ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು 29.09.2025 :- ಕೊಟ್ಟೂರಿನ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಸ ನಂ 733/ಎ ವಿಸ್ತೀರ್ಣ 0.75 ಹಗೂ ಸ ನಂ 732/ಎ ವಿ 1.85 ಎಕರೆ ಪ್ರದೇಶದಲ್ಲಿ ಇಂದು ಕೊಟ್ಟೂರು ತಾಲೂಕು ಆಡಳಿತ ಸೌಧ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ನೇಮಿರಾಜನಾಯ್ಕ ಇವರು ನೆರವೇರಿಸಿದರು. ಆಡಳಿತ ಸೌಧಕ್ಕೆ ರೂ.8.00 ಕೋಟಿ ಹಣ ಮಂಜೂರಾಗಿದ್ದು, ಇನ್ನೂ 8.00 ಕೋಟಿ ಬೇಕಿದ್ದರೆ ಮಂಜೂರು ಮಾಡಲಾಗುವುದು. ಆದ್ದರಿಂದ ಸದರಿ ಕಟ್ಟಡ ಕಾಮಗಾರಿಯನ್ನು ಯಾವುದೇ ರೀತಿಯ ಕಳಪೆಯಾಗದೇ ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಿಕೊಡಬೇಕು. ಕೊಟ್ಟೂರು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವಾಗಿದ್ದು, ಆಡಳಿತ ಸೌಧವು ಪಟ್ಟಣದ ಆಕರ್ಷಣೀಯ ಕಟ್ಟಡವಾಗಿರಬೇಕು. ಕೊಟ್ಟೂರು ತಾಲೂಕು ನಿರ್ಮಾಣಕ್ಕೆ ಹೋರಾಟ ಮಾಡಿದ ಎಲ್ಲ ಮಹನೀಯರಿಗೂ ವಂದನೆಗಳನ್ನು ಸಲ್ಲಿಸಿ ಸ್ಮರಿಸಿಕೊಳ್ಳುತ್ತಾ, ಅವರ ಕನಸಿಕ ಕಟ್ಟಡ ಕಾಮಗಾರಿಯು 9 ತಿಂಗಳಲ್ಲಿ ಮುಕ್ತಾಯವಾಯಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದರು.

ಮಾಜಿ ಜಿ ಪಂ ಸದಸ್ಯರಾದ ಹರ್ಷವರ್ಧನ ಇವರು ಆಡಳಿತ ಸೌಧವು ಕೊಟ್ಟೂರು ಹೃದಯ ಭಾಗದಲ್ಲಿದ್ದು, ಸಾರ್ವಜನಿಕರಿಗೆ ಹತ್ತಿರವಾಗಿದೆ. ಇದರಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಛೇರಿಗೆ ಬರಲು ಅನುಕೂಲವಾಗುತ್ತದೆ. ಕಟ್ಟಡ ಕಾಮಗಾರಿಯನ್ನು ಅವಸರದಿಂದ ಪೂರ್ಣಗೊಳಿಸದೇ ಸುಭದ್ರವಾಗಿ ನಿರ್ಮಿಸಬೇಕು ಎಂದು ಸಲಹೆ ನೀಡುತ್ತಾ, ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವಂತೆ ಶಾಸಕರಿಗೆ ವಿನಂಸಿಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಬದ್ದಿ ರೇಖಾ ರಮೇಶ, ಉಪಾಧ್ಯಕ್ಷರಾದ ಜಿ ಸಿದ್ದಯ್ಯ, ತಹಶೀಲ್ದಾರ್ ಅಮರೇಶ ಜಿ ಕೆ, ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ ಆನಂದಕುಮಾರ್, ಪ ಪಂ ಮುಖ್ಯಾಧಿಕಾರಿ ನಸರುಲ್ಲಾ, ಮಾಜಿ ಜಿ ಪಂ ಸದಸ್ಯರಾದ ಸಿದ್ದನಗೌಡ, ಪಂಚಮಸಾಲಿ ಸಮಾಜದ ಅಧ್ಯಕ್ಷರಾದದ ಚಾಪಿ ಚಂದ್ರಪ್ಪ, ವೀರಶೈವ ಪಂಚಮಸಾಲಿ ಸಹಕಾರಿ ಸಂಘದ ಅಧ್ಯಕ್ಷರಾದ ವಿವೇಕಾನಂದ, ಡಿಎಸ್ಎಸ್ ಜಿಲ್ಲಾ ಮುಖಂಡರಾದ ಬದ್ದಿ ಮರಿಸ್ವಾಮಿ, ಮುಖಂಡರಾದ ಬೋರ್ವೆಲ್ ತಿಪ್ಪೇಸ್ವಾಮಿ, ಬಾದಾಮಿ ಮುತ್ತಣ್ಣ ಪಟ್ಟಣ ಪಂಚಾಯಿತಿ ಸದಸ್ಯರಾದ ಬಾವಿಕಟ್ಟಿ ಶಿವಾನಂದ ವಕೀಲರು, ವೀಣಾ ವಿವೇಕಾನಂದ, ಹೌಸಿಂಗ್ ಬೋರ್ಡ್ ಎಇಇ ಸುನಿಲ್ ಕುಮಾರ ಇದ್ದರು. ಕಾರ್ಯಕ್ರಮದದಲ್ಲಿ ರೈತ ಮುಖಂಡರು, ವಿವಿಧ ಸಮಾಜದ ಮುಖಂಡರು, ಎಂ, ಎಂ, ಜೆ, ಶೋಬಿತ್ ಸಾರ್ವಜನಿಕರು, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.
