ಪಂಚಗ್ಯಾರಂಟಿಗಳು ಪಂಕ್ಚರ್ ಅಗಿವೆ, ಎಲೆಕ್ಷನ್ ಬಂದಾಗ ಮಾತ್ರ ಖಾತೆಗೆ 2000 ಹಣ ಬೀಳುತ್ತಿದೆ, ಹಾಗದರೇ ಉಳಿದ ಹಣ ಎಲ್ಲಿ, ಯುವನಿಧಿ ಇಲ್ಲವಾಗಿದೆ, ಮತ್ತೋಂದು ಕಡೆ ಜಮೀರ್ ಅವರು ಘಜನಿ ಮಹಮದ್ ದಂಡಯಾತ್ರೆಯ ಮೂಲಕ ರೈತರ ಜಮೀನುಗಳನ್ನು ವಕ್ಫ ಬೋರ್ಡದು, ಅದು ಅಲ್ಲಾನ ಆಸ್ತಿ ಎಂದು ಘೋಷಣೆ ಮಾಡುತ್ತಿದ್ದಾರೆ, ಇಸ್ಲಾಂಧರ್ಮವೇ ಇಲ್ಲದ ಕಾಲದಲ್ಲಿ ಅಂದರೆ 12ನೇ ಶತಮಾನದಲ್ಲಿಯ ಸಿಂದಿಗಿ ಮಠದ ಆಸ್ತಿಯನ್ನು ವಕ್ಫ ಆಸ್ತಿ ಎಂದು ಹೇಳುತ್ತಿದ್ದಾರೆ ಯೋಚಿಸಿ ಒಂದು ಕಡೆ ಸುಳ್ಳು ಮತ್ತೋಂದು ಕಡೆಯ ರೈತರ ಆಸ್ತಿ ವಶ ವ್ಯವಸ್ಥಿತವಾಗಿ ಪಡೆಯುತ್ತಿರುವ ಕಾಂಗ್ರೇಸ್ ಸರ್ಕಾರ ಭ್ರಷ್ಟ ಸರ್ಕಾರವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅರೋಪಿಸಿದರು.
ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಸರ್ಕಾರದ ಖಜಾನೆ ಹಣದಿಂದ ಹಣ ಲೂಟಿಮಾಡಿ ಚುನಾವಣೆಯನ್ನು ಗೆದ್ದ ಕಾಂಗ್ರೇಸ್ ಸರ್ಕಾರ ಸಂಡೂರಿನ ಜನತೆಗೆ ಮತ್ತೊಂದು ಸುಳ್ಳನ್ನು ಹೇಳುವ ಮೂಲಕ ಚುನಾವಣೆಗೆ ಬಂದಿದ್ದಾರೆ ಅದಕ್ಕೆ ಇಡೀ ಮಂತ್ರಿಮಂಡಲವೇ ಪ್ರಚಾರಕ್ಕೆ ಇಳಿದಿದ್ದಾರೆ, ಸ್ವತ: ಮುಖ್ಯಮಂತ್ರಿಗಳೇ ನೀವು ಇಷ್ಟು ಮತಗಳನ್ನು ಹಾಕಿಸಲೇಬೇಕು ಎಂದು ಹಣ ತೆಗೆದುಕೊಂಡು ಬರುತ್ತಿದ್ದಾರೆ, ಆಸ್ತಿಕಳೆದುಕೊಂಡ ರೈತರಿಗೆ ದಶಕಗಳೇ ಕಳೆದರು ಪರಿಹಾರ ಭೂಮಿ ಕೊಡದ ಕ್ಲೀನ್ ಸಿದ್ದರಾಮಯ್ಯನವರು ಹೆಂಡತಿಗೆ ಪರಿಹಾರವಾಗಿ 14 ಸೈಟ್ ನೀಡಿದ್ದಾರೆ, ಇನ್ನೂ ಬಡ ಮುಸ್ಲಿಂಮರ ಆಸ್ತಿಯನ್ನು ವಕ್ಫ ಆಸ್ತಿಎಂದು ಅರ್ಜಿನೀಡಿದ್ದಾರೆ, ಕೋರ್ಟಗೆ ಅಲೆಸುತ್ತಿದ್ದಾರೆ, ಅದರೆ ಶ್ರೀಮಂತರ ಕಬಳಿಸಿದ ವಕ್ಫ ಆಸ್ತಿಯಬಗ್ಗೆ, ಮಲ್ಲಿಕಾರ್ಜುನ ಖರ್ಗೆ,ಖಮುರುಲ್ಲಾ ಆಸ್ತಿಯ ಬಗ್ಗೆ ಮಾತ್ರ ಚಕಾರವೆತ್ತುತ್ತಿಲ್ಲ ಕಾರಣ ಅದು ಅವರಿಗೆ ಅಸಾಧ್ಯ, ವಾಲ್ಮೀಕಿ, ಬೋವಿ, ವೀರಶೈವಲಿಂಗಾಯತ ಮಂಡಳಿಯ ಹಣವನ್ನೂ ಸಹ ಲೂಟಿಮಾಡಿದ್ದಾರೆ, ಹಣಬಲ, ಅಧಿಕಾರಬಲ ಗೆಲ್ಲಲು ಸಾಧ್ಯವಿಲ್ಲ, ಜನಬಲದ ಮುಂದೆ, ಅದ್ದರಿಂದ ಸಂಡೂರಿನಲ್ಲಿ ಜನಬಲದ ಮೂಲಕ ಬಿಜೆಪಿ ಪಕ್ಷದ ಅಭ್ಯರ್ಥಿ ಬಂಗಾರು ಹನುಂತು ಅವರನ್ನು ಗೆಲ್ಲಿಸಬೇಕು, ತಪ್ಪು ಮಾಡಿದವರಿಗೆ ಪ್ರಜಾಪ್ರಭುತ್ವದಲ್ಲಿ ಸೋಲಿಸುವ ಮೂಲಕ ಶಿಕ್ಷೆ ಕೊಡಬೇಕು, ಕಾಂಗ್ರೇಸ್ ನವರು ತಪ್ಪುಮಾಡಿದ್ದಾರೆ ಶಿಕ್ಷೆ ಕೊಡಿ, ಇನ್ನು ಬಡ ರೈತರು ಸತ್ತರೂ ಸಹ ಡೆತ್ ಸರ್ಟಿಫಿಕೇಟ್ ಬೆಲೆ 50 ರೂ., ಬಾಂಡ್ ಪೇಪರ್ 20 ರೂ. ರಿಂದ 200 ರೂ., ಹಾಲಿನ ಬೆಲೆ, ಹೀಗೆ ಎಲ್ಲಾ ಬೆಲೆ ಏರಿಸಿದ್ದಾರೆ ಈಬಾರಿ ಜನಮತದ ಮೂಲಕ ಸಂಡೂರಿನ ಜನತೆ ಶಿಕ್ಷೆ ನೀಡಬೇಕು ಎಂದರೆ ಕಾಂಗ್ರೇಸ್ ಪಕ್ಷ ಸೋಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಂ.ಎಲ್.ಸಿ. ಸತೀಶ್ ಅವರು ಮಾತನಾಡಿ ಬಳ್ಳಾರಿ ಗ್ರಾಮಾಂತರದ ಬೊಮ್ಮನಹಳ್ಳಿಯಲ್ಲಿ 50 ಎಕರೆ ರೈತರ ಜಮೀನು ವಕ್ಫ ಹೆಸರಿಗೆ ಪಹಣ ಬಂದಿದೆ, ಸಂಡೂರಿನಲ್ಲಿಯೂ ಸಹ 500ಕ್ಕೂ ಹೆಚ್ಚು ರೈತರ ಭೂಮಿಯನ್ನು ಸರ್ವೇ ಸೆಟಲ್ ಮೆಂಟ್ ಹೆಸರಿನಲ್ಲಿ ಕರಾಬು, ಎ., ಮತ್ತು ಬಿ. ಎಂದು ನಮೂದಿಸಿ ವಂಶಪಾರಂಪರ್ಯವಾಗಿ ಬಂದ ಆಸ್ತಿ ಕಬಳಿಕೆಯಾಗುತ್ತಿದೆ ಎಂದು ಅರೋಪಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಬಳ್ಳಾರಿ ಜಿಲ್ಲಾಧ್ಯಕ್ಷ ಅನಿಲ್‍ಕುಮಾರ್ ಮೋಕಾ, ಬೊಪ್ಪಕಾನ್ ಕುಮಾರಸ್ವಾಮಿ, ಕರಡಿಯರ್ರಿಸ್ವಾಮಿ, ತಾಲೂಕು ಅಧ್ಯಕ್ಷ ನಾನಾ ನಿಕ್ಕಂ, ಕುಮಾರನಾಯ್ಕ, ಯಾದಗಿರಿ ಜಿಲ್ಲಾಧ್ಯಕ್ಷ ಗುರುಕಾಂ, ನವೀನ್, ಶಂಕ್ರಪ್ಪ , ರಘು, ದರೋಜಿ ರಮೇಶ್ ಇತರರು ಉಪಸ್ಥಿತರಿದ್ದರು.