ವರದಿ: ಶಿವರಾಜ್ ಕನ್ನಡಿಗ
ದಾವಣಗೆರೆ: ಯುವಜನರ ಅಭಿರುಚಿ ಬದಲಾಗದ ಹೊರತು ಸಂಸ್ಕೃತಿ ನಾಶವನ್ನ ತಡೆಯಲು ಯಾರಿಂದಲೂ ಸಾದ್ಯವಿಲ್ಲ ಸಂಸ್ಕೃತಿ ನಾಶವನ್ನು ತಡೆಗಟ್ಟುವಲ್ಲಿ ಯುವ ಜನರ ಅಭಿರುಚಿಯನ್ನು ಬದಲಾಯಿಸುವಲ್ಲಿ ಪೋಸಕರು ಶಿಕ್ಷಣವ್ಯವಸ್ಥೆ,ಸಮಾಜ, ಸಮೂಹ ಮಾದ್ಯಮಗಳು ಜವಾಬ್ದಾರಿ ನಿರ್ವಹಿಸುವಲ್ಲಿ ಸೋತಿದೆ ಎಂದು ಹಿರಿಯ ಪತ್ರಕರ್ತ ವಿರೂಪಾಕ್ಷಪ್ಪ ಪಂಡಿತ್ ವಿಷಾದ ವ್ಯಕ್ತ ಪಡಿಸಿದರು.

ಅವರು ನಿನ್ನೆ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರತ್ನ ದಿ. ಡಾ/ವಿಷ್ಣುವರ್ಧನ್ ರವರ ಜನ್ಮದಿನಾಚರಣೆ ಹಾಗೂ ಗಾಯಕ ದಿ. ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಗೂ ದಿ. ಪುನೀತ್ ರಾಜಕುಮಾರ್ ಸಂಸ್ಮರಣೆ ಆಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಐಕ್ಯತಾ ಸಾಸ್ಕೃತಿಕ ಅಕಾಡೆಮಿ ,ಅಕ್ಷರ ನ್ಯೂಸ್ ಯೂಟೂಬ್ ಚಾನಲ್, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೀತ ನಮನ ರಸಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಯುವಜನರನ್ನ ಮೊಬೈಲ್ ಓದುವ ಸಂಸ್ಕೃತಿಯಿಂದ ದೂರ ತಳ್ಳಿದೆ. ಪರಿಣಾಕಾರಿಯಾದ ಮಾದ್ಯಮವಾದ ಸಿನಿಮಾ ಮತ್ತು ಅದರ ಸಾಹಿತ್ಯ ಕೂಡ ಲಾಂಗು ಮಚ್ಚು ಗಳನ್ನು ಹಿಡಿಯಲು ಯುವಜನರಿಗೆ ಪ್ರೇರೇಪಿಸುತ್ತಿವೆ ಸಾಮಾನ್ಯ ಜನರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಾದ ಸಿನಿಮಾ ನಟರು ಬಾಯಲ್ಲಿ ಹೇಳಿ ಕೇಸರಿ ಎಂದು ಜಾಹೀರಾತು ನೀಡಿ ಯುವಜನರ ಬದುಕನ್ನು ಕೆಸರು ಮಾಡುತ್ತಿದ್ದಾರೆ. ಇಂತಹ ಸಿನಿಮಾ ನಟರಿಂದ ಸಮಾಜ ಏನು ಕಲಿಯಬೇಕು? ಒಬ್ಬ ರೌಡಿ ಸತ್ತರೆ ಮೂರು ಸಾವಿರ ಯುವಕರು ತುಟಿ ಮೇಲೆ ಮೀಸೆ ಮೂಡದವರು ಸೇರುತ್ತಾರೆ . ಆದರೆ ಒತ್ತಡದ ಜೀವನದ ಮನೋವಿಕಾಸ ಮತ್ತು ಮನಸನ್ನು ಪ್ರಪುಲ್ಲ ಗೊಳಿಸುವ ಸಂಗೀತ ಕೇಳಲು ಜನರು ಮನಸು ಮಾಡುವುದಿಲ್ಲ .ಸಂಗೀತದ ನಾ ನಾ ಪ್ರಾಕಾರಗಳಿವೆ ಅವುಗಳನ್ನು ಬಿಟ್ಟು ಡಿಜೆ ಗೆ ಮಾರುಹೋಗಿದ್ದಾರೆ. ಇಂತವರನ್ನು ಸರಿದಾರಿಗೆ ತರುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಬಿ ವಾಮದೇವಪ್ಪ ಮಾತನಾಡಿ ಕನ್ನಡದ ಕಾರ್ಯಕ್ರಮಗಳಿಗೆ ಕುವೆಂಪು ಕನ್ನಡ ಭವನ ಸದಾಕಾಲ ತರೆದಿರುತ್ತದೆ ಕನ್ನಡ ಕಟ್ಟುವ ಮನಸುಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಉಪ ಮೇಯರ್ ಜ್ಯೋತಿ ಶಿವರಾಜ, ಉದ್ಯಮಿಗಳಾದ ಕುಸುಮ ಶೆಟ್ರು, ಡಿ.ಎಸ್.ಎಸ್. ನ ಹಿರಿಯ ಹೋರಾಟಗಾರ ಬುಳುಸಾಗರ ಸಿದ್ದರಾಮಣ್ಣ ವರ್ತಕರಾದ ಬಸವರಾಜ, ಜಿ ಎಚ್.ನಾಗರಾಜ, ವೀರೇಶ್ ಹಲವಾಗಲು .ಯೋಗ ಶಿಕ್ಷಕ ಲಲಿತ್ ಕುಮಾರ್ ಜೈನ್ ಪತ್ರಕರ್ತ ಸಿಕಂದರ್, ದ್ಯಾಮನಗಟ್ಟಿ ಕೆ ಎಂ. ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಹರ್ಷ ಅಲಿ .ಧನ್ಯಕುಮಾರ ಸಾವಳಗಿ ವಿವಿಧ ಹಂತಗಳಲ್ಲಿ ನಿರ್ವಹಣೆ ಮಾಡಿದರೆ ಉಮಾವತಿ ಸ್ವಾಗತಿಸಿದರು ಮಂಜುನಾಥ್ ನಿರೂಪಿಸಿದರು.ಸ್ಥಳಿಯ ಕಲಾವಿದರಿಂದ ಮನರಂಜಿಸುವ ರಸಮಂಜರಿ ಕಾರ್ಯಕ್ರಮ ನಡೆಯಿತು.
