Wednesday, July 1, 2026
HomeSandurರಣಜಿತ್‌ಪುರ ಇನ್‌ಫ್ರಾಸ್ಟçಕ್ಚರ್ ವಿಸ್ತರಣೆ ಯೋಜನೆ: ಜುಲೈ 30 ರಂದು ಪರಿಸರ ಸಾರ್ವಜನಿಕ ಅಹವಾಲು ಸಭೆ

ರಣಜಿತ್‌ಪುರ ಇನ್‌ಫ್ರಾಸ್ಟçಕ್ಚರ್ ವಿಸ್ತರಣೆ ಯೋಜನೆ: ಜುಲೈ 30 ರಂದು ಪರಿಸರ ಸಾರ್ವಜನಿಕ ಅಹವಾಲು ಸಭೆ

ಬಳ್ಳಾರಿ,ಜೂ.30: ಜಿಲ್ಲೆಯ ಸಂಡೂರು ತಾಲೂಕಿನ ರಣಜಿತ್‌ಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆ|| ರಣಜಿತ್‌ಪುರ ಇನ್‌ಫ್ರಾ ಸ್ಟಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನ್ನ ಘಟಕದ ಬೃಹತ್ ವಿಸ್ತರಣಾ ಯೋಜನೆಗೆ ಮುಂದಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಆಲಿಸಲು ಜುಲೈ 30 ರಂದು ಬೆಳಿಗ್ಗೆ 11 ಗಂಟೆಗೆ ಕಂಪನಿಯ ಯೋಜನಾ ಪ್ರದೇಶದಲ್ಲಿ ಪರಿಸರ ಸಾರ್ವಜನಿಕ ಅಹವಾಲು ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ತರಣಾ ಯೋಜನೆಯ ಅಂಶಗಳು:
ಉತ್ಪಾದನಾ ಸಾಮರ್ಥ್ಯ ಹೆಚ್ಚಳ: ಪ್ರಸ್ತುತ ಇರುವ ಸ್ಪಾಂಜ್ ಐರನ್ ಘಟಕ ಮತ್ತು ಬೆನಿಫಿಷಿಯೇಷನ್ ಘಟಕದ ಸಾಮರ್ಥ್ಯವನ್ನು ದಿನಕ್ಕೆ 190 ಟನ್‌ನಿಂದ 375 ಟಿಪಿಡಿ ಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.

ಬೆನಿಫಿಷಿಯೇಷನ್ ಘಟಕ:
ಇದರ ಸಾಮರ್ಥ್ಯವನ್ನು ವರ್ಷಕ್ಕೆ 0.48 ಮಿಲಿಯನ್ ಟನ್‌ನಿಂದ 1.180 ಎಂಟಿಪಿಎ ಗೆ ಹೆಚ್ಚಿಸಿ, 0.05 ಎಂಟಿಪಿಎ ಶುದ್ಧೀಕರಿಸಿದ ಮ್ಯಾಂಗನೀಸ್ ಹಾಗೂ 1.13 ಎಂಟಿಪಿಎ ಶುದ್ಧೀಕರಿಸಿದ ಕಬ್ಬಿಣದ ಅದಿರನ್ನು ಉತ್ಪಾದಿಸಲು ಯೋಜಿಸಲಾಗಿದೆ.
ಹೊಸ ಘಟಕಗಳ ಸ್ಥಾಪನೆ: ವಿಸ್ತರಣೆಯ ಭಾಗವಾಗಿ ಹೊಸದಾಗಿ 0.85 ಎಂಟಿಪಿಎ ಸಾಮರ್ಥ್ಯದ ಕಬ್ಬಿಣದ ಅದಿರಿನ ಪೆಲ್ಲೆಟ್ ಘಟಕ, 10000 ಓm^3/ಊಡಿ ಸಾಮರ್ಥ್ಯದ ಕೋಲ್ ಗ್ಯಾಸಿಫೈಯರ್ ಘಟಕ ಹಾಗೂ 10 ಎಂಡಬ್ಲೂ ಸಾಮರ್ಥ್ಯದ ಸಹ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

ಭೂಮಿ ಬಳಕೆ: ಪ್ರಸ್ತುತ ಈ ಘಟಕವು ರಣಜಿತ್‌ಪುರ ಗ್ರಾಮದ ವಿವಿಧ ಸರ್ವೇ ನಂಬರ್‌ಗಳ ಒಟ್ಟು 86.18 ಹೆಕ್ಟೇರ್ ಪ್ರದೇಶದಲ್ಲಿದ್ದು, ವಿಸ್ತರಣೆಗಾಗಿ ಹೆಚ್ಚುವರಿಯಾಗಿ 10.84 ಹೆಕ್ಟೇರ್ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಯೋಜನೆಯ ಒಟ್ಟು ವಿಸ್ತೀರ್ಣ 94.63 ಹೆಕ್ಟೇರ್ ಆಗಲಿದೆ.

ಹಾಗಾಗಿ ಪರಿಸರ ಆಘಾತ ಅಧ್ಯಯನ ಅಧಿಸೂಚನೆ ನಿಯಮಾವಳಿಗಳ ಅನ್ವಯ ಈ ಸಭೆಯನ್ನು ಕರೆಯಲಾಗಿದ್ದು, ಸಾರ್ವಜನಿಕರು ಹಾಗೂ ಆಸಕ್ತರು ಸಭೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments