ವರದಿ : ಶಿವರಾಜ್ ಕನ್ನಡಿಗ
ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನಲ್ಲಿ ಕೊಟ್ಟೂರಿನ ಡೋಣೂರು ಚಾನುಕೋಟಿ ಮಠದ ಸಮುದಾಯ ಭವನ ದಲ್ಲಿ 2024 -25 ನೇ ಸಾಲಿನ 115 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಶನಿವಾರ ಹಮ್ಮಿಕೊಂಡಿದ್ದು.
ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯ ಷ // ಬ್ರ // ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಯವರು ಹಾಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಎಂ ಎಂ ಜೆ ಹರ್ಷ ವರ್ದನ್ ರವರು ಕಾರ್ಯಕ್ರಮ ವನ್ನು ದೀಪ ಬೆಳಗಿಸುವ ಉದ್ಘಾಟನೆ ಮಾಡಿದರು
ಜಿಲ್ಲಾ ನಿರ್ದೇಶಕರು ಸತೀಶ್ ಶೆಟ್ಟಿ ಯವರು ಧರ್ಮಸ್ಥಳ ದಿಂದ ನೆಡೆಯುವ ಚತುರ್ವಿಧ ದಾನಗಳಾದ ಅನ್ನದಾನ, ವಿದ್ಯಾದಾನ, ಅರೋಗ್ಯದಾನ, ಹಾಗು ಅಭಯ ದಾನಗಳ ಬಗ್ಗೆ ತಿಳಿಸಿದರು ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮ ಕಳೆದ 19 ವರ್ಷ ಗಳಿಂದ ನಿರಂತರ ವಾಗಿ ನೆಡೆದು ಕೊಂಡು ಬರುತ್ತಿದೆ ಹಾಗು ನಿರ್ಗತಿಕರಿಗೆ ಮಾಶಾಸನ ತಿಂಗಳಿಗೆ 1000 ರೂ ಅಂತೆ ನೀಡಲಾಗುತ್ತಿದೆ.
ವಿಜಯನಗರ ಜಿಲ್ಲೆಯಲ್ಲಿ 800 ವಿದ್ಯಾರ್ಥಿಗಳಿಗೆ ಹಾಗು ನಮ್ಮ ಕೊಟ್ಟೂರು ತಾಲ್ಲೂಕಿನಲ್ಲಿ ಕಳೆದ ವರ್ಷ 107 ಮತ್ತು ಈ ವರ್ಷ 115 ಒಟ್ಟು 222 ವಿದ್ಯಾರ್ಥಿಗಳಿಗೆ 1452000 ಮೊತ್ತ ವನ್ನು ವಾರ್ಷಿಕವಾಗಿ ಹಣ ವಿದ್ಯಾರ್ಥಿಗಳ ಖಾತೆಗೆ ಹಾಕಲಾಗುತ್ತಿದೆರಾಜ್ಯದಲ್ಲಿ 950 ಕೆರೆಗಳನ್ನು ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮ ದಲ್ಲಿ ಕೆರೆ ಪುನಶ್ಚೇತನ ಗೊಳಿಸಲಾಗಿದೆ ರಾಜ್ಯದಲ್ಲಿ 1050 ಜ್ಞಾನದೀಪಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೀಡಲಾಗಿದೆ, ಎಂದು ತಿಳಿಸಿದರು
ಹರ್ಷವರ್ಧನ್ ರವರು ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ತಂದೆ ತಾಯಿಗಳಿಗೆ ಒಳ್ಳೇದು ಮಾಡಿ ಎಂದು ಶುಭ ಹಾರೈಸಿ ಹಾಗು ಯೋಜನೆಯು ಒಳ್ಳೆಯ ಕಾರ್ಯಕ್ರಮ ಗಳನ್ನು ಮಾಡುತ್ತಿದೆ ಎಂದು ತಿಳಿಸಿ ಮಕ್ಕಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಿದರು
ಸ್ವಾಮಿಯವರು ಮಾತನಾಡುತ್ತ ಈ ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮ ವಿದ್ಯಾರ್ಥಿ ಗಳ ಭವಿಷ್ಯ ವನ್ನು ಕಟ್ಟಿಕೊಳ್ಳುವ ಕಾರ್ಯಕ್ರಮ ವಾಗಿದ್ದು ಈ ಕಾರ್ಯಕ್ರಮ ವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶುಭ ಹಾರೈಸಿದರು
ಕಾರ್ಯಕ್ರಮ ದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳು ರೇವಣಸಿದ್ಧಪ್ಪ, ಯೋಗೇಶ್ವರ ದಿನ್ನೇ, ಮಲ್ಲಿಕಾರ್ಜುನಪ್ಪ, ನೇತ್ರಾವತಿ, ಮಲ್ಲಿಕಾರ್ಜುನ್ ಎಂ ಯೋಜನಾಧಿಕಾರಿ ನವೀನ್ ಕುಮಾರ್ ನಾಗರಾಜ್ ಶಿಕ್ಷಕರು, ರುದ್ರೇಶ್, ಮಹಾಂತೇಶ್, ನಾರದ ಮುನಿ ಸೇವಾಪ್ರತಿನಿಧಿ ಗಳು ಪ್ರೇಮ ಲಕ್ಷ್ಮಿ ಹಾಗು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು
