Monday, April 6, 2026
HomeDistrictsBallariತಹಸೀಲ್ದಾರ್ ನರಸಪ್ಪಗೆ “ಕಾಯಕ ರತ್ನ” ಪ್ರಶಸ್ತಿ ಪ್ರದಾನ

ತಹಸೀಲ್ದಾರ್ ನರಸಪ್ಪಗೆ “ಕಾಯಕ ರತ್ನ” ಪ್ರಶಸ್ತಿ ಪ್ರದಾನ

ವರದಿ:ಜಿ ಎಂ ಬಸಯ್ಯಸ್ವಾಮಿ

ಕುರುಗೋಡು ತಾಲೂಕಿನ ತಹಸೀಲ್ದಾರ್ ನರಸಪ್ಪ ಅವರಿಗೆ ಜನಸೇವೆಯಲ್ಲಿ ತೋರಿದ ಅಪಾರ ನಿಷ್ಠೆ ಹಾಗೂ ಕಾರ್ಯಕ್ಷಮತೆಯನ್ನು ಗುರುತಿಸಿ “ಕಾಯಕ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕುರುಗೋಡು ತಾಲೂಕಿನ ಜನತೆಗೆ ಸಕಾಲದಲ್ಲಿ ಸರ್ಕಾರದ ಸೇವೆಗಳು ತಲುಪುವಂತೆ ಸಮರ್ಥವಾಗಿ ಕಾರ್ಯನಿರ್ವಹಿಸಿರುವುದಕ್ಕೆ ಹಾಗೂ ತಾಲೂಕನ್ನು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೇರಿಸುವಲ್ಲಿ ಮಹತ್ವದ ಪಾತ್ರವಹಿಸಿರುವುದಕ್ಕಾಗಿ ಕರ್ನಾಟಕ ಪತ್ರಕರ್ತರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ ಕುರುಗೋಡು ಘಟಕದ ವತಿಯಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನರಸಪ್ಪ ಅವರು ಈ ಹಿಂದೆ ಸಹ ಸಕಾಲ ಯೋಜನೆ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅಲ್ಪ ಸಮಯದಲ್ಲೇ ಸಾರ್ವಜನಿಕರ ಅರ್ಜಿಗಳನ್ನು ಪರಿಹರಿಸುವ ಮೂಲಕ ಜನಸ್ನೇಹಿ ಆಡಳಿತದ ಮಾದರಿಯನ್ನು ನಿರ್ಮಿಸಿರುವುದಾಗಿ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ನರಸಪ್ಪ ಅವರ ಸೇವೆಯನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಲು ಹಾರೈಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments