Thursday, April 9, 2026
HomeDistrictsBallariಟಿಪ್ಪರ್–ಟ್ಯಾಕ್ಟರ್ ಮುಖಾಮುಖಿ ಡಿಕ್ಕಿ: ದೊಡ್ಡ ಅನಾಹುತ ತಪ್ಪಿದ ಪ್ರಯಾಣಿಕರು ಸುರಕ್ಷಿತ

ಟಿಪ್ಪರ್–ಟ್ಯಾಕ್ಟರ್ ಮುಖಾಮುಖಿ ಡಿಕ್ಕಿ: ದೊಡ್ಡ ಅನಾಹುತ ತಪ್ಪಿದ ಪ್ರಯಾಣಿಕರು ಸುರಕ್ಷಿತ

ವರದಿ : ಜಿ ಎಮ್ ಬಸಯ್ಯಸ್ವಾಮಿ

ಕುರುಗೋಡು, ಏಪ್ರಿಲ್ 9: ತಾಲೂಕಿನ ಕಂಪ್ಲಿ–ಕುರುಗೋಡು 132ನೇ ರಾಜ್ಯ ಹೆದ್ದಾರಿಯ ಲಕ್ಷ್ಮಿಪುರ ಹತ್ತಿರ ಗುರುವಾರ ರಾತ್ರಿ ಸುಮಾರು 7:30 ಗಂಟೆಗೆ ಟಿಪ್ಪರ್ ಹಾಗೂ ಟ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ, ಚಾಲಕರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸುರಕ್ಷಿತರಾಗಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಅಪಘಾತದ ಪರಿಣಾಮವಾಗಿ ಕೆಲವು ಗಂಟೆಗಳ ಕಾಲ ರಸ್ತೆಯಲ್ಲಿ ಗಾಜಿನ ತುಂಡುಗಳು ಚಲ್ಲಪಿಲ್ಲಿಯಾಗಿ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಂತರ ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ಸಹಾಯದಿಂದ ರಸ್ತೆ ಸ್ವಚ್ಛಗೊಳಿಸಿ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.

ಮೂಲಕ ತೆರಳುತ್ತಿದ್ದ ಟಿಪ್ಪರ್ ಮತ್ತು ಕಂಪ್ಲಿ ರಸ್ತೆಯಿಂದ ಕುರುಗೋಡು ಕಡೆಗೆ ಬರುತ್ತಿದ್ದ ಟ್ಯಾಕ್ಟರ್ ನಡುವೆ ಚಾಲಕರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಡಿಕ್ಕಿಯಿಂದ ಟಿಪ್ಪರ್‌ನ ಮುಂಭಾಗಕ್ಕೆ ಹೆಚ್ಚಿನ ಹಾನಿಯಾಗಿದ್ದು, ಮತ್ತಷ್ಟು ಭಾರೀ ಅಪಾಯ ಸಂಭವಿಸಬಹುದಾಗಿತ್ತು ಎಂದು ಸ್ಥಳದಲ್ಲಿದ್ದವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments