ಸಂಡೂರು: ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಂಸ್ಕಾರ, ಜ್ಞಾನ,ಶಿಸ್ತು, ಸಮಯ ಪಾಲನೆ,ಸಂಪತ್ತನ್ನು ಪಡೆದು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಬೇಕೆಂದು ಶ್ರೀ ಶೈಲೇಶ್ವರ ವಿದ್ಯಾ ಕೇಂದ್ರದ ಆಡಳಿತಾಧಿಕಾರಿಗಳಾದ
ಕುಮಾರ್ ಎಸ್ ನಾನಾವಟೆ ತಿಳಿಸಿದರು.
ಪಟ್ಟಣದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಶ್ರೀಮತಿ ಲಕ್ಷ್ಮಿ ಎಸ್ ನಾನಾವಟೆ ಶಿಕ್ಷಣ
(ಬಿ. ಇಡಿ ) ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಂದ ಪ್ರಥಮ ವರ್ಷದ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡುತ್ತಾ..
ಸಮರ್ಥ ಶಿಕ್ಷಕರು ರಾಷ್ಟ್ರದ ಬುನಾದಿ, ನಿಜವಾದ ದೇಶ ರಕ್ಷಕರು ಅವರು ವಿದ್ಯಾರ್ಥಿಗಳಲ್ಲಿ ಜ್ಞಾನ ಶಿಸ್ತು ಮತ್ತು ಮೌಲ್ಯಗಳನ್ನು ಬಿತ್ತುವ ಮೂಲಕ ಸುಸಂಸ್ಕೃತ ಸಮಾಜವನ್ನು ನಿರ್ಮಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ,ನೈತಿಕತೆ,ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಸಮರ್ಥ ಗುರುಗಳು.
ಯುವ ಪೀಳಿಗೆಯನ್ನು ಭವಿಷ್ಯದ ಜವಾಬ್ದಾರಿಯುತ ನಾಗರೀಕರನ್ನಾಗಿ ರೂಪಿಸಿ ರಾಷ್ಟ್ರವನ್ನು ಪ್ರಗತಿ ಪಥ ಹಾಗೂ ರಕ್ಷಣೆಗೆ ತಯಾರು ಮಾಡುತ್ತಾರೆ. ಶಿಕ್ಷಕರ ಕೊಡುಗೆ ಅಪಾರವಾದದ್ದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ,ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಡಾ.ನಾಗಭೂಷಣ್ ಚರಂತಿಮಠ, ಸಹಾಯಕ ಪ್ರಾಧ್ಯಾಪಕರು
ಅವರು ಶಿಕ್ಷಣದ ಮೂಲಕ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಿ ದೇಶದ ಆಂತರಿಕ ಭದ್ರತೆಯನ್ನು ಶಿಕ್ಷಕರು ಬಲಪಡಿಸುವಲ್ಲಿ ಅವರ ಪಾತ್ರ ಬಹುದೊಡ್ಡದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ವಿಜಯಲಕ್ಷ್ಮಿ ಜಿ.ಎಂ. ನಿವೃತ್ತ ಪ್ರಾಚಾರ್ಯರು… ಟಿಎಂಎಇ ಶಿಕ್ಷಣ ಮಹಾವಿದ್ಯಾಲಯ,ಹರಪನಹಳ್ಳಿ. ಅವರು ತಾಯಿ ಮಡಿಲಿನಲ್ಲಿ ಹಸುಗೂಸು ಕಣ್ಣು ತೆರೆದರು ಒಳಗೊಂಡ ತೆರೆಯುವುದು ಗುರುವಿನ ಸಮಕ್ಷಮದಲ್ಲಿ ಒಂದು ಗಿಡಕ್ಕೆ ಪರಿಪೂರ್ಣವಾದ ಪೋಷಕಾಂಶಗಳನ್ನು ನೀಡಿದರೆ ಮಾತ್ರ ಆಗಿರೋ ಸಮೃದ್ಧವಾಗಿ ಬೆಳೆಯಲು ಸಾಧ್ಯ ನಿಸ್ವಾರ್ಥ ಮನಸ್ಸಿನಿಂದ ಎಲ್ಲರನ್ನು ತಮ್ಮ ಮಕ್ಕಳಂತೆ ಪಾಲನೆ ಮಾಡಿ ನೀತಿ ತತ್ವಗಳನ್ನು ಧಾರೆ ಎರೆಯುವರೇ ನಿಜವಾದ ಶಿಕ್ಷಕರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಬಿ.ಇಡಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ದೇವರಾಜ್ ಸಿಬ್ಬಂದಿ ವರ್ಗದವರು ಪ್ರಥಮ ಹಾಗೂ ದ್ವಿತೀಯ ಪ್ರಶಿಕ್ಷಣಾರ್ಥಿಗಳು ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾರ್ಯಕ್ರಮವನ್ನು ಪೂರ್ಣಿಮಾ.ಡಿ ಹಾಗೂ ಸಿಮ್ರಾನ್ ಎಸ್ ನಿರೂಪಿಸಿದರು. ಹುಲಿಗಮ್ಮ ಎಚ್ ಸ್ವಾಗತ ಕೋರಿದರು, ಕೊನೆಯಲ್ಲಿ ಶ್ರೀದೇವಿ ವಂದನಾರ್ಪಣೆ ಮಾಡಿದರು.
