ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರಿನಲ್ಲಿ ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿಯವರ 75ನೇ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದ ರೂಪದಲ್ಲಿ ಆಚರಿಸಲಾಯಿತು. ಪಟ್ಟಣದ ರುದ್ರಮ್ಮ ಅನಾಥಾಶ್ರಮದಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಿಜೆಪಿ ನಗರ ಘಟಕ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ನಗರ ಘಟಕ ಅಧ್ಯಕ್ಷ ಪಂಪಾಪತಿ ಅಂಗಡಿ, “ಧರ್ಮಕ್ಕೆ ಆಪತ್ತು ಬಂದಾಗ ನಾನು ಹುಟ್ಟಿಬರುತ್ತೇನೆ ಎಂದು ಭಗವಂತ ಹೇಳಿರುವಂತೆ, ಇಂದು ನರೇಂದ್ರ ಮೋದಿ ಅವರೇ ಭಗವಂತನ ರೂಪದಲ್ಲಿ ದೇಶ ಮತ್ತು ಧರ್ಮ ರಕ್ಷಣೆಗೆ ನಿಂತಿದ್ದಾರೆ” ಎಂದು ಹೇಳಿದರು.
ಪಟ್ಟಣ ಪಂಚಾಯತ್ ಸದಸ್ಯ ಬೋರ್‌ವೆಲ್ ತಿಪ್ಪೇಸ್ವಾಮಿ ಅವರು, “ನರೇಂದ್ರ ಮೋದಿ ಅವರ ನಾಯಕತ್ವದಿಂದ ದೇಶವು ಇಂದು ಶಕ್ತಿಶಾಲಿ ರಾಷ್ಟ್ರವಾಗಿದೆ” ಎಂದು ಅಭಿಪ್ರಾಯಪಟ್ಟರು. ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಿ. ಸಿದ್ದಯ್ಯ, ಮಹಿಳಾ ಘಟಕ ಅಧ್ಯಕ್ಷೆ ಉಮಾ ದೇವರಮನಿ, ವಿಷ್ಣು ಮಣಿಕಂಠ ಸಹ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್, ನಗರ ಘಟಕ ಉಪಾಧ್ಯಕ್ಷ ಬಿ.ಆರ್. ಕುಮಾರ್, ಪ್ರಸನ್ನ ಮೂಲಿಮನಿ, ರೈತ ಮೋರ್ಚಾ ಅಧ್ಯಕ್ಷ ಕೆ.ಎಸ್. ರುದ್ರೇಶ್, ಕಾರ್ಯದರ್ಶಿಗಳು ಚಂದ್ರು, ವಿನಾಯಕ, ಬಸವರಾಜ್ ಸಿ., ವಿಶ್ವನಾಥ್ ಬಿ.ಎಸ್., ಬಸವರಾಜ್ ಕೋನಪುರ್, ಕಲ್ಲೇಶ್, ಅರವಿಂದ್, ಸೂರಜ್ ನೆಲಕುದ್ರೆ, ಜಗದೀಶ್, ರಾಣಾಮಲ್ ಜೈನ್, ಮಹಿಳಾ ಘಟಕದ ಶ್ರೀಮತಿ ಪ್ರೇಮಕ್ಕ ಹಾಗೂ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಮಲ್ಲಿಕಾರ್ಜುನ್ ಮಠದ್ ನಿರ್ವಹಿಸಿದರು.
