Saturday, October 3, 2026
HomeVijayanagaraದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಗಣಿತ ವಿಶೇಷ ತರಬೇತಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಗಣಿತ ವಿಶೇಷ ತರಬೇತಿ

ಹೊಸಪೇಟೆ: ದ್ವಿತೀಯ ಪಿಯುಸಿ ಗಣಿತಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣರಾದ, ಕಡಿಮೆ ಅಂಕಗಳಿಂದ ಖಿನ್ನತೆಗೊಳಗಾದ ಹಾಗೂ ಆರ್ಥಿಕ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಓದುವ ಆಸಕ್ತಿ ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸಪೇಟೆಯ ಜವಳಿ-ಕ್ಲಾಸಸ್ ವತಿಯಿಂದ ಉಚಿತ ಪರೀಕ್ಷಾ ಪೂರ್ವಭಾವಿ ವಿಶೇಷ ತರಬೇತಿ ಆಯೋಜಿಸಲಾಗಿದೆ.

ಜವಳಿ-ಕ್ಲಾಸಸ್ ವತಿಯಿಂದ ಸತತ ಹಲವು ವರ್ಷಗಳಿಂದ ಇಂತಹ ಉಚಿತ ತರಬೇತಿ ನೀಡಲಾಗುತ್ತಿದ್ದು, ತರಬೇತಿಯ ಸದುಪಯೋಗ ಪಡೆದ ಹಲವು ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ 25ನೇ ವರ್ಷದ ಉಚಿತ ದ್ವಿತೀಯ ಪಿಯುಸಿ ಗಣಿತಶಾಸ್ತ್ರ ವಿಶೇಷ ತರಬೇತಿ ಅ.11ರಿಂದ ಅ.17ರವರೆಗೆ ಏಳು ದಿನಗಳ ಕಾಲ ನಡೆಯಲಿದೆ. ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಎಲ್ಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.
ಧಾರವಾಡದ ಹಿರಿಯ ಗಣಿತ ಉಪನ್ಯಾಸಕ ಶಿವಾನಂದ ಎಂ. ಪಾಟೀಲ ಅವರು ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

ತರಬೇತಿಯು ಪ್ರತಿದಿನ ಬೆಳಗ್ಗೆ 8.45ರಿಂದ ಸಂಜೆ 3.45ರವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಗುರುತಿನ ಚೀಟಿ ಹಾಗೂ ಭಾವಚಿತ್ರದೊಂದಿಗೆ ಸ್ಥಳದಲ್ಲೇ ಉಚಿತವಾಗಿ ಪ್ರವೇಶ ಪಡೆಯಬಹುದು.

ವಿದ್ಯಾರ್ಥಿಗಳು ತಮ್ಮ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಸ್ವತಃ ಮಾಡಿಕೊಳ್ಳಬೇಕಾಗಿದೆ.
ತರಬೇತಿಯ ಸದುಪಯೋಗವನ್ನು ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಮಾಹಿತಿ ಹಂಚಿಕೊಳ್ಳುವಂತೆ ಜವಳಿ-ಕ್ಲಾಸಸ್‌ನ ಲೇಪಾಕ್ಷ ಎಸ್. ಜವಳಿ ಮನವಿ ಮಾಡಿದ್ದಾರೆ.

ತರಬೇತಿ ಸ್ಥಳ: ಜವಳಿ-ಕ್ಲಾಸಸ್, ರಾಜೀವನಗರ, ಶಾಂತಿಸಾಗರ ಹೋಟೆಲ್ ಹಿಂದುಗಡೆ, ಹೊಸಪೇಟೆ.
ಸಂಪರ್ಕ: 9845609950

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments