ಸಂಡೂರು ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ವೃತ್ತ ಹಾಗೂ ಪುತ್ಥಳಿಯನ್ನು ನಿರ್ಮಿಸಲು ತಕ್ಷಣ ಸಭೆ ಕರೆದು ಅನುಮತಿ ನೀಡುವಂತೆ ದಲಿತಪರ, ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಗಳಾದ ವತಿಯಿಂದ ತಹಶೀಲ್ದಾರ್‌ಗೆ ಮನವಿಪತ್ರ ಸಲ್ಲಿಸಲಾಗಿದೆ.
ಮಾನ್ಯ ಸಹಾಯಕ ಆಯುಕ್ತರಿಗೆ ದಿನಾಂಕ 09-03-2023 ರಂದು ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಸಂಸದ ತುಕಾರಾಂ ಅವರು 2023 ರಲ್ಲಿಯೇ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ 2 ವರ್ಷ 6 ತಿಂಗಳು ಕಳೆದರೂ ಯಾವುದೇ ಪ್ರಗತಿ ಇಲ್ಲದ ಕಾರಣ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಿರ್ಧಾರ ತೆಗೆದು, ಪುರಸಭೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸ್ಥಳವನ್ನು ಅಳತೆ ಮಾಡಿ ತಕ್ಷಣ ವೃತ್ತ ಮತ್ತು ಪುತ್ಥಳಿ ನಿರ್ಮಾಣ ಪ್ರಾರಂಭಿಸಲು ಮನವಿ ಮಾಡಲಾಗಿದೆ.
ದಿನಾಂಕ 10-04-2025 ರೊಳಗಾಗಿ ಕಾರ್ಯಾರಂಭವಾಗದಿದ್ದರೆ, 11-04-2025 ರಂದು ಮಾದಿಗ ಸಮುದಾಯದ ವತಿಯಿಂದ ಸ್ವಾಭಿಮಾನದಿಂದ ವೃತ್ತ ಹಾಗೂ ಪುತ್ಥಳಿಯನ್ನು ನಿರ್ಮಿಸಲಾಗುವುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಧರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ರಾಮಕೃಷ್ಣ ಹೆಗಡೆ, ನಿಂಗಪ್ಪ ಐಹೊಳೆ, ಎಲ್ ಹೆಚ್ ಶಿವಕುಮಾರ್, ಮಲ್ಲೇಶ್ ಕಮತೂರು, ಹೆಚ್ ಕುಮಾರಸ್ವಾಮಿ, ಗಂಗಪ್ಪ, ಅಣ್ಣಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು