Monday, February 9, 2026
HomeKotturu"ಪರಿಸರ ಮಾಲಿನ್ಯ ನಿಯಂತ್ರಣ,ಕಸದಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ :-ಎ.ನಸರುಲ್ಲಾ"

“ಪರಿಸರ ಮಾಲಿನ್ಯ ನಿಯಂತ್ರಣ,ಕಸದಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ :-ಎ.ನಸರುಲ್ಲಾ”

ವರದಿ:ಶಿವರಾಜ್ ಕನ್ನಡಿಗ

ಕೊಟ್ಟೂರು : ತಾಲೂಕಿನ ತಿಮ್ಮಲಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರು ತಮ್ಮ ಶಾಲೆ ಮಕ್ಕಳೊಂದಿಗೆ ಕೊಟ್ಟೂರು ಪಟ್ಟಣದ ಘನ ತ್ಯಾಜ್ಯ ವಸ್ತು ನಿರ್ವಹಣಾ ಘಟಕದ ನಿರ್ವಹಣೆಯ ಕುರಿತು ವೀಕ್ಷಣೆ ಮಾಡುವ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಿದ್ದರು, ಸದರಿ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಸದರಿ ಕಾರ್ಯಕ್ರಮದ ಕುರಿತು ಮುಖ್ಯಾಧಿಕಾರಿಗಳಾದ ಎ.ನಸರುಲ್ಲಾ ಮಾತನಾಡಿ ಕೊಟ್ಟೂರು ಪಟ್ಟಣದ ವ್ಯಾಪ್ತಿಯಲ್ಲಿ ಶೇಖರಣೆಯಾಗುವ ಕಸವನ್ನು ಎಸ್.ಡಬ್ಲ್ಯೂ.ಎಂ ಘಟಕದಲ್ಲಿ ಹಸಿ ಕಸ, ಒಣಕಸ, ಹಾಕಿಕಾರಕ ಕಸವವನ್ನು ವಿಂಗಡಣೆ ಮಾಡಲಾಗುತ್ತಿದ್ದು, ಹಸಿ ಕಸದಿಂದ ಎರೆಹುಳು ಗೊಬ್ಬರವನ್ನು ತಯಾರಿಸಲಾಗುತ್ತಿರುತ್ತದೆ, ಮನೆ ಮನೆ ಗಳಲ್ಲಿ ಶೇಖರಣೆಯಾಗುವ ಕಸವನ್ನು ಮೂಲದಲ್ಲಿಯೇ ವಿಂಗಡಣೆ ಮಾಡಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ನೀಡಲು ತಿಳಿಸಿದರು ಹಾಗೂ ಸರ್ಕಾರಿ ಆದೇಶಗಳು, ಎನ್.ಜಿ.ಟಿ ನಿಯಮಾವಳಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರ ಆದೇಶದ ಬಗ್ಗೆ ಮತ್ತು ಕಸದಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಿ ತಾವುಗಳು ಸಹ ತಮ್ಮ ಮನೆಗಳಲ್ಲಿ, ಗ್ರಾಮ , ಪಟ್ಟಣಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ತಿಳಿಸಿದರು, ಕಸ ವಿಲೇವಾರಿ ಘಟಕ ವೀಕ್ಷಿಸಿ ಮಾಹಿತಿ ಪಡೆದು ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಮುಖ್ಯಾಧಿಕಾರಿಗಳಿಗೆ, ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್.ಕೆ.ಗೀತಾ, ಕಿರಿಯ ಆರೋಗ್ಯ ನೀಕ್ಷಕರು, ಪರುಸಪ್ಪ, ಹೇಮನಗೌಡ, ಮೈಲಾರಿ, ಸಿಬ್ಬಂದಿ ವರ್ಗ ಹಾಗೂ ಶಾಲೆ ಮುಖ್ಯಗುರುಗಳಾದ ಬಿ ಸಣ್ಣಲಿಂಗನಗೌಡ, ಸಹ ಶಿಕ್ಷಕರಾದ ಎ.ಮಹೇಂದ್ರ, ಸಂತೋಷ , ಸವಿತ, ಕವಿತ ಮತ್ತು ಸುಮ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments