ವರದಿ : ಶಿವರಾಜ್ ಕನ್ನಡಿಗ
ಕೊಟ್ಟೂರು. :ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್ ರಾಗಿಗೆ 4,886 ರೂ ರೂಪಾಯಿ ನಿಗದಿ ಪಡಿಸಿದ್ದು. ನೋಂದಾಯಿತ ರೈತರಿಂದ ನೇರವಾಗಿ ಖರೀದಿ ನಡೆಯುತ್ತಿದೆ. ರಾಗಿ ಖರೀದಿ ಕೇಂದ್ರವನ್ನು ಸರ್ಕಾರವು ಸ್ಥಳವನ್ನು ನಿಗದಿಪಡಿಸಿದ್ದು ಆಯಾ ತಾಲೂಕು ಎಪಿಎಂಸಿ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ರಾಗಿ ಖರೀದಿ ಕೇಂದ್ರವನ್ನು ಖರೀದಿಸಬೇಕೆಂದು ಸರ್ಕಾರವು ಆದೇಶಿಸಿದೆ.
ಕೊಟ್ಟೂರು ಪಟ್ಟಣದಲ್ಲಿ ಖರೀದಿ ಕೇಂದ್ರವನ್ನು ಎಪಿಎಂಸಿ ಆವರಣದಲ್ಲಿ ಸ್ಥಳವನ್ನು ನಿಗದಿಪಡಿಸಿದ್ದು ನೋಂದಾಯಿಸಿದ ರೈತರು ತಮ್ಮ ರಾಗಿಯನ್ನು ನಿಗದಿ ಪಡಿಸಿದ ಸ್ಥಳದಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ತೂಕ ನಡೆಯದೆ ವಿಳಂಬವಾಗುತ್ತಿದ್ದು. ನೊಂದಾಯಿಸಿದ ರೈತರು ಟ್ರಾಕ್ಟರ್ ಮತ್ತು ವಾಹನಗಳಲ್ಲಿ ರಾಗಿಯನ್ನು ತುಂಬಿಕೊಂಡು ಹಗಲು ರಾತ್ರಿ ಮಳೆ ಚಳಿ ಎನ್ನದೆ ರಾಗಿ ಮಾರಾಟ ಮಾಡಲು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಸರಿಯಾದ ಸಮಯಕ್ಕೆ ತೂಕ ಆಗದೆ ರೈತರು ಪರದಾಡುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ಅನ್ನದಾತರ ಕೋರಿಕೆಯಾಗಿದೆ. ಆದರೆ ಕೊಟ್ಟೂರಿನ ಪಟ್ಟಣದ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿ ಏಪ್ರಿಲ್ 4ರಂದು
ಶನಿವಾರ ಖಾಸಗಿ ಸೈಟಿನಲ್ಲಿ ಟ್ರಾಕ್ಟರ್ ನಲ್ಲಿ ರಾಗಿಯನ್ನು ತುಂಬಿ ಕೊಂಡು ಲಾರಿಗೆ ಲೋಡ್ ಮಾಡುತ್ತಿದ್ದಾರೆ. ಸರ್ಕಾರವು ರಾಗಿ ಖರೀದಿ ಕೇಂದ್ರವನ್ನು ಸ್ಥಳವನ್ನು ಗುರುತಿಸಿದರು ಆದರೆ ಕೆಲವು ಏಜೆನ್ಸಿಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ರೀತಿಯಲ್ಲಿ ರಾಗಿ ಖರೀದಿಸುತ್ತಿದ್ದಾರೆ ಹಾಗೂ ಕೆಲವರ ರಾಜ್ಯಗಳಿಂದ ರಾಗಿಯನ್ನು ತಂದು ಸರ್ಕಾರಕ್ಕೆ
ಮಾರಾಟ ಮಾಡುತ್ತಿದ್ದಾರೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಕೊಟ್ಟೂರು ತಾಲೂಕು ಕಾರ್ಯದರ್ಶಿಯಾದ ಕೆ ರೇಣುಕಮ್ಮ ಆಗ್ರಹಿಸುತ್ತಿದ್ದಾರೆ.
■ಅಕ್ರಮವಾಗಿ ನಡೆಸಿರುವ ರಾಗಿ ಲೋಡಿನಲ್ಲಿ ಸೂಕ್ತ ತನಿಖೆ ನಡೆಸಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ.
—-ಕೊಟ್ರೇಶ್
ದಲಿತ ಸಂಘಟನೆ
■ಸರ್ಕಾರವು ನಿಗದಿಗೊಳಿಸಿದ ಸ್ಥಳದಲ್ಲೇ ರೈತರ ರಾಗಿಯನ್ನು ಖರೀದಿಸಬೇಕೆಂದು ಎಂಬ ಸರ್ಕಾರದ ಆದೇಶವಿದೆ. ಬೇರೆ ಸ್ಥಳದಲ್ಲಿ ರಾಗಿಯನ್ನು ಖರೀದಿಸಿದರೆ ಸರ್ಕಾರವು ತೆಗೆದುಕೊಳ್ಳುವುದಿಲ್ಲ ಮತ್ತು ಆ ಏಜೆನ್ಸಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು.
—–ಗುರುರಾಜ್
ಜಿಲ್ಲಾ ಆಹಾರ ಇಲಾಖೆ ಮ್ಯಾನೇಜರ್ ವಿಜಯನಗರ ಜಿಲ್ಲೆ
