ದಿನಾಂಕ 25//09/2025 ರಂದು ವಿಜಯನಗರ ಜಿಲ್ಲೆಯ, ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಗ್ರಾಮದಲ್ಲಿ ಡಿಜಿಟಲ್ ಸಾಕ್ಷರತಾ ಅರಿವು ಮೂಡಿಸಲು ತರಬೇತಿಯನ್ನು ನೀಡುವ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ ತರಬೇತುದಾರರಿಗೆ ಡಿಜಿಟಲ್ ಸಾಕ್ಷರತಾ ತರಬೇತಿ*
ಯನ್ನು ತಾಲೂಕ ಪಂಚಾಯತ್ ಕೂಡ್ಲಿಗಿ ಸಭಾಂಗಣದಲ್ಲಿ, ಒಂದು ದಿನದ ತರಬೇತಿಯನ್ನು ನೀಡಲಾಯಿತು.
ಏನಿದು ಡಿಜಿಟಲ್ ಸಾಕ್ಷರತಾ ತರಬೇತಿ ?:
2024 -25 ನೇ ಸಾಲಿನಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜೊತೆಯಲ್ಲಿ ಶಿಕ್ಷಣ ಪೌಂಡೇಶನ್ ಹಾಗೂ ಡೆಲ್ ಟೆಕ್ನಾಲಜಿ ಸಂಸ್ಥೆ ಸಹಯೋಗದಲ್ಲಿ ರಾಜ್ಯದ 5000 ಅರಿವು ಕೇಂದ್ರಗಳ ಮೇಲ್ವಿಚಾರಕರ ಮೂಲಕ 6 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ 2 ಲಕ್ಷ ಸಮುದಾಯದ ಸದಸ್ಯರಿಗೆ ಡಿಜಿಟಲ್ ಸಾಕ್ಷರತಾ ತರಬೇತಿಯನ್ನು ಒದಗಿಸಲಾಗಿತ್ತು. ಮುಂದುವರೆದು ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಆಯ್ಕೆ ಮಾಡಿಕೊಂಡಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಾಪ್ತಿಯಲ್ಲಿನ 6000 ಗ್ರಾಮ ಗ್ರಂಥಾಲಯದಲ್ಲಿ 50 ಒಟ್ಟು ರಾಜ್ಯದ್ಯಂತ 3 ಲಕ್ಷ ಜನರಿಗೆ ಡಿಜಿಟಲ್ ಸಾಕ್ಷರತೆ ತರಬೇತಿಯನ್ನು ನೀಡಲಾಗುತ್ತಿದೆ.
ತರಬೇತಿಯ ಉದ್ದೇಶ:
ಸಮುದಾಯ ಮತ್ತು ಸ್ವಸಹಾಯ ಸಂಘದ ಮಹಿಳೆಯರು ಸಂವಹನ ಮಾಡಲು, ಮಾಹಿತಿಯನ್ನ ಬಳಕೆ ಮಾಡಲು, ವ್ಯವಹಾರ ನಡೆಸಲು, ಹಾಗೂ ಸರಳ ಡಿಜಿಟಲ್ ವಹಿವಾಟುಗಳಿಗಾಗಿ ಸ್ಮಾರ್ಟ್ ಫೋನ್ ಗಳಂತಹ ಡಿಜಿಟಲ್ ಸಾಧನಗಳನ್ನು ಆತ್ಮವಿಶ್ವಾಸದಿಂದ ಬಳಸಲು ಅಗತ್ಯವಿರುವ ಕೌಶಲ್ಯವನ್ನು ವೃದ್ಧಿಸುವುದಾಗಿದೆ.
ಶಿಬಿರಾರ್ಥಿಗಳು ತರಬೇತಿಯಲ್ಲಿ ಕಿರು ವಿಡಿಯೋಗಳ ಸಹಾಯದಿಂದ ಸ್ಮಾರ್ಟ್ ಫೋನ್ ಬಳಕೆಯ ವಿಷಯಗಳನ್ನು ಕಲಿತುಕೊಂಡರು. ಮತ್ತು ಪ್ರಮುಖವಾಗಿ ದಿನನಿತ್ಯ ಜೀವನಕ್ಕೆ ಅಗತ್ಯವಾಗಿರುವ ಮೂಲಭೂತ ಡಿಜಿಟಲ್ ಸಾಕ್ಷರತೆಯನ್ನು ತರಬೇತಿಯ ಮೂಲಕ ಒದಗಿಸಲಾಗುತ್ತಿದೆ
ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನ ಕೂಡ್ಲಿಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ನರಸಪ್ಪ ರವರು ವಹಿಸಿಕೊಂಡಿದ್ದರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಶಿಬಿರಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು, ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಣ ಪೌಂಡೇಶನ್ ನ ಶ್ರೀಯುತ ಶಿವಕುಮಾರ್ ಹೆಚ್ ಟಿ. ಹಾಗೂ ಜಿಲ್ಲೆಯ ಸಂಯೋಜಕರಾದ ಶ್ರೀಯುತ. ಶ್ರೀಧರ್ ಎಸ್. ಬಿ. ರವರು ತರಬೇತುದಾರ ಶಿಬಿರಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆಯ ತರಬೇತಿಯನ್ನು ನೀಡಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಕೂಡ್ಲಿಗಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀಯುತ ವೆಂಕಟೇಶ್ ರವರು ಹಾಗೂ ಎನ್. ಆರ್.ಎಲ್.ಎಂ ನ ನರಸಿಂಹರವರು ಮತ್ತು ಕೊಟ್ಟೂರಿನ ಎನ್, ಆರ್. ಎಲ್. ಎಂ. ಸಿಬ್ಬಂದಿಯವರು ಭಾಗವಹಿಸಿದ್ದರು
