ವರದಿ : ಭೀಮಶಂಕರ್
ಕಲಬುರಗಿ ತಾಲೂಕಿನ ನಂದೂರ (ಬಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಡಿಸಿಸಿ ಆ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ಅವರ ಪಕ್ಷ ವಿರೋಧಿ ನಡೆಯಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಅಧಿಕಾರದಿಂದ ದೂರ ಉಳಿಯುವಂತಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಯ್ಯದ್ ಅಕ್ಟರ್ ಹುಸೇನಿ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದ 11 ಸ್ಥಾನಗಳಲ್ಲಿ ಕಾಂಗ್ರೆಸ್‌ನ 6 ಜನ ಮತ್ತು ಬಿಜೆಪಿಯ 5 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದೇವೆ. ಬ್ಯಾಂಕಿನಿಂದ ಬಂದ ಪ್ರತಿನಿಧಿಯೂ ಕೂಡ ನಮ್ಮ ಪರ ಮತ ಚಲಾಯಿಸುತ್ತಾರೆ ಎಂದು ಗೋನಾಯಕ ಹೇಳಿದ್ದರು. ಆದರೆ, ಅವರು ನಮ್ಮ ವಿರುದ್ಧ ಮತ ಚಲಾಯಿಸಿದ ಕಾರಣ ಸಮಬಲವಾಯ್ತು. ಚೀಟಿ ಎತ್ತಿದಾಗ ಬಿಜೆಪಿಯವರಿಗೆ ಅಧಿಕಾರ ಲಭಿಸಿದೆ’ ಎಂದು ತಿಳಿಸಿದರು
ನಮ್ಮ ವಿರುದ್ಧ ಪಕ್ಷದ ಮತ ಚಲಾಯಿ ಸಲು ಹೇಳಿದ ಬ್ಯಾಂಕ್ ಅಧ್ಯಕ್ಷರ ಹುಸೇನಿ ನಡೆಯಿಂದ ನಿಷ್ಠಾವಂತ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಹಾಗಾಗಿ, ಸಂಘದ ನಿರ್ದೇಶಕರ ಸ್ಥಾನಕ್ಕೆ ನಾನು (ಸಯ್ಯದ್ ಅಕ್ಟರ್ ಹುಸೇನಿ), ಉಮಾಪತಿ ಪಾಟೀಲ, ಬಸವರಾಜ ಪಾಟೀಲ, ಶಿವಾನಂದ ಪಾಳಾ, ಪಾಂಡು ಆಡೆ, ಸತ್ಯಮ್ಮ ಪಾಟೀಲ ಸೇರಿ 6 ಜನ ರಾಜೀನಾಮೆ ಕೊಡಲು ಸಿದ್ಧರಾಗಿದ್ದೇವೆ’ ಎಂದರು.
‘ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪಕ್ಷದ ಜಿಲ್ಲಾಧ್ಯಕ್ಷರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕರು ಹಾಜರಿದ್ದರು.