Monday, October 27, 2025
HomeVijayanagara“ಸ್ವಚ್ಚತಾ ಹೀ ಸೇವಾ”-2025ರ ಪಾಕ್ಷೀಕ ಅಭಿಯಾನ ಕಾರ್ಯಕ್ರಮ”

“ಸ್ವಚ್ಚತಾ ಹೀ ಸೇವಾ”-2025ರ ಪಾಕ್ಷೀಕ ಅಭಿಯಾನ ಕಾರ್ಯಕ್ರಮ”

ವಿಜಯನಗರ ಜಿಲ್ಲಾ ಪಂಚಾಯತ್ ನಲ್ಲಿ ಸ್ವಚ್ಚತಾ ಹೀ ಸೇವಾ ಪಾಕ್ಷಿಕ್‌- 2025ರ “ಸ್ವಚ್ಚೂತ್ಸವ” (ಸೆಪ್ಟೆಂಬರ್‌ – 17 ರಿಂದ ಆಕ್ಟೋಬರ್– 02 ವರೆಗೆ) ಅಭಿಯಾನದ ಅಂಗವಾಗಿ ಸೆಪ್ಟಂಬರ್‌-25 ರಂದು ಸಾಮೂಹಿಕ ಶ್ರಮದಾನ (ಎಕ್ ದಿನ್‌,ಎಕ್‌ ಘಂಟಾ, ಎಕ್‌ ಸಾಥ್‌) ಕಾರ್ಯಕ್ರಮಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಶ್ರೀ ನೊಂಗ್ಜಯ್‌ ಮೊಹಮದ್‌ ಅಲಿ ಅಕ್ರಮ್‌ ಶಾ ಇವರು ಸಸಿ ನೆಡುವ ಮೂಲಕ ಚಾಲನೆ ನೀಡಿ, ಅಭಿಯಾನದ ಕುರಿತು ಮಾತನಾಡಿದರು.

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನೊಂಗ್ಜಯ್‌ ಮೊಹಮದ್‌ ಅಲಿ ಅಕ್ರಮ್‌ ಶಾ ಮಾತನಾಡಿ ಸರಕಾರದ ಮಾರ್ಗ ಸೂಚನೆಯಂತೆ, ಜಿಲ್ಲೆಯಲ್ಲಿ ಸೆಪ್ಟಂರ್‌ -17 ರಿಂದ ಅಕ್ಟೋಬರ -02 ರ ವರೆಗೆ “ಸ್ವಚ್ಚತಾ ಹೀ ಸೇವಾ”ಕಾರ್ಯಕ್ರಮದ ವಿವಿಧ ಚಟುವಟಿಕೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೋಳ್ಳಲಾಗಿದೆ. SBM (G) ಯೋಜನೆಯಡಿ Phase̲1 ರಲ್ಲಿ ಈಗಾಗಲೇ ಜಿಲ್ಲೆಯನ್ನು 2019ರಲ್ಲಿ ಬಯಲು ಬಹಿರ್ದೇಸೆ ಮುಕ್ತಗೊಳಿಸಲಾಗಿರುತ್ತದೆ, ಮುಂದುವರೆದು SBM (G) Phase-ll ರಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಘನ ಮತ್ತು ದ್ರವ ತ್ಯಾಜ್ಯದ ನಿರ್ವಹಣೆಯ ಘಟಕಗಳನ್ನು ನಿರ್ಮಿಸಿ ಸುಸ್ಥಿರ ನೈರ್ಮಲ್ಯ ಮುಕ್ತ ವಾತಾವರಣವನ್ನು ಸೃಷ್ಟಿಸಲು ಜಿಲ್ಲಾ ಪಂಚಾಯಿತಿಯಿಂದ ಕ್ರಮಕೈಗೊಳ್ಳಲಾಗಿದೆ, ಎಂದು ತಿಳಿಸಿದರು.,

ಜಿಪಂ ಮತ್ತು ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಹಕಾರ ನೀಡಿ ಕಸವನ್ನು ಎಲ್ಲಿಂದರಲ್ಲಿ ಬೀಸಾಡದೆ, ತಮ್ಮ ಮನೆಯ ಬಾಗಿಲಿಗೆ ಬರುವ ಕಸದ ಗಾಡಿ/ಸ್ವಚ್ಚ ವಾಹಿನಿಗೆ ನೀಡಲು ಕೋರಿದರು, ಹಾಗೂ ಈ ಒಂದು ಅಭಿಯಾನದ ಮೂಲಕ ಎಲ್ಲಾ ಸಾರ್ವಜನಿಕರು ತಮ್ಮ ಮನೆ ಸುತ್ತೂಲು 3 ತಿಂಗಳಿಗೊಮ್ಮೆ ಶ್ರಮಧಾನ ಮಾಡುವ ಮೂಲಕ ಇಡೀ ಜಿಲ್ಲೆಯಲ್ಲಿ ಸುಸ್ಥಿರ ನೈರ್ಮಲ್ಯಯುಕ್ತ ಮತ್ತು ಆರೋಗ್ಯಯುಕ್ತ ಭಾರತವನ್ನು ನಿರ್ಮಾಣ ಮಾಡಲು ಕೋರಿದರು.

ಪ್ರಸ್ತಾವಿಕ ನುಡಿಯಾಗಿ ಸಹಾಯಕ ಯೋಜನಾಧಿಕಾರಿ ಎಂ, ಉಮೇಶ ರವರು ಮಾತನಾಡಿ ರಾಜ್ಯದ್ಯಾಂತ ಭಾರತ ಸರ್ಕಾರದ ಸೂಚನೆಯಂತೆ, ಹಾಗೂ ರಾಜ್ಯ ಸರ್ಕಾರದ ನಿರ್ದೇಶನ ಮೇರೆಗೆ ಸತತವಾಗಿ 11 ನೇ ವರ್ಷ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ವನ್ನು ಆಚರಿಸಲಾಗುತ್ತಿದ್ದು, 2025-26ನೇ ಸಾಲಿನಲ್ಲಿ ಸೆಪ್ಟೆಂಬರ್‌ 17 ರಿಂದ ಆಕ್ಟೋಬರ್‌ 02 ವರೆಗೆ ಜಾಗೃತಿ ಮೂಡಿಸುವ ಕುರಿತು, ಮತ್ತು ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ, ಇದರ ಭಾಗವಾಗಿ ಇಂದು 25.09.2025 ರಂದು ರಾಜ್ಯದ ಎಲ್ಲಾ ಸಾರ್ವಜನಿಕರು 01 ಘಂಟೆ ಶ್ರಮಧಾನ ಮಾಡಲು ಪ್ರೇರೆಪಿಸುವುದಕ್ಕಾಗಿ ಸದರಿ ಕಾರ್ಯಕ್ರಮವನ್ನು ರಾಜ್ಯ ಸರಾಕರ ಮತ್ತು ಕೇಂದ್ರ ಸರ್ಕಾರ ನಿಗಧಿಪಡಿಸಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಕುರಿತು, ಯೋಜನಾ ನಿರ್ದೇಶಕರು ಕೆ, ತಿಮ್ಮಪ್ಪ ಮಾತನಾಡಿ : SBM (G) Phase-ll ರ ಪ್ರಕಾರ ರಾಜ್ಯದ ಎಲ್ಲಾ ಗ್ರಾಮಗಳನ್ನು ಹಾಗೂ ಜಿಲ್ಲೆಯ ಎಲ್ಲಾ ಗ್ರಾಮಗಳನ್ನು ಸುಸ್ಥಿರ ನೈರ್ಮಲ್ಯಿಕರಣ ಸಾಧಿಸಲು ಜಿಲ್ಲೆಯಲ್ಲಿ ವಿವಿಧ ಘನತ್ಯಾಜ್ಯ ಘಟಕಗಳನ್ನು, ದ್ರವ ತ್ಯಾಜ್ಯ ಮತ್ತು ಮಲ ತ್ಯಾಜ್ಯ ಘಟಕಗಳನ್ನು ನಿರ್ಮಿಸಲಾಗಿದ್ದು, ಅವುಗಳ ಸದುಪಯೋಗ ಸಾರ್ವಜನಿಕರಿಗೆ ಆಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನೋಂಗ್ಜಯಾ ಮೊಹಮದ್‌ ಅಲಿ ಅಕ್ರಮ್‌ ಶಾ ಹಾಗೂ ಉಪ ಕಾರ್ಯದರ್ಶಿಗಳಾದ ಶ್ರೀ ಕೆ. ತಿಮ್ಮಪ್ಪ, ಹಾಗೂ ಕಾರ್ಯಪಾಲಕ ಅಭಿಯಂತರರಾದ ಶ್ರೀಮತಿ ದೀಪಾ ಗ್ರಾ.ಕು.ನೀ ಮತ್ತು ನೈರ್ಮಲ್ಯ ಇಲಾಖೆ, ವಿಜಯನಗರ ಹಾಗೂ ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ ರುದ್ರಪ್ಪ ಅಕ್ಕಿ,ಸಹಾಯಕ ಕಾರ್ಯದರ್ಶಿಗಳಾದ ಶ್ರೀ ಮೌನೇಶ ವಿ.ಬಿ ಮತ್ತು ಸಹಾಯಕ ಯೋಜನಾಧಿಕಾರಿ ಶ್ರೀ ಉಮೇಶ ಎಮ್,ಹೊಸಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಲಂ ಬಾಷ ಹಾಗೂ ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ಯೋಜನೆಯ ಜಿಲ್ಲಾ ಸಮಾಲೋಚಕರು ಹಾಗೂ ಜಿಲ್ಲಾ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments