ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು ಪಟ್ಟಣ ಪಂಚಾಯಿತಿಗೆ 2018ರಲ್ಲಿ ಚುನಾವಣೆ ನಡೆದು, ಆಯ್ಕೆಯಾದ ಸದಸ್ಯರುಗಳು ಆರಂಭದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಸಂಬಂಧ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಹೋಗಿದ್ದರು. ನಂತರ ಘನ ನ್ಯಾಯಾಲಯವು ಅಧ್ಯಕ್ಷ ಉಪಾಧ್ಯಕ್ಷರ ಹಸಿರು ನಿಶಾನೆ ತೋರಿಸಿದ ಹಿನ್ನೆಲೆಯಲ್ಲಿ ದಿನಾಂಕ 06-11-2020 ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಅಧ್ಯಕ್ಷರಾಗಿ ಭಾರತೀ ಸುಧಾಕರ್ ಪಾಟೀಲ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಶಫೀ ಆಯ್ಕೆಯಾಗಿದ್ದರು.
ಎರಡೂವರೆ ವರ್ಷಗಳ ನಂತರ ದಿನಾಂಕ 18-05-2023 ರಿಂದ 30-08-2024 ರವರೆಗೆ ಮಧ್ಯದ ಅವಧಿಯಲ್ಲಿ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ದಿನಾಂಕ 30-08-2024 ರಿಂದ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಪಕ್ಷೇತರರಾಗಿ ಗೆದ್ದುಬಂದ ಬಿ.ರೇಖಾ ಅಧ್ಯಕ್ಷರಾಗಿ, ಸಿದ್ದಯ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ದಿನಾಂಕ 06-11-2025ಕ್ಕೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು, ಅಲ್ಲಿಂದ ಮತ್ತೇ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಘನ ನ್ಯಾಯಾಲಯವು ಈ ಪ್ರಕರಣವನ್ನು ಸುದೀರ್ಘವಾಗಿ ಆಲಿಸಿ, ದಿನಾಂಕ 12-12-2025 ರಂದು ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ.
ಆಡಳಿತಾಧಿಕಾರಿಗಳಾಗಿ ಕೊಟ್ಟೂರು ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಜಿ.ಕೆ. ಅಮರೇಶ್, ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗಳಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಸದಸ್ಯರ ಅಧಿಕಾರಾವಧಿ 5 ವರ್ಷಗಳಿಗಷ್ಟೇ ಸೀಮಿತವಿದ್ದರೂ, ಚುನಾವಣೆ ನಡೆದು ಏಳು ವರ್ಷಗಳು ಕಳೆದು ಎಂಟು ವರ್ಷಗಳ ಹೊಸ್ತಿಲಿನಲ್ಲಿದ್ದರೂ ಇನ್ನೂ ಕೊಟ್ಟೂರಿಗೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಗದೇ ಇರುವುದು ಸೋಜಿಗದ ವಿಷಯವಾಗಿದೆ.
