ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು : ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಗೊಂಡಿದ್ದು, ಕೊಟ್ಟೂರು ತಾಪಲೂಕು ಪಂಚಾಯಿತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿಗಳೂ ಆದ ಶ್ರೀ ಡಾ.ಬಿ.ಆನಂದಕುಮಾರ ಅವರು ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು ಹಾಗೂ ಸದಸ್ಯರರುಗಳಿಗೆ ಆದೇಶ ಪ್ರತಿಯನ್ನು ನೀಡಿದರು.
ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಶ್ರೀ ಅನಿಲ್ ಹೊಸಮನಿ (ಅಧ್ಯಕ್ಷರು), ಸದಸ್ಯರಾಗಿ ಶ್ರೀ ಪ್ರಭುದೇವ್, ಶ್ರೀ ಮಾರಪ್ಪ ದೊಡ್ಡಮನಿ, ಶ್ರೀ ಹರೀಶ್ ನಾಯ್ಕ್ ಎಲ್.ಎನ್., ಶ್ರೀಮತಿ ಸುಶೀಲಮ್ಮ , ಶ್ರೀಮತಿ ಗಾಯತ್ರಿ ಎ.ಎಸ್, ಶ್ರೀ ಶಿವರಾಜ್ ಟಿ, ಶ್ರೀ ನಾಗಪ್ಪ, ಶ್ರೀ ಪಿ.ಕೆ. ಇಂದ್ರಜಿತ್, ಶ್ರೀ ತಿರುಕಪ್ಪ ಕರಡಿ, ಶ್ರೀ ಎನ್.ಚಂದ್ರಪ್ಪ, ಶ್ರೀ ಬಸವರಾಜ್, ಶ್ರೀ ಜೆ.ಆನಂದ, ಶ್ರೀ ಮಾಲವಿ ಜಮಿರ್ ಖಾನ್, ಶ್ರೀ ಉಮಾಪತಿ ಸ್ವಾಮಿ ಎಂ.ಎಂ. ಅವರು ಸಮಿತಿ ಸದಸ್ಯರಾಗಿ ನೇಮಕಗೊಂಡಿರುತ್ತಾರೆ.
ಈ ವೇಳೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರರಾದ ಶ್ರೀ ಅನಿಲ್ ಹೊಸಮನಿ ಅವರು ಮಾತನಾಡಿ, ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ಕುಂದು ಕೊರತೆ ಇದ್ದಲ್ಲಿ, ಅನುಷ್ಠಾನ ಸಮಿತಿಗೆ ದೂರು ಸಲ್ಲಿಸುವಂತೆ ಮನವಿ ಮಾಡಿದರು.
