Friday, April 3, 2026
HomeDistrictsBallariದಮ್ಮೂರು ಗ್ರಾಮದ ಜೆ.ಪುಷ್ಪನಾರಾಯಣರೆಡ್ಡಿ ಸಹಕಾರ ಸಂಘದ ನೂತನ ಉಪಾಧ್ಯಕ್ಷ ಅವಿರೋಧ ಆಯ್ಕೆ

ದಮ್ಮೂರು ಗ್ರಾಮದ ಜೆ.ಪುಷ್ಪನಾರಾಯಣರೆಡ್ಡಿ ಸಹಕಾರ ಸಂಘದ ನೂತನ ಉಪಾಧ್ಯಕ್ಷ ಅವಿರೋಧ ಆಯ್ಕೆ

ವರದಿ : ಜಿ ಎಂ ಬಸಯ್ಯ

ಕುರುಗೋಡು ತಾಲೂಕಿನ ದಮ್ಮೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಶಾಂತಿಯುತವಾಗಿ ಜರುಗಿತು. ಈ‌ ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಪುಷ್ಪನಾರಾಯಣರೆಡ್ಡಿ ಅವರು ನಾಮಪತ್ರ ಸಲ್ಲಿಸಿದರು. ಸಂಘದ ನಿರ್ದೆಶಕರು ಮತ್ತೋರ್ವ ನಾಮಪತ್ರ ಸಲ್ಲಿಸಲಿಲ್ಲ. ಕಾರಣ ಸಂಘದ ನೂತನ ಉಪಾಧ್ಯಕ್ಷ ಜೆ.ಪುಷ್ಪನಾರಾಯಣ ರೆಡ್ಡಿ ಅವಿರೋಧವಾಗಿ ಅಯ್ಕೆ ಮಾಡಲಾಯಿತು ಎಂದು ಸಂಘದ ಚುನಾವಣಾಧಿಕಾರಿ ವೆಂಕಾರೆಡ್ಡಿ ಅವರು ಘೋಷಣೆ ಮಾಡಿದರು. ನಂತರ ನೂತನ ಉಪಾಧ್ಯಕ್ಷ ರು ಮಾತನಾಡಿ ನಮ್ಮ‌ಗ್ರಾಮದ ಸಂಘ ಅಭಿವೃದ್ಧಿ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು

ಈ ವೇಳೆ ದಮ್ಮೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಶಂಕರಗೌಡ, ನಿರ್ದೆಶಕರಾದ ಗಣಪಾಲ್‌ ಸಂಜೀವರೆಡ್ಡಿ, ಸಿ.ಗೋಪಾಲ, ಎ.ಸರ್ವೋತ್ತಮ ಗೌಡ, ಪಿ.ಬಸವರಾಜ, ಎಂ.ದೇವರೆಡ್ಡಿ, ಕೆ.ಮಲ್ಲಿಕಾರ್ಜುನರೆಡ್ಡಿ, ಜಿ.ಮಂಗಮ್ಮ ಸಿ.ಹಂಪಮ್ಮ, ಮುಖಂಡರಾದ ಗಣಪಾಲ ಯಂಕಾರೆಡ್ಡಿ, ಗಣಪಾಲ ಐನಾಥರೆಡ್ಡಿ, ಬಿಹೆಚ್.ತಿಮ್ಮಾರೆಡ್ಡಿ, ಜಾನೆ ಕುಂಟೆರಾಮಣ್ಣ,
ನಾಗರಾಜ, ಮೋಹನ ಪ್ರಕಾಶ, ಸಂಘದ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಎಸ್‌.ಎಂ.ರೇವಣಸಿದ್ದಯ್ಯ, ಗ್ರಾಮಸ್ಥರು ಮುಖಂಡರು ಹಾಗು ಸಂಘದ ಸಿಬ್ಬಂದಿವರ್ಗದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments