ವರದಿ : ಜಿ ಎಂ ಬಸಯ್ಯ
ಕುರುಗೋಡು ತಾಲೂಕಿನ ಯರ್ರಿಂಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೌರಿಶಂಕರ ನಗರ ಕುಡಿಯವ ನೀರಿನ ವಿಚಾರದಲ್ಲಿ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ ಎಂದು ಒಂದನೇ ವಾರ್ಡ್ ನ ಮಹಿಳೆಯರು ನೀರು ಪೂರೈಕೆಯಾಗದ ನಲ್ಲಿ ಮುಂದೆ ಖಾಲಿ ಕೊಡಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಬೇಸಿಗೆಯಲ್ಲಿ ನೀರು ಪೂರೈಕೆ ಮಾಡದೆ ಮಲತಾಯಿ ಧೋರಣೆ ಸಾರ್ವಜನಿಕರ ಆಕ್ರೋಶ…
ಬೇಸಿಗೆಯಲ್ಲಿ ನೀರು ಸಮರ್ಪಕವಾಗಿ ಪೂರೈಕೆ ಮಾಡಲಾಗುವುದು ಸ್ಥಳೀಯ ಆಡಳಿತದ ಆದ್ಯ ಕರ್ತವ್ಯವಾಗಿದೆ ಅದರೆ ಗ್ರಾಮದ ಎಲ್ಲಾ ವಾರ್ಡ್ ಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿದೆ ಅದರೆ ಒಂದನೇ ವಾರ್ಡ್ ನ ಗೌರಿ ಶಂಕರ ನಗರದಲ್ಲಿ ಮಾತ್ರ ಇಪ್ಪತ್ತು ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದೆ
ಸುಮಾರು 130 ಮನೆಗಳಿದ್ದು ಒಂದೇ ಒಂದು ಹನಿ ಕುಡಿಯೋ ನೀರಿನ ವ್ಯವಸ್ಥೆ ಸರಿಯಾಗಿ ಕೊಡುತ್ತಿಲ್ಲ ಇದರ ವಿಚಾರವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳು ಎಷ್ಟೇ ಭಾರಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮನವಿ ಮಾಡಿದರು ಕಿವಿಗೊಡದೆ ಅಧಿಕಾರಿಗಳು. ಕುಡಿಯವ ಮತ್ತು ಬಳಕೆ ನೀರು ಒಂದೇ ಆಗಿವೆ.ಆದರೂ ಸಹ 15ರಿಂದ 20 ದಿನ ಆದರೂ ಕುಡಿಯುವ ನೀರಿಲ್ಲ ಹೀಗೆ ಮುಂದುವರೆದರೆ ಖಾಲಿ ಕೊಡಗಳನ್ನು ಹಿಡಿದು ಗ್ರಾಂ ಪಂಚಾಯಿತಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
■ಕುಡಿಯುವ ನೀರಿಗೆ ಹೊಸ ಬೊರ್ ವೇಲ್ ಕೊರೆಯಿಸಿ ಗ್ರಾಮದ ಗೌರಿ ಶಂಕರ ನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಆಗುವಂತೆ ಮಾಡಲಾಗುವುದು ಎರಡು ದಿನಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ನೀಡಲಾಗುವುದು.
—-ಪರುಶುರಾಮ
ಯರ್ರಿಂಗಳಿ ಗ್ರಾಮ ಪಂಚಾಯಿತಿ
ಅಭಿವೃದ್ಧಿ ಅಧಿಕಾರಿ.
■ಒಂದನೇ ವಾರ್ಡ್ ನ ಗೌರಿ ಶಂಕರ ನಗರದಲ್ಲಿ ಸಮಪರ್ಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಬಿರು ಬೇಸಿಗೆಯಲ್ಲಿ ನೀರು ಪೂರೈಕೆ ಆಗದೆ ಬಹಳ ತೊಂದರೆಯಾಗಿದೆ ಬೇರೆ ವಾರ್ಡ್ ಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡಿ ನಮ್ಮ ವಾರ್ಡ್ ನಲ್ಲಿ ನೀರು ಪೂರೈಕೆ ಮಾಡಲು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ.
—-ಏ. ಚಿದಾನಂದ
ಗೌರಿ ಶಂಕರ ನಗರದ ನಿವಾಸಿ
ಯರ್ರಿಂಗಳಿ ಗ್ರಾಮ.
