ವರದಿ ಶಿವರಾಜ್ ಕನ್ನಡಿಗ
ಕೊಟ್ಟೂರು : ಪಟ್ಟಣದ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಾಗರಿಕರು ಜೀವ ಭಯದಲ್ಲಿ ರಸ್ತೆಗೆ ಇಳಿಯುವಂತಾಗಿದೆ. ಪಾಲಿಕೆಯ ಪ್ರತಿ ಸಭೆಯಲ್ಲೂ ನಾಯಿಗಳ ದಾಳಿ ಪ್ರಸ್ತಾಪವಾದರೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ.
ಕೊಟ್ಟೂರು ಪಟ್ಟಣದ ವಿವಿಧ ಕಡೆ…!! , ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ನಾಯಿಗಳ ಹಾವಳಿ . ರಸ್ತೆ ಬದಿಯಲ್ಲಿ ಆಡುವ ಮಕ್ಕಳಿಗೆ, ಮನೆ– ಮನೆಗೆ ಪೇಪರ್ ಹಾಕುವವರಿಗೆ, ಬೈಕ್ ಸವಾರರಿಗೆ, ಶಾಲೆಯಿಂದ ಮನೆಗೆ ಹೊರಟ ಮಕ್ಕಳಿಗೆ ನಾಯಿಗಳ ಹಿಂಡು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಪ್ರಸಂಗಗಳು ಸಾಕಷ್ಟಿವೆ.
ಪ್ರತಿ ವರ್ಷ ಬೀದಿ ನಾಯಿ ಕಡಿತದಿಂದ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಇದನ್ನು ನಿಯಂತ್ರಣಕ್ಕೆ ತಂದು ಪರಿಹಾರ ಕೊಡಬೇಕಾದ ಪಟ್ರಮಸಿ ಮುಖಗಳು ಅಧಿಕಾರಿಗಳು ಜಾಣ ಮೌನವಹಿಸಿದ್ದಾರೆ. ಹಾದಿ ಬೀದಿಯಲ್ಲಿ ನಾಯಿಗಳ ಕಡಿತಕ್ಕೆ ತುತ್ತಾದ ಮಕ್ಕಳು, ವೃದ್ಧರು ಯಾತನೆ ಅನುಭವಿಸುತ್ತಿದ್ದಾರೆ.
