ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿರಿಯ ಪತ್ರಕರ್ತ ಆರ್ ಶಿವರಾಮ ಅವರು ಸೋಮವಾರ ತೋರಣಗಲಿನ ಪ್ರಭುದ್ಧರ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷ ವಿ ವೈ ವಿಜಯೇಂದ್ರ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರಿಕೊಂಡರು.
ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ, ಬಿ ಶ್ರೀರಾಮುಲು, ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಕೆ ದಿವಾಕರ್, ಜಿ ಟಿ ಪಂಪಾಪತಿ, ಹುಡೇದ ಸುರೇಶ್ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಿವರಾಂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವುದು, ಟಿಕೆಟ್ ಕೇಳುವುದು ಸಂವಿಧಾನ ನೀಡಿದ ಹಕ್ಕಾಗಿದೆ ಅದರಲ್ಲೂ ಸಂಡೂರು ಕ್ಷೇತ್ರ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಮೀಸಲಾಗಿದೆ ಆದ್ದರಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ್ದೆ ಟಿಕೆಟ್ ಕೇಳುವ ಹಕ್ಕು ನನಗಿತ್ತು ಆದರೆ ಕಾಂಗ್ರೆಸ್ ಪಕ್ಷದವರು ಟಿಕೆಟ್ ಬೇರೆಯವರಿಗೆ ಘೋಷಿಸಿದ್ದರಿಂದ ಬೇಸರವಾಗಿ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದೇನೆ ಎಂದರು.
ಸಾಮಾಜಿಕ ನ್ಯಾಯ ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ಒಂದೇ ಕುಟುಂಬಕ್ಕೆ ಟಿಕೆಟ್ ಮೀಸಲಾಗಿಡುವುದು ಯಾವ ನ್ಯಾಯ?, ಆ ಜನಾಂಗದಲ್ಲೂ ಕೂಡ ಸಮಾಜ ಸೇವೆ ಮಾಡುವ ಅರ್ಹರು ಸಾಕಷ್ಟು ಮಂದಿ ಇದ್ದರೂ ಕೂಡ ಅವರಿಗೆ ಅನ್ಯಾಯ ಮಾಡಿದ್ದಾರೆ ಕನ್ನಡದ ಹಳೆಯ ಚಿತ್ರ ಭೂತಯ್ಯನ ಮಗ ಅಯ್ಯು ದ ದೃಶ್ಯ ಒಂದರಲ್ಲಿ ಮೂವರೇ ಸೇರಿಕೊಂಡು ದೊಡ್ಡ ಪಾತ್ರೆಯಲ್ಲಿದ್ದ ಅನ್ನವನ್ನು ಒಂದಗಳು ಬಿಡದಂತೆ ತಿಂದು ಖಾಲಿ ಮಾಡಿದಂತೆ 25 ವರ್ಷಗಳ ಮೀಸಲಾತಿಯ ಅನ್ನವನ್ನು ತಿಂದು ತೇಗುವುದು ಯಾವ ನ್ಯಾಯ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನವರು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಗಂಟಲು ಹರಿದುಕೊಳ್ಳುತ್ತಾರೆ ಆದರೆ ರಿಸರ್ವೇಶನ್ ರಿಪಬ್ಲಿಕ್ ಆಫ್ ಸಂಡೂರು ವಿಷಯವಾಗಿ ಅವರು ಮಾತನಾಡುವುದಿಲ್ಲ ಜನರು ಈ ಸಲದ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಬಿಜೆಪಿ ಪಕ್ಷದ ಅಭ್ಯರ್ಥಿ ಬಂಗಾರ ಹನುಮಂತ ಅವರು 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.