Tuesday, April 7, 2026
HomeDistrictsBallariಬಾಬು ಜಗಜೀವನ್ ರಾಮ್ ಜಯಂತಿ: ಸಾಮಾಜಿಕ ನ್ಯಾಯದ ಹರಿಕಾರರ ಸ್ಮರಣೆ

ಬಾಬು ಜಗಜೀವನ್ ರಾಮ್ ಜಯಂತಿ: ಸಾಮಾಜಿಕ ನ್ಯಾಯದ ಹರಿಕಾರರ ಸ್ಮರಣೆ

ವರದಿ : ಜಿ ಎಂ ಬಸಯ್ಯಸ್ವಾಮಿ

ಸ್ವಾತಂತ್ರ್ಯ ಸೇನಾನಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿಯನ್ನು ಸಮೀಪದ ಕಂಪ್ಲಿಯಲ್ಲಿ ಗೌರವದಿಂದ ಆಚರಿಸಲಾಯಿತು.

ಸ್ಥಳೀಯ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ ಅವರು ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸಮಾಜದ ಶೋಷಿತರು ಮತ್ತು ಸೌಲಭ್ಯ ವಂಚಿತ ವರ್ಗಗಳ ಉದ್ಧಾರಕ್ಕಾಗಿ ಅವರು ಶ್ರಮಿಸಿದ ಮಹಾನ್ ನಾಯಕರು ಎಂದು ಸ್ಮರಿಸಿದರು.

ಸಮಾಜದಲ್ಲಿ ಸಮಾನತೆ ಸ್ಥಾಪನೆ ಮತ್ತು ಎಲ್ಲರೂ ಸಮಾನವಾಗಿ ಬದುಕಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಕಾರ್ಮಿಕರ ಏಳಿಗೆಗಾಗಿ ಸದಾ ಹೋರಾಡಿದ ಅವರು, ದೇಶದಲ್ಲಿ ಆಹಾರ ಕೊರತೆ ಉಂಟಾದ ಸಂದರ್ಭದಲ್ಲಿ ಹಸಿರು ಕ್ರಾಂತಿಗೆ ಪ್ರೋತ್ಸಾಹ ನೀಡಿ ಜನತೆಗೆ ನೆರವಾದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ವೈ. ರಾಘವೇಂದ್ರ ರೆಡ್ಡಿ ಅವರು ಬಾಬು ಜಗಜೀವನ್ ರಾಮ್ ಅವರ ಜೀವನ ಹಾಗೂ ಸಾಧನೆಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಹನುಮಾನ್ ಟ್ರೇಡರ್ಸ್‌ನ ರಾಮಕೃಷ್ಣ, ಶ್ರೀನಿವಾಸ, ಶ್ರೀವಾಸಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments