ಹೊಸಪೇಟೆ, ವಿಜಯನಗರ:
ವಿಜಯನಗರ ಜಿಲ್ಲೆ ಮಾದಿಗ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಗರದ ಎಸಿ ಬುದ್ಧ ಫಂಕ್ಷನ್ ಹಾಲ್‌ನಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎನ್.ಎಫ್. ಇಮಾಮ್ ನಿಯಾಜಿ ನೆರವೇರಿಸಿದರು. ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಗಣ್ಯರು ದೀಪ ಬೆಳಗಿಸುವ ಮೂಲಕ ಹಾಗೂ ನೂತನ ಪದಾಧಿಕಾರಿಗಳ ಪ್ರಮಾಣ ವಚನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾಜದ ಪ್ರಗತಿಗೆ ಶಿಕ್ಷಣ ಅನಿವಾರ್ಯ
ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ್ ಅವರು ವಿದ್ಯಾರ್ಥಿಗಳಿಗೆ ಉತ್ಸಾಹದ ಮಾತುಗಳನ್ನೂ, ಪ್ರೇರಣಾದಾಯಕ ಸಂದೇಶವನ್ನೂ ನೀಡಿದರು. “ಶಿಕ್ಷಣವೇ ಸಮಾಜದ ಬೆಳವಣಿಗೆಗೆ ಮೂಲ ಅಸ್ತ್ರವಾಗಿದೆ. ನಾನು ನನ್ನ ವಿದ್ಯಾರ್ಥಿ ಜೀವನದಲ್ಲಿ ಸನ್ಮಾನ ಪಡೆಯದಿದ್ದರೂ, ಇಂದು ನೀವು 10ನೇ ತರಗತಿಯಲ್ಲಿಯೇ ಈ ಗೌರವ ಪಡೆಯುತ್ತಿದ್ದೀರಿ ಎಂಬುದು ನಿಮಗೆಲ್ಲಾ ಅದೃಷ್ಟ” ಎಂದರು.
ಸಂಘದ ಶ್ರಮದ ಫಲ
ಪ್ರಸ್ತಾವಿಕ ಭಾಷಣ ಮಾಡುತ್ತಿದ್ದ ಎ. ಬಸವರಾಜ್ ಅವರು “ಇದು ಎರಡನೇ ವರ್ಷದ ಕಾರ್ಯಕ್ರಮವಾಗಿದ್ದು, ಸಂಘವು ಸಮಾಜದ ಮತ್ತು ವಿದ್ಯಾರ್ಥಿಗಳ ಉನ್ನತಿಯ ಕಡೆ ಶ್ರಮಿಸುತ್ತಿದೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಯಿತು” ಎಂದು ಧನ್ಯವಾದಗಳನ್ನು ಸಲ್ಲಿಸಿದರು.
ಅಧ್ಯಕ್ಷರಿಂದ ಸ್ಪಷ್ಟ ಸಂದೇಶ
ಕಾರ್ಯಕ್ರಮದ ಅಧ್ಯಕ್ಷರಾದ ಹೆಚ್. ಶೇಷ ಅವರು “ಶಿಕ್ಷಣದಿಂದಲೇ ಸಾಧನೆ ಸಾಧ್ಯ. ಸಮಾಜದ ನಿರಂತರ ಬೆಳವಣಿಗೆಯು ಜಾಗೃತಿಯಿಂದಲೂ ನಡೆಯುತ್ತದೆ. ಅನ್ಯಾಯ ಎದುರಾದಾಗ ಸಂಘವು ನಿಖರವಾಗಿ ಪ್ರತಿಕ್ರಿಯಿಸಬೇಕು” ಎಂಬ ಸಂದೇಶ ನೀಡಿದರು.
ಸ್ವಾಮೀಜಿಗಳ ಆಶೀರ್ವಚನ
ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೂರ್ಣಾಂದ ಭಾರತಿ ಸ್ವಾಮೀಜಿಗಳು (ಮಾತಂಗ ಪರ್ವತ, ಹಂಪಿ) ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ ವಿದ್ಯಾರ್ಥಿಗಳಿಗೆ ಹಾರೈಕೆ ಸಲ್ಲಿಸಿದರು.
ಗಣ್ಯರ ಹಾಜರಾತಿ
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಕುಮಾರ್, ಎಂ.ಸಿ. ವೀರಸ್ವಾಮಿ, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ. ಉಮಾಪತಿ, ಬಲ್ಲಹುಣಸಿ ರಾಮಣ್ಣ, ಸೋಮಶೇಖರ್ (ಕಮಲಾಪುರ), ಪೂಜಾಪ್ಪ, ಕೆ. ಉಚ್ಚಂಗಪ್ಪ (ಹಡಗಲಿ), ನಿಂಗಪ್ಪ, ಪಿ. ಸಂತೋಷ್ ಕುಮಾರ್, ಕೊಟ್ರೇಶ್, ನಾಗಪ್ಪ, ಲಕ್ಷ್ಮಣ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಮಾದಿಗ ಮಹಾಸಭಾ ಕಾರ್ಯಧ್ಯಕ್ಷ ಶ್ರೀನಿವಾಸ್ ಎಚ್, ಉಪಾಧ್ಯಕ್ಷ ಕರಿಯಪ್ಪ, ಬಿ. ಹನುಮಂತಪ್ಪ, ಜಿ. ಪಂಪಾಪತಿ, ವಿಜಯ್ ಕುಮಾರ್, ರವಿ, ನಿಂಗಪ್ಪ ಆಗೋಲಿ, ಸುಹೇಲ್, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಮಾನತೆಯ ಆಶಯದತ್ತ ಮುಂದುವರಿದ ಮಹಾಸಭೆ
ಸಮಾಜದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಉನ್ನತಿಗಾಗಿ ಬದ್ಧತೆ ಹೊಂದಿರುವ ಮಾದಿಗ ಮಹಾಸಭಾ, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಭಾವಿ ಕಾರ್ಯಕ್ರಮಗಳೊಂದಿಗೆ ಸಮಾಜ ಸೇವೆಯಲ್ಲಿ ನಿರಂತರ ತೊಡಗಿರುವುದಾಗಿ ತಿಳಿಸಿದರು.