Tuesday, March 17, 2026
HomeDistrictsBallariಗ್ಯಾಸ್ ಸಿಲಿಂಡರ್ ಬುಕಿಂಗ್‌ನಲ್ಲಿ ತಾಂತ್ರಿಕ ವ್ಯತ್ಯಯ; ಆತಂಕ ಪಡುವ ಅಗತ್ಯವಿಲ್ಲ- ಡಿಸಿ ನಾಗೇಂದ್ರ ಪ್ರಸಾದ್.ಕೆ

ಗ್ಯಾಸ್ ಸಿಲಿಂಡರ್ ಬುಕಿಂಗ್‌ನಲ್ಲಿ ತಾಂತ್ರಿಕ ವ್ಯತ್ಯಯ; ಆತಂಕ ಪಡುವ ಅಗತ್ಯವಿಲ್ಲ- ಡಿಸಿ ನಾಗೇಂದ್ರ ಪ್ರಸಾದ್.ಕೆ

ಬಳ್ಳಾರಿ,ಮಾ.13:ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಬೆಲೆ ಏರಿಳಿತ ಹಾಗೂ ಎಲ್.ಪಿ.ಜಿ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಅಡುಗೆ ಅನಿಲ ವಿತರಣಾ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಿವೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.

ಮುಖ್ಯವಾಗಿ ತಾಂತ್ರಿಕ ಕಾರಣಗಳಿಂದಾಗಿ ಗ್ಯಾಸ್ ಬುಕಿಂಗ್ ಮಾಡುವ ಸಮಯದಲ್ಲಿ ‘Booking Crash’ ಸಮಸ್ಯೆ ಎದುರಾಗುತ್ತಿದೆ. ತಾಂತ್ರಿಕ ದೋಷದಿಂದಾಗಿ ಗ್ಯಾಸ್ ಬುಕಿಂಗ್ ತಕ್ಷಣಕ್ಕೆ ಸಾಧ್ಯವಾಗದಿದ್ದರೂ, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಸರಬರಾಜಿನ ಲಭ್ಯತೆಗೆ ಅನುಗುಣವಾಗಿ ಸಿಲಿಂಡರ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಎರಡು ಸಿಲಿಂಡ‌ರ್ ಹೊಂದಿರುವ ಗ್ರಾಹಕರು ಯಾವುದೇ ಆತಂಕ ಒಳಗಾಗಬಾರದು ಹಾಗೂ ಏಕ ಸಿಲಿಂಡರ್ ಇದ್ದವರಿಗೆ ಆದ್ಯತೆ ಮೇಲೆ ಸಿಲಿಂಡರ್ ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ ಹಾಗೂ ಎಂದಿನಂತೆ ಹೊಮ್‌ಡೆಲಿವರಿ ಮೂಲಕ ಮನೆಗಳಿಗೆ ಸಿಲಿಂಡರ್ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗೃಹ ಬಳಕೆಯ ಸಿಲಿಂಡರ್‌ಗಳನ್ನು ಒಮ್ಮೆ ಬುಕ್ ಮಾಡಿದ ನಂತರ, ಮುಂದಿನ ಬುಕಿಂಗ್ ಮಾಡಲು ಕನಿಷ್ಠ 25 ದಿನಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಹಾಗೂ ಗ್ರಾಹಕ ಸಂಘ ಸಂಸ್ಥೆಗಳು ಅಡುಗೆ ಅನಿಲವನ್ನು ಮಿತವಾಗಿ ಬಳಸಬೇಕು. ಹೋಟೆಲ್ ಹಾಗೂ ಇನ್ನಿತರ ಕೈಗಾರಿಕೆಗಳಲ್ಲಿ ಜೈವಿಕ ಇಂಧನ, ಸೋಲಾರ್ ಅಥವಾ ವಿದ್ಯುತ್ ಶಕ್ತಿಯನ್ನು ಪರ್ಯಾಯವಾಗಿ ಬಳಸಲು ಉತ್ತೇಜಿಸಲಾಗುತ್ತಿದೆ ಎಂದಿದ್ದಾರೆ.

ದೂರು ನೀಡಲು ಸಹಾಯವಾಣಿ:
ಗ್ಯಾಸ್ ವಿತರಣೆಯಲ್ಲಿ ಅಕ್ರಮ ಎಸಗುವುದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಅಥವಾ ಅನಗತ್ಯ ವಿಳಂಬ ಮಾಡುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಈ ಕೆಳಗಿನ ಸಂಖ್ಯೆಗಳಿಗೆ ದೂರು ನೀಡಬಹುದು.
ತುರ್ತು ಸಂಖ್ಯೆ: 112
ಸಹಾಯವಾಣಿ: 1077
ದೂರವಾಣಿ ಸಂಖ್ಯೆ: 08392277100

ಸಿಲಿಂಡರ್‌ಗಳ ಅಕ್ರಮ ಸಂಗ್ರಹಣೆ, ಕಾಳಸಂತೆಯಲ್ಲಿ ಮಾರಾಟ ಅಥವಾ ಸಾಗಾಣಿಕೆ ಮಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments