ಕಾಂಗ್ರೇಸ್ ಪಕ್ಷ ಕುತಂತ್ರ ಬುದ್ದಿಯಿಂದ ಒಳಮೀಸಲಾತಿ ಜಾರಿಗೆ ತರಲಿಲ್ಲ. ಕಾಂಗ್ರೇಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದರೆ ಹೊರತು 6ನೇ ಗ್ಯಾರಂಟಿಯನ್ನು ಘೋಷಣೆ ಮಾಡದೇ ನರಿಬುದ್ದಿ ಹುಡುಕಿ ಗಿಮಿಕ್ಸ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಮೀಸಲಾತಿ ವಿಚಾರವಾಗಿ ಮೋಸ ಮಾಡುತ್ತಿದ್ದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಮೋಸಕ್ಕೆ ಬಲಿಯಾಗದೇ ಮೀಸಲಾತಿ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೇಸ್ ಪಕ್ಷದ ಸಚಿವರಿಗೆ ಸನ್ಮಾನ ಮಾಡಿದ್ದಾರೆ ಹೊರತು ನಮ್ಮ ಸಮಾಜದ ವತಿಯಿಂದ ಅಲ್ಲ, ಒಳ ಮೀಸಲಾತಿಯನ್ನು ಮುಖ್ಯಮಂತ್ರಿಗಳು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಸಮಾಜದ ಕಣ್ಣಿಗೆ ಬೂದಿ ಎರಚಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನೊಳಗೊಂಡು ನಮ್ಮ ಸಮಾಜದ ಗಣ್ಯರು ಮೀಸಲಾತಿಯನ್ನು ತಡೆಯಲು ಪ್ರಯತ್ನಿಸಿದ್ದರು. ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ ಎಸ್.ಎಂ. ಕೃಷ್ಣರವರು ಸಹ ಒಳಮೀಸಲಾತಿಯನ್ನು ಜಾರಿಗೆ ತರಲಾಗಲಿಲ್ಲ ಆದರೆ ಬಿಜೆಪಿಯ ಡಿ.ವಿ. ಸದಾನಂದಗೌಡರು ಮೀಸಲಾತಿಯನ್ನು ಜಾರಿಗೆ ತಂದರು. ಬಿಜೆಪಿ ಪಕ್ಷ ಮೋಸ ಮಾಡಿಲ್ಲ ಕಾಂಗ್ರೇಸ್ ಪಕ್ಷ ಮೋಸ ಮಾಡಿದೆ. ಸಂವಿಧಾನವನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ನರೇಂದ್ರ ಮೋದಿಯವರ ಹೇಳಿಕೆ ಸ್ವಾಗತಾರ್ಹ ಎಂದು ಭುಜಂಗನಗರದ ದಲಿತ ಮುಖಂಡ ತಾಯಪ್ಪ ತಿಳಿಸಿದರು.
ಅವರು ಪಟ್ಟಣದ ದೌಲತ್ ಪುರ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ಅವರು ಮುಂದುವರೆದು ಸುಪ್ರೀಂ ಕೋರ್ಟ ವರದಿ ಜಾರಿ ಮಾಡಲು ಅಸ್ತು ಎಂದು ಹೇಳಿದರೂ ಪ್ರಯೋಜನವಾಗಿಲ್ಲ ವರದಿಯನ್ನು ಮೂರು ತಿಂಗಳ ಒಳಗೆ ಜಾರಿಗೊಳಿಸುತ್ತೇವೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಅವರ ಗೌರವಕ್ಕೆ ಧಕ್ಕೆ ತರುವಂತಹದ್ದಾಗಿದೆ. ಜನಸಂಖ್ಯೆ ಹೆಚ್ಚಿದ್ದರೂ ಕೇವಲ 4 ಜನ ಮಾತ್ರ ಮಾದಿಗ ಸಮಾಜದಲ್ಲಿ ವಿಧಾನ ಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಸತೀಶ್ ಹೆಗಡೆ ಮಾತನಾಡಿ ನ್ಯಾಯಮೂರ್ತಿ ಸದಾಶಿವ ಅಯೋಗದ ವರದಿ ವಿಧಾನ ಸೌಧದಲ್ಲಿ ಚರ್ಚೆಯಾಗಿಲ್ಲ, ಸಂಡೂರು ಮಾದಿಗ ಸಮಾಜಕ್ಕೆ ಕಾಂಗ್ರೇಸ್ ಪಕ್ಷ ಮೋಸ ಮಾಡಿದೆ. ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ. ಒಳಮೀಸಲಾತಿ ವರ್ಗೀಕರಣ ಜಾರಿಮಾಡದಿದ್ದರೆ ಕಾಂಗ್ರೇಸ್ ಪಕ್ಷದ ವಿರುದ್ಧ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಸಿದ್ದರಾಮಯ್ಯನವರಿಗೆ ನಮ್ಮ ಸಮಾಜದ ಒಗ್ಗಟ್ಟು ಭಯ ಮತ್ತು ನಡುಕ ಹುಟ್ಟಿಸಿದೆ ಇದರ ಪರಿಣಾಮವಾಗಿ ಸುಳ್ಳೇ ಮಾಹಿತಿಯನ್ನು ಸಮಾಜಕ್ಕೆ ರವಾನಿಸಿದ್ದಾರೆ. ಉಪಚುನಾವಣೆ ಸಂತೋಷ್ ಲಾಡ್ ರವರಿಗೆ ಎದುರಾದ ಪ್ರಯುಕ್ತ ನಮ್ಮ ಸಮಾಜದವರ ಮೇಲೆ ಪ್ರೀತಿ ಹುಟ್ಟಿದೆ ಒಳಮೀಸಲಾತಿ ವಿಚಾರ ವಿಧಾನಸಭೆಯಲ್ಲಿ ಏಕೇ? ಪ್ರಸ್ತಾಪ ಮಾಡಿಲ್ಲ ಎಂದು ತಿಳಿಸಿದರು.
ರಾಜೇಶ್ ಹೆಗಡೆ ಮಾತನಾಡಿ ಬಳ್ಳಾರಿ ಲೋಕಸಭಾ ಸದಸ್ಯ ಈ.ತುಕರಾಂ ರವರು ನಮ್ಮ ಸಮಾಜವನ್ನು ಒತ್ತೆಯಿಡುವ ಕೆಲಸ ಮಾಡಿರುವುದು ಖಂಡನೀಯ ನಮ್ಮ ಸಮಾಜಕ್ಕೆ ಕಾಂಗ್ರೇಸ್ ಪಕ್ಷ ಮಣ್ಣೋರಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಸ್ವಾಮಿ ಮಾತನಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದರು ಕಾನೂನನ್ನು ವಿರೋಧಿಸುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿರುವುದು ಖಂಡನೀಯ ಎಂದು ತಿಳಿಸಿದರು. ದಲಿತಪರ ಎನ್ನುವ ಸಿದ್ದರಾಮಯ್ಯನವರೇ ದಲಿತ ಪರ ಕಾಳಜಿ ಇದ್ದರೆ ಸಮಾಜಕ್ಕೆ ಅನ್ಯಾಯ ಏಕೆ ಮಾಡುತ್ತಿರಿ ಅತಿ ಬೇಗನೆ ಒಳಮೀಸಲಾತಿಯನ್ನು ಜಾರಿಗೆ ತನ್ನಿ ಎಂದು ಒತ್ತಾಯಿಸಿದರು.