Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
admin, Author at Hai Sandur kannada fortnightly news paper https://haisandur.com/author/admin/ Hai Sandur News.Karnataka India Sat, 11 May 2024 10:04:33 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg admin, Author at Hai Sandur kannada fortnightly news paper https://haisandur.com/author/admin/ 32 32 “ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು : ಉಜ್ಜಯಿನಿ ಶ್ರೀಗಳು “ https://haisandur.com/2024/05/11/%e0%b2%b8%e0%b2%be%e0%b2%ae%e0%b3%82%e0%b2%b9%e0%b2%bf%e0%b2%95-%e0%b2%b5%e0%b2%bf%e0%b2%b5%e0%b2%be%e0%b2%b9%e0%b2%a6%e0%b2%bf%e0%b2%82%e0%b2%a6-%e0%b2%a6%e0%b3%81%e0%b2%82%e0%b2%a6%e0%b3%81/ https://haisandur.com/2024/05/11/%e0%b2%b8%e0%b2%be%e0%b2%ae%e0%b3%82%e0%b2%b9%e0%b2%bf%e0%b2%95-%e0%b2%b5%e0%b2%bf%e0%b2%b5%e0%b2%be%e0%b2%b9%e0%b2%a6%e0%b2%bf%e0%b2%82%e0%b2%a6-%e0%b2%a6%e0%b3%81%e0%b2%82%e0%b2%a6%e0%b3%81/#respond Sat, 11 May 2024 10:04:32 +0000 https://haisandur.com/?p=35079 ಕೊಟ್ಟೂರು: ಪಟ್ಟಣದ ಡೋಣೂರು ಚಾನುಕೋಟಿ ಮಠದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಮರುಳಸಿದ್ದೇಶ್ವರ ರಥೋತ್ಸವ, ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ  ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇಂದಿನ ದುಬಾರಿ ಕಾಲದಲ್ಲಿ ಮದುವೆ ಮಾಡುವುದೆಂದರೆ ಸುಲಭದ ಮಾತಲ್ಲ ಆದರೆ ಸಾಮೂಹಿಕ ವಿವಾಹ ಮಾಡಿದ್ದೇ ಅದಲ್ಲಿ ದುಂದುವೆಚ್ಚಕ್ಕೆ ಸಾಕಷ್ಟು ಕಡಿವಾಣ ಹಾಕಬಹುದು ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ […]

The post “ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು : ಉಜ್ಜಯಿನಿ ಶ್ರೀಗಳು “ appeared first on Hai Sandur kannada fortnightly news paper.

]]>
ಕೊಟ್ಟೂರು: ಪಟ್ಟಣದ ಡೋಣೂರು ಚಾನುಕೋಟಿ ಮಠದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಮರುಳಸಿದ್ದೇಶ್ವರ ರಥೋತ್ಸವ, ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ  ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದಿನ ದುಬಾರಿ ಕಾಲದಲ್ಲಿ ಮದುವೆ ಮಾಡುವುದೆಂದರೆ ಸುಲಭದ ಮಾತಲ್ಲ ಆದರೆ ಸಾಮೂಹಿಕ ವಿವಾಹ ಮಾಡಿದ್ದೇ ಅದಲ್ಲಿ ದುಂದುವೆಚ್ಚಕ್ಕೆ ಸಾಕಷ್ಟು ಕಡಿವಾಣ ಹಾಕಬಹುದು ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ, ಉಳ್ಳವರು ಸಾಮೂಹಿಕ ವಿವಾಹ ದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳೆನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ  ಸತ್ಕಾರ್ಯಗಳಿಗೆ ಜಯ ಖಂಡಿತ ಎಂದ ಅವರು, ಇಂತಹ ಸಾಮಾಜಿಕ ಕಳಕಳಿಯಿಂದ ನಡೆಯುವ ಧರ್ಮ  ಕಾರ್ಯಗಳು ಭಗವಂತನಿಗೆ ಇಷ್ಟ ಎಂದು ಅಭಿಪ್ರಾಯಪಟ್ಟರು.

ಡೋಣೂರು ಚಾನುಕೋಟಿ ಮಠ ಕಳೆದ ಮೂರು ದಶಕಗಳಿಂದ ಯಾವುದೇ ಪ್ರತಿಫಲದ ಆಪೇಕ್ಷೆ ಇಲ್ಲದೆ ಉಚಿತ ಸಾಮೂಹಿಕ ವಿವಾಹ ಹಮ್ಮಿ ಕೊಳ್ಳುತ್ತಾ ಬರುವ ಮೂಲಕ ರಾಷ್ಟ್ರೀಯ ಸಂಪತ್ತಿನ ಉಳಿವಿಗೆ ಕಾರಣ ರಾಗಿರುವುದು ನಿಜಕ್ಕೂ ಮಾದರಿ ಸಂಗತಿ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಡೋಣೂರು ಚಾನುಕೋಟಿ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ದೇವರ ಸಾನ್ನಿಧ್ಯದಲ್ಲಿ ಗುರು ಹಿರಿಯರ, ಮಠಾಧೀಶರಿಂದ ಆಶೀರ್ವಾದ ಪಡೆದ ನೀವು ಧನ್ಯರು ನಿಮ್ಮ ನವದಾಂಪತ್ಯ ಜೀವನ ಸುಖಕರವಾಗಲಿ, ಸಂಸಾರದಲ್ಲಿ ಬರುವ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ, ಕೋಪ ನಿಮ್ಮ ಬದುಕನ್ನು ಹಾಳುಮಾಡುತ್ತದೆ. ಇದರಿಂದ ಎಚ್ಚರ ವಿರಬೇಕು ಎಂದರು.

ಬೆಂಗಳೂರು ವಿಭೂತಿಪುರ ಮಠದ ಡಾ|ಮಹಾಂತಲಿಂಗ ಶಿವಾಚಾರ್ ಸ್ವಾಮೀಜಿ, ಕೂಡ್ಲಿಗಿ ಹಿರೇಮಠಾಧ್ಯಕ್ಷ ಪ್ರಶಾಂತ ಸಾಗರ ಸ್ವಾಮೀಜಿ, ನಂದೀಪುರದ ಚರಂತೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು. ಇದಕ್ಕೂಮೊದಲು ಶ್ರೀಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ನಡೆಯಿತು.

ನಂತರ ಮಠದ ವತಿಯಿಂದ 10 ಕ್ಕೂ ಹೆಚ್ಚು ಜೋಡಿ ಸಾಮೂಹಿಕ ವಿವಾಹ ಕಾಠ್ಯಕ್ರಮದಲ್ಲಿ ಭಾಗವಹಿಸಿದ್ದರು. 41 ಜಂಗಮ ವಟುಗಳ ಶಿವದೀಕ್ಷೆ ಕಾಠ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಅಡಿಕಿ ಮಂಜುನಾಥ್ ,ಚಾಪಿ ಚಂದ್ರಪ್ಪ, ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು. ಮೈದೂರು ವಿಶ್ವನಾಥ ಕಾಠ್ಯಕ್ರಮ ನಿರೂಪಿಸಿದರು.

The post “ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು : ಉಜ್ಜಯಿನಿ ಶ್ರೀಗಳು “ appeared first on Hai Sandur kannada fortnightly news paper.

]]>
https://haisandur.com/2024/05/11/%e0%b2%b8%e0%b2%be%e0%b2%ae%e0%b3%82%e0%b2%b9%e0%b2%bf%e0%b2%95-%e0%b2%b5%e0%b2%bf%e0%b2%b5%e0%b2%be%e0%b2%b9%e0%b2%a6%e0%b2%bf%e0%b2%82%e0%b2%a6-%e0%b2%a6%e0%b3%81%e0%b2%82%e0%b2%a6%e0%b3%81/feed/ 0
ಬಸವಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆಯ ಬಸವೇಶ್ವರ ಜಯಂತಿ ಆಚರಣೆ https://haisandur.com/2024/05/10/%e0%b2%ac%e0%b2%b8%e0%b2%b5%e0%b2%a3%e0%b3%8d%e0%b2%a3%e0%b2%a8-%e0%b2%ad%e0%b2%be%e0%b2%b5%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b3%8a%e0%b2%82%e0%b2%a6%e0%b2%bf%e0%b2%97%e0%b3%86/ https://haisandur.com/2024/05/10/%e0%b2%ac%e0%b2%b8%e0%b2%b5%e0%b2%a3%e0%b3%8d%e0%b2%a3%e0%b2%a8-%e0%b2%ad%e0%b2%be%e0%b2%b5%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b3%8a%e0%b2%82%e0%b2%a6%e0%b2%bf%e0%b2%97%e0%b3%86/#respond Fri, 10 May 2024 11:33:23 +0000 https://haisandur.com/?p=35072 ಕೊಟ್ಟೂರು: ಕೋಟೆ ಬಸವೇಶ್ವರ ಗೆಳೆಯರ ಬಳಗದಿಂದ ಕೊಟ್ಟೂರಿನಲ್ಲಿ ಬಸವ ಜಯಂತಿಯನ್ನು ಎತ್ತಿನ ಬಸವ ಗಾಡಿಗಳನ್ನು ಹಬ್ಬದ ರೀತಿಯಲ್ಲಿ ತಯಾರಿಸಿ ಬಸವಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆ ಮುಖಾಂತರ ಹಿರೇಮಠ, ತೊಟ್ಟಿಲು ಮಠ ,ಗಚ್ಚಿನ ಮಠ, ಕೇಳಿಗೇರಿ ,ಉಜ್ಜಿನಿ ರಸ್ತೆ , ಬಸವಣ್ಣನ ದೇವಸ್ಥಾನ, ಬಸವೇಶ್ವರ ದೇವಸ್ಥಾನಗಳಲ್ಲಿ ಈ ಹಬ್ಬವನ್ನು ಹೆಚ್ಚಾಗಿ ಶುಕ್ರವಾರದಂದು ಆಚರಣೆ ಮಾಡಲಾಯಿತು. ಬಸವೇಶ್ವರ ಜಯಂತಿಯಂದು ಜನರು ಪ್ರಾರ್ಥನೆ ಮತ್ತು ಆಚರಣೆ ಗಳಿಗಾಗಿ ಹತ್ತಿರದ ಬಸವೇಶ್ವರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಲಿಂಗಾಯತ ಸಮಿತಿಗಳ ಜನರು ಈ ಅದ್ಭುತ ದಿನವನ್ನು […]

The post ಬಸವಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆಯ ಬಸವೇಶ್ವರ ಜಯಂತಿ ಆಚರಣೆ appeared first on Hai Sandur kannada fortnightly news paper.

]]>
ಕೊಟ್ಟೂರು: ಕೋಟೆ ಬಸವೇಶ್ವರ ಗೆಳೆಯರ ಬಳಗದಿಂದ ಕೊಟ್ಟೂರಿನಲ್ಲಿ ಬಸವ ಜಯಂತಿಯನ್ನು ಎತ್ತಿನ ಬಸವ ಗಾಡಿಗಳನ್ನು ಹಬ್ಬದ ರೀತಿಯಲ್ಲಿ ತಯಾರಿಸಿ ಬಸವಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆ ಮುಖಾಂತರ ಹಿರೇಮಠ, ತೊಟ್ಟಿಲು ಮಠ ,ಗಚ್ಚಿನ ಮಠ, ಕೇಳಿಗೇರಿ ,ಉಜ್ಜಿನಿ ರಸ್ತೆ , ಬಸವಣ್ಣನ ದೇವಸ್ಥಾನ, ಬಸವೇಶ್ವರ ದೇವಸ್ಥಾನಗಳಲ್ಲಿ ಈ ಹಬ್ಬವನ್ನು ಹೆಚ್ಚಾಗಿ ಶುಕ್ರವಾರದಂದು ಆಚರಣೆ ಮಾಡಲಾಯಿತು.

ಬಸವೇಶ್ವರ ಜಯಂತಿಯಂದು ಜನರು ಪ್ರಾರ್ಥನೆ ಮತ್ತು ಆಚರಣೆ ಗಳಿಗಾಗಿ ಹತ್ತಿರದ ಬಸವೇಶ್ವರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಲಿಂಗಾಯತ ಸಮಿತಿಗಳ ಜನರು ಈ ಅದ್ಭುತ ದಿನವನ್ನು ಆಚರಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಮತ್ತು ಎಲ್ಲರೂ ಶುಭಾಶಯಗಳನ್ನು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಮಂದಿರಗಳಲ್ಲಿ ಬಸವಣ್ಣನವರ ಜೀವನ ಕುರಿತು ಉಪನ್ಯಾಸಗಳು ನಡೆಯುತ್ತವೆ, ಬಸವಣ್ಣನವರ ಬೋಧನೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಅನೇಕ ಭಕ್ತರು ಕೂಡಲ ಸಂಗಮಕ್ಕೆ ಭೇಟಿ ನೀಡುತ್ತಾರೆ, ಅಲ್ಲಿ ಈ ಉತ್ಸವವು ಸುಮಾರು ಏಳು ದಿನಗಳವರೆಗೆ ನಡೆಯುತ್ತದೆ. ಬಸವಣ್ಣನ ದೇವಸ್ಥಾನಗಳಲ್ಲಿ ಹಲವಾರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅನೇಕ ಯುವಕರು ಭಾಗವಹಿಸಿದ್ದರು.

ವರದಿ: ಶಿವರಾಜ್ ಕನ್ನಡಿಗ

The post ಬಸವಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆಯ ಬಸವೇಶ್ವರ ಜಯಂತಿ ಆಚರಣೆ appeared first on Hai Sandur kannada fortnightly news paper.

]]>
https://haisandur.com/2024/05/10/%e0%b2%ac%e0%b2%b8%e0%b2%b5%e0%b2%a3%e0%b3%8d%e0%b2%a3%e0%b2%a8-%e0%b2%ad%e0%b2%be%e0%b2%b5%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b3%8a%e0%b2%82%e0%b2%a6%e0%b2%bf%e0%b2%97%e0%b3%86/feed/ 0
ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ https://haisandur.com/2024/05/10/%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b0%e0%b3%81%e0%b2%b3%e0%b2%b8%e0%b2%bf%e0%b2%a6%e0%b3%8d%e0%b2%a6%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%9c%e0%b2%be%e0%b2%a4%e0%b3%8d/ https://haisandur.com/2024/05/10/%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b0%e0%b3%81%e0%b2%b3%e0%b2%b8%e0%b2%bf%e0%b2%a6%e0%b3%8d%e0%b2%a6%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%9c%e0%b2%be%e0%b2%a4%e0%b3%8d/#respond Fri, 10 May 2024 11:31:15 +0000 https://haisandur.com/?p=35069 ಕೊಟ್ಟೂರು: ತಾಲೂಕಿನ ಉಜ್ಜಿನಿ ಗ್ರಾಮದ ಉಜ್ಜಯಿನಿಯಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮೇ 12 ಮತ್ತು 13 ರಂದು ಜರುಗಲಿದೆ ಎಂದು ಉಜ್ಜಿಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ ಮಹಾ ಸ್ವಾಮೀಜಿ ತಿಳಿಸಿದ್ದಾರೆ. ರಾಜ್ಯಾದ್ಯಂತ ಶ್ರೀ ಪೀಠಕ್ಕೆ ಇರುವ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಹಾಗೂ ರಥೋತ್ಸವ ದಿನ ಹಾಗೂ ಮರು ದಿನದಂದು ಸಕಲ ಭಕ್ತಾಗಳಿಗೆ ಪ್ರಸಾದ ವ್ಯವಸ್ಥೆಯೂ ಸಹ ಇರುತ್ತದೆ. ಇದರ ಜೊತೆಗೆ ಸಾಂಸ್ಕೃತಿಕ ಕಾಠ್ಯಕ್ರಮ, ಸಾಮೂಹಿಕ ವಿವಾಹಗಳು ಸೇರಿದಂತೆ ಧಾರ್ಮಿಕ ಕಾರಗಳು […]

The post ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ appeared first on Hai Sandur kannada fortnightly news paper.

]]>
ಕೊಟ್ಟೂರು: ತಾಲೂಕಿನ ಉಜ್ಜಿನಿ ಗ್ರಾಮದ ಉಜ್ಜಯಿನಿಯಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮೇ 12 ಮತ್ತು 13 ರಂದು ಜರುಗಲಿದೆ ಎಂದು ಉಜ್ಜಿಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ ಮಹಾ ಸ್ವಾಮೀಜಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಶ್ರೀ ಪೀಠಕ್ಕೆ ಇರುವ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಹಾಗೂ ರಥೋತ್ಸವ ದಿನ ಹಾಗೂ ಮರು ದಿನದಂದು ಸಕಲ ಭಕ್ತಾಗಳಿಗೆ ಪ್ರಸಾದ ವ್ಯವಸ್ಥೆಯೂ ಸಹ ಇರುತ್ತದೆ.

ಇದರ ಜೊತೆಗೆ ಸಾಂಸ್ಕೃತಿಕ ಕಾಠ್ಯಕ್ರಮ, ಸಾಮೂಹಿಕ ವಿವಾಹಗಳು ಸೇರಿದಂತೆ ಧಾರ್ಮಿಕ ಕಾರಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ.

ರಾಜ್ಯದ್ಯಾದಂತ ಹೆಸರು ವಾಸಿಯಾದ ಶಿಖರ ತೈಲಾಭಿಷೇಕ ನಡೆಯುವುದು ಉಜ್ಜಯಿನಿ ಪೀಠದ ವಿಶೇಷತೆಯಾಗಿದೆ. ಇದನ್ನು ಕಣ್ಣುಂಬಿಕೊಳ್ಳಲು ರಥೋತ್ಸವಕ್ಕಿಂತ ಹೆಚ್ಚಿನ ಸಂಖ್ಯೆ ತೈಲಾಭೀಷೇಕ ವೀಕ್ಷಣೆಗೆ ಭಕ್ತಾದಿಗಳು ಬರುತ್ತಾರೆ.

ಇದಕ್ಕೆ ಒಂದು ಐತಿಹ್ಯವಿದೆ. ಜರ್ಮಲಿ ಪಾಳೆಗಾರರಿಂದ ತಂದ ತೈಲವನ್ನು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಶಿಖರಕ್ಕೆ ಅರ್ಪಿಸಲಾಗುತ್ತದೆ. ನಂತರ ಭಕ್ತಾಧಿಗಳು ತಂದಿರುವ ತೈಲವನ್ನು ಎರೆಯಲಾಗುತ್ತದೆ.

ತೈಲಾಭಿಷೇಕಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀಮರುಳಸಿದ್ದೇಶ್ವರ ಸ್ವಾಮಿ ಒಳಿತನ್ನುಂಟು ಮಾಡಲಿ, ಈ ವರ್ಷ ಮಳೆ, ಬೆಳೆ ಸಮೃದ್ಧಿಯಾಗಿ ಸಕಲರಿಗೂ ಒಳಿತಾಗಲಿ ಎಂದು ಶ್ರೀಗಳು ಹಾರೈಸಿದರು.

The post ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ appeared first on Hai Sandur kannada fortnightly news paper.

]]>
https://haisandur.com/2024/05/10/%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b0%e0%b3%81%e0%b2%b3%e0%b2%b8%e0%b2%bf%e0%b2%a6%e0%b3%8d%e0%b2%a6%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%9c%e0%b2%be%e0%b2%a4%e0%b3%8d/feed/ 0
ಬಿರು ಬಿಸಿಲು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು https://haisandur.com/2024/05/08/%e0%b2%ac%e0%b2%bf%e0%b2%b0%e0%b3%81-%e0%b2%ac%e0%b2%bf%e0%b2%b8%e0%b2%bf%e0%b2%b2%e0%b3%81-%e0%b2%b2%e0%b3%86%e0%b2%95%e0%b3%8d%e0%b2%95%e0%b2%bf%e0%b2%b8%e0%b2%a6%e0%b3%86-%e0%b2%b8%e0%b2%b0/ https://haisandur.com/2024/05/08/%e0%b2%ac%e0%b2%bf%e0%b2%b0%e0%b3%81-%e0%b2%ac%e0%b2%bf%e0%b2%b8%e0%b2%bf%e0%b2%b2%e0%b3%81-%e0%b2%b2%e0%b3%86%e0%b2%95%e0%b3%8d%e0%b2%95%e0%b2%bf%e0%b2%b8%e0%b2%a6%e0%b3%86-%e0%b2%b8%e0%b2%b0/#respond Wed, 08 May 2024 13:47:36 +0000 https://haisandur.com/?p=35064 ಕೊಟ್ಟೂರು: ಪಟ್ಟಣದ ಆರಾಧ್ಯ ದೇವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ  ಅಕ್ಷತದಿಗಿ  ಅಮವಾಸ್ಯೆ ನಿಮಿತ್ತ ಬುಧವಾರ ಭಕ್ತರು ದಂಡು ದಂಡಾಗಿ ಆಗಮಿಸಿ, ಬಿರು ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಭಕ್ತರು ಸ್ವಾಮಿಯ ದರ್ಶನ ಪಡೆಯಲು ಆಗಮಿಸಿದರು. ಅಮವಾಸೆ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಹಿರೇಮಠದಲ್ಲಿ ಸ್ವಾಮಿಗೆ ರುದ್ರಾಭಿಷೇಕ ಮಹಾಭಿಷೇಕ ಸೇರಿದಂತೆ ವಿವಿಧಪೂಜಾ ಕೈಂಕಾರ್ಯಗಳು ನೆರವೇರಿದವು. ಪೂಜೆಗಳಲ್ಲಿ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಬುಧವಾರ ಅಮವಾಸ್ಯೆ ದಿನ ತಾಲೂಕು ಸೇರಿದಂತೆ ಜಿಲ್ಲೆಯಲ್ಲದೆ, ಅನ್ಯ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವಸ್ಥಾನದ ಸ್ವಾಮಿಯ […]

The post ಬಿರು ಬಿಸಿಲು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು appeared first on Hai Sandur kannada fortnightly news paper.

]]>
ಕೊಟ್ಟೂರು: ಪಟ್ಟಣದ ಆರಾಧ್ಯ ದೇವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ  ಅಕ್ಷತದಿಗಿ  ಅಮವಾಸ್ಯೆ ನಿಮಿತ್ತ ಬುಧವಾರ ಭಕ್ತರು ದಂಡು ದಂಡಾಗಿ ಆಗಮಿಸಿ, ಬಿರು ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಭಕ್ತರು ಸ್ವಾಮಿಯ ದರ್ಶನ ಪಡೆಯಲು ಆಗಮಿಸಿದರು.

ಅಮವಾಸೆ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಹಿರೇಮಠದಲ್ಲಿ ಸ್ವಾಮಿಗೆ ರುದ್ರಾಭಿಷೇಕ ಮಹಾಭಿಷೇಕ ಸೇರಿದಂತೆ ವಿವಿಧಪೂಜಾ ಕೈಂಕಾರ್ಯಗಳು ನೆರವೇರಿದವು. ಪೂಜೆಗಳಲ್ಲಿ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಬುಧವಾರ ಅಮವಾಸ್ಯೆ ದಿನ ತಾಲೂಕು ಸೇರಿದಂತೆ ಜಿಲ್ಲೆಯಲ್ಲದೆ, ಅನ್ಯ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವಸ್ಥಾನದ ಸ್ವಾಮಿಯ ದರ್ಶನ ಪಡೆದರು.

ದೇವಸ್ಥಾನಕ್ಕೆ ಹೋಗುವ ಬಲಭಾಗದಲ್ಲಿ  200 ಮೀಟರ್ ಹಳೆ ಪಟ್ಟಣ ಪಂಚಾಯಿತಿ ವರೆಗೂ ಸರತಿಯಲ್ಲಿ ನಿಂತ ಭಕ್ತರಿಗೆ ನೆರಳಿನ ವಿಷಯವಾಗಿ ಎರಡೂ ಬದಿಗಳಲ್ಲಿ ಶಾಮಿಯಾನ ವ್ಯವಸ್ಥೆಯನ್ನು ದೇವಸ್ಥಾನದ ದತ್ತಿ ಇಲಾಖೆಯವರು ಮಾಡಲಾಗಿತ್ತು.

ದರ್ಶನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀ ಸ್ವಾಮಿಯ ಪ್ರಸಾದ ಸ್ವೀಕರಿಸಿ ಭಕ್ತಿಯಿಂದ ನಮಿಸಿದರು.

ವರದಿ: ಶಿವರಾಜ್ ಕನ್ನಡಿಗ

The post ಬಿರು ಬಿಸಿಲು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು appeared first on Hai Sandur kannada fortnightly news paper.

]]>
https://haisandur.com/2024/05/08/%e0%b2%ac%e0%b2%bf%e0%b2%b0%e0%b3%81-%e0%b2%ac%e0%b2%bf%e0%b2%b8%e0%b2%bf%e0%b2%b2%e0%b3%81-%e0%b2%b2%e0%b3%86%e0%b2%95%e0%b3%8d%e0%b2%95%e0%b2%bf%e0%b2%b8%e0%b2%a6%e0%b3%86-%e0%b2%b8%e0%b2%b0/feed/ 0
ಮತದಾನ ಜಾಗೃತಿಗೆ ‘ಸಾಂಸ್ಕøತಿಕ ಕಾರ್ಯಕ್ರಮ’ ಪ್ರತಿ ಮತ ಅಮೂಲ್ಯ, ತಪ್ಪದೇ ಚಲಾಯಿಸಿ: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf%e0%b2%97%e0%b3%86-%e0%b2%b8%e0%b2%be%e0%b2%82%e0%b2%b8%e0%b3%8d%e0%b2%95o%e0%b2%a4/ https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf%e0%b2%97%e0%b3%86-%e0%b2%b8%e0%b2%be%e0%b2%82%e0%b2%b8%e0%b3%8d%e0%b2%95o%e0%b2%a4/#respond Sun, 05 May 2024 14:03:39 +0000 https://haisandur.com/?p=35060 ಬಳ್ಳಾರಿ,ಮೇ 05:ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಮೇ 07 ರಂದು ಮತದಾನ ನಡೆಯಲಿದ್ದು, ಪ್ರತಿ ಮತವು ಅಮೂಲ್ಯವಾಗಿದ್ದು, ತಪ್ಪದೇ ಮತ ಚಲಾಯಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಜಾಗೃತಿ ಅಂಗವಾಗಿ ನಗರದ ಹೆಚ್.ಆರ್.ಗವಿಯಪ್ಪ (ಮೋತಿ) ವೃತ್ತದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮತದಾನದ ಮೌಲ್ಯ ಅರಿತುಕೊಂಡು, ಪ್ರತಿಯೊಬ್ಬರೂ ನಿಷ್ಠೆಯಿಂದ ಮತ ಚಲಾಯಿಸಬೇಕು. ಜಿಲ್ಲೆಯ ಶೇಕಡವಾರು […]

The post ಮತದಾನ ಜಾಗೃತಿಗೆ ‘ಸಾಂಸ್ಕøತಿಕ ಕಾರ್ಯಕ್ರಮ’ ಪ್ರತಿ ಮತ ಅಮೂಲ್ಯ, ತಪ್ಪದೇ ಚಲಾಯಿಸಿ: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ appeared first on Hai Sandur kannada fortnightly news paper.

]]>
ಬಳ್ಳಾರಿ,ಮೇ 05:ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಮೇ 07 ರಂದು ಮತದಾನ ನಡೆಯಲಿದ್ದು, ಪ್ರತಿ ಮತವು ಅಮೂಲ್ಯವಾಗಿದ್ದು, ತಪ್ಪದೇ ಮತ ಚಲಾಯಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಜಾಗೃತಿ ಅಂಗವಾಗಿ ನಗರದ ಹೆಚ್.ಆರ್.ಗವಿಯಪ್ಪ (ಮೋತಿ) ವೃತ್ತದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನದ ಮೌಲ್ಯ ಅರಿತುಕೊಂಡು, ಪ್ರತಿಯೊಬ್ಬರೂ ನಿಷ್ಠೆಯಿಂದ ಮತ ಚಲಾಯಿಸಬೇಕು. ಜಿಲ್ಲೆಯ ಶೇಕಡವಾರು ಮತದಾನ ಪ್ರಮಾಣ ಹೆಚ್ಚಾಗಲು ತಾವು ಮಾತ್ರವಲ್ಲದೆ, ತಮ್ಮ ನೆರೆಹೊರೆಯವರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಬೇಕು ಎಂದರು.
ಈ ಬಾರಿ ಬಿಸಿಲಿನ ಬೇಗೆ ಜಾಸ್ತಿಯಿರುವುದರಿಂದ ನಾಗರಿಕರು ಆದಷ್ಟು ಬೇಗನೇ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು ಎಂದು ಸಲಹೆ ಮಾಡಿದರು.
ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೆ ನಿರ್ಭೀತರಾಗಿ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಬೇಕು ಎಂದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವಾರು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು ತಪ್ಪದೇ ಮತ ಚಲಾಯಿಸಿ ಮತದಾನ ಪ್ರಮಾಣ ಹೆಚ್ಚಳಕ್ಕೆನ ಸಹಕರಿಸಬೇಕು ಎಂದು ಕೋರಿದರು.
ಮತಗಟ್ಟೆಗಳಿಗೆ ಬರುವ ಮತದಾರರಿಗೆ ಉತ್ತಮ ಅನುಭವ ಹೊಂದಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅದೇರೀತಿಯಾಗಿ ನೆರಳಿಗೆ ಶ್ಯಾಮಿಯಾನ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿಕಲಚೇತನರಿಗೆ, ಹಿರಿಯನಾಗರಿಕರಿಗೆ ರ್ಯಾಂಪ್, ವೀಲ್‍ಚೇರ್ ಹಾಗೂ ವಿಶೇಷ ಸಾಲಿನಲ್ಲಿ ಬಂದು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮತದಾನ ಜಾಗೃತಿಗೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯವರನ್ನೊಳಗೊಂಡಂತೆ ಸ್ವೀಪ್ ಚಟುವಟಿಕೆಗಳಲ್ಲಿ ಉತ್ಸುಕರಾಗಿ ಭಾಗವಹಿಸಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ಸ್ವೀಪ್ ಐಕಾನ್ ಆದ ಎಸ್.ಕೆ.ಆರ್.ಜಿಲಾನ್ ಭಾಷಾ ಅವರು ಮಾತನಾಡಿ, ಮತದಾನ ದಿನದಂದು ರಜೆ ಇದೆ ಎಂದು ಮೊಬೈಲ್ ಗೀಳಿಗೆ ಅವಲಂಬಿತರಾಗದೇ ಪ್ರತಿಯೊಬ್ಬರೂ ತಪ್ಪದೇ ಮತಗಟ್ಟೆಗಳಿಗೆ ತೆರಳಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ, ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.
ಇದೇ ವೇಳೆ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಕಣ್ಮನ ಸೆಳೆದ ಸಾಂಸ್ಕøತಿಕ ಕಾರ್ಯಕ್ರಮಗಳು:
ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬಯಲಾಟ ಸನ್ನಿವೇಷಗಳು, ಜಾನಪದ ಗೀತೆಗಳು, ಗಾಯನ, ಭರತನಾಟ್ಯ ಸೇರಿದಂತೆ ಸಮೂಹ ನೃತ್ಯಗಳು ನೋಡುಗರ ಮೈಮನ ಸೆಳೆಯಿತು.
ಮುದ್ದಟನೂರಿನ ಹೆಜ್ಜೆ-ಗೆಜ್ಜೆ ಕಲಾತಂಡದವರಿಂದ ಬಯಲಾಟ ಸನ್ನಿವೇಶ, ಚಿಗುರು ಕಲಾತಂಡದಿಂದ ಜಾನಪದ ಗೀತೆಗಳು, ಜಡೇಶ್ ಎಮ್ಮಿಗನೂರು ಅವರಿಂದ ಗಾಯನ ರಸಮಂಜರಿ ಮತ್ತು ಜಿಲಾನ್ ಭಾಷಾ ಅವರ ತಂಡ, ಇಂದ್ರಾಣಿಯವರ ತಂಡ ಹಾಗೂ ಬಲಕುಂದಿ ಬಸವರಾಜ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸೆಲ್ಪಿ ಬೂತ್ ತೆರೆಯಲಾಗಿದ್ದು, ಸಾರ್ವಜನಿಕರು ಫೋಟೊ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಪ್ರಾದೇಶಿಕ ಉಪವಿಭಾಗದ ಉಪ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್.ಸೂರ್ಯವಂಶಿ, ಮಹಾನಗರ ಪಾಲಿಕೆ ಆಯುಕ್ತ ಜಿ,ಖಲೀಲ್ ಸಾಬ್, ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ವಾಗೇಶ್ ಶಿವಾಚಾರ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು ಸೇರಿದಂತೆ ಕಲಾವಿದರು, ಸಾರ್ವಜನಿಕರು ಉಪಸ್ಥಿತರಿದ್ದರು.

The post ಮತದಾನ ಜಾಗೃತಿಗೆ ‘ಸಾಂಸ್ಕøತಿಕ ಕಾರ್ಯಕ್ರಮ’ ಪ್ರತಿ ಮತ ಅಮೂಲ್ಯ, ತಪ್ಪದೇ ಚಲಾಯಿಸಿ: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ appeared first on Hai Sandur kannada fortnightly news paper.

]]>
https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf%e0%b2%97%e0%b3%86-%e0%b2%b8%e0%b2%be%e0%b2%82%e0%b2%b8%e0%b3%8d%e0%b2%95o%e0%b2%a4/feed/ 0
“ಮತದಾನ ಮಾಡಿದವನೇ ಮಹಾಶೂರ “ https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b5%e0%b2%a8%e0%b3%87-%e0%b2%ae%e0%b2%b9%e0%b2%be%e0%b2%b6%e0%b3%82%e0%b2%b0/ https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b5%e0%b2%a8%e0%b3%87-%e0%b2%ae%e0%b2%b9%e0%b2%be%e0%b2%b6%e0%b3%82%e0%b2%b0/#respond Sun, 05 May 2024 13:55:39 +0000 https://haisandur.com/?p=35056 ಇಂದು ದಿನಾಂಕ 05 05 2024 ರಂದು ಭಾನುವಾರ ತಾಲೂಕು ಆಡಳಿತ ಹಾಗೂ ಸಂಡೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಜಾಗೃತಿ ಮತದಾನ ಜಾಗೃತಿ ಜಾತ ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್ ಓಟ ಹಾಗೂ ಭಾನುವಾರದ ಸಂತೆಯ ದಿವಸ ಎಲ್ಲಾ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಮತದಾನ ಜಾಗೃತಿ ಅಭಿಯಾನವನ್ನು ಕರಪತ್ರ ಹಂಚುವ ಮೂಲಕ ಹಮ್ಮಿಕೊಳ್ಳಲಾಯಿತು. ಸದರಿ ಮ್ಯಾರಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಮಾನ್ಯ ಸಹಾಯಕ ಚುನಾವಣಾ ಅಧಿಕಾರಿಗಳಾದ ಸತೀಶ್ ರವರು ಉದ್ಘಾಟಿಸಿದರು. ಮ್ಯಾರಥಾನ್ ಓಟ ತಾಲೂಕು […]

The post “ಮತದಾನ ಮಾಡಿದವನೇ ಮಹಾಶೂರ “ appeared first on Hai Sandur kannada fortnightly news paper.

]]>
ಇಂದು ದಿನಾಂಕ 05 05 2024 ರಂದು ಭಾನುವಾರ ತಾಲೂಕು ಆಡಳಿತ ಹಾಗೂ ಸಂಡೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಜಾಗೃತಿ ಮತದಾನ ಜಾಗೃತಿ ಜಾತ ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್ ಓಟ ಹಾಗೂ ಭಾನುವಾರದ ಸಂತೆಯ ದಿವಸ ಎಲ್ಲಾ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಮತದಾನ ಜಾಗೃತಿ ಅಭಿಯಾನವನ್ನು ಕರಪತ್ರ ಹಂಚುವ ಮೂಲಕ ಹಮ್ಮಿಕೊಳ್ಳಲಾಯಿತು. ಸದರಿ ಮ್ಯಾರಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಮಾನ್ಯ ಸಹಾಯಕ ಚುನಾವಣಾ ಅಧಿಕಾರಿಗಳಾದ ಸತೀಶ್ ರವರು ಉದ್ಘಾಟಿಸಿದರು.

ಮ್ಯಾರಥಾನ್ ಓಟ ತಾಲೂಕು ಪಂಚಾಯತಿಯಿಂದ ಪ್ರಾರಂಭವಾಗಿ ವಿಜಯ ಸರ್ಕಲ್, ಪುರಸಭೆ ಬಸ್ ನಿಲ್ದಾಣ, ಉಡುಸಲಮ್ಮದೇವಿಯ ದೇವಸ್ಥಾನದ ಮಾರ್ಗವಾಗಿ ಎಪಿಎಂಸಿ ಮಾರ್ಕೆಟ್ ನಲ್ಲಿ ಅಂತ್ಯಗೊಂಡಿತು. ನಂತರ ಎಪಿಎಂಸಿ ಮಾರ್ಕೆಟ್ ನಲ್ಲಿ ಭಾನುವಾರ ಸಂತೆಯ ದಿನವಾದುದರಿಂದ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿ ಇದ್ದ ಪ್ರಯುಕ್ತ ಸಾರ್ವಜನಿಕರಲ್ಲಿ ಹಾಗೂ ಮಳಿಗೆಯ ವ್ಯಾಪಾರಸ್ಥರಲ್ಲಿ ಮತದಾನ ಜಾಗೃತಿಯನ್ನು ಕರಪತ್ರವನ್ನ ಪ್ರತಿಯೊಬ್ಬರಿಗೂ ಹಂಚುವ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು. ನಂತರ ತಾಲೂಕು ಪಂಚಾಯತಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಜಾಗೃತಿ ಅಭಿಯಾನ ಅಂತ್ಯಗೊಂಡಿತು.

ಈ ಸಂಧರ್ಭದಲ್ಲಿ ತಾಲೂಕು ಸ್ವಿಫ್ ಸಮಿತಿ ಅಧ್ಯಕ್ಷರಾದ ಹೆಚ್. ಷಡಕ್ಷರಯ್ಯ, ತಹಶೀಲ್ದಾರರಾದ ಅನಿಲ್ ಕುಮಾರ್, ಪುರಸಭೆ ಮುಖ್ಯ ಅಧಿಕಾರಿಗಳಾದ ಜಯಣ್ಣ, ನಂದಿಹಳ್ಳಿ ಪಿಜಿ ಸೆಂಟರ್ ನ ವಿದ್ಯಾರ್ಥಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.

The post “ಮತದಾನ ಮಾಡಿದವನೇ ಮಹಾಶೂರ “ appeared first on Hai Sandur kannada fortnightly news paper.

]]>
https://haisandur.com/2024/05/05/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%ae%e0%b2%be%e0%b2%a1%e0%b2%bf%e0%b2%a6%e0%b2%b5%e0%b2%a8%e0%b3%87-%e0%b2%ae%e0%b2%b9%e0%b2%be%e0%b2%b6%e0%b3%82%e0%b2%b0/feed/ 0
ವಿಜಯನಗರ ಜಿಲ್ಲಾ ವಕೀಲರ ಸಂಘದಿಂದ ಮತದಾನ ಜಾಗೃತಿ, https://haisandur.com/2024/05/05/%e0%b2%b5%e0%b2%bf%e0%b2%9c%e0%b2%af%e0%b2%a8%e0%b2%97%e0%b2%b0-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%b5%e0%b2%95%e0%b3%80%e0%b2%b2%e0%b2%b0-%e0%b2%b8%e0%b2%82%e0%b2%98/ https://haisandur.com/2024/05/05/%e0%b2%b5%e0%b2%bf%e0%b2%9c%e0%b2%af%e0%b2%a8%e0%b2%97%e0%b2%b0-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%b5%e0%b2%95%e0%b3%80%e0%b2%b2%e0%b2%b0-%e0%b2%b8%e0%b2%82%e0%b2%98/#respond Sun, 05 May 2024 13:51:15 +0000 https://haisandur.com/?p=35051 ಹೊಸಪೇಟೆ,:ವಿಜಯನಗರ ಜಿಲ್ಲಾ ವಕೀಲರ ಸಂಘ ಹೊಸಪೇಟೆಯಲ್ಲಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಕುರಿತು ನಗರದಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು. ಕೋರ್ಟ್ ಆವರಣದಿಂದ ಶಾನ್ಬೋಗ್ ಸರ್ಕಲ್ ನಿಂದ ಹೊರಟು ನಗರದಾದ್ಯಂತ ಹಲವು ಸ್ಥಳಗಳಲ್ಲಿ ಪ್ರಚಾರ ಮಾಡುತ್ತಾ ವಿಜಯನಗರ ಕಾಲೇಜು ರಸ್ತೆಯ ಮೂಲಕ ಮತದಾನ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಶ್ರೀನಿವಾಸ್ ಮೂರ್ತಿ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರು ಬಿಸಿಲು ಎನ್ನದೆ ತಪ್ಪದೆ ಮತದಾನ ಮಾಡಿ. ನಮ್ಮ ಹಕ್ಕನ್ನು ಚಲಾಯಿಸಬೇಕೆಂದು ನಾವೆಲ್ಲರೂ ಭಾರತದ […]

The post ವಿಜಯನಗರ ಜಿಲ್ಲಾ ವಕೀಲರ ಸಂಘದಿಂದ ಮತದಾನ ಜಾಗೃತಿ, appeared first on Hai Sandur kannada fortnightly news paper.

]]>
ಹೊಸಪೇಟೆ,:ವಿಜಯನಗರ ಜಿಲ್ಲಾ ವಕೀಲರ ಸಂಘ ಹೊಸಪೇಟೆಯಲ್ಲಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಕುರಿತು ನಗರದಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು. ಕೋರ್ಟ್ ಆವರಣದಿಂದ ಶಾನ್ಬೋಗ್ ಸರ್ಕಲ್ ನಿಂದ ಹೊರಟು ನಗರದಾದ್ಯಂತ ಹಲವು ಸ್ಥಳಗಳಲ್ಲಿ ಪ್ರಚಾರ ಮಾಡುತ್ತಾ ವಿಜಯನಗರ ಕಾಲೇಜು ರಸ್ತೆಯ ಮೂಲಕ ಮತದಾನ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಶ್ರೀನಿವಾಸ್ ಮೂರ್ತಿ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರು ಬಿಸಿಲು ಎನ್ನದೆ ತಪ್ಪದೆ ಮತದಾನ ಮಾಡಿ. ನಮ್ಮ ಹಕ್ಕನ್ನು ಚಲಾಯಿಸಬೇಕೆಂದು ನಾವೆಲ್ಲರೂ ಭಾರತದ ಸಂವಿಧಾನ ಅಡಿಯಲ್ಲಿ ಒಂದಾಗಿ ಬಾಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಕೆ.ಪ್ರಹ್ಲಾದ್ ಹಾಗೂ ಉಪಾಧ್ಯಕ್ಷರು ಹೆಚ್ ಎಂ.ಮಂಜುನಾಥ್ ಹಾಗೂ ಪ್ರಚಾರದಲ್ಲಿ ಎಲ್ಲಾ ಸರ್ವ ಸದಸ್ಯರು ಭಾಗಿಯಾಗಿದ್ದರು.

The post ವಿಜಯನಗರ ಜಿಲ್ಲಾ ವಕೀಲರ ಸಂಘದಿಂದ ಮತದಾನ ಜಾಗೃತಿ, appeared first on Hai Sandur kannada fortnightly news paper.

]]>
https://haisandur.com/2024/05/05/%e0%b2%b5%e0%b2%bf%e0%b2%9c%e0%b2%af%e0%b2%a8%e0%b2%97%e0%b2%b0-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%b5%e0%b2%95%e0%b3%80%e0%b2%b2%e0%b2%b0-%e0%b2%b8%e0%b2%82%e0%b2%98/feed/ 0
“ಸಂತೋಷ್ ಲಾಡ್ ಭಾಷಣಕ್ಕೆ ಕೊಟ್ಟೂರಿನ ಜನರು ಫುಲ್ ಖುಷ್ “ https://haisandur.com/2024/05/05/%e0%b2%b8%e0%b2%82%e0%b2%a4%e0%b3%8b%e0%b2%b7%e0%b3%8d-%e0%b2%b2%e0%b2%be%e0%b2%a1%e0%b3%8d-%e0%b2%ad%e0%b2%be%e0%b2%b7%e0%b2%a3%e0%b2%95%e0%b3%8d%e0%b2%95%e0%b3%86-%e0%b2%95%e0%b3%8a%e0%b2%9f/ https://haisandur.com/2024/05/05/%e0%b2%b8%e0%b2%82%e0%b2%a4%e0%b3%8b%e0%b2%b7%e0%b3%8d-%e0%b2%b2%e0%b2%be%e0%b2%a1%e0%b3%8d-%e0%b2%ad%e0%b2%be%e0%b2%b7%e0%b2%a3%e0%b2%95%e0%b3%8d%e0%b2%95%e0%b3%86-%e0%b2%95%e0%b3%8a%e0%b2%9f/#respond Sun, 05 May 2024 07:46:10 +0000 https://haisandur.com/?p=35044 ಕೊಟ್ಟೂರು ಪಟ್ಟಣದ ತೆರು ಬಯಲು ನಲ್ಲಿ ಬಳ್ಳಾರಿ ವಿಜಯನಗರ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಅವರು ಕಾಂಗ್ರೆಸ್ ಬೃಹತ್ ಸಮಾವೇಶ ಶನಿವಾರದಂದು ಏರ್ಪಡಿಸಲಾಗಿತ್ತು. ನಂತರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ್ ಲಾಡ್ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಹೇಳಲಿ ಏನೆಂಬುದನ್ನು ಜನರ ಮುಂದಿಡಲಿ. ಬಾಂಗ್ಲಾದೇಶದ ಜಿಡಿಪಿ, ತಲಾ ಆದಾಯ ನಮಗಿಂತ ಹೆಚ್ಚಿಗೆಯಿದೆ ಇದರ ಬಗ್ಗೆ ಪ್ರಧಾನಿ ಮಾತನಾಡಲಿ. ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗೆ ಬರಲಿ. ಸುದ್ದಿಗೋಷ್ಠಿ […]

The post “ಸಂತೋಷ್ ಲಾಡ್ ಭಾಷಣಕ್ಕೆ ಕೊಟ್ಟೂರಿನ ಜನರು ಫುಲ್ ಖುಷ್ “ appeared first on Hai Sandur kannada fortnightly news paper.

]]>
ಕೊಟ್ಟೂರು ಪಟ್ಟಣದ ತೆರು ಬಯಲು ನಲ್ಲಿ ಬಳ್ಳಾರಿ ವಿಜಯನಗರ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಅವರು ಕಾಂಗ್ರೆಸ್ ಬೃಹತ್ ಸಮಾವೇಶ ಶನಿವಾರದಂದು ಏರ್ಪಡಿಸಲಾಗಿತ್ತು.

ನಂತರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ್ ಲಾಡ್ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಹೇಳಲಿ ಏನೆಂಬುದನ್ನು ಜನರ ಮುಂದಿಡಲಿ. ಬಾಂಗ್ಲಾದೇಶದ ಜಿಡಿಪಿ, ತಲಾ ಆದಾಯ ನಮಗಿಂತ ಹೆಚ್ಚಿಗೆಯಿದೆ ಇದರ ಬಗ್ಗೆ ಪ್ರಧಾನಿ ಮಾತನಾಡಲಿ.

ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗೆ ಬರಲಿ. ಸುದ್ದಿಗೋಷ್ಠಿ ನಡೆಸಲು ಪ್ರಧಾನಿ ಹಿಂದೇಟು ಹಾಕುವುದು ಯಾಕೆ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. ಕಾಂಗ್ರೆಸ್ ಏನೂ ಮಾಡಿಲ್ಲ ಅಂತ ಅಧಿಕಾರಕ್ಕೆ ಬಂದು 10 ವರ್ಷ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಅಂಬಾನಿ, ಅದಾನಿಗೆ ಹಣ ಮಾಡಿಕೊಡಲು ಜನರಿಗೆ ಬರೆ ಹಾಕಿದ್ದಾರೆ.

ಪ್ರತಿ ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ದೇಶದಲ್ಲಿ ಸುಳ್ಳು ಭಾಷಣ ಬಿಟ್ಟರೆ ಬೇರೇನೂ ಮಾಡಿಲ್ಲ.

ಬಿಜೆಪಿಯವರಿಗೆ ರಾಮ ಮಂದಿರ, ಹಿಂದುತ್ವ, ಪಾಕಿಸ್ತಾನ, ಮುಸ್ಲಿಂ ಮಾತ್ರ, ಇವುಗಳನ್ನ ಬಿಟ್ಟರೆ ಯಾವುದರ ಬಗ್ಗೆಯೂ ಅವರು ಮಾತನಾಡಲ್ಲ. ಪ್ರಧಾನಿ ಬರೀ ಭಾಷಣ ಮಾಡುತ್ತಾರೆ. ಆದ್ರೆ ಯಾವುದಕ್ಕು ಉತ್ತರ ಕೊಡಲ್ಲ. ಈ ದೇಶ ಯಾರನ್ನ ಪ್ರಶ್ನೆ ಕೇಳಬೇಕು. ಚುನಾವಣೆಯಲ್ಲಿ ಅದು ಒಂದು‌ ಅಜಂಡಾ ಆಗಬೇಕು

ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅವ್ಯವ್ಯಹಾರ ಆಗಿದೆ. ಅಯೋಧ್ಯ ರಾಮ ಮಂದಿರ ನಿರ್ಮಾಣದಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ

ಕಪ್ಪು ಹಣ ತರ್ತಿವಿ ಅಂತ ಹೇಳಿದ್ದರು ಅದು ಕೂಡ ಆಗಿಲ್ಲ. ಪ್ರಧಾನಿಯವರ ಹೇಳಿಕೆಗಳನ್ನ ಪಟ್ಟಿ ಮಾಡಿಕೊಂಡು ಪ್ರಶ್ನೆ ಕೇಳಬೇಕು. ಮೊದಲು ಕೇಂದ್ರದಲ್ಲಿ ಆದ ಅವ್ಯವ್ಯಹಾರದ ಬಗ್ಗೆ ಚರ್ಚೆ ಆಗಲಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಮಾಜಿ ಶಾಸಕರು ಭೀಮ ನಾಯಕ್ ಅವರು ಮಾತನಾಡಿ ಕೆಂದ್ರ ಸರ್ಕಾರ ಸಾಮಾನ್ಯ ಜನಗಳ ಮೇಲೆ ಪೆಟ್ರೋಲ್ ಬೆಲೆ ಮತ್ತು ನಿರೊದ್ಯಗ, ಗ್ಯಾಸ್ ಸಿಲಿಂಡರ್ ದರ ಏರಿಕೆ, ಜನಸಾಮಾನ್ಯರು ಬಿಜೆಪಿ ಯನ್ನು ತಿರುಗಿಸುತ್ತಾರೆ.

ಕಾಂಗ್ರೆಸ್ ಸರ್ಕಾರ ರೈತರ 72 ಸಾವಿರ ಸಾಲ ಮನ್ನಾ ಮಾಡಿದರು ಅಂದ್ರೆ  ಪ್ರಧಾನಿ ನರೇಂದ್ರ ಮೋದಿ ಅವರು ಎಂದೂ ರೈತರ ಸಾಲ ಮನ್ನಾ ಮಾಡಿಲ್ಲ 16 ಲಕ್ಷ ಸಾವಿರ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಪ್ರತಿಯೊಬ್ಬ ಪ್ರಜಾ ಗಳಿಗೆ ಚಂಬು ಕೊಟ್ಟಿದ್ದಾರೆ.ಅದರೆ  ನುಡಿದಂತೆ ನಡೆದಿರುವ ನಮ್ಮ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪಾಸ್,ನಿರೂದ್ಯಗವರಿಗೆ 3000,10 ಕೆಜಿ ಅಕ್ಕಿ ಅಕೌಂಟ್ ನಲ್ಲಿ ಜಮ ಮಾಡುತ್ತವೆ, ಉಚಿತ 200 ವಿನಿಟ್ ಪ್ರೀ, ಮಹಿಳಾ ಅಕೌಂಟ್ ಗೆ 2000 ಫ್ರೀ, ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರ ಎಂದರು.

ಬಳ್ಳಾರಿ -ವಿಜಯನಗರ ಲೋಕಸಭಾ ಅಭ್ಯರ್ಥಿ ಈ ತುಕಾರಾಂ ಮಾತನಾಡಿ ಈ ಹಿಂದೆ ಇರುವ ಬಿಜೆಪಿ ಯ ಎಂಪಿ ಸಾಹೇಬರು ಒಂದು ಅಭಿವೃದ್ಧಿ ಕೆಲಸ ಇಲ್ಲ.
ಈ ಬಾರಿ ಚುನಾವಣೆಯಲ್ಲಿ ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯುತ್ತವೆ ಅದಕ್ಕಾಗಿ ದೇಶದ ರಕ್ಷಣೆ ಪ್ರತಿಯೊಬ್ಬರ ಘೋಷಣೆ ಆಗಬೇಕು . ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು

ಈ ಸಂದರ್ಭದಲ್ಲಿ ಜೆಡಿಎಸ್ ತೊರೆದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯಕ್ ಅವರು ಕಾಂಗ್ರೆಸ್  ಸೇರ್ಪಡೆಗೊಂಡರು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಡಿಕಿ ಮಂಜುನಾಥ್ , ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ ದ್ವಾರಕೇಶ್ ,ಎಂ ಎಂ ಜೆ ಸತ್ಯ ಪ್ರಕಾಶ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ದೊಡ್ಡ ರಾಮಣ್ಣ, ಮಾಜಿ ಶಾಸಕರು ನಬಿಸಾಬ್ ,ವಿಟಿಎಸ್ ತಿಪ್ಪೇಸ್ವಾಮಿ, ತೋಟದ ರಾಮಣ್ಣ, ಶಿರಿಬಿ ಕೊಟ್ರೇಶ್,ಎಂ ಶ್ರೀನಿವಾಸ್, ಶಿವುಕುಮಾರ ಗೌಡ,ಪಟ್ಟಣ ಪಂಚಾಯಿತಿ ಮಹಿಳಾ ಸದಸ್ಯರು, ಕೆ ಶಫಿ,ತಗ್ಗಿನಕೇರಿ ಜಗದೀಶ್,ಬದ್ದಿ ಮರಿಸ್ವಾಮಿ, ತೆಗ್ಗಿನಕೇರಿ ಹನುಮಂತಪ್ಪ ವಕೀಲರು ಇನ್ನೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

The post “ಸಂತೋಷ್ ಲಾಡ್ ಭಾಷಣಕ್ಕೆ ಕೊಟ್ಟೂರಿನ ಜನರು ಫುಲ್ ಖುಷ್ “ appeared first on Hai Sandur kannada fortnightly news paper.

]]>
https://haisandur.com/2024/05/05/%e0%b2%b8%e0%b2%82%e0%b2%a4%e0%b3%8b%e0%b2%b7%e0%b3%8d-%e0%b2%b2%e0%b2%be%e0%b2%a1%e0%b3%8d-%e0%b2%ad%e0%b2%be%e0%b2%b7%e0%b2%a3%e0%b2%95%e0%b3%8d%e0%b2%95%e0%b3%86-%e0%b2%95%e0%b3%8a%e0%b2%9f/feed/ 0
ನೀಟ್ ಪರೀಕ್ಷೆ ಮೇ 05 ರಂದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ https://haisandur.com/2024/05/04/%e0%b2%a8%e0%b3%80%e0%b2%9f%e0%b3%8d-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%ae%e0%b3%87-05-%e0%b2%b0%e0%b2%82%e0%b2%a6%e0%b3%81-%e0%b2%aa%e0%b2%b0%e0%b3%80%e0%b2%95/ https://haisandur.com/2024/05/04/%e0%b2%a8%e0%b3%80%e0%b2%9f%e0%b3%8d-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%ae%e0%b3%87-05-%e0%b2%b0%e0%b2%82%e0%b2%a6%e0%b3%81-%e0%b2%aa%e0%b2%b0%e0%b3%80%e0%b2%95/#respond Sat, 04 May 2024 15:48:51 +0000 https://haisandur.com/?p=35041 ಬಳ್ಳಾರಿ,ಮೇ 04:ಜಿಲ್ಲೆಯಲ್ಲಿ ಮೇ 05 ರಂದು ಮಧ್ಯಾಹ್ನ 02 ರಿಂದ ಸಂಜೆ 05.20 ರವರೆಗೆ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144 ರ ಅಡಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.ನಗರದ ಒಟ್ಟು 05 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಒಳಗಿನ ಆವರಣವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದಾರೆ.ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ […]

The post ನೀಟ್ ಪರೀಕ್ಷೆ ಮೇ 05 ರಂದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ appeared first on Hai Sandur kannada fortnightly news paper.

]]>
ಬಳ್ಳಾರಿ,ಮೇ 04:ಜಿಲ್ಲೆಯಲ್ಲಿ ಮೇ 05 ರಂದು ಮಧ್ಯಾಹ್ನ 02 ರಿಂದ ಸಂಜೆ 05.20 ರವರೆಗೆ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144 ರ ಅಡಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ನಗರದ ಒಟ್ಟು 05 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಒಳಗಿನ ಆವರಣವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದಾರೆ.
ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶವನ್ನು ನಿಷೇಧಿಸಿದೆ ಹಾಗೂ ಆ ದಿನದಂದು ಮಧ್ಯಾಹ್ನ 01 ರಿಂದ ಸಂಜೆ 05.30 ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಝೆರಾಕ್ಸ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಲಾಗಿದೆ.
ಈ ಆದೇಶವು ಪರೀಕ್ಷಾ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

The post ನೀಟ್ ಪರೀಕ್ಷೆ ಮೇ 05 ರಂದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ appeared first on Hai Sandur kannada fortnightly news paper.

]]>
https://haisandur.com/2024/05/04/%e0%b2%a8%e0%b3%80%e0%b2%9f%e0%b3%8d-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%ae%e0%b3%87-05-%e0%b2%b0%e0%b2%82%e0%b2%a6%e0%b3%81-%e0%b2%aa%e0%b2%b0%e0%b3%80%e0%b2%95/feed/ 0
ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಜ್ಜು: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ https://haisandur.com/2024/05/04/%e0%b2%aa%e0%b2%be%e0%b2%b0%e0%b2%a6%e0%b2%b0%e0%b3%8d%e0%b2%b6%e0%b2%95-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%97%e0%b3%86-%e0%b2%9c%e0%b2%bf%e0%b2%b2%e0%b3%8d%e0%b2%b2/ https://haisandur.com/2024/05/04/%e0%b2%aa%e0%b2%be%e0%b2%b0%e0%b2%a6%e0%b2%b0%e0%b3%8d%e0%b2%b6%e0%b2%95-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%97%e0%b3%86-%e0%b2%9c%e0%b2%bf%e0%b2%b2%e0%b3%8d%e0%b2%b2/#respond Sat, 04 May 2024 15:45:23 +0000 https://haisandur.com/?p=35038 ಬಳ್ಳಾರಿ,ಮೇ 04:ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೇ 07 ರಂದು ಮತದಾನ ಜರುಗಲಿದ್ದು, ಮೇ 05 ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18,84,040 ಮತದಾರರು ಇದ್ದು, 1972 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ 5952 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶನಿವಾರ ಚುನಾವಣೆ ಕುರಿತು […]

The post ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಜ್ಜು: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ appeared first on Hai Sandur kannada fortnightly news paper.

]]>
ಬಳ್ಳಾರಿ,ಮೇ 04:ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೇ 07 ರಂದು ಮತದಾನ ಜರುಗಲಿದ್ದು, ಮೇ 05 ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18,84,040 ಮತದಾರರು ಇದ್ದು, 1972 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ 5952 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶನಿವಾರ ಚುನಾವಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ನಿಮಿತ್ಯ ಮೇ. 07 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಅಂತ್ಯದ 48 ಗಂಟೆಗೂ ಮುನ್ನ ಅಂದರೆ ಮೇ. 05 ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಸಂದರ್ಭದಲ್ಲಿ ವಾಹನಗಳ ಮೂಲಕ ಬಹಿರಂಗ ಪ್ರಚಾರ, ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಮನೆ-ಮನೆ ಭೇಟಿ ಮೂಲಕ ಮತಯಾಚನೆ ಮಾಡಬಹುದು. ಮೇ 05 ರ ಸಂಜೆ 06 ರಿಂದ ಮೇ 08 ರ ಸಂಜೆ 06 ರ ವರೆಗೆ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ಕಲಂ 144 ಅಡಿ ಪ್ರತಿಬಂಧಕಾಜ್ಞೆ ಜಾರಿಯಾಗಲಿದ್ದು, 05 ಕ್ಕಿಂತ ಹೆಚ್ಚು ಜನರು ಒಟ್ಟಾಗಿ ಓಡಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಡಲು ಸೂಚನೆ ನೀಡಲಾಗಿದೆ. ಮತದಾನದ ದಿನ ಸಾರ್ವತ್ರಿಕ ರಜೆ, ಮೇ. 08 ರ ಬೆಳಿಗ್ಗೆ 06 ಗಂಟೆಯವರೆಗೆ ಜಿಲ್ಲೆಯದ್ಯಂತ ಮದ್ಯ ಮಾರಾಟ ನಿಷೇಧಿಸಿದ್ದು ಡ್ರೈ ಡೇ ಆಚರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪಾರದರ್ಶಕ ಚುನಾವಣೆಗೆ ಎಲ್ಲಾ ಹಂತದಲ್ಲಿ ಇವಿಎಂ ಮತಯಂತ್ರಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಗೊಂದಲವಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ರ್ಯಾಂಡಮೈಜೇಶನ್ ಮಾಡಿ, ಎಲ್ಲ ಪ್ರಕ್ರಿಯೆಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಡಿಸಿ ಮಿಶ್ರಾ ಅವರು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ, ಅಂಗವಿಕಲರಿಗೆ ರ್ಯಾಂಪ್, ವೀಲ್‍ಚೇರ್ ವ್ಯವಸ್ಥೆ ಹಾಗೂ ನೆರಳಿಗೆ ಶ್ಯಾಮಿಯಾನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ತೀವ್ರ ಬಿಸಿಲಿನ ಬೇಗೆ ಇರುವುದರಿಂದ ಮತಗಟ್ಟೆಗಳಲ್ಲಿ ಸ್ಟ್ಯಾಂಡಿಂಗ್ ಫ್ಯಾನ್ ಅಥವಾ ಕೂಲರ್ ವ್ಯವಸ್ಥೆಗೊಳಿಸಲು ಆಯಾ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಆದಷ್ಟು ಬೇಗನೇ ಬಂದು ಮತ ಚಲಾಯಿಸಿ:
ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಎಲ್ಲಾ ಮತದಾರರು ಬೆಳಗಿನ ಅವಧಿಯಲ್ಲಿಯೇ ಆದಷ್ಟು ಬೇಗನೇ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕೋರಿದರು.

ಮತಗಟ್ಟೆ ಸಿಬ್ಬಂದಿಗಳಿಗೆ ತರಬೇತಿ:
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆಯ ಸಿಬ್ಬಂದಿಗಳಿಗೆ ಈಗಾಗಲೆ ತರಬೇತಿ ನೀಡಿದ್ದು, ಮೇ 07 ರಂದು ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 05.30 ಗಂಟೆಗೆ ಮತಗಟ್ಟೆ ಏಜೆಂಟರುಗಳ ಸಮ್ಮುಖದಲ್ಲಿ ಕನಿಷ್ಟ 50 ಮತಗಳ ಅಣುಕು ಮತದಾನ ನಡೆಯಲಿದ್ದು, ನಂತರ ನಿಯಮಾನುಸಾರ ಪ್ರಕ್ರಿಯೆ ಕೈಗೊಂಡು ಬೆಳಿಗ್ಗೆ 07 ಗಂಟೆಗೆ ಮತದಾನ ಪ್ರಾರಂಭವಾಗಲಿದೆ. ಈ ಎಲ್ಲ ಪ್ರಕ್ರಿಯೆಗಳ ಕುರಿತು ಮತಗಟ್ಟೆ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಿ ತರಬೇತಿ ನೀಡಲಾಗಿದೆ ಎಂದರು.

ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್:
ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ಒಟ್ಟು 1219 ಮತಗಟ್ಟೆಗಳ ಪೈಕಿ 299 ಸೂಕ್ಷ್ಮ ಹಾಗೂ 69 ವಲ್ನರೆಬಲ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 610 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಿ, ಸಿಸಿ ಟಿವಿ ಕ್ಯಾಮೆರಾ ಮೂಲಕ ನೇರವಾಗಿ ಮತಗಟ್ಟೆಗಳ ಲೈವ್ ವಿಡಿಯೋ ನೋಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚುನಾವಣಾ ಕಾರ್ಯದ ಮೇಲುಸ್ತುವಾರಿಗೆ ಒಟ್ಟು 330 ಮೈಕ್ರೋ ಆಬ್ಸರ್ವರ್‍ಗಳನ್ನು ಮತಗಟ್ಟೆಗಳಿಗೆ ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗುತ್ತದೆ ಎಂದರು.

ಮತಗಟ್ಟೆಗಳಿಗೆ 5,815 ಸಿಬ್ಬಂದಿ ನೇಮಕ:
ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಚುನಾವಣಾ ಆಯೋಗದ ನಿಯಮಾನುಸಾರ ಮತದಾನ ಜರುಗಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 1,395 ಮತಗಟ್ಟೆ ಅಧಿಕಾರಿಗಳು, 1,395 ಸಹಾಯಕ ಅಧಿಕಾರಿಗಳು, 2,790 ಮತದಾನ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 5,952 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಮತಗಟ್ಟೆ ಸಿಬ್ಬಂದಿಗಳಿಗೆ ವಿಶೇಷ ಮೆಡಿಕಲ್ ಕಿಟ್:
ಬಿಸಿಲಿನ ತಾಪಮಾನ ಹಾಗೂ ಶಾಖಾಘಾತದ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್, ಓಆರ್‍ಎಸ್ ಕಿಟ್‍ಗಳನ್ನು ಮಸ್ಟರಿಂಗ್ ಸಂದರ್ಭದಲ್ಲಿಯೇ ವಿತರಿಸಲು ಕ್ರಮ ವಹಿಸಲಾಗಿದೆ. ಅಲ್ಲದೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರು, ನರ್ಸ್‍ಗಳು, ಆಂಬುಲೆನ್ಸ್ ಗಳನ್ನು ಯಾವುದೇ ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ನೆರವಿಗಾಗಿ ಸಜ್ಜಾಗಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

85 ವರ್ಷ ಮೇಲ್ಪಟ್ಟ, ವಿಕಲಚೇತನರು ಮತದಾನ:
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 85 ವರ್ಷ ದಾಟಿದ 662 ಹಿರಿಯ ನಾಗರಿಕರು ಹಾಗೂ 452 ವಿಕಲಚೇತನ ಮತದಾರರು ಮನೆಯಿಂದ ಮತ ಚಲಾಯಿಸಲು ಆಯ್ಕೆ ಮಾಡಿಕೊಂಡಿದ್ದರು, ಈ ಪೈಕಿ 85 ವರ್ಷ ಮೇಲ್ಪಟ್ಟ 630 ಮತದಾರರು ಹಾಗೂ 444 ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಿದ್ದಾರೆ.
ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆ ಹಾಗೂ ಕ್ಷೇತ್ರಗಳ 863 ಮತದಾರರು ಮತ ಚಲಾಯಿಸಲು ಫಾರಂ 12 ಡಿ ಅಂಚೆ ಮತ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇವರ ಮತದಾನಕ್ಕೆ ಅನುಕೂಲವಾಗುವಂತೆ ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಗಾಂಧಿ ಭವನದಲ್ಲಿ ಅಂಚೆ ಮತದಾನ ಕೇಂದ್ರ ತೆರೆಯಲಾಗಿತ್ತು. ಮೇ. 01 ರಿಂದ 03 ರವರೆಗೆ ಮತದಾನ ಜರುಗಿದ್ದು, 460 ಜನರು ಮತ ಚಲಾಯಿಸಿದ್ದಾರೆ. ಉಳಿದಂತೆ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಇದೇ ಗಾಂಧಿ ಭವನದಲ್ಲಿ ಫೆಸಿಲಿಟೇಶನ್ ಸೆಂಟರ್ ತೆರೆಯಲಾಗಿದ್ದು, ಮೇ. 06 ರವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚುನಾವಣಾ ಅಕ್ರಮ ಚಟುವಟಿಕೆ ತಡೆಗೆ ಸಹಾಯವಾಣಿ ಬಳಸಿ:
ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಯಾವುದೇ ಆಸೆ-ಆಮೀಷ ಒಡ್ಡುವ ಘಟನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950 ಕೆ ಕರೆ ಮಾಡಿ ತಿಳಿಸಬಹುದು ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ದಾಖಲಿಸಬಹುದು ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮತದಾನ ದಿನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಗಾ ವಹಿಸಲು ಹಾಗೂ ಭದ್ರತೆಗೆ ಒಟ್ಟು 2,048 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೊರ ಜಿಲ್ಲೆಯಿಂದ ಸುಮಾರು 850 ಪೊಲೀಸ್ ಸಿಬ್ಬಂದಿಗಳು ಭದ್ರತಾ ಕಾರ್ಯಕ್ಕೆ ಜಿಲ್ಲೆಗೆ ಆಗಮಿಲಿವೆ. ಜಿಲ್ಲೆಗೆ ಸಿಆರ್‍ಪಿಎಫ್ ಪಡೆಯ ಮೂರು ತಂಡಗಳು ಜಿಲ್ಲೆಗೆ ಆಗಮಿಸಿವೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಚುನಾವಣಾ ಅಕ್ರಮ ನಡೆಯದಂತೆ 24 ಚೆಕ್‍ಪೋಸ್ಟ್‍ಗಳಲ್ಲಿ ನಿರಂತರ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮತದಾನ ಸಮಯದಲ್ಲಿ ಅಹಿತಕರ ಘಟನೆ ಸೃಷ್ಟಿಸುವಂತಹ 11 ರೌಡಿಶೀಟರ್ ಪ್ರಕರಣಗಳಲ್ಲಿ 09 ರೌಡಿಶೀಟರ್‍ಗಳನ್ನು ಗಡಿಪಾರು ಮಾಡಲಾಗಿದೆ. ಗೂಂಡ ಆಕ್ಟ್ ಅಡಿ 1 ಪ್ರಕರಣ ದಾಖಲಾಗಿದೆ. ಚುನಾವಣೆ ನೀತಿ ಸಂಹಿತೆ ಘೊಷಣೆಯ ಬಳಿಕ ಈವರೆಗೆ ಜಿಲ್ಲೆಯಲ್ಲಿ ರೂ.8.41 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

The post ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಜ್ಜು: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ appeared first on Hai Sandur kannada fortnightly news paper.

]]>
https://haisandur.com/2024/05/04/%e0%b2%aa%e0%b2%be%e0%b2%b0%e0%b2%a6%e0%b2%b0%e0%b3%8d%e0%b2%b6%e0%b2%95-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%97%e0%b3%86-%e0%b2%9c%e0%b2%bf%e0%b2%b2%e0%b3%8d%e0%b2%b2/feed/ 0