ವರದಿ : ಶಿವರಾಜ್ ಕನ್ನಡಿಗ
ಕೊಟ್ಟೂರು : ಸಾಮಾಜಿಕ ಕಳಕಳಿಯಿಂದ ಕೂಡಿರಬೇಕಿದ್ದ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಉದ್ಯಮಗಳಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ರಾಜದೇಶೀಕೇಂದ್ರ ಭಗವತ್ಪಾದ ಮಹಾಸ್ವಾಮಿಗಳು ಹೇಳಿದರು.
ಕೊಟ್ಟೂರಿನ ಪಟ್ಟಣದ ಶ್ರೀ ರೇಣುಕ ಸಭಾಂಗಣದಲ್ಲಿ ನಡೆದ ಪತ್ರಿಕಾ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ದಾವಣಗೆರೆ, ವಿಜಯನಗರ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಏಕಕಾಲಕ್ಕೆ ಪ್ರಕಟವಾಗುವ ಕಲ್ಯಾಣ ಸಾಕ್ಷಿ
ದಿನ ಪತ್ರಿಕೆ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಬುಧವಾರ ಮಾತನಾಡಿದರು.
ಕೈ ಬರಹ ಮೂಲಕ ಆರಂಭವಾದ ಪತ್ರಿಕೆ ಇಂದು ಅತ್ಯುನ್ನತ ಮುದ್ರಣದೊಂದಿಗೆ ಸಾಕಷ್ಟು ಪ್ರಸಾರ ಹೊಂದಿದೆ. ಅದರಂತೆ ಅನೇಕ ಟಿವಿ ಸಂಸ್ಥೆಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಮಂಗಳೂರು ಪತ್ರಿಕೆ ಮೊದಲ ದಿನ ಪತ್ರಿಕೆಯಾಗಿ ಹೊರ ಹೊಮ್ಮುವ ಮೂಲಕ ಅನೇಕ ಪತ್ರಿಕೆಗಳು ಹೊರ ಬರಲು ಸ್ಪೂರ್ತಿಯಾಗಿತ್ತು. ಪತ್ರಿಕೆಗಳನ್ನು ನಿರ್ವಹಿಸುವುದು ಕಷ್ಟಕರ ಕೆಲಸವಾಗಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಪತ್ರಿಕೆಗಳು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಿದ್ದವು. ಆದರೆ ಬದಲಾದ ಕಾಲಘಟ್ಟದಲ್ಲಿ ದಿನ ಪತ್ರಿಕೆಗಳು, ಟಿವಿ ಮಾಧ್ಯಮ ಸಾಮಾಜಿಕ ಕಾಳಜಿಯಿಂದ ದೂರ ಉಳಿಯುವಂತಾಗಬಾರದು. ಕೊಟ್ಟೂರಿನ ಯುವಕ ತಳಮಟ್ಟದ ಕುಂಚಿ ಕೊರವರ ಸಮುದಾಯದ ಕೆ.ಕೊಟ್ರೇಶ್, ದಿನ ಪತ್ರಿಕೆ ನಡೆಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ, ಪತ್ರಿಕೆ ಹಾಗೂ ಅವರ ಜವಾಬ್ದಾರಿ ಮಹತ್ತರವಾಗಿದ್ದು, ಪತ್ರಿಕೆ ಯಶಸ್ಸು ಕಾಣುವಂತೆ ಪ್ರಕಟವಾಗಲಿ ಎಂದರು.
ಪತ್ರಿಕೆ ಬಿಡುಗಡೆ ಮಾಡಿದ ಕಲಾ ಕೇಂದ್ರ ಅಧ್ಯಕ್ಷ ಎಂಎಂ
ಜೆ ಸತ್ಯಪ್ರಕಾಶ ಮಾತನಾಡಿ, ಇಂದಿನ ದಿನಗಳಲ್ಲಿ ಪತ್ರಿಕೆಗಳ ಮುದ್ರಣ, ಪ್ರಸರಣ ಕಷ್ಟಕರ ಕೆಲಸವಾಗಿದೆ. ಅನೇಕ ಪತ್ರಿಕೆಗಳು ಆರ್ಥಿಕ ಸಂಕಷ್ಟದಿಂದ ಮುಚ್ಚಿರುವ ಉದಾರಹರಣಗಳಿವೆ. ಮದ್ಯಮ ಪಟ್ಟಣವಾಗಿರುವ ಕೊಟ್ಟೂರಿನಲ್ಲಿ ಹೊಸ ದಿನ ಪತ್ರಿಕೆ ಹೊರ ಬರುತ್ತಿರುವುದು ಹೆಮ್ಮೆಯ ಸಂಗತಿ. ಪತ್ರಕರ್ತ ಕೆ.ಕೊಟ್ರೇಶ ಸಂಪಾದಕತ್ವದಲ್ಲಿ ಕಲ್ಯಾಣ ಸಾಕ್ಷಿ ಪತ್ರಿಕೆ ಉತ್ತಮ ಹೆಸರು ಹೊಂದಲಿ ಎಂದರು.
ಕಲ್ಯಾಣ ಸಾಕ್ಷಿ ದಿನ ಪತ್ರಿಕೆ ಪ್ರತಿಯೊಬ್ಬ ವಿದ್ಯಾರ್ಥಿಯು ಓದುವಲ್ಲಿ ಪ್ರಮುಖ ಪಾತ್ರ ವಹಿಸಲಿ
ಮತ್ತು ಮಹಿಳೆಯರಿಗೆ ಮನೆ ಮಾತಾಗುವಂತೆ
ಪತ್ರಿಕೆ ಬೆಳೆಯಲಿ ಈ ದಿನಮಾನಗಳಲ್ಲಿ ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ ಇಂತಹ ಕಷ್ಟಕರ ಕೆಲಸಕ್ಕೆ ನಮ್ಮೆಲ್ಲರ ಸಹಕಾರ ನೀಡುತ್ತೇವೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಅವರು ಮಾತನಾಡಿದರು
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ.
ದಾರುಕೇಶ್ ಮಾತನಾಡಿ ಪತ್ರಿಕೆಗಳ ಮುದ್ರಣ, ಪ್ರಸರಣ ಸುಲಭವಲ್ಲ ಅನೇಕ ಪತ್ರಿಕೆಗಳು ಆರ್ಥಿಕ ಸಂಕಷ್ಟದಿಂದ ಮುಚ್ಚು ಹೋಗಿವೆ ಅದರೆ ಕೆ.ಕೊಟ್ರೇಶ ಸಂಪಾದಕತ್ವದಲ್ಲಿ ಉತ್ತಮವಾಗಿ ಮುನ್ನಡೆಸಲಿ ಪತ್ರಿಕೆಯಲ್ಲಿ ಯಶಸ್ಸು ಕಾಣುವಂತೆ ಆಗಲಿ ಎಂದು ಹಾರೈಸಿದರು
ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪತ್ರಿಕೆ, ವರದಿಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪರ್ತಕರ್ತನು ಅಷ್ಟೇ ಜಾಗೃತಿ ಹಾಗೂ ಜವಾಬ್ದಾರಿಯಿಂದ ಪತ್ರಿಕೆ ನಡೆಸಬೇಕು ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಅಂಗಡಿ ಪಂಪಾಪತಿ, ಕಾಂಗ್ರೆಸ್ ಮುಖಂಡ ತಿಪ್ಪೇಸ್ವಾಮಿ, ಪತ್ರಕರ್ತ ಉಜ್ಜಯಿನಿ ರುದ್ರಪ್ಪ ಮಾತನಾಡಿದರು. ಪತ್ರಿಕೆ ಸಂಪಾದಕ ಕೆ.ಕೊಟ್ರೇಶ್ ಪ್ರಾಸ್ತಾವಿಕ ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಡಿಕೆ ಮಂಜುನಾಥ, ಸಾಹಿತಿ ವಿರುಪಾಕ್ಷಪ್ಪ ಪಂಡಿತ್, ವಕೀಲ ವೀರೇಂದ್ರಗೌಡ ಪಾಟೀಲ್, ನಿರಂಜನಯ್ಯ ಸ್ವಾಮಿ, ಕಾಕುಬಾಳು ಪ್ರಕಾಶ, ವಿರುಪಾಕ್ಷಪ್ಪ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭರಮಣ್ಣ, ದಲಿತ ಸಂಘಟನೆ ಮುಖಂಡರಾದ ಬಿ.ದುರಗೇಶ್, ತಗ್ಗಿನಕೇರಿ ಕೊಟ್ರೇಶ್, ಟಿ.ಹನುಮಂತಪ್ಪ, ಚಂದ್ರಶೇಖರ, ಮಂಜುನಾಥ ಇತರರು ಇದ್ದರು. ಉಪನ್ಯಾಸಕ ಮಲ್ಲಿಕಾರ್ಜುನ ನಿರ್ವಹಿಸಿದರು.
