ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಕೊಟ್ಟೂರು ತಾಲೂಕು ಕಛೇರಿಯಲ್ಲಿ ಇಂದು ಶ್ರೀ ಯೋಗಿನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ತಹಶೀಲ್ದಾರಾದ ಅಮರೇಶ್ ಜಿ ಕೆ ಇವರು ಕೈವಾಋ ತಾತಯ್ಯನವರ ಭಾವಚಿತ್ರಕ್ಕೆ ಪುಪ್ಪಾರ್ಚನೆಯನ್ನು ಮಾಡುತ್ತಾ, ಚಿಕ್ಕಬಳ್ಳಾಪುರ ತಾಲೂಕಿನ ಕೈವಾರದಲ್ಲಿ ಜನಿಸಿದ ನಾರಾಯಣಪ್ಪನವರು ಶ್ರೀಮನ್ ನಾರಾಯಣನ ಕುರಿತು ತಪ್ಪಸ್ಸನ್ನು ಮಾಡಿ ಸಾಧಕರಾದ್ದರಿಂದ ಶ್ರೀ ಯೋಗಿ ನಾರಾಯಣ ಯಂತ್ರೀಂದ್ರರಾಗಿ ಪ್ರಸಿದ್ದಿಯನ್ನು ಪಡೆದಿದ್ದಾರೆ. “ಗುರುಸ್ಮರಣೆ ಮಾಡುತಿದ್ದರೆ ನಮ್ಮೊಳಗೆ ಚಿಂತನೆ ಆರಂಭವಾಗುತ್ತದೆ. ಮನುಷ್ಯನ ದೊಡ್ಡ ಶತ್ರು ಅಹಂಕಾರ, ಈ ಅಹಂಕಾರ ಕಳೆದುಕೊಂಡರೆ ಸಾಧಕನಾಗುತ್ತಾನೆ. ಜನರಿಗೆ ಕಾಣುವಂತೆ ತೋರಿಕೆಯ ಬಾಹ್ಯ ಪೂಜೆಗಿಂತ ಮಾನಸಿಕ ಪೂಜೆ ಶ್ರೇಷ್ಟ” ಎನ್ನುವ ಸಂದೇಶವನ್ನು ಕೈವಾರ ತಾತಯ್ಯನವರು ತಮ್ಮ ಭೋದನೆಯ ಮೂಲಕ ತಿಳಿಸಿದ್ದಾರೆ. ಜಗತ್ತಿನಲ್ಲಿ ಮುಂದೆ ಜರುಗಬಹುದಾದ ಘಟನೆಗಳ ಕುರಿತು ಮುನ್ನೆಚ್ಚರಿಕೆ ಸಂದೇಶವನ್ನು ನೀಡಿದ “ಕಾಲಜ್ಞಾನ” ಕೃತಿಯನ್ನು ರಚಿಸಿದ್ದು ಈ ಕೃತಿ ಇಂದಿಗೂ ಪ್ರಸಿದ್ದಿಯನ್ನು ಹೊಂದಿದೆ. ಇಂತಹ ಮಹಾನ್ ಚೇತನರು ನೀಡಿದ ಸಂದೇಶವನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡರೆ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಬಲಿಜ ಸಮಾಜದ ಅಧ್ಯಕ್ಷರಾದ ಹರೀಶ್, ಮುಖಂಡರಾದ ಪಿ ಬಾಬಯ್ಯ, ನಾರಾಯಣಪ್ಪ, ಪಿ ಕೊಟ್ರೇಶ್, ಗೋಪಾಲ, ಮುರಳಿ, ಪ್ರಶಾಂತ, ಪ್ರವೀಣ ಕುಮಾರ್, ಕಿರಣ್ ಕುಮಾರ್, ಶಿರಸ್ತೇದಾರರಾದ ಅನ್ನದಾನೇಶ ಬಿ ಪತ್ತಾರ್, ಹೆಚ್ ಎಂ ಕೊಟ್ರಮ್ಮ, ಚಂದ್ರನಾಯ್ಕ, ಕಂದಾಯ ನಿರೀಕ್ಷಕ ಡಿ ಶಿವಕುಮಾರ್, ಸಿಬ್ಬಂದಿ ಮಂಜುನಾಥ, ದೇವರಾಜ ಅರಸು, ಮಂಜಮ್ಮ, ಗೌರಮ್ಮ, ಗ್ರಾಮ ಆಡಳಿತ ಅಧಿಕಾರಿ ರಮೇಶ್, ಜ್ಯೋತಿಬಾಯಿ ಮುಂತಾದವರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು.
