Sunday, March 1, 2026
Home Blog Page 3

ಪತ್ರಿಕೋದ್ಯಮ ಸಾಮಾಜಿಕ ಕಾಳಜಿ ಹೊಂದಬೇಕು :ಉಜ್ಜಯಿನಿ ಶ್ರೀ ಗಳು

0

ವರದಿ : ಶಿವರಾಜ್ ಕನ್ನಡಿಗ

ಕೊಟ್ಟೂರು : ಸಾಮಾಜಿಕ ಕಳಕಳಿಯಿಂದ ಕೂಡಿರಬೇಕಿದ್ದ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಉದ್ಯಮಗಳಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ರಾಜದೇಶೀಕೇಂದ್ರ ಭಗವತ್ಪಾದ ಮಹಾಸ್ವಾಮಿಗಳು ಹೇಳಿದರು.

ಕೊಟ್ಟೂರಿನ ಪಟ್ಟಣದ ಶ್ರೀ ರೇಣುಕ ಸಭಾಂಗಣದಲ್ಲಿ ನಡೆದ ಪತ್ರಿಕಾ  ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ದಾವಣಗೆರೆ, ವಿಜಯನಗರ ಜಿಲ್ಲೆ ಸೇರಿದಂತೆ   ಕಲ್ಯಾಣ ಕರ್ನಾಟಕ   ಏಕಕಾಲಕ್ಕೆ  ಪ್ರಕಟವಾಗುವ ಕಲ್ಯಾಣ ಸಾಕ್ಷಿ
ದಿನ ಪತ್ರಿಕೆ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಬುಧವಾರ ಮಾತನಾಡಿದರು.

ಕೈ ಬರಹ ಮೂಲಕ ಆರಂಭವಾದ ಪತ್ರಿಕೆ ಇಂದು  ಅತ್ಯುನ್ನತ ಮುದ್ರಣದೊಂದಿಗೆ ಸಾಕಷ್ಟು ಪ್ರಸಾರ ಹೊಂದಿದೆ. ಅದರಂತೆ ಅನೇಕ ಟಿವಿ ಸಂಸ್ಥೆಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಮಂಗಳೂರು ಪತ್ರಿಕೆ ಮೊದಲ ದಿನ ಪತ್ರಿಕೆಯಾಗಿ ಹೊರ ಹೊಮ್ಮುವ ಮೂಲಕ ಅನೇಕ ಪತ್ರಿಕೆಗಳು ಹೊರ ಬರಲು ಸ್ಪೂರ್ತಿಯಾಗಿತ್ತು. ಪತ್ರಿಕೆಗಳನ್ನು ನಿರ್ವಹಿಸುವುದು ಕಷ್ಟಕರ ಕೆಲಸವಾಗಿದೆ. ಸ್ವಾತಂತ್ರ್ಯ  ಹೋರಾಟ ಸಂದರ್ಭದಲ್ಲಿ ಪತ್ರಿಕೆಗಳು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಿದ್ದವು. ಆದರೆ ಬದಲಾದ ಕಾಲಘಟ್ಟದಲ್ಲಿ ದಿನ ಪತ್ರಿಕೆಗಳು, ಟಿವಿ ಮಾಧ್ಯಮ ಸಾಮಾಜಿಕ ಕಾಳಜಿಯಿಂದ ದೂರ ಉಳಿಯುವಂತಾಗಬಾರದು. ಕೊಟ್ಟೂರಿನ ಯುವಕ ತಳಮಟ್ಟದ ಕುಂಚಿ ಕೊರವರ  ಸಮುದಾಯದ  ಕೆ.ಕೊಟ್ರೇಶ್, ದಿನ ಪತ್ರಿಕೆ ನಡೆಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ, ಪತ್ರಿಕೆ ಹಾಗೂ ಅವರ ಜವಾಬ್ದಾರಿ ಮಹತ್ತರವಾಗಿದ್ದು, ಪತ್ರಿಕೆ ಯಶಸ್ಸು ಕಾಣುವಂತೆ ಪ್ರಕಟವಾಗಲಿ ಎಂದರು.
ಪತ್ರಿಕೆ ಬಿಡುಗಡೆ ಮಾಡಿದ ಕಲಾ ಕೇಂದ್ರ ಅಧ್ಯಕ್ಷ ಎಂಎಂ
ಜೆ ಸತ್ಯಪ್ರಕಾಶ ಮಾತನಾಡಿ, ಇಂದಿನ ದಿನಗಳಲ್ಲಿ ಪತ್ರಿಕೆಗಳ ಮುದ್ರಣ, ಪ್ರಸರಣ ಕಷ್ಟಕರ ಕೆಲಸವಾಗಿದೆ. ಅನೇಕ ಪತ್ರಿಕೆಗಳು ಆರ್ಥಿಕ ಸಂಕಷ್ಟದಿಂದ ಮುಚ್ಚಿರುವ ಉದಾರಹರಣಗಳಿವೆ. ಮದ್ಯಮ ಪಟ್ಟಣವಾಗಿರುವ ಕೊಟ್ಟೂರಿನಲ್ಲಿ ಹೊಸ ದಿನ ಪತ್ರಿಕೆ ಹೊರ ಬರುತ್ತಿರುವುದು ಹೆಮ್ಮೆಯ ಸಂಗತಿ. ಪತ್ರಕರ್ತ ಕೆ.ಕೊಟ್ರೇಶ ಸಂಪಾದಕತ್ವದಲ್ಲಿ ಕಲ್ಯಾಣ ಸಾಕ್ಷಿ ಪತ್ರಿಕೆ ಉತ್ತಮ ಹೆಸರು ಹೊಂದಲಿ ಎಂದರು.

ಕಲ್ಯಾಣ ಸಾಕ್ಷಿ ದಿನ ಪತ್ರಿಕೆ ಪ್ರತಿಯೊಬ್ಬ ವಿದ್ಯಾರ್ಥಿಯು ಓದುವಲ್ಲಿ ಪ್ರಮುಖ ಪಾತ್ರ ವಹಿಸಲಿ
ಮತ್ತು ಮಹಿಳೆಯರಿಗೆ ಮನೆ ಮಾತಾಗುವಂತೆ
ಪತ್ರಿಕೆ ಬೆಳೆಯಲಿ ಈ ದಿನಮಾನಗಳಲ್ಲಿ ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ ಇಂತಹ ಕಷ್ಟಕರ ಕೆಲಸಕ್ಕೆ ನಮ್ಮೆಲ್ಲರ ಸಹಕಾರ ನೀಡುತ್ತೇವೆ  ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಅವರು ಮಾತನಾಡಿದರು

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ.
ದಾರುಕೇಶ್ ಮಾತನಾಡಿ ಪತ್ರಿಕೆಗಳ ಮುದ್ರಣ, ಪ್ರಸರಣ ಸುಲಭವಲ್ಲ ಅನೇಕ ಪತ್ರಿಕೆಗಳು ಆರ್ಥಿಕ ಸಂಕಷ್ಟದಿಂದ ಮುಚ್ಚು ಹೋಗಿವೆ ಅದರೆ ಕೆ.ಕೊಟ್ರೇಶ ಸಂಪಾದಕತ್ವದಲ್ಲಿ ಉತ್ತಮವಾಗಿ ಮುನ್ನಡೆಸಲಿ ಪತ್ರಿಕೆಯಲ್ಲಿ ಯಶಸ್ಸು ಕಾಣುವಂತೆ ಆಗಲಿ ಎಂದು ಹಾರೈಸಿದರು

ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪತ್ರಿಕೆ, ವರದಿಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪರ್ತಕರ್ತನು ಅಷ್ಟೇ ಜಾಗೃತಿ ಹಾಗೂ ಜವಾಬ್ದಾರಿಯಿಂದ ಪತ್ರಿಕೆ ನಡೆಸಬೇಕು ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಅಂಗಡಿ ಪಂಪಾಪತಿ, ಕಾಂಗ್ರೆಸ್ ಮುಖಂಡ ತಿಪ್ಪೇಸ್ವಾಮಿ, ಪತ್ರಕರ್ತ ಉಜ್ಜಯಿನಿ ರುದ್ರಪ್ಪ ಮಾತನಾಡಿದರು. ಪತ್ರಿಕೆ ಸಂಪಾದಕ ಕೆ.ಕೊಟ್ರೇಶ್ ಪ್ರಾಸ್ತಾವಿಕ ಮಾತನಾಡಿದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಡಿಕೆ ಮಂಜುನಾಥ, ಸಾಹಿತಿ ವಿರುಪಾಕ್ಷಪ್ಪ ಪಂಡಿತ್, ವಕೀಲ ವೀರೇಂದ್ರಗೌಡ ಪಾಟೀಲ್, ನಿರಂಜನಯ್ಯ ಸ್ವಾಮಿ, ಕಾಕುಬಾಳು ಪ್ರಕಾಶ, ವಿರುಪಾಕ್ಷಪ್ಪ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭರಮಣ್ಣ, ದಲಿತ ಸಂಘಟನೆ ಮುಖಂಡರಾದ ಬಿ.ದುರಗೇಶ್, ತಗ್ಗಿನಕೇರಿ ಕೊಟ್ರೇಶ್, ಟಿ.ಹನುಮಂತಪ್ಪ, ಚಂದ್ರಶೇಖರ, ಮಂಜುನಾಥ ಇತರರು ಇದ್ದರು. ಉಪನ್ಯಾಸಕ ಮಲ್ಲಿಕಾರ್ಜುನ ನಿರ್ವಹಿಸಿದರು.

20 ವರ್ಷಗಳ ಬಳಿಕ ಸ್ನೇಹಿತರ ಮಿಲನ ಗುರುವಂದನಾ ಕಾರ್ಯಕ್ರಮದಿಂದ ಮನಸ್ಸಿಗೆ ಹೊಸ ಉಮ್ಮಸು

0

ವರದಿ : ಶಿವಯೋಗಿ ಎಂ.ವಿ.ರಾಂಪುರ
ರಾಂಪುರ, ಮೊಳಕಾಲ್ಮೂರು:
20 ವರ್ಷಗಳ ದೀರ್ಘ ವಿರಾಮದ ಬಳಿಕ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ಒಂದೇ ವೇದಿಕೆಯಲ್ಲಿ ಒಂದಾಗಿರುವ ಅಪೂರ್ವ ಕ್ಷಣಕ್ಕೆ ರಾಂಪುರದ ಮೊಳಕಾಲ್ಮೂರು ಸಾಕ್ಷಿಯಾಯಿತು. ಇಲ್ಲಿನ ಶಾಲೆಯಲ್ಲಿ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮವು ಭಾಗವಹಿಸಿದ ಎಲ್ಲರ ಮನಸ್ಸಿಗೆ ಹೊಸ ಉಮ್ಮಸನ್ನು ನೀಡಿದ ಸ್ಮರಣೀಯ ಸಂದರ್ಭವಾಗಿ ಮೂಡಿಬಂತು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತೆ ವಿದ್ಯಾರ್ಥಿಗಳಂತೆ ತರಗತಿ ಕೋಣೆಯಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿ, ಗುರುಗಳು ಪಾಠ ಮಾಡುವುದನ್ನು ಆಲಿಸುವ ಮೂಲಕ ತಮ್ಮ ವಿದ್ಯಾರ್ಥಿ ಜೀವನದ ಸಿಹಿ ನೆನಪುಗಳಿಗೆ ಮರಳಿದರು. ಈ ಅಪೂರ್ವ ಅನುಭವವು ಭಾಗವಹಿಸಿದ ಎಲ್ಲರನ್ನೂ 20 ವರ್ಷಗಳ ಹಿಂದಿನ ಶಾಲಾ ದಿನಗಳಿಗೆ ಕರೆದೊಯ್ದಂತಾಯಿತು.

ಗುರುವಂದನಾ ಕಾರ್ಯಕ್ರಮದ ಮೂಲಕ ಆದರಣೀಯ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು. ತಮ್ಮ ಜೀವನದ ಮಾರ್ಗದರ್ಶನ ಮಾಡಿದ ಗುರುಗಳನ್ನು ಮತ್ತೆ ಭೇಟಿಯಾದ ಸಂತಸ ಸ್ನೇಹಿತರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತು.

ಹಳೆಯ ನೆನಪುಗಳ ಹಂಚಿಕೆ, ಸ್ನೇಹಸಮ್ಮಿಲನ ಹಾಗೂ ಭಾವನಾತ್ಮಕ ಕ್ಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಈ ಮಿಲನವು ಹಳೆಯ ಸ್ನೇಹಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುವಂತಾಯಿತು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಶ್ರಮಿಸಿದ ಎಲ್ಲ ಸ್ನೇಹಿತರಿಗೆ ಭಾಗವಹಿಸಿದವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ಗುರುವಂದನಾ ಕಾರ್ಯಕ್ರಮವು ಸ್ಮರಣೆ, ಸ್ನೇಹ ಮತ್ತು ಕೃತಜ್ಞತೆಯ ಸಂಗಮವಾಗಿ ಎಲ್ಲರಿಗೂ ಅವಿಸ್ಮರಣೀಯ ದಿನವಾಯಿತು.

ಕರ್ನಾಟಕ ಪತ್ರಕರ್ತರ ಸಂಘದಿಂದ ಫೆಬ್ರವರಿ 13,14 ರಂದು ಬಳ್ಳಾರಿಯಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ರಾಷ್ಟ್ರೀಯ ಮಂಡಳಿ ಸಭೆ

0

ಬಳ್ಳಾರಿ:ಡಿ,28; ಮುಂಬರುವ ಫೆಬ್ರವರಿ 13, 14 ಮತ್ತು 15 ರಂದು ಗಣಿನಾಡು ಬಳ್ಳಾರಿಯಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ರಾಷ್ಟ್ರೀಯ ಮಂಡಳಿ ಸಭೆ ನಡೆಯಲಿದೆ ಎಂದು ಕರ್ನಾಟಕ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಅವರಣದಲ್ಲಿರುವ ಪತ್ರಿಕಾ ಭವನದಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಳ್ಳಾರಿಯ ಇತಿಹಾಸದಲ್ಲೆ ಇದು ಐತಿಹಾಸಿಕ ಕಾರ್ಯಕ್ರಮ ಆಗಿದ್ದು, ಬಳ್ಳಾರಿಯ ಇತಿಹಾಸದಲ್ಲೇ ಹಿಂದೆಂದೂ ನಡೆಯದೆ ಪತ್ರಕರ್ತರ ರಾಷ್ಟ್ರ ಮಟ್ಟದ ಕಾರ್ಯಕ್ರಮ ಬಳ್ಳಾರಿ ನಗರದಲ್ಲಿ ನಡೆಯುತ್ತಿರುವುದು ನಮ್ಮೇಲ್ಲರ ಸೌಭಾಗ್ಯ, ನಮ್ಮೇಲ್ಲರ ಹೆಮ್ಮೆಯು ಹೌದು, ಎಂದ ಅವರು, ಮುಂಬರುವ ಫೆಬ್ರವರಿ 13, 14 ಮತ್ತು 15 ಮೂರು ದಿನಗಳ ಕಾಲ ಬಳ್ಳಾರಿ ನಗರದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸಭೆ ಹಾಗೂ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ರಾಷ್ಟ್ರೀಯ ಮಂಡಳಿ ಸಭೆ ಬಳ್ಳಾರಿಯಲ್ಲಿ ಆಯೋಜನೆ ಮಾಡಲಾಗಿದ್ದು, ದೇಶದ 15 ರಾಜ್ಯಗಳಿಂದ ಸುಮಾರು 500 ಜ‌ನ ಪತ್ರಕರ್ತರು ಅಂದು ಬಳ್ಳಾರಿಯಲ್ಲಿ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಅದಲ್ಲದೇ, ಫೆಬ್ರವರಿ 13 ರಂದು ನಡೆಯುವ ರಾಜ್ಯ ಸಮಿತಿ ಸಭೆಗೆ ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಎಲ್ಲಾ ಜಿಲ್ಲಾಧ್ಯಕ್ಷರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ಫೆಬ್ರವರಿ 13 ಮಧ್ಯಾಹ್ನ 2 ಗಂಟೆಯೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳು ಅಂದು ಬಳ್ಳಾರಿಗೆ ಸೇರಿಕೊಳ್ಳಲಿದ್ದಾರೆ. ಅಂದು ಮದ್ಯಾಹ್ನ 3:00 ಗಂಟೆಯಿಂದ ರಾಜ್ಯ ಸಮಿತಿ ಸಭೆ ಆರಂಭವಾಗಲಿದ್ದು, ರಾತ್ರಿ 8:00 ಗಂಟೆಯ ವರೆಗೂ ನಡೆಯಲಿದೆ.

ಇನ್ನು ಫೆಬ್ರವರಿ 14 ಬೆಳಿಗ್ಗೆ 10:30 ಕ್ಕೆ ರಾಷ್ಟ್ರೀಯ ಮಂಡಳಿ ಸಭೆ ಆರಂಭವಾಗಲಿದ್ದು, ಅಂದು ಇಡೀ ದಿನ ರಾಷ್ಟ್ರೀಯ ಮಂಡಳಿ ಸಭೆ ನಡೆಯಲಿದೆ. ಬಳಿಕ ಫೆಬ್ರವರಿ 15 ರಂದು ದೇಶದ ನಾನಾ ರಾಜ್ಯಗಳಿಂದ ಬಂದಂತ ಪತ್ರಕರ್ತ ಪ್ರತಿನಿಧಿಗಳನ್ನು ಹಂಪಿ ಪ್ರವಾಸ ಕೈಗೊಳ್ಳುವರು.

ಈ ಕಾರ್ಯಕ್ರಮದಲ್ಲಿ ಘನವೆತ್ತ ರಾಜ್ಯಪಾಲರನ್ನು ಆಹ್ವಾನಿಸಲಾಗುವುದು ಜೊತೆಗೆ ರಾಜ್ಯದ ಹಲವಾರು ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಪತ್ರಕರ್ತರು ಕೈಜೋಡಿಸಲು ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಕೆ.ಬಜಾರಪ್ಪ, ಡಾ.ಗಿರೀಶ್ ಕುಮಾರ್ ಗೌಡ, ಕುರುಗೋಡು ವೀರಭದ್ರಗೌಡ, ಪ್ರಧಾನ ಕಾರ್ಯದರ್ಶಿ ದುರುಗೇಶ್ ಯಾದವ್, ಕಾರ್ಯದರ್ಶಿ ಮೊಹ್ಮದ್ ಲುಕ್ಮನ್, ಖಜಾಂಚಿ ಪಂಪನಗೌಡ, ಸಿರುಗುಪ್ಪ ತಾಲೂಕು ಪ್ರಧಾನ ಕಾರ್ಯದರ್ಶಿ ಷಣ್ಮುಖ, ಸಿರುಗುಪ್ಪ ತಾಲೂಕು ಅಧ್ಯಕ್ಷ ಮಹೆಬೂಬ್, ಕುರುಗೋಡು ತಾಲೂಕು ಅಧ್ಯಕ್ಷ ಅಣ್ಣಯ್ಯಸ್ವಾಮಿ, ಕಂಪ್ಲಿ ತಾಲೂಕು ರಘುವೀರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಕೇಶ್, ಬಾಬು, ಲಕ್ಷ್ಮಣ, ಮಹೇಶ್, ಮರಿಸ್ವಾಮಿ, ಹೇಮಂತ್, ಸುನೀಲ್, ಗಣೇಶ್ ಇನಾಂದಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಡಿವೈಎಸ್ಪಿ ನೇಮಕಕ್ಕೆ ಸರ್ಕಾರಕ್ಕೆ ಮನವಿ– ಮೋಹನ್ ಕುಮಾರ್ ದಾನಪ್ಪನವರಿಂದ ಪತ್ರ

0

ಬೆಂಗಳೂರು, ಡಿ.27: ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಲಾದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಡಿವೈಎಸ್ಪಿ ಮಟ್ಟದ ಅಧಿಕಾರಿಗಳ ನೇಮಕ ವಿಳಂಬವಾಗುತ್ತಿರುವುದು ಎಸ್‌ಸಿ–ಎಸ್‌ಟಿ ಸಮುದಾಯದ ದೌರ್ಜನ್ಯ ಪ್ರಕರಣಗಳ ಪರಿಣಾಮಕಾರಿ ತನಿಖೆಗೆ ದೊಡ್ಡ ಅಡ್ಡಿಯಾಗುತ್ತಿದೆ.

ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ತಕ್ಷಣವೇ ಡಿವೈಎಸ್ಪಿಗಳನ್ನು ನೇಮಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತನಿಖೆ ಹಾಗೂ ಸುಳ್ಳು ಜಾತಿ ಪ್ರಮಾಣಪತ್ರಗಳ ತ್ವರಿತ ಪರಿಶೀಲನೆಗಾಗಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಡಿಸಿಆರ್‌ಇ ಘಟಕವನ್ನು ವಿಶೇಷ ಪೊಲೀಸ್ ಠಾಣೆಯಾಗಿ ಅಧಿಸೂಚಿಸಿ ರಾಜ್ಯಾದ್ಯಂತ 33 ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಈ ಠಾಣೆಗಳು ಸಾಮಾನ್ಯ ಪೊಲೀಸ್ ಠಾಣೆಗಳಂತೆ ಕಾರ್ಯನಿರ್ವಹಿಸುತ್ತಿವೆ.

ಆದರೆ ಈ 33 ಠಾಣೆಗಳ ಪೈಕಿ ಕೇವಲ 12 ಠಾಣೆಗಳಲ್ಲಿ ಮಾತ್ರ ಡಿವೈಎಸ್ಪಿ ಅಧಿಕಾರಿಗಳ ನೇಮಕವಾಗಿದೆ. ಉಳಿದ 21 ಡಿಸಿಆರ್‌ಇ ಠಾಣೆಗಳಲ್ಲಿ ಡಿವೈಎಸ್ಪಿ ಸೇರಿ ಅಗತ್ಯ ಸಿಬ್ಬಂದಿಗಳ ಕೊರತೆ ತೀವ್ರವಾಗಿದ್ದು, ಎಸ್‌ಸಿ–ಎಸ್‌ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆಯನ್ನು ನಿಯಮಾನುಸಾರ ಡಿವೈಎಸ್ಪಿ ಮಟ್ಟದ ಅಧಿಕಾರಿಗಳು ನಡೆಸಬೇಕಾದರೂ, ಪ್ರಸ್ತುತ ಪಿಎಸ್‌ಐ ಹಾಗೂ ಪಿಐಗಳ ನೇತೃತ್ವದಲ್ಲೇ ತನಿಖೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇದರಿಂದ ಪ್ರಕರಣಗಳ ತನಿಖೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಮೋಹನ್ ಕುಮಾರ್ ದಾನಪ್ಪ ಅವರು, ಡಿಸಿಆರ್‌ಇ ಠಾಣೆಗಳ ಉದ್ದೇಶವನ್ನೇ ದುರ್ಬಲಗೊಳಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿಸಿಆರ್‌ಇ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಕೂಡ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಅಗತ್ಯ ಸಿಬ್ಬಂದಿಗಳ ಭರ್ತಿಗಾಗಿ ಮನವಿ ಸಲ್ಲಿಸಿದ್ದಾರೆ. ಆದರೂ ಇದುವರೆಗೂ ಸಮರ್ಪಕ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಎಸ್‌ಸಿ–ಎಸ್‌ಟಿ ಸಮುದಾಯದ ನ್ಯಾಯ ಮತ್ತು ರಕ್ಷಣೆಗೆ ಸ್ಥಾಪಿಸಲಾದ ಡಿಸಿಆರ್‌ಇ ಪೊಲೀಸ್ ಠಾಣೆಗಳಲ್ಲಿ ಡಿವೈಎಸ್ಪಿ ನೇಮಕ ತಕ್ಷಣ ಜಾರಿಯಾಗಬೇಕೆಂದು ನಾಗರಿಕ ವಲಯದಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

0

ಬಳ್ಳಾರಿ,ಡಿ.23:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಿಯುಸಿ ಹೊರತುಪಡಿಸಿ ಉಳಿದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2025-26ನೇ ಸಾಲಿಗೆ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿ ವೇತನ, ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಮತ್ತು ಶುಲ್ಕ ಮರುಪಾವತಿ ಕಾರ್ಯಕ್ರಮಗಳ ಸೌಲಭ್ಯಕ್ಕಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ಜ.31 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜನನ, ಮರಣ ನೋಂದಣಿಗೆ ವಿಳಂಬ ತೋರುವಂತಿಲ್ಲ :ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ

0

ಬಳ್ಳಾರಿ,ಡಿ.23:ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಗಳು ಮತ್ತು ಜನನ, ಮರಣ ಘಟನೆ ವಿವರ ನೋಂದಣಿಯಲ್ಲಿ ವಿಳಂಬ ತೋರುವಂತಿಲ್ಲ, ಈ ಕುರಿತು ಸಂಬAಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಜನನ ಮತ್ತು ಮರಣ ಘಟನೆ ವಿವರಗಳನ್ನು ನಿಗದಿತ ಅವಧಿಯೊಳಗೆ ತಪ್ಪದೇ ಮಾಹಿತಿ ನೋಂದಾಯಿಸಿಕೊAಡು, ಸಂಬAಧಿಸಿದ ಕುಟುಂಬದವರಿಗೆ ಪ್ರಮಾಣಪತ್ರ ವಿತರಣೆ ಮಾಡಬೇಕು. ಅವರನ್ನು ಕಚೇರಿಗಳಿಗೆ ಅಲೆದಾಡಿಸುವಂತಿಲ್ಲ ಎಂದು ತಿಳಿಸಿದರು.
ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 125 ಜನನ, ಮರಣ ಘಟನೆ ವಿವರ ನೋಂದಣಿಯಲ್ಲಿ ವಿಳಂಬವಾಗಿದ್ದು, ಎಲ್ಲಾ ಘಟನೆಗಳನ್ನು ನಿಗಧಿತ ಸಮಯದಲ್ಲಿ ನೋಂದಣಿ ಮಾಡಲು ಸಂಬಂದಿಸಿದ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಅದೇರೀತಿಯಾಗಿ ಸಂಡೂರು ತಾಲ್ಲೂಕಿನ ತೋರಣಗಲ್ಲು, ಬಂಡ್ರಿ, ಚೋರನೂರು, ತಾರನಗರ ಮತ್ತು ಸಿರುಗುಪ್ಪ ತಾಲ್ಲೂಕಿನ ಕರೂರು ಸರ್ಕಾರಿ ಆಸ್ಪತೆಗಳಲ್ಲಿ ಜನನ ಮತ್ತು ಮರಣ ಘಟನೆಗಳ ವಿವರ ನೋಂದಣಿಯಲ್ಲಿ ವಿಳಂಬವಾಗಿರುವುದು ಕಂಡುಬಂದಿದ್ದು, ಕಾರಣ ಕೇಳಿ ಸಂಬಂಧಿಸಿದ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಾರ್ವಜನಿಕರನ್ನು ಜನನ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ಅಲೆದಾಡಿಸಬಾರದು. ಸರ್ಕಾರದ ಮಾರ್ಗಸೂಚಿಯಂತೆ 21 ದಿನ ಗಳ ಬದಲಾಗಿ 21 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಪ್ರಮಾಣ ಪತ್ರಗಳನ್ನು ಕುಟುಂಬಸ್ಥರಿಗೆ ನೀಡುವಲ್ಲಿ ಯಶ್ವಸಿಯಾಗಬೇಕು. ಅದೇರೀತಿಯಾಗಿ ಮರಣ ಘಟನೆ ಸಂಭವಿಸಿದಲ್ಲಿ ಮೂರು ದಿನದೊಳಗೆ ನಗರ ಸ್ಥಳೀಯ-ಸಂಸ್ಥೆಗಳ ಸಿಬ್ಬಂದಿ ಮನೆ ಭೇಟಿ ನಡೆಸಿ ಪೂರಕ ದಾಖಲೆ ಪಡೆದು ಪ್ರಮಾಣಪತ್ರ ವಿತರಿಸಬೇಕು ಎಂದು ತಿಳಿಸಿದರು.
ಪ್ರತಿ ತಿಂಗಳಿಗೊಮ್ಮೆ ಆಯಾ ತಾಲ್ಲೂಕುಗಳ ತಹಶೀಲ್ದಾರರು ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆಗೆ ಸಂಬ0ಧಿಸಿದ0ತೆ ಆಗುವ ವಿಳಂಬ ಕುರಿತು ಸಭೆ ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಡೆಸಿದ ಬೆಳೆ ಕಟಾವು ಪ್ರಯೋಗದ ವರದಿ ಮಾಡುವಾಗ ಅಧಿಕಾರಿಗಳು ಸಮಯಕ್ಕೆ ಬೆಳೆ ಕಟಾವು ಪ್ರಯೋಗ ಮಾಡ ಬೇಕು. ತಂತ್ರಾ0ಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ಭರ್ತಿ ಮಾಡಬೇಕು.

ಜಿಲ್ಲೆಯಲ್ಲಿರುವ ಎಲ್ಲಾ ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿಯನ್ನು ಸಮರ್ಪಕವಾಗಿ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲಾ ಮಟ್ಟದಲ್ಲಿ ಗಣತಿ ಕಾರ್ಯ ಮಾಡುವ ಮೇಲ್ವಿಚಾಕರಿಗೆ ಮತ್ತು ತಾಲ್ಲೂಕು ಮಟ್ಟದಲ್ಲಿ ಗಣತಿ ಕಾರ್ಯ ಕೈಗೊಳ್ಳುವ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಗಣತಿ ಕಾರ್ಯ ವಿಧಾನದ ಕುರಿತು ಸೂಕ್ತ ತರಬೇತಿ ಹೊಂದಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ಕೆ.ಪತ್ರಿಬಸಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಪರಾಧಗಳನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅಗತ್ಯ: ಎಸ್‌ಪಿ ಡಾ.ಶೋಭಾರಾಣಿ ವಿ.ಜೆ

0

ಬಳ್ಳಾರಿ,ಡಿ.23:ಅಪರಾಧಗಳನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ. ಅವರು ಹೇಳಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗೃಹ ಇಲಾಖೆಯ ಜಿಲ್ಲಾ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿಸಿಟಿವಿ ಗಳ ಡಿವಿಆರ್‌ಗಳನ್ನು ಕಳ್ಳರು ಕಿತ್ತುತ್ತಿರುವ ಕಾರಣ ಸಿಸಿಟಿವಿ ಗಳನ್ನು ಗೂಗಲ್ ಡ್ರೆöÊವ್ ಅಥವಾ ಐ ಕ್ಲೌಡ್ ಡ್ರೆöÊವ್‌ಗೆ ಕನೆಕ್ಟ್ ಮಾಡಲಾಗಿದ್ದು, ರೆಕಾರ್ಡ್ ಆಗಿರುವ ಮಾಹಿತಿ ಇರುತ್ತದೆ. ಯಾವುದೇ ತನಿಖಾ ಏಜೆನ್ಸಿಗಳ ವಿಚಾರಣೆಯು ಆನ್‌ಲೈನ್‌ನಲ್ಲಿ ನಡೆಯುವುದಿಲ್ಲ. ಸಿಬಿಐ, ಇಡಿ, ಪೊಲೀಸ್ ಇನ್ನಿತರೆಗಳ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳ ಕುರಿತು ಜನರು ಸದಾಕಾಲ ಎಚ್ಚರವಾಗಿದ್ದು, ಏನಾದರೂ ಸಮಸ್ಯೆಗಳಿದ್ದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದರು.
ಸAಚಾರಿ ಪೊಲೀಸ್ ಠಾಣೆಯ ಸಿಪಿಐ ಅಯ್ಯನಗೌಡ ಪಾಟೀಲ್ ಅವರು ಮಾತನಾಡಿ, ಮಕ್ಕಳ ಸುರಕ್ಷತೆಗಾಗಿ ಅಪ್ರಾಪ್ತರಿಗೆ ವಾಹನಗಳನ್ನು ಚಲಾಯಿಸಲು ಕೊಡಬಾರದು. ಅಪ್ರಾಪ್ತರು ವಾಹನ ಚಾಲಿಸಿದಲ್ಲಿ ಮತ್ತು ವಾಹನ ಕೊಟ್ಟವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ನಗರದ ಐದು ವೃತ್ತಗಳಲ್ಲಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದು, ಉಳಿದೆರೆಡು ವೃತ್ತಗಳಲ್ಲಿ ಶೀಘ್ರದಲ್ಲೇ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲಾಗುತ್ತದೆ. ಶಿಕ್ಷಣ ಸಂಸ್ಥೆಗಳ ವಾಹನಗಳು – ಅವಶ್ಯಕ ಪದಾರ್ಥಗಳ ವಾಹನಗಳ ಸಂಚಾರ, ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ದಿನದ 24 ತಾಸು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಗೆ ನಮ್ಮೆಲ್ಲರ ಸಹಕಾರ ಅತ್ಯಗತ್ಯ. ಕರ್ತವ್ಯದ ಒತ್ತಡ, ಸಿಬ್ಬಂದಿಗಳ ಕೊರತೆ ಮತ್ತು ಇನ್ನಿತರೆ ಸಮಸ್ಯೆಗಳಲ್ಲೂ ಉತ್ತಮವಾದ ಸೇವೆ ಸಲ್ಲಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿರುವ ಪೊಲೀಸ್ ಇಲಾಖೆಯ ಸೇವೆ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡಗೌಡ, ಉಪಾಧ್ಯಕ್ಷ ಸೊಂತ ಗಿರಿಧರ, ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ನಿಕಟಪೂರ್ವ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಮಾಜಿ ಅಧ್ಯಕ್ಷ ಬಿ. ಮಹಾರುದ್ರಗೌಡ, ಡಿವೈಎಸ್ಪಿ ಮಾಲತೇಶ್ ಕೋನಬೇವು ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಕಾಣೆಯಾದ ಮಕ್ಕಳ ಪತ್ತೆಗೆ ವಿಶೇಷ ಕಾರ್ಯಪಡೆ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ನ್ಯಾ.ರಾಜೇಶ್ ಎನ್.ಹೊಸಮನೆ ಸೂಚನೆ

0

ಬಳ್ಳಾರಿ,ಡಿ.23:ಜಿಲ್ಲೆಯಲ್ಲಿ ಹಲವೆಡೆ ಮಕ್ಕಳು ಕಾಣೆಯಾದ ಪ್ರಕರಣಗಳು ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಇತ್ಯರ್ಥಪಡಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.

ಮಂಗಳವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮಕ್ಕಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರು, ಪ್ಯಾರಾಲೀಗಲ್ ವಾಲಂಟರ‍್ಸ್ ಗಳೊಂದಿಗೆ ಏರ್ಪಡಿಸಿದ್ದ ‘ಕಾಣೆಯಾದ ಮಕ್ಕಳ ಪತ್ತೆಗೆ ವಿಶೇಷ ಕಾರ್ಯಪಡೆ ಸಮಿತಿಯ ತ್ರೆöÊಮಾಸಿಕ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಪಹರಣ, ಕಾಣೆಯಾದ ಮಕ್ಕಳ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪ್ರತಿ ಮಾಹೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಕಾಣೆಯಾದ, ಪತ್ತೆಯಾಗದ ಮಕ್ಕಳ ಪಟ್ಟಿ ಸಿದ್ಧಪಡಿಸಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ವರದಿ ನೀಡಬೇಕು ಎಂದರು.
ಹಲವಾರು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಪ್ರಕರಣಗಳನ್ನು ಪರಿಹರಿಸಲು ವಿವಿಧ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ, ಜಿಲ್ಲಾ ಮಟ್ಟದ ವಿಶೇಷ ಅಭಿಯಾನಗಳನ್ನು ಪ್ರಾರಂಭಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕಾಣೆಯಾದ ಮಕ್ಕಳ ಮನೆ ಭೇಟಿ ನೀಡಿ ಪ್ರಸ್ತುತ ವಸ್ತುಸ್ಥಿತಿಗಳ ಕುರಿತು ಮಾಹಿತಿ ಪಡೆಯಬೇಕು. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಾವಲು ಸಭೆ ಹಮ್ಮಿಕೊಂಡು ಆ ಸಭೆಯಲ್ಲಿ ಕಾಣೆಯಾದ ಮಕ್ಕಳ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ ರವಿಕುಮಾರ್ ಅವರು ಮಾತನಾಡಿ, ಎಲ್ಲಾ ಠಾಣೆಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ಕಾಣೆಯಾದ ಮಕ್ಕಳ ಕುರಿತು ಪತ್ತೆ ಹಚ್ಚಲು ಕ್ರಮವಹಿಸಬೇಕು. ಪೋಕ್ಸೋ ಘಟನೆ ಕಂಡುಬ0ದಲ್ಲಿ ಯಾವುದೇ ವಿಳಂಬ ಇಲ್ಲದೇ ಕೂಡಲೇ ಎಫ್‌ಐಆರ್ ದಾಖಲಿಸಲು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆ ವತಿಯಿಂದ ತೆರೆದ ಮನೆ ಕಾರ್ಯಕ್ರಮವನ್ನು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಮಕ್ಕಳು ಕಾಣೆಯಾದ ಸಂದರ್ಭದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಅಥವಾ 112 ಕರೆ ಮಾಡಬೇಕು ಎಂದು ತಿಳಿಸಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಎಲ್ಲಾ ನಾಪತ್ತೆ ಪ್ರಕರಣಗಳನ್ನು ಅಪಹರಣ ಪ್ರಕರಣಗಳಾಗಿ ದಾಖಲಿಸಲಾಗುತ್ತದೆ ಮತ್ತು 18 ಮೇಲ್ಪಟ್ಟ ವಯಸ್ಸಿನ ನಾಪತ್ತೆ ಪ್ರಕರಣಗಳನ್ನು ಕಾಣೆಯಾಗಿರುವುದು ಎಂದು ಪರಿಗಣಿಸಲಾಗುತ್ತದೆ ಎಂದು ಮಹಿಳಾ ಪೊಲೀಸ್ ಠಾಣೆಯ ಸಿಪಿಐ ರಮೇಶ್ ಕುಲಕರ್ಣಿ ಅವರು ಸಭೆಗೆ ತಿಳಿಸಿದರು.
ಇದೇ ವೇಳೆ ಬಾಲ್ಯವಿವಾಹ ನಿಷೇಧ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರ್ ರಾವ್, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಕೃಷ್ಣಪ್ಪ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಗೌಸಿಯಾ, ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳಾದ ರೇಷ್ಮಾ, ಮಾರುತಿ, ರೀಡ್ಸ್ ಸಂಸ್ಥೆಯ ತಿಪ್ಪೇಸ್ವಾಮಿ, ರೀಚ್ ಸಂಸ್ಥೆಯ ಹನುಮಂತಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನುರಪ್ಪ, ಮೋಹನ್ ರೆಡ್ಡಿ, ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಂಪಾದನೆ ಹೆಚ್ಚಾದಂತೆ ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ: ಡಾ. ವೆಂಕಟಗಿರಿ ದಳವಾಯಿ

0

ಸಂಡೂರು:
“ಹಾರ್ವರ್ಡ್ ವಿಶ್ವವಿದ್ಯಾಲಯದ ಸುದೀರ್ಘ ಸಂಶೋಧನೆಯ ಪ್ರಕಾರ ಮನುಷ್ಯನ ನಿಜವಾದ ನೆಮ್ಮದಿ ಅಡಗಿರುವುದು ಹಣದಲ್ಲಲ್ಲ, ಬದಲಾಗಿ ನಾವು ಹೊಂದಿರುವ ಉತ್ತಮ ಬಾಂಧವ್ಯಗಳಲ್ಲಿ. ಆದರೆ ದುರದೃಷ್ಟವಶಾತ್, ಇಂದು ಸಂಪಾದನೆ ಹೆಚ್ಚಾದಂತೆ ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ” ಎಂದು ಮುಖ್ಯ ಭಾಷಣಕಾರರಾಗಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ‘ಸ್ನೇಹ ಸಮಾಗಮ; ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನನ್ನ ತಂದೆಗೆ ಬರುತ್ತಿದ್ದ ಮೂರು ಸಾವಿರ ಸಂಬಳದಲ್ಲಿ 11 ಮಂದಿಯನ್ನು ಸಣ್ಣದಾದ ಮನೆಯಲ್ಲಿ ಸಾಕಿ, ಸಲಹಿದ ನನ್ನ ತಂದೆಯ ಸ್ಥಾನ ಆವಾಗ ಅರಿವಾಗಿರಲಿಲ್ಲ, ನಾನು ಮೂರು ಲಕ್ಷದ ಸಂಬಳ ಪಡೆದು, 3 ಕೋಟಿಯ ಬಂಗಲೆ ಕಟ್ಟಿದ್ದರು ಆ ನೆಮ್ಮದಿಯ ಬದುಕು ಈಗಿಲ್ಲ, ಸಂಬಂಧ ಮತ್ತು ಸ್ನೇಹಿತರಿಂದ ನಾವು ದೂರವಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಭಾವುಕರಾಗಿ ನುಡಿದರು.

“ಈ ಸ್ನೇಹ ಸಮ್ಮಿಲನವು ಹಳೆಯ ವಿದ್ಯಾರ್ಥಿಗಳನ್ನು ಗತಕಾಲದ ದಿನಗಳಿಗೆ ಕರೆದೊಯ್ಯುವ ಮೂಲಕ, ನಮ್ಮನ್ನು ನಾವೇ ಪುನಃ ಕಂಡುಕೊಳ್ಳುವ ಅಪರೂಪದ ಅವಕಾಶವನ್ನು ಒದಗಿಸಿದೆ” ಎಂದು ಅವರು ಅಭಿಪ್ರಾಯಪಟ್ಟರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ,ಮಲೆನಾಡಿನ ಸೊಬಗನ್ನು ಹೊಂದಿರುವ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕೇವಲ ಸಾಂಪ್ರದಾಯಿಕ ವಿಷಯಗಳನ್ನು ಬೋಧಿಸುವ ಬದಲು, ಜಾಗತಿಕ ಮಟ್ಟದಲ್ಲಿ ಉದ್ಯೋಗ ಲಭಿಸುವಂತಹ ಅತ್ಯಾಧುನಿಕ ಕೋರ್ಸ್‌ಗಳನ್ನು ಆರಂಭಿಸಿ, ಇದನ್ನೊಂದು ‘ಸಂಪೂರ್ಣ ವಸತಿ ಸಹಿತ (Residential) ಸ್ನಾತಕೋತ್ತರ ಕೇಂದ್ರ’ವನ್ನಾಗಿ ರೂಪಿಸಲಾಗುವುದು ಎಂದರು.
“ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿ (ಸುಮಾರು 2 ಲಕ್ಷ ರೂ.) ವೆಚ್ಚವಾಗುವ ಕೋರ್ಸ್‌ಗಳನ್ನು ನಮ್ಮ ಕೇಂದ್ರದಲ್ಲಿ ಕೇವಲ 25 ಸಾವಿರ ರೂಪಾಯಿಗಳಿಗೆ ನೀಡುವ ಗುರಿ ಹೊಂದಿದ್ದೇವೆ. ಬೆಂಗಳೂರು ವಿವಿಯಲ್ಲಿನ ಪ್ರಯೋಗದ ಮಾದರಿಯಲ್ಲೇ ಇಲ್ಲೂ ಕೂಡ ಬಿ.ಕಾಂ. ಕೋರ್ಸಿನಲ್ಲಿ ಹೊಸ ವಿಷಯಗಳು, ಬಹು ಬೇಡಿಕೆ ಇರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಇತರ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಲಾಗುವುದು” ಎಂದರು. ಗಣಿಗಾರಿಕೆ ಪ್ರದೇಶವಾಗಿರುವುದರಿಂದ ಇಲ್ಲಿನ ಬಹುಕಾಲದ ಬೇಡಿಕೆಯಾಗಿರುವ ‘ಸ್ಕೂಲ್ ಆಫ್ ಮೈನಿಂಗ್’ ಆರಂಭಿಸಲು ಧನಬಾದ್ ಐಐಟಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಚನ್ನಪ್ಪ, “ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರವು ಕೇವಲ ಒಂದು ಶಿಕ್ಷಣ ಸಂಸ್ಥೆಯಲ್ಲ, ಅದೊಂದು ಜ್ಞಾನದ ದೀವಿಗೆ” ಎಂದು ಬಣ್ಣಿಸಿದರು.

ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿಕೊಂಡ ಅವರು, “ನನ್ನಂತಹ ಹಾಗೂ ಗ್ರಾಮೀಣ ಭಾಗದ ಸಾವಿರಾರು ಬಡ ವಿದ್ಯಾರ್ಥಿಗಳ ಬಾಳಿಗೆ ಈ ಕೇಂದ್ರವು ಅಕ್ಷರಶಃ ಬೆಳಕು ನೀಡಿದೆ. ಇಲ್ಲಿನ ಪರಿಸರ ಮತ್ತು ಶಿಕ್ಷಣವೇ ನಮ್ಮ ಏಳಿಗೆಗೆ ಬುನಾದಿ” ಎಂದು ಅತ್ಯಂತ ಭಾವನಾತ್ಮಕವಾಗಿ ನುಡಿದರು.

ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ ಬಾಣದ್ ಮಾತನಾಡಿ, ಕೇಂದ್ರದ ಪ್ರತಿಯೊಂದು ವಿಭಾಗದ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶೈಕ್ಷಣಿಕ ಏಳಿಗೆಗಾಗಿ ಹಳೆಯ ವಿದ್ಯಾರ್ಥಿಗಳ ಸಂಘವು ವಿಶ್ವವಿದ್ಯಾಲಯದೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದೆ ಎಂದರು.

ಕೇಂದ್ರದ ನಿರ್ದೇಶಕ ಡಾ. ಬಿ. ರವಿ ಮಾತನಾಡಿ, “ಕೇಂದ್ರವು 50 ವಸಂತಗಳನ್ನು ಪೂರೈಸಿದ್ದು, ಅದ್ಧೂರಿ ಸುವರ್ಣ ಮಹೋತ್ಸವ ಆಚರಿಸಲಾಗುವುದು. ಅದಕ್ಕೆ ಪೂರ್ವಭಾವಿಯಾಗಿ ಹಳೆಯ ವಿದ್ಯಾರ್ಥಿಗಳ ಸಲಹೆ ಮತ್ತು ಸಹಕಾರ ಪಡೆಯಲು ಈ ಸಭೆ ಆಯೋಜಿಸಲಾಗಿದೆ. ಕುಲಪತಿಗಳು ಕೇಂದ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಸಂಸದರು ಕೇಂದ್ರಕ್ಕೆ ಸಾಕಷ್ಟು ಸೌಕರ್ಯ ಕಲ್ಪಿಸಿದ್ದಾರೆ” ಎಂದು ಹೇಳಿದರು.

ನಂದಿಹಳ್ಳಿ ಪಿಜಿ ಕೇಂದ್ರದ ಹಳೆಯ ವಿದ್ಯಾರ್ಥಿಗಳಾದ ಡಾ. ಬಿ. ನಾಗನಗೌಡ, ಎಚ್. ವೈ. ದೇಸಾಯಿ, ಜೆ.ಎಂ. ಬಸವರಾಜ, ಅರುಣಕುಮಾರಿ ಕಾಳೆ, ಶಾರದಾಬಾಯಿ, ಷಣ್ಮುಖಪ್ಪ ಮಂದಾ ಳ್, ಮಲ್ಲಮ್ಮ, ಜ್ಯೋತಿ ಉಮೇಶ ತಮ್ಮ ವಿದ್ಯಾರ್ಥಿ ದಿನಗಳನ್ನು ಸ್ಮರಿಸಿಕೊಂಡರು.

ಖನಿಜ ಸಂಸ್ಕರಣೆ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಎಂ. ಶಶಿಧರ್ ಸ್ವಾಗತ ಕೋರಿದರು. ಕನ್ನಡ ವಿಭಾಗದ ಡಾ. ಮಲ್ಲಯ್ಯ ವಂದನಾರ್ಪಣೆ ಸಲ್ಲಿಸಿದರು. ಅರ್ಥಶಾಸ್ತ್ರ ವಿಭಾಗದ ಡಾ. ಚೌಡಪ್ಪ ನಿರೂಪಿಸಿದರು.

ಬಾಕ್ಸ್:
ನಂದಿಹಳ್ಳಿ ಪಿಜಿ ಕೇಂದ್ರವನ್ನು ಅಂತಾರಾಷ್ಟ್ರೀಯ ಮಟ್ಟದ ‘ರೆಸಿಡೆನ್ಶಿಯಲ್ ಕ್ಯಾಂಪಸ್’ ಮಾಡುವ ಗುರಿ: ಕುಲಪತಿ ಪ್ರೊ. ಮುನಿರಾಜು
ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಹಳೆಯ ನೆನಪುಗಳಿಗೆ ಜಾರಿದ ನಂದಿಹಳ್ಳಿ ಹಳೆಯ ವಿದ್ಯಾರ್ಥಿಗಳು

ಮುಖ್ಯಾಂಶಗಳು:
▪️ ಸಾಂಪ್ರದಾಯಿಕ ಕೋರ್ಸ್‌ಗಳ ಬದಲು ಉದ್ಯೋಗಾಧಾರಿತ ಕೋರ್ಸ್‌ಗಳಿಗೆ ಒತ್ತು.
▪️ ಕಡಿಮೆ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ.
▪️ ಸಂಪೂರ್ಣ ವಸತಿ ನಿಲಯದ ಮಾದರಿ (Residential Campus).

ಬಜೆಟ್ ಮಂಡಿಸಲು ಸಿದ್ದು-ಡಿಕೆಶಿ ರೆಡಿ

0

ಮೊನ್ನೆ ದಿಲ್ಲಿಯಿಂದ ಬಂದ ವರ್ತಮಾನದ ಪ್ರಕಾರ ಕಾಂಗ್ರೆಸ್ ವರಿಷ್ಟರು ಚಿಂತೆಗೆ ಬಿದ್ದಿದ್ದಾರೆ.ಈ ಮುಂಚೆ ರಾಹುಲ್ ಗಾಂಧಿ ಅವರಿಗಷ್ಟೇ ಸೀಮಿತವಾಗಿದ್ದ ಈ ಚಿಂತೆ ಈಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಸುತ್ತಿಕೊಂಡಿದೆ.
ಅಂದ ಹಾಗೆ ಒಪ್ಪಂದದ ಪ್ರಕಾರ, ಎರಡೂವರೆ ವರ್ಷಗಳ ನಂತರ ನನಗೆ ಸಿಎಂ ಹುದ್ದೆ‌ ಕೊಡಿಸಬೇಕು ಅಂತ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಕಿದ ಪಟ್ಟು ರಾಹುಲ್ ಗಾಂಧಿಯವರ ಚಿಂತೆಗೆ ಕಾರಣವಾಗಿತ್ತು.ಯಾಕೆಂದರೆ ಸಿಎಂ ಸಿದ್ಧರಾಮಯ್ಯ ಅವರು ಅಹಿಂದ ವರ್ಗಗಳ ಸಾಲಿಡ್ಡು ನಾಯಕ.ಅಂತವರನ್ನು ಕೆಳಗಿಳಿಸಿದರೆ‌ ಪಕ್ಷದ ಮತ ಬ್ಯಾಂಕ್ ದುರ್ಬಲವಾಗುತ್ತದೆ ಎಂಬುದು ಅವರ ಆತಂಕ.
ಈ ಆತಂಕ ರಾಹುಲ್ ಗಾಂಧಿ ಅವರಲ್ಲಿದ್ದುದನ್ನು ಪಕ್ಕಾ ಮಾಡಿಕೊಂಡ ಸೋನಿಯಾಗಾಂಧಿ ಅವರು:’ಅಧಿಕಾರ ಹಂಚಿಕೆ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಈ ಕುರಿತು ಎಐಸಿಸಿ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಬೇಕು.ಅವರು ಸಿಎಂ ಮತ್ತು ಡಿಸಿಎಂ ಜತೆ ಮಾತನಾಡಿ ಒಂದು ತೀರ್ಮಾನಕ್ಕೆ ಬರಲಿ.ಆನಂತರ ಅಂತಿಮ ನಿರ್ಧಾರಕ್ಕೆ ಬಂದರಾಯಿತು’ಅಂತ ಸೂಚಿಸಿದ್ದರಂತೆ.
ತಾಯಿಯ ಈ ಮಾತಿನ ಪ್ರಕಾರ ರಾಹುಲ್ ಗಾಂಧಿಯವರು ನೇರವಾಗಿಯೇ ಖರ್ಗೆಯವರ ಜತೆ ಮಾತನಾಡಿದ್ದಾರೆ.ಅಧಿಕಾರ ಹಂಚಿಕೆ‌ ಒಪ್ಪಂದ ಎಂಬುದು ನನ್ನ ಸಮ್ಮುಖದಲ್ಲಿ ನಡೆದ ಬೆಳವಣಿಗೆಯಲ್ಲ.ಆದರೆ ಈ ಬೆಳವಣಿಗೆ ನಡೆದಿದ್ದೇ ಆಗಿದ್ದರೆ ನೀವು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರನ್ನೂ ಒಟ್ಟಿಗೆ ಕೂರಿಸಿ ಮಾತನಾಡಿ.ಅದರ ಅಧಾರದ ಮೇಲೆ ತೀರ್ಮಾನ ತೆಗೆದುಕೊಂಡರಾಯಿತು’ಎಂದಿದ್ದರು.
ಆದರೆ ರಾಹುಲ್ ಗಾಂಧಿಯವರು ಈ ಸೂಚನೆ ನೀಡಿದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಚಿಂತೆ ಶುರುವಾಗಿದೆ.ಮೂಲಗಳ ಪ್ರಕಾರ,ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ವಹಿಸಿಕೊಡುವ ವಿಷಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಹಮತವಿದೆ.ಆದರೆ ಈ ವಿಷಯವನ್ನು ಖಡಕ್ಕಾಗಿ ಹೇಳಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂಬ ಅತಂಕವೂ ಇದೆ.
ಯಾಕೆಂದರೆ ಎಷ್ಟೇ ಆದರೂ ಸಿದ್ಧರಾಮಯ್ಯ ಡೀಪ್ ರೂಟೆಡ್ ಲೀಡರು.ನೀವು ಸಿಎಂ ಹುದ್ದೆ ಬಿಟ್ಟು ಕೊಡಿ ಅಂತ ಟಫ್ ಆಗಿ ಹೇಳಿದರೆ ‘ಯಸ್,ಸಿಎಂ ಹುದ್ದೆ ಬಿಟ್ಟು‌ ಕೊಡಲು ನಾನು ರೆಡಿ.ಆದರೆ ನಾನು ತೆರವು ಮಾಡುವ ಜಾಗಕ್ಕೆ ದಲಿತ ನಾಯಕರು ಬರಬೇಕು’ಅಂತ ಅವರು ಪಟ್ಟು ಹಿಡಿದರೆ?ಆಗ ಇಡೀ ಎಪಿಸೋಡು ಉಲ್ಟಾ ಆಗುತ್ತದೆ.ಅರ್ಥಾತ್,ಡಿಸಿಎಂ ಡಿ.ಕೆ.ಶಿವಕುಮಾರ್ ಕೆರಳುತ್ತಾರೆ.ಒಂದು ವೇಳೆ ಸಿದ್ಧರಾಮಯ್ಯ ಅವರ ಮಾತನ್ನು ಒಪ್ಪಿದರೂ,ಒಪ್ಪದೆ ಹೋದರೂ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಛಿದ್ರವಾಗುತ್ತದೆ.ಹಾಗಾಗಬಾರದು ಎಂಬುದು ಖರ್ಗೆಯವರ ಚಿಂತೆ.
ಹೀಗಾಗಿ ಅವರು ಅಧಿಕಾರ ಹಂಚಿಕೆ ಎಪಿಸೋಡು ಕೂಲ್ ಆಗಿ ನಡೆಯಬೇಕು ಎಂದರೆ ಮೊದಲು ಸಿದ್ಧರಾಮಯ್ಯ ಅವರ ಮನ ಒಲಿಸಲೇಬೇಕು ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ.ಈ ಮನವೊಲಿಕೆಯ ಕಾರ್ಯ ಬಜೆಟ್ ಮಂಡನೆಯ ನಂತರವೂ ಆಗಬಹುದು.ಇಲ್ಲವೇ ಕೇರಳ,ಪಶ್ಚಿಮ ಬಂಗಾಳ,ತಮಿಳುನಾಡು ಸೇರಿದಂತೆ ಹಲ ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರವಾದರೂ ಆಗಬಹುದು ಎಂಬುದು ಅವರ ಲೆಕ್ಕಾಚಾರ.ಅರ್ಥಾತ್,ಮೇ ತಿಂಗಳು ಕಳೆಯುವವರೆಗೆ ಸಿದ್ಧರಾಮಯ್ಯ ಅವರನ್ನು ಅಲುಗಾಡಿಸುವುದು ಕಷ್ಟ ಎಂಬುದು ಸಧ್ಯದ ಮಾಹಿತಿ.
ಕುತೂಹಲದ ಸಂಗತಿ ಎಂದರೆ ದಿಲ್ಲಿಯ ಈ ಬೆಳವಣಿಗೆಗಳು ಏನೇ ಇರಲಿ.ಆದರೆ 2025-26 ನೇ ಸಾಲಿನ ರಾಜ್ಯ ಬಜೆಟ್ ನ್ನು ನಾನು ಮಂಡಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ವೈಬ್ರೆಂಟ್ ಕರ್ನಾಟಕದ ಕನಸು:

ಅಂದ ಹಾಗೆ ಮಲ್ಲಿಕಾರ್ಜುನ ಖರ್ಗೆ ಅವರ ಮನಸ್ಸಿನಲ್ಲಿರುವ ಈ ಯೋಚನೆ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿಲ್ಲ ಅಂತೇನಲ್ಲ.ಆದರೆ ಬಜೆಟ್ ಮಂಡನೆಯ ಅವಕಾಶವನ್ನು ಕಳೆದುಕೊಳ್ಳಲು ಅವರು ಸಿದ್ದರಿಲ್ಲ.ಕಾರಣ?ಒಂದು ಸರ್ಕಾರದ ನಾಲ್ಕು ಮತ್ತು ಐದನೇ ಬಜೆಟ್ ಗಳಿಗೆ ಅಂತಹ ಮಹತ್ವವಿಲ್ಲ.ಕನಿಷ್ಟ ಪಕ್ಷ ಮೂರನೇ ಬಜೆಟ್ ಮಂಡಿಸಲು ಅವಕಾಶ ಸಿಕ್ಕರೆ ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಬಹುದು.ಈ ಹಿಂದೆ ನರೇಂದ್ರ ಮೋದಿ ಅವರು ವೈಬ್ರೆಂಟ್ ಗುಜರಾತ್ ಎಂಬ ಹವಾ ಎಬ್ಬಿಸಿ ರಾಷ್ಟ್ರ ರಾಜಕಾರಣಕ್ಕೆ ನುಗ್ಗಿದರಲ್ಲ?ಅದೇ ರೀತಿ ವೈಬ್ರೆಂಟ್ ಕರ್ನಾಟಕದ ಹವಾ ಎಬ್ಬಿಸಿ ಮುಂದೆ ದಿಲ್ಲಿಗೆ ನುಗ್ಗಬಹುದು ಎಂಬುದು ಅವರ ಯೋಚನೆ.
ಇಂತಹ ಯೋಚನೆ ಇರುವ ಕಾರಣಕ್ಕಾಗಿಯೇ ಅವರು ದುಬೈ, ಕೇರಳ,ಆಂಧ್ರ ಸೇರಿದಂತೆ ದೇಶ-ವಿದೇಶಗಳ ಉದ್ಯಮಿಗಳ ಜತೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ.ತಮ್ಮ ವೈಬ್ರೆಂಟ್ ಕರ್ನಾಟಕದ ಕನಸನ್ನು ನನಸು ಮಾಡಲು ಏನೇನು ಮಾಡಬಹುದು?ಅಂತ ಸಲಹೆ ಪಡೆಯುತ್ತಿದ್ದಾರೆ.
ಅವರ ಆಪ್ತರ ಪ್ರಕಾರ,ಮುಖ್ಯಮಂತ್ರಿಯಾದರೆ ಕರ್ನಾಟಕವನ್ನು ದೇಶದ ಆರ್ಥಿಕ ಕೇಂದ್ರವನ್ನಾಗಿ ಮಾಡುವುದು ಡಿಕೆಶಿ ಲೆಕ್ಕಾಚಾರ.ರಾಜ್ಯಾದ್ಯಂತ ಕೈಗಾರಿಕಾ ಕಾರಿಡಾರುಗಳು,ಹೊಸ ಏರ್ ಪೋರ್ಟುಗಳು,ಈಗ ಜಾರಿ ಮಾಡಲು ಬಯಸಿರುವ ಟನೆಲ್ ರೋಡುಗಳಿಗಿಂತ ಅದ್ದೂರಿಯಾದ ಯೋಜನೆಗಳನ್ನು ಜಾರಿಗೊಳಿಸುವುದು ಡಿಕೆಶಿ ಯೋಚನೆ.
ಆದರೆ ಇಂತಹ ಯೋಚನೆ ಕಾರ್ಯಗತವಾಗಬೇಕು ಎಂದರೆ ಈ ಸಲದ ಬಜೆಟ್ ಮಂಡನೆ ನನಗೆ ಸಾಧ್ಯವಾಗಲೇಬೇಕು ಎಂಬುದು ಅವರ ಯೋಚನೆ.
ಅಂದ ಹಾಗೆ ಇಷ್ಟೆಲ್ಲ ಕನಸಿಟ್ಟುಕೊಂಡಿರುವ ಡಿ.ಕೆ.ಶಿವಕುಮಾರ್ ಅವರಿಗೆ ತಾವು ಇಡೀ ದೇಶದ ಗಮನ ಸೆಳೆಯುವ ನಾಯಕರಾಗಿ ಬೆಳೆಯಬೇಕು ಎಂಬ ಹಠವಿದೆ.ಹೀಗಾಗಿ ದೇಶದ ಯಾವುದೇ ಭಾಗದಲ್ಲಿ ಗಮನ ಸೆಳೆಯುವ ಬೆಳವಣಿಗೆ ನಡೆದರೆ ಡಿಕೆಶಿ ಅಲ್ಲಿ ಹಾಜರಿರುತ್ತಾರೆ.ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ನಿಧನರಾದ ನಂತರ ಅವರ ಅಂತಿಮ ನಮನದ ಕಾರ್ಯಕ್ರಮಕ್ಕೆ ಹೋದ ಡಿಕೆಶಿ, ಜುಬೀನ್ ಗರ್ಗ್ ಅವರ ಪತ್ನಿಗೆ ಸಾಂತ್ವನ ಹೇಳಿ ಬಂದಿದ್ದರು.
ಕಾಂಗ್ರೆಸ್ ಪಕ್ಷದ ನಿಲುವೇನೇ ಇದ್ದರೂ ಕುಂಭಮೇಳಕ್ಕೆ ಹೋಗಿದ್ದಲ್ಲದೆ ಪುಣ್ಯ ಸ್ವಾನ ಮಾಡಿ ದೇಶದ ಗಮನ ಸೆಳೆದಿದ್ದರು.ಇದೇ ರೀತಿ ಐಪಿಎಲ್ ನಲ್ಲಿ ಅರ್.ಸಿ.ಬಿ ತಂಡ ಗೆದ್ದಾಗ ಜಗತ್ತಿನ ಹಲವು ದೇಶಗಳು ಅದರತ್ತ ನೋಡುತ್ತಿವೆ ಅಂತ ಅರ್.ಸಿ.ಬಿ ತಂಡ ಬೆಂಗಳೂರಿಗೆ ಬಂದಾಗ ಅದನ್ನು ಸ್ವಾಗತಿಸಲು ಹೋಗಿದ್ದರು.ಇನ್ನು ತೆಲಂಗಾಣದಲ್ಲಿ ಬಂಡವಾಳ ಹೂಡಿಕೆದಾರರ ಸಭೆ ನಡೆದರೆ ಅಲ್ಲಿ ಡಿಕೆಶಿಯೇ ಚೀಫ್ ಗೆಸ್ಟು.ಬಿಹಾರದ ವಿಧಾನಸಭೆಗೆ ಚುನಾವಣೆ ನಡೆದಾಗ ಅಲ್ಲಿಗೆ ಡಿಕೆಶಿ ಹೋಗಿದ್ದೇ ಹೋಗಿದ್ದು.ಅರ್ಥಾತ್,ದೇಶದ ಯಾವ ಭಾಗದಲ್ಲಿ ಗಮನ ಸೆಳೆಯುವ ಚಟುವಟಿಕೆ ಇದ್ದರೂ ಡಿಕೆಶಿ ಅಲ್ಲಿ ಉಪಸ್ಥಿತರಿದ್ದು ಎಲ್ಲರ ಗಮನ ಸೆಳೆಯುತ್ತಾರೆ.ಇದು ಕೂಡಾ ತಾವು ದೇಶವೇ ಗುರುತಿಸಬಲ್ಲ ನಾಯಕ ಅಂತ ತೋರಿಸುವ ಟೆಕ್ನಿಕ್ಕು.
ಹೀಗೆ ದೊಡ್ಡ ರೇಂಜು ತಲುಪುವ ಕನಸಿಟ್ಟುಕೊಂಡ ಡಿ.ಕೆ.ಶಿವಕುಮಾರ್ 2025-26 ನೇ ಸಾಲಿನ ರಾಜ್ಯ ಬಜೆಟ್ ನ್ನು ತಾವೇ ಮಂಡಿಸಬೇಕು ಅಂತ ಪಟ್ಟು ಹಿಡಿದಿದ್ದಾರೆ.ಹಾಗೆಯೇ ತಮ್ಮ ವೈಬ್ರೆಂಟ್‌ ಕರ್ನಾಟಕದ ಕನಸು ಈಡೇರಿದರೆ ಮಾತ್ರ 2028 ರ ವಿಧಾನಸಭಾ ಚುನಾವಣೆಯಲ್ಲೂ‌ ಪಕ್ಷ ಗೆಲ್ಲಲಿದೆ ಅಂತ ದಿಲ್ಲಿ‌ಗೆ ಮೆಸೇಜು ತಲುಪಿಸುತ್ತಿದ್ದಾರೆ.ಆದರೆ ಇದು ಸಾಧ್ಯವಾಗುತ್ತದಾ ಗೊತ್ತಿಲ್ಲ.ಕಾಲವೇ‌ ಉತ್ತರ ಹೇಳಬೇಕು.

ಯುದ್ಧಕ್ಕೆ ಸಜ್ಜಾದ ಮಿತ್ರರು:

ಇನ್ನು ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ನಡುವೆ ಸಾಮರಸ್ಯ ಸಾಧಿಸಲು ಸಮನ್ವಯ ಸಮಿತಿ ರಚನೆಯಾಗಲಿದೆ.ಇಂತಹ ಸಮನ್ವಯ ಸಮಿತಿ ರಚಿಸುವ ಬಗ್ಗೆ ಸ್ವತ: ಅಮಿತ್ ಶಾ ಹೆಚ್ಚಿನ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಹೀಗೆ ಸಮನ್ವಯ ಸಮಿತಿ ರಚನೆಯ ಕಾಲ ಹತ್ತಿರವಾಗುತ್ತಿದ್ದಂತೆಯೇ ಕುಮಾರಸ್ವಾಮಿ-ವಿಜಯೇಂದ್ರ ಉತ್ಸುಕರಾಗಿದ್ದರೆ,ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ಆತಂಕ ಕಾಡುತ್ತಿದೆ.ಕಾರಣ?ಸಮನ್ವಯ ಸಮಿತಿ ರಚನೆಯಾಗಿ ಕುಮಾರಸ್ವಾಮಿ ಅವರಿಗೆ ಪ್ರಾಮಿನೆನ್ಸು ಹೆಚ್ಚಾದರೆ ತಮ್ಮ ಶಕ್ತಿ ಕುಸಿಯುತ್ತದೆ ಎಂಬುದು ಇವರ ಆತಂಕ.
ಸಮನ್ವಯ ಸಮಿತಿ ರಚನೆಯ ಬಗ್ಗೆ ಬಿಜೆಪಿ ಪಾಳಯದಲ್ಲಿ ಇಂತಹ ಮಿಶ್ರ ಭಾವನೆ ಇದ್ದರೂ ಜೆಡಿಎಸ್ ಪಾಳಯದಲ್ಲಿ ಹರ್ಷದ ವಾತಾವರಣ ಕಾಣಿಸಿಕೊಂಡಿದೆ.ಕಾರಣ?ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋಗುವುದರಿಂದ ಲಾಭ ಜಾಸ್ತಿ ಎಂಬುದು.ಹಾಗಂತ ಜೆಡಿಎಸ್‌ ನಾಯಕರು‌ ಮಿತಿ‌ ಮೀರಿದ ಆಸೆ ಇರಿಸಿಕೊಂಡಿಲ್ಲ.
ಬದಲಿಗೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿ ಬಲ ಹೆಚ್ಚಿರುವುದರಿಂದ ಈಗ ಬರುವ 369 ವಾರ್ಡುಗಳ ಪೈಕಿ 70 ವಾರ್ಡುಗಳನ್ನು ತಮಗೆ ಬಿಟ್ಟು‌ ಕೊಡುವಂತೆ ಕೇಳಬೇಕು.ಕನಿಷ್ಟ 50 ಸೀಟುಗಳು ಸಿಕ್ಕರೆ ಗರಿಷ್ಟ‌ ವಾರ್ಡುಗಳಲ್ಲಿ ಗೆಲುವು ಸಾಧಿಸಬೇಕು ಎಂಬುದು ಜೆಡಿಎಸ್ ನಾಯಕರ ಲೆಕ್ಕಾಚಾರ.
ಎಲ್ಲಕ್ಕಿಂತ ಮುಖ್ಯವಾಗಿ ಮೈತ್ರಿಧರ್ಮ ಪಾಲನೆಯಾದರೆ ಇನ್ನೂರಕ್ಕೂ ಹೆಚ್ಚು ವಾರ್ಡುಗಳಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಬಹುದು ಎಂಬುದು ಅವರ ಯೋಚನೆ.

ಯಡಿಯೂರಪ್ಪ ಇಲ್ಲಿ ಸೆಟ್ಲಾಗಲಿದ್ದಾರೆ:

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದಾರೆ.ಇತ್ತೀಚೆಗೆ ಶಿಕಾರಿಪುರದಿಂದ ಬಂದಿದ್ದ ಪಕ್ಷದ ನಿಯೋಗವೇ ಇದಕ್ಕೆ ಮುಖ್ಯ ಕಾರಣ.
ಹೀಗೆ ಬಂದ ನಿಯೋಗದಲ್ಲಿದ್ದವರು ಯಡಿಯೂರಪ್ಪ ಅವರ ಬಳಿ ತಮ್ಮ ದುಗುಡವನ್ನು ತೋಡಿಕೊಂಡರಂತೆ.ಇವತ್ತು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಿಮ್ಮ ಪುತ್ರ ವಿಜಯೇಂದ್ರ ಅವರಿಗೆ ಕ್ಷೇತ್ರದ ಕಡೆ ಬರಲು ಹೆಚ್ಚು ಸಮಯ ಸಿಗುತ್ತಿಲ್ಲ‌.ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದರಿಂದ ಅವರ ಕಷ್ಟ ನಮಗೂ ಅರ್ಥವಾಗುತ್ತದೆ.ಅದರೆ ಕ್ಷೇತ್ರದ ಜನರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಎಮ್ಮೆಲ್ಲೆ ಇರಲೇಬೇಕು.ಅಭಿವೃದ್ಧಿ ಕೆಲಸಗಳೇನೋ ಅದರ ಪಾಡಿಗೆ ಆಗುತ್ತಿವೆ.ಆದರೆ ಕ್ಷೇತ್ರದಲ್ಲಿ ನಡೆಯುವ ಸಭೆ,ಸಮಾರಂಭಗಳಿಗೆ,ಮದುವೆಯಂತಹ ಕಾರ್ಯಗಳಿಗೆ ಶಾಸಕರು ಬರಬೇಕು ಅನ್ನುವ ಒತ್ತಾಯ ಇರುತ್ತದೆ ಅಂತ ನಿಯೋಗದ ಪ್ರಮುಖರು ಹೇಳಿದಾಗ ಅರೆಕ್ಷಣ ಸುಮ್ಮನಿದ್ದ ಯಡಿಯೂರಪ್ಪನವರು:’ಯೋಚಿಸಬೇಡಿ ಸುಮ್ಮನಿರಿ.ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಅವರು ರಾಜ್ಯ ಪ್ರವಾಸ ಮಾಡುವುದು,ಪಕ್ಷ ಸಂಘಟನೆ ಮಾಡುವುದು ಅನಿವಾರ್ಯ.ಮತ್ತು ಅದಕ್ಕಾಗಿ ಹೆಚ್ಚು ಸಮಯ ಕೊಡುವುದೂ ಅನಿವಾರ್ಯ.ಹೀಗಾಗಿ ಇನ್ನು ಮುಂದೆ ಕ್ಷೇತ್ರದಲ್ಲಿ ನಾನೇ ಬೀಡು ಬಿಡುತ್ತೇನೆ.ತಿಂಗಳಲ್ಲಿ ಕನಿಷ್ಟ ಪಕ್ಷ ಹದಿನೈದು ದಿನ ಇರುತ್ತೇನೆ.ತೀರಾ ಅನಿವಾರ್ಯ ಅಂದಾಗ ವಿಜಯೇಂದ್ರ ಬರಲಿ ಎಂದಿದ್ದಾರೆ.ಅಷ್ಟೇ ಅಲ್ಲ .ಹೆಚ್ವು ಕಡಿಮೆ ಹದಿನೈದು ದಿನಗಳಿಂದ ಶಿಕಾರಿಪುರದಲ್ಲೇ ಸೆಟ್ಲ್ ಆಗಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ