ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ

0
56

ಕೊಟ್ಟೂರು: ತಾಲೂಕಿನ ಉಜ್ಜಿನಿ ಗ್ರಾಮದ ಉಜ್ಜಯಿನಿಯಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮೇ 12 ಮತ್ತು 13 ರಂದು ಜರುಗಲಿದೆ ಎಂದು ಉಜ್ಜಿಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ ಮಹಾ ಸ್ವಾಮೀಜಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಶ್ರೀ ಪೀಠಕ್ಕೆ ಇರುವ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಹಾಗೂ ರಥೋತ್ಸವ ದಿನ ಹಾಗೂ ಮರು ದಿನದಂದು ಸಕಲ ಭಕ್ತಾಗಳಿಗೆ ಪ್ರಸಾದ ವ್ಯವಸ್ಥೆಯೂ ಸಹ ಇರುತ್ತದೆ.

ಇದರ ಜೊತೆಗೆ ಸಾಂಸ್ಕೃತಿಕ ಕಾಠ್ಯಕ್ರಮ, ಸಾಮೂಹಿಕ ವಿವಾಹಗಳು ಸೇರಿದಂತೆ ಧಾರ್ಮಿಕ ಕಾರಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ.

ರಾಜ್ಯದ್ಯಾದಂತ ಹೆಸರು ವಾಸಿಯಾದ ಶಿಖರ ತೈಲಾಭಿಷೇಕ ನಡೆಯುವುದು ಉಜ್ಜಯಿನಿ ಪೀಠದ ವಿಶೇಷತೆಯಾಗಿದೆ. ಇದನ್ನು ಕಣ್ಣುಂಬಿಕೊಳ್ಳಲು ರಥೋತ್ಸವಕ್ಕಿಂತ ಹೆಚ್ಚಿನ ಸಂಖ್ಯೆ ತೈಲಾಭೀಷೇಕ ವೀಕ್ಷಣೆಗೆ ಭಕ್ತಾದಿಗಳು ಬರುತ್ತಾರೆ.

ಇದಕ್ಕೆ ಒಂದು ಐತಿಹ್ಯವಿದೆ. ಜರ್ಮಲಿ ಪಾಳೆಗಾರರಿಂದ ತಂದ ತೈಲವನ್ನು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಶಿಖರಕ್ಕೆ ಅರ್ಪಿಸಲಾಗುತ್ತದೆ. ನಂತರ ಭಕ್ತಾಧಿಗಳು ತಂದಿರುವ ತೈಲವನ್ನು ಎರೆಯಲಾಗುತ್ತದೆ.

ತೈಲಾಭಿಷೇಕಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀಮರುಳಸಿದ್ದೇಶ್ವರ ಸ್ವಾಮಿ ಒಳಿತನ್ನುಂಟು ಮಾಡಲಿ, ಈ ವರ್ಷ ಮಳೆ, ಬೆಳೆ ಸಮೃದ್ಧಿಯಾಗಿ ಸಕಲರಿಗೂ ಒಳಿತಾಗಲಿ ಎಂದು ಶ್ರೀಗಳು ಹಾರೈಸಿದರು.

LEAVE A REPLY

Please enter your comment!
Please enter your name here