ಸಂಡೂರು ತಾಲೂಕು ಅಕ್ಷರ ದಾಸೋಹ ಬಿಸಿ ಊಟ ತಯಾರಿಕೆಯನ್ನು ಇಸ್ಕಾನ್ ಖಾಸಗಿ ಧಾರ್ಮಿಕ ಸಂಸ್ಥೆಯ ಅಕ್ಷಯ ಪಾತ್ರೆ ಫೌಂಡೇಷನ್‌ಗೆ ನೀಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ, ಬಿಸಿಯೂಟ ನೌಕರರ ಸಂಘ ಪ್ರತಿಭಟನೆಯನ್ನು ನಡೆಸಿ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಮನವಿಪತ್ರವನ್ನು ಸಲ್ಲಿಸಿದರು
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದಲ್ಲಿ ಘೋಷಿಸಲ್ಪಟ್ಟಿರುವಂತೆ ಪ್ರತಿಯೊಬ್ಬ ಹಸಿದ ಮಗುವಿಗೂ ಅಹಾರವನ್ನು ಒದಗಿಸಬೇಕಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯು ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು. ಮಕ್ಕಳು ಆರೋಗ್ಯಪೂರ್ಣವಾಗಿ ಶಕ್ತಿವಂತರು ಹಾಗೂ ದೃಢಕಾಯರಾಗಿ ಬೆಳೆಯಲು ಒಂದು ಸದವಕಾಶ ಕಲ್ಪಿಸುವ ಬದ್ಧತೆಯಿಂದ ಕೂಡಿದ್ದು. ಸಹಕಾರಿಯಾಗಿದೆ ಸದರಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ ತನ್ಮೂಲಕ ಅವರ ಕಲಿಕಾ ಸಾಮರ್ಥ್ಯಗಳನ್ನೂ ಮತ್ತು ಸಾಧನೆಗಳನ್ನು ಹೆಚ್ಚಿಸುವುದಾಗಿದೆ.ದೂರ ದೃಷ್ಟಿಯನ್ನು ಹೊಂದಿರುವ ಈ ಯೋಜನೆಯು ಪೌಷ್ಠಿಕಾಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯವನ್ನು ಅಭಿವೃದ್ಧಿಗೊಳಿಸುವುದು ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿ ಪಡಿಸಿ ತನ್ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳಲ್ಲಿ ಮೂಡಿಸುವದಾಗಿದೆ.ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು ಶೈಕ್ಷಣಿಕ ವರ್ಷದಲ್ಲಿ ಮಧ್ಯೆ ಮಧ್ಯೆ ಶಾಲೆಯನ್ನು ತೊರೆಯದಂತೆ ತಡೆಯುವುದು ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮಧ್ಯಾಹ್ನ ಉಪಹಾರ ಯೋಜನೆಯ ಹೊಣೆಗಾರಿಕೆಗಳು ಹಾಗೂ ಜವಾಬ್ದಾರಿಗಳ ಗುರಿಯನ್ನು ಸಾಧಿಸುತ್ತಿದೆ ಈ ಯೋಜನೆ ಜಾರಿಯಾದ ನಂತರ ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಕ್ರಿಯಾಶೀಲವಾಗಿ ಭಾಗವಹಿಸುವಿಕೆ ಹೆಚ್ಚಾಗಿದೆ ಇಂತಹ ಫಲಿತಾಂಶಕ್ಕೆ ಕಾರಣ ಬಿಸಿಯೂಟ ನೌಕರರು. ಆದರೆ, ಇಂದು ಸಮಾನ ಶಿಕ್ಷಣದ ಅಡಿಪಾಯಕ್ಕೆ ವಿರೋಧವಾಗಿ ಧರ್ಮಾಧಾರಿತವಾದ ಸಂಸ್ಥೆಗಳಿಗೆ ಬಿಸಿಯೂಟ ಪೂರೈಕೆ ವಹಿಸಿರುವುದು ವಿಷಾದನೀಯ ಇಸ್ಕಾನ್ ಸರಬರಾಜು ಮಾಡುವ ಊಟದಲ್ಲಿ ಈರುಳ್ಳಿ ಬೆಳ್ಳುಳ್ಳಿ ಇರುವುದಿಲ್ಲ. ಊಟವನ್ನು ವಾಹನಗಳಲ್ಲಿ ದೂರದ ಸ್ಥಳದಿಂದ ಸರಬರಾಜು ಮಾಡುವುದರಿಂದ ಮಧ್ಯಾಹ್ನದ ವೇಳೆಗೆ ಅಂದರೆ ಮಕ್ಕಳು ಊಟ ಮಾಡುವ ಸಮಯಕ್ಕೆ ತಣ್ಣಗಾಗುತ್ತದೆ. ಇದು ಬಿಸಿಯೂಟ ಯೋಜನೆ ಉದ್ದೇಶವನ್ನೇ ನಾಶ ಮಾಡುತ್ತದೆ ಕಂಪ್ಲಿ ಮತ್ತು ಕುರುಗೋಡು ತಾಲೂಕಗಳಲ್ಲಿ ಇಸ್ಮಾನ್ ಸಂಸ್ಥೆಯ ಅಕ್ಷಯ ಪಾತ್ರ ಫೌಂಡೇಷನ್‌ಗೆ ಅಕ್ಷರ ದಾಸೋಹ ಯೋಜನೆ ನೀಡುವ ಪ್ರಸ್ತಾವವನ್ನು ಕೈಬಿಡಲು ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನವಂಬರ 25, 2024 ರಿಂದ ಜಿಲ್ಲಾ ಪಂಚಾಯಿತಿ, ಬಳ್ಳಾರಿ ಮುಂದೆ ಅನಿರ್ದಿಷ್ಟ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಿದಾಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು,
ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಂಘಟನೆಯ ಮುಖಂಡರ ಸಭೆಯಲ್ಲಿ ಅಕ್ಷರ ದಾಸೋಹ ಯೋಜನೆಯನ್ನು
ಖಾಸಗಿಕರಣ ಮಾಡುವ ಪ್ರಸ್ತಾವ ಸರ್ಕಾರ ಮಾಡುವುದಿಲ್ಲ ಎಂದು ಸಭೆಯ ನಡವಳಿಕೆಯನ್ನು ಲಿಖಿತ ರೂಪದಲ್ಲಿ ಸಂಘಕ್ಕೆ ನೀಡಲಾಗಿದೆ. ಆದರೆ ಸಂಡೂರು ತಾಲ್ಲೂಕಿನಲ್ಲಿ ಎಸ್.ಡಿ.ಎಂ.ಸಿ. ಹಾಗೂ ಇಲಾಖೆ ಅಧಿಕಾರಿಗಳು ಖಾನಗೀಕರಣ ಪ್ರಸ್ತಾವ ಚಟುವಟಿಕೆ ನಡೆಸುತ್ತಿರುವದು ಖಂಡನೀಯ, ಇಸ್ಕಾನ್ ಖಾಸಗಿಕರಣ ಮಾಡುವ ಪ್ರಸ್ತಾವ ಕೂಡಲೇ ನಿಲ್ಲಿಸಬೇಕು
ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿ ಪಡಿಸಿ ತನ್ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳಲ್ಲಿ ಮಂಡಿಸುವ ಸದುದ್ದೇಶ. ಹೊಂದಿರುವ ಯೋಜನೆಯನ್ನು ದಾರ್ಮಿಕ ಸಂಸ್ಥೆಗಳಿಗೆ ನೀಡುವದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಮೂಲ ಉದ್ದೇಶ. ಗುರಿಗೆ ವಿರುದ್ಧವಾದ ನೀತಿಯಾಗಿದೆ ಆದ್ದರಿಂದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿ ಊಟ ನೌಕರರ ಸಂಘ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಪ್ರಾರಂಭವಾಗಿ 20 ವರ್ಷಗಳು ಕಳೆದಿದೆ ಈ ಯೋಜನೆಯ ಪ್ರಾರಂಭದಿಂದಲೂ ಗ್ರಾಮೀಣ ಪ್ರದೇಶದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ದುರ್ಭಲ ವರ್ಗದ ಬಡ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ ಯಾವುದೇ ಮೂಲಭೂತವಾದ ಸೌಕರ್ಯಗಳಿಲ್ಲದೇ ಇದೇ ಕೆಲಸವನ್ನು ನಂಬಿ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಪಟ್ಟ ಭದ್ರ ಹಿತಾಸಕ್ತಿಗಳು ನಾಮಾಜಿಕ ನ್ಯಾಯದ ಈ ಯೋಜನೆಯ ಪ್ರಮುಖ ಉದ್ದೇಶವನ್ನು ಮರೆತು ಬಿಸಿಯೂಟವನ್ನು ಖಾಸಗೀಕರಣ ಮಾಡಲು ಮುತುವರ್ಜಿವಹಿಸುತ್ತಿದ್ದಾರೆ. ಯೋಜನೆಯನ್ನು ನಂಬಿ ಬದುಕುತ್ತಿರುವ ಬಡಮಹಿಳೆಯರ ಕೆಲಸಕ್ಕೆ ಕುತ್ತು ತರಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಬಿಸಿಯೂಟ ಯೋಜನೆಯನ್ನು ಇಸ್ಕಾನ್ ಅಥವಾ ಇತರೆ ಯಾವುದೇ ಖಾಸಗೀ ಸಂಘ ಸಂಸ್ಥೆಗಳಿಗೆ ನೀಡಬಾರದೆನ್ನುವ ಸರ್ಕಾರದ ಆದೇಶ ಇರುವುದನ್ನು ಪರಿಶೀಲಿಸಿ ಯಾವುದೇ ರೀತಿಯ ಖಾಸಗೀಕರಣಕ್ಕೆ ವಹಿಸಲು ಮುಂದಾಗಬಾರದೆಂದು ಮನವಿಯನ್ನು ಸಲ್ಲಿಸಿದ್ದಾರೆ
ಈ ಸಂಧರ್ಭದಲ್ಲಿ ದ್ರಾಕ್ಷಾಯಿಣಿ,ಜೆ ಎಂ. ಚನ್ನಬಸವಯ್ಯ, ಎ. ಸ್ವಾಮಿ, ಖಾದರ್ ಬಾಷ,ಕಾಲೂಬಾ, ಹೆಚ್. ದುರುಗಮ್ಮ, ಟಿ. ಹನುಮಕ್ಕ, ಗಿರಿಜಮ್ಮ, ಶಾರದಮ್ಮ, ಉಮಾದೇವಿ, ವರ್ಷಾ ವಿ,ರಾಮಕ್ಕ, ಬಾಗ್ಯಮ್ಮ, ನಾಗಮ್ಮ, ರತ್ನಮ್ಮ, ಗಾಳೆಮ್ಮ ಇನ್ನಿತರರು ಉಪಸ್ಥಿತರಿದ್ದರು