Friday, April 17, 2026
HomeKotturuವೀರಭದ್ರೇಶ್ವರ ಸ್ವಾಮಿ ಹಾಗೂ ಜಗದ್ಗುರು ರೇಣುಕ ಭಗತ್ಪದರ ಜೋಡಿ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ವೀರಭದ್ರೇಶ್ವರ ಸ್ವಾಮಿ ಹಾಗೂ ಜಗದ್ಗುರು ರೇಣುಕ ಭಗತ್ಪದರ ಜೋಡಿ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು.
ಪಟ್ಟಣದ ಕೋಟೆ ಪ್ರದೇಶದ ಪೂರ್ವಿ ವೀರಭದ್ರೇಶ್ವರ ಸ್ವಾಮಿ ಹಾಗೂ ಜಗದ್ಗುರು ರೇಣುಕ ಭಗವತ್ಪಾದರ ಜೋಡಿ ರಥೋತ್ಸವವು ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದೊಂದಿಗೆ ನೆರವೇರಿತು.

ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಟವನ್ನ 1.90 ಲಕ್ಷ ರೂ.ಗೆ ಹಳ್ಳಿಗಂಗಮ್ಮ ಸ್ವೀಕರಿಸಿದರು.
ಪಟಾಕ್ಷಿ ಸವಾಲು ಮುಗಿಯುತ್ತಿದ್ದಂತೆ ಶ್ರೀ ಮನ್ ನಿರಂಜನ ಪ್ರಣವಸ್ವರೂಪಿ ಆರ್.ಎಂ ಶಿವಪ್ರಕಾಶ್ ಕೊಟ್ಟೂರು ದೇವರು ಮಹಲ್ ಇವರು ಜೋಡಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ನೆರದ ಭಕ್ತರೆಲ್ಲರು ಜಯ ಘೋಷ ಕೂಗಿ ಬಾಳೆ ಹಣ್ಣು,ಧವನ ಹಾಗೂ ಉತ್ತುತ್ತಿಗಳನ್ನ ಎಸೆದು ಭಕ್ತಿ ಸಮರ್ಪಿಸಿದರು.

ರಥೋತ್ಸವದ ಮಾರ್ಗದುದ್ದಕ್ಕು ಮಹಿಳೆಯರು ತಮ್ಮ ತಮ್ಮ ಮನೆ ಮುಂಭಾಗದಲ್ಲಿ ಆರತಿ ಬೆಳಗಿ ಹೂವು,ಹಣ್ಣು ಸಮರ್ಪಿಸಿದರು. ರಥೋತ್ಸವವು ಸಮಳ,ನಂದಿ ಧ್ವಜ ಕುಣಿತದ ಮೆರವಣಿಗೆಯೊಂದಿಗೆ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಗಾಂಧಿ ಸರ್ಕಲ್ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ದೇವಸ್ಥಾನ ತಲುಪಿತು.

ಈ ವೇಳೆ ದೈವಸ್ಥಾರಾದ ಆರ್.ಎಂ ಅಜ್ಯಯ್ಯ, ಕನ್ನಹಳ್ಳಿ ಮಂಜುನಾಥ, ಕೆ.ಶಿವಕುಮಾರ ಗೌಡ, ಆರ್. ಎಂ. ಗುರುಬಸವರಾಜ್, ಕನ್ನಹಳ್ಳಿ. ರಾಜಣ್ಣ ಗೌಡ, ಕನ್ನಹಳ್ಳಿ. ಸೋಮಶೇಖರ ಗೌಡ, ಗಡ್ಡಿ ವೀರಭದ್ರಪ್ಪ, ಗೌಡ್ರಸಿದ್ದಣ್ಣ, ಪಿ.ಎಂ ಈಶ್ವರಯ್ಯ, ಸಕ್ರಿಗೌಡ ಮಂಜುನಾಥ, ಕೋಡಹಳ್ಳಿ ಪ್ರಕಾಶ, ಕಡ್ಲಿ ಬಸವರಾಜ್, ಕೆ.ಎಸ್.ನಾಗರಾಜ್ ಗೌಡ, ಅಡಕಿ ಮಂಜುನಾಥ, ಟಿ.ಎಂ ಗಿರೀಶ, ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments