ಸಂಡೂರು ತಾಲೂಕಿನ ತೋರಣಗಲ್ಲು ಓ ಪಿ ಜೆ ಕೇಂದ್ರದಲ್ಲಿ ಜಿಂದಾಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ವಿದೇಶಗಳಲ್ಲಿ ಕೆಲಸಕ್ಕೆ ಅನುಕೂಲವಾಗಲು ಜರ್ಮನ್ ಮತ್ತು ಇಂಗ್ಲೀಷ್ ಭಾಷಾ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಜೆ ಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ “ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಬಯಸುವವರು ಉತ್ತಮ ಸಂವಹನ ಮತ್ತು ಇತರೆ ಭಾಷೆಗಳನ್ನು ಕಲಿಯುವುದು ಅತ್ಯವಶ್ಯಕ, ರೋಗಿಯೊಂದಿಗೆ ಮತ್ತು ಅವರ ಕುಟುಂಬಸ್ಥರ ಜೊತೆಗೆ ಅವರ ಮಾತೃ ಭಾಷೆಯಲ್ಲಿ ಮಾತಾಡುವುದರಿಂದ ಸ್ಪಷ್ಟವಾಗಿ ಪರಿಸ್ಥಿತಿ ಅರ್ಥವಾಗುತ್ತದೆ. ಜರ್ಮನ್ ಮತ್ತು ಇತರೆ ದೇಶಗಳಲ್ಲಿ ಭಾರತೀಯ ನರ್ಸ್ ಗಳಿಗೆ ಹೆಚ್ಚು ಬೇಡಿಕೆಯಿದೆ. ಆದ್ದರಿಂದ ಅಲ್ಲಿ ಕೆಲಸ ಮಾಡಲು ಜರ್ಮನ್ ಮತ್ತು ಇಂಗ್ಲೀಷ್ ಭಾಷೆ ಕಲಿಯುವುದು ಅವಶ್ಯವಾಗಿದೆ ಮತ್ತು ಇದರಿಂದ ಜಾಗತಿಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅವಕಾಶಗಳ ಬಾಗಿಲು ತೆರೆಯಲಿದೆ” ಎಂದರು

ಜರ್ಮನ್ ಭಾಷೆ ಕಲಿಸಲು “ಚಾರ್ಕೋಸ್” ಸಂಸ್ಥೆ ಮತ್ತು ಇಂಗ್ಲೀಷ್ ಕಲಿಸಲು “ಇನೋವೇಷನ್ಸ್ ಅನ್ಲಿಮಿಟೆಡ್” ಜೊತೆಗೆ ಒಪ್ಪಂದ ಮಾಡಿಕೊಂಡು ಮಾತನಾಡಿದ ಜೆ ಎಸ್ ಡಬ್ಲ್ಯೂ ಫೌಂಡೇಶನ್ ದಕ್ಷಿಣ ಭಾರತದ ಝೋನಲ್ ಹೆಡ್ ಪೆದ್ದಣ್ಣ ಬೀಡಲಾ “ಈ ಕಾರ್ಯಕ್ರಮವು ಭಾರತೀಯ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಭೆಗಳನ್ನು ವಿಶ್ವಮಟ್ಟದ ಮಟ್ಟಿಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದ್ದು, ಈ ಕಾರ್ಯಕ್ರಮದ ಮೂಲಕ, ನರ್ಸಿಂಗ್ ವಿದ್ಯಾರ್ಥಿಗಳು ಭಾರತದಲ್ಲಿಯೇ ಅಲ್ಲದೆ ಯೂರೋಪ್ ಸೇರಿದಂತೆ ಜಾಗತಿಕ ಆರೋಗ್ಯ ಸಂಸ್ಥೆಗಳಲ್ಲಿ ತಮ್ಮ ಪ್ರವೃತ್ತಿಯನ್ನು ಆರಂಭಿಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಜೆ ಎಸ್ ಡಬ್ಲ್ಯೂ ಫೌಂಡೇಶನ್ ನ ಮಹೇಶ್ ಶೆಟ್ಟಿ, ಸನ್ನಿ ಈಯಪ್ಪನ್ ಮತ್ತು ಅನುಷ್ಠಾನ ಸಂಸ್ಥೆಗಳಿಂದ ಡಾ. ಮಂಜುನಾಥ ಮತ್ತು ರಾಗಿಣಿ ಮತ್ತು ಜಿಂದಾಲ್ ನರ್ಸಿಂಗ್ ಕಾಲೇಜು ಪ್ರಾಧ್ಯಾಪಕರಾದ ರಾಜೇಶ್ವರಿ, ಶಿವರಾಜ್ ಮತ್ತು 150 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
