Monday, October 27, 2025
HomeDistrictsBallariಬಳ್ಳಾರಿ ಎಂ.ಜಿ.ಕನಕ ನಿಗೆ ರಾಷ್ಟ್ರಮಟ್ಟದ ಕಾಯಕ ಕಣ್ಮಣಿ' ಪ್ರಶಸ್ತಿ ಪ್ರಧಾನ"

ಬಳ್ಳಾರಿ ಎಂ.ಜಿ.ಕನಕ ನಿಗೆ ರಾಷ್ಟ್ರಮಟ್ಟದ ಕಾಯಕ ಕಣ್ಮಣಿ’ ಪ್ರಶಸ್ತಿ ಪ್ರಧಾನ”

ಬಳ್ಳಾರಿ: ಸೆಪ್ಟಂಬರ್.21ರಂದು; ಧ್ರುವ ಅಸರೆ ಫೌಂಡೇಶನ್ ನಿಂದ ನೊಂದವರ ಧ್ವನಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾ ರಾಜ್ಯದ್ಯಾಂತ ಪ್ರಸಿದ್ದಿ ಪಡೆದ ಎಂ.ಜಿ ಕನಕ ಅವರಿಗೆ ಭಾನುವಾರ ರಾಷ್ಟ್ರಮಟ್ಟದ ‘ಕಾಯಕ ಕಣ್ಮಣಿ’ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕೆಲ ವರ್ಷಗಳಿಂದ ಸಾಧಕರನ್ನ ಗುರುತಿಸಿ ಗೌರವಿಸುವ ಕಾರ್ಯಕ್ಕೆ ಮುಂದಾಗಿದ್ದು. 120ನೇ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ಪ್ರತಿವರ್ಷ ಕೊಡಮಾಡುವ “ಕಾಯಕ ಕಣ್ಮಣಿ” ಪ್ರಶಸ್ತಿಗೆ ಎಂ.ಜಿ ಕನಕ ಆಯ್ಕೆಯಾಗಿದ್ದರು.

ಈ ಹಿಂದೆ ಕೊರೋನಾ ಸಮಯದಲ್ಲಿ ಇವರು ಸೇವೆ ಪತರಿಗಣಿಸಿ ಕೊರೋನಾ ಶ್ರಮಿಕ ರತ್ನ ಪ್ರಶಸ್ತಿ ಹಾಗೂ ಕೊರೋನಾ ವಾರಿಯರ್ಸ್ ಪ್ರಶಸ್ತಿ ಪಡೆದಿದ್ದರು ನಂತರ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಧ್ವನಿ ಸಂಘಟನೆಯಿಂದ ಎರಡು ಬಾರಿ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಅಯ್ಕೆಯಾಗಿ ಪ್ರಶಸ್ತಿ ಪಡೆದಿದ್ದರು.

ತಮ್ಮನ್ನು ತಾವೇ 14 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾಗುತ್ತಿದ್ದ ಇವರನ್ನು ಗಮನಿಸಿದ ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಅಣ್ಣಪ್ಪ ಮೇಟಿಗೌಡ ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ “ಕಾಯಕ ಕಣ್ಮಣಿ” ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿ ಎಂ.ಜಿ ಕನಕ ಅವರು ಮಾತನಾಡುತ್ತಾ ನನ್ನ ಅಳಿಸೇವೆಯನ್ನು ಗುರುತಿಸಿ ಎಲ್ಲೊ ಇದ್ದ ನನ್ನನ್ನು ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಣ್ಣಪ್ಪ ‌ಮೇಟಿಗೌಡ ಅವರು
ರಾಯಚೂರು ನಗರದಲ್ಲಿ ಜರುಗಿದ 120ನೇ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ, ನನಗೆ ಗೌರವಿಸಿದ್ದು ತುಂಬಾ ಸಂತೋಷವಾಗಿದೆ. ಸಮಾಜದ ಮೇಲೆ ಇರುವ ಅಣ್ಣಪ್ಪ ಮೇಟಿಗೌಡ ಅವರ ಕಾಳಜಿಗೆ ನಾನು ಸದಾ ಚಿರಾಋಋಣಿ. ಅವರ ಹಾರೈಕೆಯು ಜನಸೇವೆ ಮಾಡುವ ನನ್ನ ಮನೋಬಲವನ್ನು ಹೆಚ್ಚಿಸಿದ್ದು, ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುತ್ತೇನೆ.

ನನಗೆ ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಕರೆ ಮೂಲಕ ಶುಭ ಕೋರಿದ ಬೆಂಬಲ ಅಭಿಮಾನವೇ ನನಗೆ ಶ್ರೀರಕ್ಷೆಯಾಗಿದ್ದು, ನೀವುಗಳು ತೋರಿರುವ ಪ್ರೀತಿ, ಅಭಿಮಾನಕ್ಕೆ ನಾನು ಚಿರಋಣಿ ಆಗಿದ್ದೇನೆ.
ನಿಮ್ಮ ಈ ಅಭಿಮಾನ, ಮಮತೆ, ಪ್ರೀತಿ ಸದಾ ನನ್ನ ಮೇಲಿರಲಿ ಎಂದು ಬಳ್ಳಾರಿ ನಗರದ ಆದಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಂ.ಜಿ ಕನಕ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments