ವರದಿ:ಜಿ ಎಂ ಬಸಯ್ಯ
ಕುರುಗೋಡು ರಂಗಭೂಮಿಯ ಬಳ್ಳಾರಿಯ ರಾಘವಾಚಾರಿ ಮತ್ತು ಲಲಿತಮ್ಮ ರವರ ಕೊಡುಗೆ ಅಪಾರವಾದದು, ಅದರಲ್ಲೂ ಸುಭದ್ರಮ ಮನ್ಸೂರು ಅವರ ಗರಡಿಯಲ್ಲಿ ಬೆಳೆದು ಅವರೊಟ್ಟಿಗೆ ಪಾತ್ರ ಮಾಡಿದ್ದು ನನ್ನ ಜೀವನದ ಶ್ರೇಷ್ಠತೆ ಎಂದು ರಂಗಭೂಮಿ ಹಿರಿಯ ಕಲಾವಿದೆ, ವಿಧಾನ ಪರಿಷತ್ ಸದಸ್ಯೆ ಖ್ಯಾತ ನಟಿ ಡಾ. ಉಮಾಶ್ರೀ ತಿಳಿಸಿದರು.

ಅವರು ಅನ್ನಪೂರ್ಣ ಪ್ರಕಾಶನ ವತಿಯಿಂದ ಸಮೀಪದ ಶಿರಿಗೇರಿ ಗ್ರಾಮದಲ್ಲಿ ಶ್ರೀ ನಾಗನಾಥೇಶ್ವರ ಮತ್ತು ಸಿರಿಯಮ್ಮ ದೇವಿ ರಥೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಶ್ರೀ ನಾಗನಾಥೇಶ್ವರ ದೇವಸ್ಥಾನ ಮುಂಭಾಗದ ಆವರಣದಲ್ಲಿ ಸಿನಿಮಾ ಮತ್ತು ರಂಗಭೂಮಿ ಕ್ಷೇತ್ರದಿಂದ ಶಂಕರ್ ಸಿಂಗ್ ಮತ್ತು ಸುಭದ್ರಮ್ಮ ಮನ್ಸೂರ್ ರವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಡಾ ಎಸ್ ವಿ ರಾಜೇಂದ್ರ ಸಿಂಗ್ ಬಾಬು ರವರು ಕೌಟುಂಬಿಕ, ಹಾಸ್ಯ, ಪ್ರೇಮಕಾವ್ಯ ಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಿರ್ದೇಶನ ಮಾಡಿದ ಜನರ ಮನಸ್ಸನ್ನು ಗೆದ್ದಿದ್ದಾರೆ. ನವರ ಜೊತೆಗೆ ಕೆಲಸ ನಿರ್ವಹಿಸಿದ್ದು ನಾನೇ ಧನ್ಯಳು ಎಂದರು.
ಪದ್ಮಶ್ರೀ ಪುರಸ್ಕೃತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ರವರು ನಿರ್ದೇಶನ ಮಾಡಿದ ಸಿನಿಮಾಗಲೆಲ್ಲವು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾವೆ. ಅವರು ಮುಟ್ಟಿದ್ದೆಲ್ಲ ಚಿನ್ನ. ಅವರ ನಿರ್ದೇಶನದ ಗುಲಾಬಿ ಟಾಕೀಸ್ ಚಿತ್ರದಲ್ಲಿ ನಟಿಸಿ ಭಾರತದ ಅತ್ಯುತ್ತಮ ನಟಿ ಪಡೆದುಕೊಂಡೆ ಎಂದು ನೆನಪಿಸಿಕೊಂಡರು.

ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮಾತನಾಡಿ ಸಿನಿಮಾ ಕ್ಷೇತ್ರಕ್ಕೆ ನಮ್ಮ ತಂದೆ ಶಂಕರ್ ಸಿಂಗ್ ರವರು ಪ್ರಾರಂಭದಲ್ಲಿ ಮಹಾತ್ಮ ಟೂರಿಂಗ್ ಟಾಕೀಸ್ ಮತ್ತು ನೆಹರು ಟೂರಿಂಗ್ ಟಾಕೀಸ್ ನ್ನು ಸಣ್ಣ ಹಳ್ಳಿಯಿಂದ ಪ್ರಾರಂಭಿಸಿ ನಮ್ಮ ಕುಟುಂಬವು ಸಿನಿಮಾ ಕ್ಷೇತ್ರಕ್ಕೆ ಮೀಸಲು ಇಟ್ಟಿದ್ದೇವೆ. ಸ್ವತಂತ್ರ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಸಿದ್ದರಾಮಯ್ಯನವರ ಸರ್ಕಾರವು ಚಿತ್ರನಗರಿ ಸ್ಥಾಪಿಸಲು ಮುಂದಾಗಿದ್ದು ಸಂತೋಷದ ವಿಷಯ ಎಂದರು. ಪ್ರಶಸ್ತಿಗಾಗಿ ನಿರೀಕ್ಷಿಸುವುದಿಲ್ಲ ಕನ್ನಡ ಸಿನಿಮಾಗಳನ್ನು ನೋಡಿ ನೀವು ಪ್ರೋತ್ಸಾಹಿಸುತಿರಿ ಅದೇ ನಮಗೆ ಪ್ರಶಸ್ತಿ.
ಶಂಕರ್ ಸಿಂಗ್ ಪ್ರಶಸ್ತಿ ಪಡೆದ, ಪದ್ಮಶ್ರೀ ಪುರಸ್ಕೃತರಾದ ಖ್ಯಾತ ನಿರ್ದೇಶಕರ ಗಿರೀಶ್ ಕಾಸರವಳ್ಳಿ ಮಾತನಾಡಿ ಶಂಕರ್ ಸಿಂಗ್ ರವರು ಚಿತ್ರೋದ್ಯಮದಲ್ಲಿ ಹೆಸರುವಾಸಿಯಾಗಿದ್ದು ನಾನು ಆ ಪ್ರಶಸ್ತಿಯನ್ನು ಸ್ವೀಕರಿಸಿದ್ದು ನನ್ನ ಹೆಮ್ಮೆ, ಕಥೆ ಆಧಾರಿತ ಮನಸ್ಸಿನ ಭಾವನೆಗಳನ ಚಲನಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತಿದ್ದವು. ಆದರೆ ಈಗಿನ ಚಿತ್ರಗಳು ಹಿಂಸೆ, ಕ್ರೌರ್ಯ ದಂತಹ ವಿಜೃಂಭಿಸುತ್ತೇವೆ. ಬಾಬು, ಪುಟ್ಟಣ್ಣ ರವರ ನಿರ್ದೇಶನ ದಂತಹ ಚಿತ್ರಗಳು ಮತ್ತೆ ಹೊರ ಹೊಮ್ಮಲಿ ಎಂದು ಆಶಿಸುತ್ತೇನೆ.
ಶಂಕರ್ ಸಿಂಗ್ ಪ್ರಶಸ್ತಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸುಭದ್ರಮ್ಮ ಮನ್ಸೂರ ಪ್ರಶಸ್ತಿ ನಟಿ ಡಾ. ಉಮಾಶ್ರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುಟ್ಟಣ್ಣ ಕಣಗಲ್ ಪ್ರಶಸ್ತಿ ವಿಜೇತರಾದ ಪಿ.ಎಚ್ ವಿಶ್ವನಾಥ್,ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊಳಗುಂದಿ ಲಕ್ಷ್ಮಿ ಕೆ ದೇವಣ್ಣ, ಅನ್ನಪೂರ್ಣ ಪ್ರಕಾಶಕ ಸಿರಿಗೇರಿ ಯರಿಸ್ವಾಮಿ, ಕಲಾವಿದ ಮಂಜುನಾಥ್ ಗೋವಿಂದವಾಡ, ಉಪನ್ಯಾಸಕ ಸಿ.ಎಂ ಚನ್ನಬಸಾಯಸ್ವಾಮಿ, ಕೆ.ಎಂ ದೇವರಾಜಯ್ಯ, ರಾಚೋಟಯ್ಯ ಸ್ವಾಮಿ, ಶಶಿಧರ್ ಇದ್ದರು.
29 ಪೊಟೋ 01 ಫೋಟೋ
ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್ ಪ್ರಶಸ್ತಿಯನ್ನು ಸ್ವೀಕರಿಸಿ ವಿಧಾನ ಪರಿಷತ್ ಸದಸ್ಯೆ ನಟಿ ಡಾ. ಉಮಾಶ್ರೀ ಮಾತನಾಡಿದರು. ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಡಾ. ರಾಜೇಂದ್ರ ಸಿಂಗ್ ಬಾಬು ಇದ್ದರು.
