ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: 26.11.2025 ಬುಧವಾರ ಕೊಟ್ಟೂರಿನಲ್ಲಿ ಇಂದು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶ್ರೀ ಮರಿಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಗೆ ಚಾಲನೆ ನೀಡಲಾಯಿತು. ಜಿಲ್ಲಾ ಡಿಎಸ್ಎಸ್ ಮುಖಂಡರಾದ ಬದ್ದಿ ಮರಿಸ್ವಾಮಿ ಇವರು ಇಂದು ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದೆ ಬಂದು ಸಾಧನೆ ಮಾಡುತ್ತಿದ್ದಾರೆ ಇದಕ್ಕೆ ಕಾರಣ ಭಾರತದ ಸಂವಿದಾನ ಎಂದರು. ಇನ್ನೋರ್ವ ಡಿಎಸ್ಎಸ್ ಮುಖಂಡರಾದ ತೆಗ್ಗಿನಕೇರಿ ಕೊಟ್ರೇಶ್ ಇವರು ಭಾರತದಲ್ಲಿ ಅನೇಕ ಭಾಷೆ, ಜನ, ಧರ್ಮ ಇದ್ದರೂ ಎಲ್ಲರೂ ಅನ್ಯೋನ್ಯತೆಯಿಂದ ಬದುಕುತ್ತಿರುವುದು ಭದ್ರಬುನಾದಿಯಾಗಿರುವ ನಮ್ಮ ಸಂವಿಧಾನವಾಗಿದೆ. ಬಾಬಾ ಸಾಹೇಬರ ನಿರಂತರ ಅಧ್ಯಯನ ಹಾಗೂ ಪರಿಶ್ರಮದಿಂದ ರಚನೆಯಾಗಿರುವ ಸಂವಿಧಾನವನ್ನು ನಾವೆಲ್ಲಾ ರಕ್ಷಿಸಿಕೊಂಡುಹೋಗಬೇಕಿದೆ ಎಂದರು. ಡಿಎಸ್ಎಸ್ ಮುಖಂಡರಾದ ಹನುಮಂತಪ್ಪ ವಕೀಲರು, ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಬಿ ದುರುಗಪ್ಪ ಸಂವಿಧಾನ ಆಶಯ ಕುರಿತು ಮಾತನಾಡಿದರು.
ತಹಶೀಲ್ದಾರರಾದ ಅಮರೇಶ್ ಜಿ ಕೆ ಇವರು ಭಾರತದ ಸಂವಿಧಾನವನ್ನು 1949 ನವಂಬರ್ ರಂದು ಅಂಗೀಕರಿಸಿಕೊಂಡು ಜಾರಿಗೆ ತಂದಿದ್ದು, ಅದರ ನೆನಪಿಗಾಗಿ ಪ್ರತಿವರ್ಷ ನವಂಬರ್-26 ರಂದು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯಗಳನ್ನು ಪ್ರತಿಯೊಬ್ಬ ಭಾರತೀಯರು ರಕ್ಷಿಸಬೇಕಿದೆ ಎನ್ನುತ್ತಾ, ಭಾರತ ಸಂವಿಧಾನ ಪ್ರಸ್ತಾವನೆಯನ್ನು ಓದಿಸಿದರು. ಕಾರ್ಯಕ್ರಮದಲ್ಲಿ ತಾ ಪಂ ಕಾರ್ಯನಿರ್ವಹಕ ಅಧಿಕಾರಿಗಳಾದ ಡಾ.ಆನಂದ್ ಕುಮಾರ್, ಪ ಪಂ ಮುಖ್ಯಾಧಿಕಾರಿ ನಸರುಲ್ಲಾ, ಶಿಕ್ಷಣ ಇಲಾಖೆಯ ಇಸಿಒ ಎಸ್ ನಿಂಗಪ್ಪ, ರವಿಕುಮಾರ್, ಶಶಿಧರ ಮೈದೂರು ದೈಹಿಕ ಶಿಕ್ಷಣ ಪರೀವೀಕ್ಷಕರು, ಸರ್ಕಾರಿ ನೌರರ ಸಂಘದ ಅಧ್ಯಕ್ಷರಾದ ಯೋಗೀಶ್ವರ ದಿನ್ನೆ, ಸಿಆರ್ಪಿ ಅಜೇಯ , ಅಣಿಜಿ ಸಿದ್ದಲಿಂಗಪ್ಪ, ಉಪನ್ಯಾಸಕರಾದ ಅಂಜಿನಪ್ಪ ಹಾಗೂ ಇತರೆ ಶಾಲಾ ಶಿಕ್ಷಕರು ಇದ್ದರು.
ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು. ಸಂವಿಧಾನ ಕುರಿತು ಭಾಷಣ ಮತ್ತು ಪ್ರಬಂಧ ಸ್ಪರ್ಧೆಯನ್ನು ನಡೆಸಿದ್ದು ಪ್ರಥಮ ಸ್ಥಾನ ಪಡೆದ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಪಟ್ಟಣದ ವಿವಿಧ ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಎನ್ಸಿಸಿ, ಸ್ಕೌಟ್ಸ್ ತಂಡ ಸೇರಿ ಸುಮಾರು 500 ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡಿದ್ದು, ಸಂವಿಧಾನದ ಆಶಯ ಮತ್ತು ರಕ್ಷಣೆಯ ಕುರಿತು ವಿವಿಧ ಶ್ಲೋಗನ್ಗಳ ಬಂಟಿಂಗ್ಸ್ ಹಾಗೂ ರಾಷ್ಟ್ರಧ್ವಜ, ಸಂವಿಧಾನ ಪುಸ್ಕಕಗಳನ್ನು ಹಿಡಿದ ಮಕ್ಕಳು ಘೋಷಣೆಯನ್ನು ಕೂಗುತ್ತಾ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಎಪಿಎಂಸಿ ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣದ ಸರ್ಕಲ್, ಗಾಂಧಿ ಸರ್ಕಲ್ ಮೂಲಕ ಸಾಗಿ ಉಜ್ಜಿನಿ ಸರ್ಕಲ್ಗೆ ಸಮಾರೋಪಗೊಂಡಿತು.
