Monday, October 27, 2025
HomeDistrictsBallariಕೇಂದ್ರ ಸಂವಹನ ಇಲಾಖೆಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ...

ಕೇಂದ್ರ ಸಂವಹನ ಇಲಾಖೆಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ

ಬಳ್ಳಾರಿ,ಅ.02:ಕೇಂದ್ರ ಸಂವಹನ ಇಲಾಖೆ, ಬಳ್ಳಾರಿ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾಲಯದ ಐಕ್ಯೂಎಸ್ ಸಿ, ಎನ್ಎಸ್ಎಸ್ ವಿಭಾಗಗಳ ವತಿಯಿಂದ ವಿದ್ಯಾಲಯದ ಸಭಾಭವನದಲ್ಲಿ ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 156ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 121 ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಧೂಪಂ ಸತೀಶ್ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಬರೆದಿರುವ ನನ್ನ ಸತ್ಯಾನ್ವೇಷಣೆ ಆತ್ಮಚರಿತ್ರೆ ಪುಸ್ತಕ ಬಿಡುಗಡೆಯಾಗಿ ನೂರು ವರ್ಷಗಳಾಯಿತು ಎಂದು ತಿಳಿಸಿದರು.

ಇದೇ ವೇಳೆ ಸ್ವಚ್ಛತಾ ಅಭಿಯಾನದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.
ಈ ವೇಳೆ ಪದವಿಪೂರ್ವ ಮಹಾವಿದ್ಯಾಲಯದ ಡಾ.ಬಿ.ಗೋವಿಂದರಾಜ್, ಐಕ್ಯೂಎಸ್ಸಿ ಅಧಿಕಾರಿ ಡಾ.ಸಾಯಿದ ತನ್ವೀರ್, ಎನ್ಎಸ್ಎಸ್ ಅಧಿಕಾರಿ ವಿಜಯೇಂದ್ರ ರಂಗ ಪ್ರಸಾದ್, ಚೋಳೆoದ್ರ ಭೂಪಾಲ್, ರೇಂಜರ್ ಅಧಿಕಾರಿ ಡಾ.ಮಂಗಳ ಬಿ.ಎನ್ ಮತ್ತು ಕೇಂದ್ರ ಸಂವಹನ ಇಲಾಖೆಯ ಎನ್.ರಾಮಕೃಷ್ಣ ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments