ವರದಿ: ಜಿಎಂ ಬಸಯ್ಯ—
ಮುದ್ಟಟನೂರು ಗ್ರಾಪಂನ ಸಮೀಪದ ನಾಗರಾಜ್ ಕ್ಯಾಂಪ್ ನಲ್ಲಿ ಶುಕ್ರವಾರ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ ಸಮಿತಿ ಶ್ರೀರಾಮ ನವಮಿ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸೀತಾರಾಮ ಕಲ್ಯಾಣೋತ್ಸವ ಸಮಾರಂಭ ಅಸಂಖ್ಯಾತ ಭಕ್ತರ ಶ್ರದ್ಧಾ, ಭಕ್ತಿಯ ನಡುವೆ ಅದ್ದೂರಿಯಾಗಿ ಜರುಗಿತು.
ಈ ವೇಳೆ ದೇವಾಲಯದ ಶ್ರೀ ರಾಮ, ಸೀತಾಮಾತೆ, ಲಕ್ಷ್ಮಣ ಮೂರ್ತಿಗೆ ಮಹಾಭಿಷೇಕ, ತುಳಸಿ.ಪುಷ್ಚ ಅರ್ಚನೆ ನೆರವೇರಿಸಿ ನಂತರದಲ್ಲಿ ಸೀತಾ, ರಾಮ, ಲಕ್ಷ್ಮಣ ಮತ್ತು ಹನುಮಂತ ಮೂರ್ತಿಯ ಮಂಟಪ ರಚಿಸಿ ಹೂಹಾರಗಳಿಂದ ಅಲಂಕಾರ ಮಾಡಿ ಪಂಡಿತ ಜಗನ್ನಾಥ ಶಾಸ್ತ್ರೀ ಕಲ್ಗುಡಿ ವೈದಿಕತ್ವದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ದೇವಸ್ಥಾನ ಸಂಚಾಲಕರಾದ ಕೃಷ್ಣರಾಜ್, ರಾಮರಾಜು, ವೆಂಕಟರಾಜು, ರಾಮಕೃಷ್ಣರಾಜು ಅರ್ಚಕರಾದ ವೀರಾಪುರ ಬಸವರಾಜ ಸ್ವಾಮಿ ಸಮ್ಮುಖದಲ್ಲಿ ಸ್ಥಳೀಯ ಮತ್ತು ಸುತ್ತಲಿನ ಅಪಾರ ಭಕ್ತರು ನೈವೇದ್ಯ ಸಲ್ಲಿಸಿ, ಹೂವು, ಹಣ್ಣು. ಅಕ್ಷತೆ ಅರ್ಪಿಸಿ ‘ಸೀತಾರಾಮ ಕಲ್ಯಾಣೋತ್ಸವ’ ನೆರವೇರಿಸಿದರು.
ಈ ಸೀತರಾಮ ಕಲ್ಯಾಣ ವೆಂಕಟೇಶ್ ದೀಪಿಕಾ ದಂಪತಿಗಳು ಹಾಗೂ ಕುಟುಂಬ ಪರಿವಾರದವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರಿಂದ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಸೀತಾರಾಮರ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ.
■ಪ್ರತಿವರ್ಷ ಶ್ರೀರಾಮ ನವಮಿ ದಿನ ಸೀತಾರಾಮ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು ಪಾಲ್ಗೊಳ್ಳುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
—-ಜಾನಕಿ ರಾಮರಾಜು
ದೇವಸ್ಥಾನದ ಸಂಚಾಲಕ
ನಾಗರಾಜ್ ಕ್ಯಾಂಪ್
