Thursday, February 5, 2026
HomeKotturu" ಜನರ ಹಕ್ಕು ಮತ್ತು ರಾಜ್ಯಗಳ ಅಧಿಕಾರ ಕಸಿದುಕೊಳ್ಳುವ ಹುನ್ನಾರ :- ಐ.ಎಂ.ದಾರುಕೇಶ್"

” ಜನರ ಹಕ್ಕು ಮತ್ತು ರಾಜ್ಯಗಳ ಅಧಿಕಾರ ಕಸಿದುಕೊಳ್ಳುವ ಹುನ್ನಾರ :- ಐ.ಎಂ.ದಾರುಕೇಶ್”

ವರದಿ:ಶಿವರಾಜ್ ಕನ್ನಡಿಗ ಕೊಟ್ಟೂರು
ಕೊಟ್ಟೂರು: ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರು ಬದಲಿಸುವುದರ ಜೊತೆಯಲ್ಲಿ ಜನರ ಹಕ್ಕು ಮತ್ತು ರಾಜ್ಯಗಳ ಅಧಿಕಾರ ಕಸಿದುಕೊಳ್ಳುವ ಹುನ್ನಾರವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ .ಐ.ಎಂ.ದಾರುಕೇಶ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ನಡೆದ ನರೇಗಾ ಬಚಾವೊ ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾತನಾಡಿ ಹೊಸ ಕಾಯ್ದೆಯ ಮೂಲಕ ನರೇಗಾ ಯೋಜನೆಯನ್ನು ಜನ ವಿರೋಧಿಯಾಗಿ ರೂಪಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಕಾಯ್ದೆ ಮರು ಜಾರಿಯಾಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದರು.

ಮುಖಂಡ ವೆಂಕಟೇಶ್ ತಿಪ್ಪೇಸ್ವಾಮಿ ಮಾತನಾಡಿ ವಿ ಬಿ ಜಿ ರಾಮ್ ಜಿ ಯೋಜನೆಯು ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಅಡಿಕೆ ಮಂಜುನಾಥ್, ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ಮುಖಂಡರಾದ ಬದ್ಧಿ ಮರಿಸ್ವಾಮಿ,ತೂಲಹಳ್ಳಿ ಶಾಂತನಗೌಡ, ಕಂದಗಲ್ ಪರಶುರಾಮ ಇತರರು ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ಹರಾಳು ನಂಜಪ್ಪ , ನಿಂಬಳಗೆರೆ ಕಲ್ಲೇಶಣ್ಣ, ಗೂಳಿ ಮಲ್ಲಿಕಾರ್ಜುನ್, ಪಿ.ಪ್ರಭುದೇವ್, ಎಂ ಶ್ರೀನಿವಾಸ್ ,ಚಿರಬಿ ಕೊಟ್ರೇಶ್, ಅನಿಲ್ ಹೊಸಮನೆ, ಅಚೆಮನೆ ಮಲ್ಲಿಕಾರ್ಜುನ್, ಇಂಜಿನಿಯರ್ ಅಶೋಕ್, ಎಂ.ರಾಜೀವ್, ಕೆ.ಎಂ.ನಾಗರಾಜ್ ಮುಂತಾದವರು ಪಾಲ್ಗೊಂಡಿದ್ದರು.

ಕೊಟ್ಟೂರೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಮುಖ್ಯ ರಸ್ತೆಗಳ ಮೂಲಕ ಸಾಗಿ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಜಿ.ಕೆ.ಅಮರೀಶ್ ಇವರಿಗೆ ಮನವಿ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments