು ಕ್ಷೇತ್ರಕ್ಕೆ ನ್ಯಾಯ ಸಿಗುವುದು ಎಲ್ಲಿಂದ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಬಿ ಶ್ರೀರಾಮುಲು ಅವರು ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದ ವ್ಯಾಮೋಹ ದೊಡ್ಡದಿದೆ ಈ ಉಪಚುನಾವಣೆಯಲ್ಲಿ ಬಂಗಾರ ಹನುಮಂತ ಅವರನ್ನು ಗೆಲ್ಲಿಸುವಂತೆ ಕೇಳಿಕೊಂಡರು.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ರಾಜ್ಯ ಬಿಜೆಪಿ ನಾಯಕರನ್ನು ಇಲ್ಲಿಗೆ ಕರೆತಂದು ಕ್ಷೇತ್ರದಾದ್ಯಂತ ತಿರುಗಾಡಿ ಬಂಗಾರು ಹನುಮಂತ ಅವರ ಗೆಲುವಿಗೆ ಶ್ರಮಿಸಲು ಪಣತೊಟ್ಟಿದ್ದೇವೆ ಎಂದರು.

ಮಾಜಿ ಲೋಕಸಭಾ ಸದಸ್ಯ ಹಾಗೂ ಮಾಜಿ ಶಾಸಕ ಅನಿಲ್ ಹೆಚ್ ಲಾಡ್, ಮಲ್ಲಿಕಾರ್ಜುನ್ ಕುಬಾ, ಸೋಮಶೇಖರ್ ರೆಡ್ಡಿ, ದಿವಾಕರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ವಿಜಯ ವೃತಕ್ಕೆ ಮೆರವಣಿಗೆಯನ್ನು
ಮೊಟುಕುಗೊಳಿಸಿ ಅವಸರವಸರವಾಗಿ ನಾಮಪತ್ರ ಸಲ್ಲಿಸಲು ತಹಶೀಲ್ದಾರರ ಕಚೇರಿಗೆ ತೆರಳಿದರು

ಈ ಸಂದರ್ಭದಲ್ಲಿ ಮುಖಂಡರುಗಳು ಸೇರಿದಂತೆ ಅಭ್ಯರ್ಥಿ ಬಂಗಾರು ಹನುಮಂತು ಅವರ ಧರ್ಮಪತ್ನಿ ,ಮಗ ,ತಂದೆ ಸೇರಿದಂತೆ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!